R Praggnanandhaa: ವಿಶ್ವದ ನಂ.1 ಚೆಸ್ ಆಟಗಾರನಿಗೆ ಸೋಲಿನ ರುಚಿ ತೋರಿಸಿದ ಭಾರತದ ಆರ್. ಪ್ರಗ್ನಾನಂದ

Air things Masters 2022: ಆರ್. ಪ್ರಗ್ನಾನಂದ ಅವರು ವಿಶ್ವ ಚಾಂಪಿಯನ್, ನಂಬರ್ ಒನ್ ಚೆಸ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸನ್ ಗೆ ಸೋಲುಣಿಸಿದ್ದಾರೆ. ಏರ್ಥಿಂಗ್ ಮಾಸ್ಟರ್ಸ್ ಆನ್​ಲೈನ್ ಟೂರ್ನಿಯಲ್ಲಿ ಈ ಸಾಧನೆ ಮೆರೆದಿರುವ 16 ವರ್ಷದ ಪ್ರಗ್ನಾನಂದ, ಪಂದ್ಯಾವಳಿಯಲ್ಲಿ ಕಾರ್ಲ್ಸನ್​ರ ಮೂರನೇ ಸರಣಿ ಗೆಲುವಿಗೆ ಬ್ರೇಕ್ ಹಾಕಿದ್ದಾರೆ.

R Praggnanandhaa: ವಿಶ್ವದ ನಂ.1 ಚೆಸ್ ಆಟಗಾರನಿಗೆ ಸೋಲಿನ ರುಚಿ ತೋರಿಸಿದ ಭಾರತದ ಆರ್. ಪ್ರಗ್ನಾನಂದ
R Praggnanandhaa
Follow us
TV9 Web
| Updated By: Vinay Bhat

Updated on:Feb 21, 2022 | 12:38 PM

ಭಾರತದ ಲಿಟ್ಲ್ ಗ್ರ್ಯಾಂಡ್ ಮಾಸ್ಟರ್ ಪ್ರಸಿದ್ಧಿ ಪಡೆದಿರುವ ಆರ್. ಪ್ರಗ್ನಾನಂದ (R Praggnanandhaa) ಅವರು ವಿಶ್ವ ಚಾಂಪಿಯನ್, ನಂಬರ್ ಒನ್ ಚೆಸ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್‌ಸೆನ್​​ಗೆ (Magnus Carlsen) ಸೋಲುಣಿಸಿದ್ದಾರೆ. ಏರ್ಥಿಂಗ್ ಮಾಸ್ಟರ್ಸ್ (Air things Masters 2022) ಆನ್​ಲೈನ್ ಟೂರ್ನಿಯಲ್ಲಿ ಈ ಸಾಧನೆ ಮೆರೆದಿರುವ 16 ವರ್ಷದ ಪ್ರಗ್ನಾನಂದ, ಪಂದ್ಯಾವಳಿಯಲ್ಲಿ ಕಾರ್ಲ್ಸನ್​ರ ಮೂರನೇ ಸರಣಿ ಗೆಲುವಿಗೆ ಬ್ರೇಕ್ ಹಾಕಿದ್ದಾರೆ. ಈ ಮೂಲಕ ಪ್ರಗ್ನಾನಂದ ಭಾರತದ ಮೂರನೇ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಮೆಲ್ಟ್‌ವಾಟರ್ ಚಾಂಪಿಯನ್ಸ್ ಚೆಸ್ ಟೂರ್‌ನ ಮೊದಲ ದಿನ ಕಠಿಣ ಸವಾಲು ಎದುರಿಸಿದ ನಂತರ ಕಾರ್ಲ್‌ಸೆನ್‌ ಇದೀಗ ಅತ್ಯಂತ ಕಿರಿಯ ಆಟಗಾರನ ಎದುರು ಹಿನ್ನಡೆ ಎದುರಿಸಿದರು. ಪ್ರಜ್ಞಾನಂದ ನಾರ್ವೆಯ ಚೆಸ್ ಪಟುವಿನ ವಿರುದ್ಧ ಮೊದಲ ಬಾರಿ ಗೆಲುವು ದಾಖಲಿಸಿದರು. ಈ ಹಿಂದೆ ಭಾರತ ನಂ.1 ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಮತ್ತು ಪೆಂಡ್ಯಾಲ ಹರಿಕೃಷ್ಣ ಮಾತ್ರ ಈ ಸಾಧನೆಯನ್ನು ಮಾಡಿದ್ದರು. ಸದ್ಯ ಪ್ರಾಗ್, 4 ಸೋಲು ಹಾಗೂ ಎರಡು ಡ್ರಾಗಳ ಮೂಲಕ ಜಂಟಿ 12ನೇ ಸ್ಥಾನದಲ್ಲಿದ್ದರೂ, ಮತ್ತೊಮ್ಮೆ ಗೆಲುವಿನ ಲಯಕ್ಕೆ ಮರಳುವ ಸೂಚನೆ ನೀಡಿದ್ದಾರೆ.

