India vs South Africa: ಕ್ಲೀನ್ ಬೌಲ್ಡ್: ಸ್ಟ್ಯಾಂಡ್ ಬೈ ಬೌಲರ್​ನ ಬೌಲಿಂಗ್​ಗೂ ಬ್ಯಾಟಿಂಗ್ ಮಾಡಲು ಪರದಾಡಿದ ಅಜಿಂಕ್ಯಾ ರಹಾನೆ

| Updated By: Vinay Bhat

Updated on: Dec 23, 2021 | 9:15 AM

India tour of SA: ಕಳೆದ ನಾಲ್ಕು ದಿನಗಳಿಂದ ಆಫ್ರಿಕಾದ ಸೂಪರ್‌ಸ್ಪೋರ್ಟ್ ಪಾಕ್ ಮೈದಾನದಲ್ಲಿ ಭಾರತೀಯರು ಅಭ್ಯಾಸ ನಡೆಸುತ್ತಿದ್ದಾರೆ. ಆದರೆ, ನೆಟ್​ಸೆಷನ್​ನಲ್ಲೂ ಕಳಪೆ ಫಾರ್ಮ್​ನಿಂದ ಕಂಗೆಟ್ಟಿರುವ ಅಜಿಂಕ್ಯಾ ರಹಾನೆ ಕೆಟ್ಟ ಪ್ರದರ್ಶನ ಮುಂದುವರೆದಿದೆ.

India vs South Africa: ಕ್ಲೀನ್ ಬೌಲ್ಡ್: ಸ್ಟ್ಯಾಂಡ್ ಬೈ ಬೌಲರ್​ನ ಬೌಲಿಂಗ್​ಗೂ ಬ್ಯಾಟಿಂಗ್ ಮಾಡಲು ಪರದಾಡಿದ ಅಜಿಂಕ್ಯಾ ರಹಾನೆ
Deepak Chahar Bowling IND vs SA
Follow us on

ಆಸ್ಟ್ರೇಲಿಯಾ (Australia) ಮತ್ತು ಇಂಗ್ಲೆಂಡ್ (England) ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸಿ ಇದೀಗ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ (India vs South Africa) ನೆಲಕ್ಕೆ ಕಾಲಿಟ್ಟಿದ್ದು ಚೊಚ್ಚಲ ಟೆಸ್ಟ್ ಸರಣಿ ಜಯಿಸುವ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಹರಿಣಗಳ ನಾಡಿನಲ್ಲಿ ಬೀಡುಬಿಟ್ಟಿರುವ ವಿರಾಟ್ ಕೊಹ್ಲಿ (Virat Kohli) ಪಡೆ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಇದೇ ಡಿಸೆಂಬರ್ 26 ರಿಂದ ಬಾಕ್ಸಿಂಗ್ ಡೇ (Boxing Day Test) ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ. ಸಾಕಷ್ಟು ಕಾರಣಗಳಿಂದ ಭಾರತ ತಂಡಕ್ಕೆ ಈ ಟೆಸ್ಟ್ ಸರಣಿ ಮುಖ್ಯವಾಗಿದೆ. ಕಳೆದ 28 ವರ್ಷಗಳಿಂದ ಇಂಡೋ- ಆಫ್ರಿಕಾ (IND vs SA) ಸರಣಿ ನಡೆಯುತ್ತಿದೆ. ಆದರೆ, ಈವರೆಗೆ ಒಮ್ಮೆಯೂ ಆಫ್ರಿಕಾದಲ್ಲಿ ಭಾರತ ಟೆಸ್ಟ್ ಸರಣಿ ಜಯಿಸಿಲ್ಲ. ಹೀಗಾಗಿ ಟೀಮ್ ಇಂಡಿಯಾ (Team India) ಐತಿಹಾಸಿಕ ಸಾಧನೆ ಮಾಡುತ್ತಾ ಎಂಬುದು ನೋಡಬೇಕಿದೆ. ಇದಕ್ಕಾಗಿ ಭಾರತೀಯ ಆಟಗಾರರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಆಫ್ರಿಕಾದ ಸೂಪರ್‌ಸ್ಪೋರ್ಟ್ ಪಾಕ್ ಮೈದಾನದಲ್ಲಿ ಭಾರತೀಯರು ಅಭ್ಯಾಸ ನಡೆಸುತ್ತಿದ್ದಾರೆ. ಅದರಲ್ಲೂ ಕ್ರೀಡಾಂಗಣದ ಸೆಂಟರ್ ಪಿಚ್‌ನಲ್ಲಿ ಅಭ್ಯಾಸ ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ, ನೆಟ್​ಸೆಷನ್​ನಲ್ಲೂ ಕಳಪೆ ಫಾರ್ಮ್​ನಿಂದ ಕಂಗೆಟ್ಟಿರುವ ಅಜಿಂಕ್ಯಾ ರಹಾನೆ ಕೆಟ್ಟ ಪ್ರದರ್ಶನ ಮುಂದುವರೆದಿದೆ. ದೀಪಕ್ ಚಹಾರ್ ಅವರ ಸ್ವಿಂಗ್ ಬೌಲಿಂಗ್​ಗೆ ಬ್ಯಾಟಿಂಗ್ ನಡೆಸಲು ಸಾಧ್ಯವಾಗದೆ ರಹಾನೆ ಪರದಾಡಿದರು.

