Deepak Chahar Injury: ಭಾರತಕ್ಕೆ ದೊಡ್ಡ ಶಾಕ್: ರೋಹಿತ್​​ನ ನಂಬಿಕಸ್ಥ ಪ್ಲೇಯರ್ ಶ್ರೀಲಂಕಾ ಸರಣಿಯಿಂದ ಔಟ್?

| Updated By: Vinay Bhat

Updated on: Feb 21, 2022 | 1:05 PM

India vs Sri Lanka 2022: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ವೈಟ್​ವಾಷ್ ಮಾಡಿ ಮೆರೆದಿರುವ ಭಾರತಕ್ಕೆ ಇದೀಗ ಆಘಾತವಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಬೌಲರ್ ದೀಪಕ್ ಚಹರ್ ಇಂಜುರಿಗೆ ತುತ್ತಾಗಿದ್ದು, ಶ್ರೀಲಂಕಾ ಪ್ರವಾಸದಿಂದ ಹೊರಗುಳಿಯುವ ಸಾಧ್ಯತೆ ಇದೆ.

Deepak Chahar Injury: ಭಾರತಕ್ಕೆ ದೊಡ್ಡ ಶಾಕ್: ರೋಹಿತ್​​ನ ನಂಬಿಕಸ್ಥ ಪ್ಲೇಯರ್ ಶ್ರೀಲಂಕಾ ಸರಣಿಯಿಂದ ಔಟ್?
Rohit Sharma and Deepak Chahar Injury
Follow us on

ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಟಿ20 ಸರಣಿ ಕ್ಲೀನ್​ಸ್ವೀಪ್ ಮಾಡಿದ ಸಂಭ್ರದಲ್ಲಿರುವಾಗಲೇ ದೊಡ್ಡ ಆಘಾತ ಉಂಟಾಗಿದೆ. ಫೆಬ್ರವರಿ 24 ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮಾ ಅವರ ನಂಬಿಕಸ್ಥ ಆಟಗಾರ ಹೊರಗಿಳಿಯುವುದು ಬಹುತೇಕ ಖಚಿತವಾಗಿದೆ. ಹೌದು, ಕೆರಿಬಿಯನ್ನರ ವಿರುದ್ಧ ಏಕದಿನ ಮತ್ತು ಟಿ20 ಎರಡೂ ಸರಣಿಯನ್ನು ವೈಟ್​ವಾಷ್ ಮಾಡಿ ಮೆರೆದಿರುವ ಭಾರತಕ್ಕೆ ಮುಂಬರುವ ಸರಣಿಗೂ ಮುನ್ನ ಶಾಕ್ ಉಂಟಾಗಿದೆ. ಬೌಲಿಂಗ್​ನಲ್ಲಿ ಬಲಿಷ್ಠವಾಗಿದ್ದ ಟೀಮ್ ಇಂಡಿಯಾಕ್ಕೆ (Team India) ಇದು ದೊಡ್ಡ ಹಿನ್ನಡೆ. ಭಾನುವಾರ ನಡೆದ ವಿಂಡೀಸ್ ವಿರುದ್ಧದ ಅಂತಿಮ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಸ್ಟಾರ್ ಬೌಲರ್ ದೀಪಕ್ ಚಹರ್ (Deepak Chahar) ಇಂಜುರಿಗೆ ತುತ್ತಾಗಿದ್ದು, ಲಂಕಾ ಪ್ರವಾಸದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊದಲೇ ಭಾರತದ ಕೆಲ ಪ್ರಮುಖ ಆಟಗಾರರು ವಿಶ್ರಾಂತಿಯಲ್ಲಿರುವ ಕಾರಣ ಕಠಿಣ ಸವಾಲನ್ನು ಎದುರುನೋಡುತ್ತಿದ್ದ ಭಾರತಕ್ಕೆ ಇದೀಗ ಚಹರ್ ಕೂಡ ಅಲಭ್ಯರಾದರೆ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹೊಡೆತ ಬೀಳಲಿದೆ.

ಮೂರನೇ ಟಿ20 ಪಂದ್ಯದ ವೇಳೆ ದೀಪಕ್ ಚಹಾರ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ಮೈದಾನವನ್ನು ತೊರೆದರು. ಆರಂಭದಲ್ಲೇ ವಿಂಡೀಸ್​ಗೆ ಮಾರಕವಾಗಿ ಪರಿಣಮಿಸಿದ್ದ ಇವರು ಓಪನರ್‌ಗಳಾದ ಕೈಲ್ ಮೇಯರ್ಸ್‌ಮತ್ತು ಶಾಯ್ ಹೋಪ್ ಅವರನ್ನು ಪೆವಿಲಿಯನ್​ಗೆ ಅಟ್ಟಿದ್ದರು. ಎರಡು ವಿಕೆಟ್ ಪಡೆದು ಖುಷಿಯಲ್ಲಿದ್ದ ಚಹಾರ್ ತನ್ನ 1.5ನೇ ಓವರ್‌ನ ಎಸೆತದಲ್ಲಿ ರನ್ ಅಪ್ ವೇಳೆ ಸ್ನಾಯು ಸೆಳೆತಕ್ಕೊಳಗಾಗಿ ಗಾಯಗೊಂಡರು. ಈ ವೇಳೆ ತಕ್ಷಣವೇ ಫಿಸಿಯೋ ಬಂದು ನೋಡಿ ಅವರನ್ನ ಪೆವಿಲಿಯನ್‌ಗೆ ಕರೆದುಕೊಂಡು ಹೋದರು. ದೀಪಕ್ ಚಹಾರ್‌ನ ಒಂದು ಎಸೆತದ ಬಾಕಿಯನ್ನ ವೆಂಕಟೇಶ್ ಅಯ್ಯರ್ ಪೂರೈಸಿದರು. ನಂತರ ಚಹರ್ ಫೀಲ್ಡ್​ಗೆ ಬರಲೇಯಿಲ್ಲ.