ಸಾಕಷ್ಟು ರೋಚಕತೆ ಮೂಡಸಿದ್ದ ಪಂದ್ಯದಲ್ಲಿ ಟರ್ಯಾಷ್ ಓಪನಿಂಗ್ ಮೂಲಕ ಆಟವಾಡಿದ ಪ್ರಾಗ್, ಪಂದ್ಯಾವಳಿಯ 8 ನೇ ಸುತ್ತಿನಲ್ಲಿ ಈ ಸಾಧನೆ ಮೆರೆದಿದ್ದಾರೆ. ಪ್ರಗ್ನಾನಂದ ಅವರು ಕೇವಲ 39 ನಡೆಗಳಲ್ಲಿ ಚಾಂಪಿಯನ್ ಬಾಯಿಯಿಂದ ರಿಸೈನ್ ಹೇಳಿಸಿದರು. ಕೇವಲ 14 ವರ್ಷಗಳು, 3 ತಿಂಗಳುಗಳು ಮತ್ತು 24 ದಿನಗಳಲ್ಲಿ ಇವರು ಈ ಸಾಧನೆ ಮಾಡಿರುವುದು ವಿಶೇಷ.

ಯಾರು ಈ ಪ್ರಗ್ನಾನಂದ?:

ಮೂಲತಃ ತಮಿಳುನಾಡಿನ ಚೆನ್ನೈ ಮೂಲದವರಾದ ಪ್ರಗ್ನಾನಂದ ಆಗಸ್ಟ್ 10, 2005ರಲ್ಲಿ ಜನಿಸಿದರು. 2016 ರಲ್ಲಿ 10 ವರ್ಷಗಳು, 10 ತಿಂಗಳುಗಳು ಮತ್ತು 19 ದಿನಗಳ ವಯಸ್ಸಿನಲ್ಲಿ ಕಿರಿಯ ಅಂತರರಾಷ್ಟ್ರೀಯ ಮಾಸ್ಟರ್ ಆಗುವ ಮೂಲಕ ವಿಶ್ವ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದ ಕೀರ್ತಿ ಇವರದ್ದು. ನಂತರದಲ್ಲಿ 2018ರಲ್ಲಿ ಗ್ರ್ಯಾಂಡ್ಮಾಸ್ಟರ್ ಆಗಿ ಹೊರ ಹೊಮ್ಮಿದ್ದರು. ಇವರ FIDE ರೇಟಿಂಗ್ 2612 ಇದ್ದು, ಜುಲೈ 2019 ರಲ್ಲಿ ಡೆನ್ಮಾರ್ಕ್​​ನಲ್ಲಿ ನಡೆದ ಎಕ್ಸ್ಟ್ರಾಕಾನ್ ಚೆಸ್ ಓಪನ್​ನಲ್ಲೂ ಪರಾಕ್ರಮ ಮೆರೆದಿದ್ದರು. ಇಲ್ಲಿ 8½/10 ಅಂಕಗಳನ್ನು (+7–0=3) ಗಳಿಸಿದರು. ಅಲ್ಲದೇ 18 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಯುವ ಚಾಂಪಿಯನ್‌ ಶಿಪ್‌ ಗಳನ್ನು 9/11 ಅಂಕಗಳೊಂದಿಗೆ ಜಯಿಸಿದ ಸಾಧನೆ ಮಾಡಿದ್ದಾರೆ.