 

ದೀಪಕ್ ಚಹಾರ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಬದಲಾಗಿ ಇವರು ಸ್ಟಾಂಡ್​ ಬೈ ಬೌಲರ್ ಆಗಿ ಹರಿಣಗಳ ನಾಡಿಗೆ ತೆರಳಿದ್ದಾರೆ. ಟೀಮ್ ಇಂಡಿಯಾ ಬ್ಯಾಟರ್​ಗಳಿಗೆ ಇವರು ಬೌಲಿಂಗ್ ಮಾಡುತ್ತಿದ್ದು ಬ್ಯಾಟಿಂಗ್ ಮಾಡಲು ಪರದಾಡುತ್ತಿದ್ದಾರೆ. ಅಲ್ಲದೆ ಒಬ್ಬರನ್ನು ಕ್ಲೀನ್ ಬೌಲ್ಡ್ ಕೂಡ ಮಾಡಿದ್ದಾರೆ. ಸ್ವತಃ ಚಹಾರ್ ಅವರೇ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಜಿಂಕ್ಯಾ ರಹಾನೆಗೆ ಸ್ಥಾನ ಅನುಮಾನ:

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ರಹಾನೆ ಸ್ಥಾನ ಇನ್ನೂ ತೂಗುಯ್ಯಾಲೆಯಲ್ಲಿದೆ. ಐದನೇ ಕ್ರಮಾಂಕದಲ್ಲಿ ಅನುಭವದ ಆಧಾರದ ಮೇಲೆ ಅಜಿಂಕ್ಯಾ ರಹಾನೆ ಅವರಿಗೆ ಸ್ಥಾನ ನೀಡುವುದಾ ಅಥವಾ ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಶ್ರೇಯಸ್ ಅಯ್ಯರ್​ಗೆ ಅವಕಾಶ ನೀಡುವುದಾ ಎಂಬುದು ಮ್ಯಾನೇಜ್ಮೆಂಟ್​​ಗೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಪ್ಲೇಯಿಂಗ್ XI ಸಾಕಷ್ಟು ಕುತೂಹಲ ಕೆರಳಿಸಿದೆ.

ಭಾರತ – ದ. ಆಫ್ರಿಕಾ ನಡುವಣ ಮೊದಲ ಟೆಸ್ಟ್‌ ಪಂದ್ಯ ಡಿಸೆಂಬರ್ 26 ರಿಂದ 30 ವರೆಗೆ ಸೂಪರ್‌ಸ್ಪೋರ್ಟ್ಸ್ ಪಾರ್ಕ್‌, ಸೆಂಚುರಿಯನ್​ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಜನವರಿ 3 ರಿಂದ 7 ವರೆಗೆ ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್​ನಲ್ಲಿ ಮತ್ತು ಅಂತಿಮ ಮೂರನೇ ಟೆಸ್ಟ್ ಪಂದ್ಯ ಜನವರಿ 11 ರಿಂದ 15 ರ ವರೆಗೆ ನ್ಯೂಲ್ಯಾಂಡ್ಸ್, ಕೇಪ್‌ ಟೌನ್​ನಲ್ಲಿ ಆಯೋಜಿಸಲಾಗಿದೆ.

IPL Auction 2022: ಐಪಿಎಲ್ 2022 ಮೆಗಾ ಆಕ್ಷನ್​ಗೆ ದಿನಾಂಕ ಫಿಕ್ಸ್: ಬೆಂಗಳೂರಿನಲ್ಲಿ ಎರಡು ದಿನ ಹರಾಜು ಪ್ರಕ್ರಿಯೆ

Pro Kabaddi 2021: ಮೊದಲ ಪಂದ್ಯವೇ ರೋಚಕ: ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಬೆಂಗಳೂರು ಬುಲ್ಸ್

(Deepak Chahar good deliveries which made it difficult for the Ajinkya Rahane and Indian batters)