ದೀಪಕ್ ಚಹರ್ ಈ ಹಿಂದೆ ಮೊದಲ ಟಿ20 ಪಂದ್ಯದ ವೇಳೆಯಲ್ಲೂ ಗಾಯಕ್ಕೆ ಒಳಗಾಗಿದ್ದರು. ಫೀಲ್ಡಿಂಗ್ ಮಾಡುತ್ತಿದ್ದಾಗ ಬಲಗೈಗೆ ಪೆಟ್ಟುಮಾಡಿಕೊಂಡಿದ್ದರು. ಆದರೆ, ದ್ವಿತೀಯ ಪಂದ್ಯದ ವೇಲೆ ಗುಣಮುಖರಾಗಿ ಹಾಜರಾಗಿದ್ದರು. ಆದರೀಗ ಮತ್ತೆ ದೊಡ್ಡ ಮಟ್ಟದ ಇಂಜುರಿಯಾಗಿದೆ. ಹೀಗಾಗಿ ಇವರು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಮೊದಲ ಟಿ20 ಪಂದ್ಯ ಫೆಬ್ರವರಿ 24 ರಂದು ಲಕ್ನೋದಲ್ಲಿ ನಡೆಯಲಿದೆ.

ಚಿಂತೆಯಲ್ಲಿ ಸಿಎಸ್​ಕೆ:

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಪಿಎಲ್ 2022 ಮೆಗಾ ಆಕ್ಷನ್​ನಲ್ಲಿ ದೀಪಕ್ ಚಹರ್ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಬರೋಬ್ಬರಿ 14 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಆದರೆ, ಇದೀಗ ಚಹರ್ ಗಾಯದ ಕಾರಣ ಐಪಿಎಲ್ 2022ರ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಕೂಡ ಇದೆ. ಇದು ಧೋನಿ ನೇತೃತ್ವದ ಸಿಎಸ್​ಕೆಗೆ ದೊಡ್ಡ ಹೊಡೆತ ಬೀಳುವುದು ಖಚಿತ. ಯಾಕೆಂದರೆ ಸಾಮಾನ್ಯವಾಗಿ ತೊಡೆಯ ಸ್ನಾಯುಗಳಲ್ಲಿನ ಗ್ರೇಡ್ 1 ಟಿಯರ್‌ಗೆ 6 ವಾರಗಳ ವಿಶ್ರಾಂತಿ ಬೇಕಾಗುತ್ತದೆ. ಗಾಯದ ಹಿನ್ನಲೆಯಲ್ಲಿ ಲಂಕಾ ವಿರುದ್ಧದ ಟಿ20 ಸರಣಿ ಕಳೆದುಕೊಳ್ಳುವುದು ಖಚಿತ. ಇದರ ಜೊತೆಗೆ ಐಪಿಎಲ್​ನ ಆರಂಭದ ಕೆಲ ಪಂದ್ಯಕ್ಕೂ ಅನುಮಾನ ಎನ್ನಲಾಗುತ್ತಿದೆ. ಸದ್ಯ ಇವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪುನರ್ವಸತಿ ಶಿಬಿರದಲ್ಲಿ ಭಾಗಿಯಾಗಲಿದ್ದು ಬಳಿಕ ಫಿಟ್​ನೆಟ್ ಟೆಸ್ಟ್ ಪಾಸ್ ಆಗಿ ತಂಡಕ್ಕೆ ಮರಳಬೇಕಿದೆ.

ಶ್ರೀಲಂಕಾ ವಿರುದ್ಧದ ಸರಣಿ ಯಾವಾಗ:

ಶ್ರೀಲಂಕಾ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು ಮೂರು ಪಂದ್ಯಗಳ ಟಿ20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ಮೊದಲನೇ ಟಿ20 ಪಂದ್ಯ ಫೆಬ್ರವರಿ 24ರಂದು ಸಂಜೆ 7ಕ್ಕೆ ಲಕ್ನೋದಲ್ಲಿ ಆಯೋಜಿಸಲಾಗಿದೆ. ದ್ವಿತೀಯ ಟಿ20 ಫೆಬ್ರವರಿ 26ರಂದು ಧರ್ಮಶಾಲಾದಲ್ಲಿ ಮತ್ತು ಅಂತಿಮ ಮೂರನೇ ಟಿ20 ಪಂದ್ಯ ಫೆಬ್ರವರಿ 27ರಂದು ಇದೇ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಮೊದಲ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ಮಾರ್ಚ್ 4ಕ್ಕೆ ಶುರುವಾಗಲಿದೆ. ಎರಡನೇಯದು ಡೇ ನೈಟ್ ಟೆಸ್ಟ್ ಪಂದ್ಯವಾಗಿದ್ದು, ಮಾರ್ಚ್​ 12 ರಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

R Praggnanandhaa: ವಿಶ್ವದ ನಂ.1 ಚೆಸ್ ಆಟಗಾರನಿಗೆ ಸೋಲಿನ ರುಚಿ ತೋರಿಸಿದ ಭಾರತದ ಆರ್. ಪ್ರಗ್ನಾನಂದ

Suryakumar Yadav: ಸ್ಫೋಟಕ ಅರ್ಧಶತಕ ಸಿಡಿಸಿದ ವೇಳೆ ವಿಚಿತ್ರವಾಗಿ ಸೆಲೆಬ್ರೇಷನ್ ಮಾಡಿದ ಸೂರ್ಯಕುಮಾರ್ ಯಾದವ್