ಪ್ರಗ್ನಾನಂದ ಅವರ ಹಿರಿಯ ಸಹೋದರಿ ವೈಶಾಲಿ ಕೂಡ ಅತ್ಯಂತ ಶ್ರೇಷ್ಠಆಟಗಾರ್ತಿ ಆಗಿದ್ದು (IM ಮತ್ತು ಮಹಿಳಾ ಗ್ರ್ಯಾಂಡ್ ಮಾಸ್ಟರ್) ಈಗಾಗಲೇ 12 ವರ್ಷದೊಳಗಿನ ಮತ್ತು 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಶಿಪ್ ಪದಕಗಳನ್ನು ಗೆದ್ದಿದ್ದಾರೆ. ಪ್ರಸ್ತುತ 21 ವರ್ಷ ವಯಸ್ಸಿನ ಅವರು ಹಿರಿಯರಲ್ಲಿ (ಮಹಿಳಾ ವಿಭಾಗ) ಭಾರತದ ನಂ. 4 ಆಟಗಾರ್ತಿ ಆಗಿದ್ದಾರೆ.

ಕಳೆದ ವರ್ಷ 2021ರ ಚೆಸ್ ವಿಶ್ವಕಪ್​ನಲ್ಲಿ ಪ್ರಗ್ನಾನಂದ ಅವರು 90ನೇ ಶ್ರೇಯಾಂಕವಾಗಿ ಪ್ರವೇಶಿಸಿದ್ದರು. 2ನೇ ಸುತ್ತಿನಲ್ಲಿ GM ಗೇಬ್ರಿಯಲ್ ಸರ್ಗಿಸ್ಸಿಯನ್ ಅವರನ್ನು 2-0 ಅಂತರದಲ್ಲಿ ಸೋಲಿಸಿದ ಸಾಧನೆ ಕೂಡ ಮಾಡಿದ್ದರು. 3ನೇ ಸುತ್ತಿನಲ್ಲಿ ರ್ಯಾಪಿಡ್ ಟೈಬ್ರೇಕ್​ಗಳಲ್ಲಿ GM ಮೈಕಾಲ್ ಕ್ರಾಸೆಂಕೋವ್ ಅವರನ್ನು ಸೋಲಿಸಿದ ನಂತರ 4ನೇ ಸುತ್ತಿಗೆ ಮುನ್ನಡೆದರು. ಆದರೆ ಮ್ಯಾಕ್ಸಿಮ್ ವಾಚಿಯರ್-ಲಾಗ್ರೇವ್ ಅವರಿಂದ ನಾಲ್ಕನೇ ಸುತ್ತಿನಲ್ಲಿ ಸೋಲು ಅನುಭವಿಸಿದರು. ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ 2022 ರ ಮಾಸ್ಟರ್ಸ್ ವಿಭಾಗದಲ್ಲಿ ಆಟವಾಡಿದ್ದ ಪ್ರಗ್ನಾನಂದ, ಆಂಡ್ರೆ ಎಸಿಪೆಂಕೊ, ವಿದಿತ್ ಗುಜರಾತಿ ಮತ್ತು ನಿಲ್ಸ್ ಗ್ರಾಂಡೆಲಿಯಸ್ ವಿರುದ್ಧ ಜಯಿಸುವ ಮೂಲಕ ಅಂತಿಮವಾಗಿ 12ನೇ ಸ್ಥಾನ ಪಡೆದುಕೊಂಡಿದ್ದಾರೆ.

IND vs WI T20: ಮೂರನೇ ಟಿ20ಯಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಕಾರಣವೇನು ಗೊತ್ತೇ?

Suryakumar Yadav: ಸ್ಫೋಟಕ ಅರ್ಧಶತಕ ಸಿಡಿಸಿದ ವೇಳೆ ವಿಚಿತ್ರವಾಗಿ ಸೆಲೆಬ್ರೇಷನ್ ಮಾಡಿದ ಸೂರ್ಯಕುಮಾರ್ ಯಾದವ್

Published On - 12:08 pm, Mon, 21 February 22

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