IND vs WI T20: ಮೂರನೇ ಟಿ20ಯಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಕಾರಣವೇನು ಗೊತ್ತೇ?

ನಿಕೋಲಸ್ ಪೂರನ್ ಏಕಾಂಗಿ ಹೋರಾಟ ಭಾರತಕ್ಕೆ ಕಾಡುತ್ತಲೇ ಇತ್ತು. ಅಂತಿಮವಾಗಿ ಇವರನ್ನು 61 ರನ್ಗೆ ಠಾಕೂರ್ ಔಟ್ ಮಾಡಿ ಪಂದ್ಯವನ್ನು ಭಾರತದ ಕಡೆ ತಿರುಗಿಸಿದರು. ನಂತರ ಬಂದ ಯಾವುದೇ ಬ್ಯಾಟ್ಸ್ಮನ್ ಭಾರತೀಯ ಬೌಲರ್ಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಭಾರತ 17 ರನ್ಗಳ ಜಯ ಸಾಧಿಸಿ ಟಿ20 ರ್ಯಾಂಕಿಂಗ್ನಲ್ಲಿ ನಂಬರ್ 1 ಪಟ್ಟಕ್ಕೇರಿದೆ.

Vinay Bhat
|

Updated on:Feb 21, 2022 | 11:21 AM

ಮೂರು ಪಂದ್ಯಗಳ T20I ಸರಣಿಯಲ್ಲಿ ವೆಸ್ಟ್ ಇಂಡೀಸ್ ಅನ್ನು 3-0 ಅಂತರದಿಂದ ಸೋಲಿಸಿದ ಭಾರತವು ಕ್ಲೀಸ್​ಸ್ವೀಪ್ ಸಾಧನೆ ಮಾಡಿದೆ. ಭಾನುವಾರ ನಡೆದಿದ್ದು ಅಂತಿಮ ಪಂದ್ಯದಲ್ಲಿ ಭಾರತ 17 ರನ್​ಗಳಿಂದ ಗೆದ್ದು ಪ್ರವಾಸಿ ವಿಂಡೀಸ್​ಗೆ ಶಾಕ್ ನೀಡಿತು. ಈ ಪ್ರವಾಸದಲ್ಲಿ ವಿಂಡೀಸ್ ತಂಡ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಮೂರನೇ ಟಿ20 ಪಂದ್ಯದಲ್ಲಿ ಭಾರತ ವಿಂಡೀಸ್ ಮುಂದೆ 185 ರನ್​ಗಳ ಸವಾಲನ್ನು ನೀಡಿತ್ತು. ಇಲ್ಲಿ ಭಾರತದ ಗೆಲುವಿಗೆ ಕಾರಣವೇನು ಗೊತ್ತಾ.

IND vs WI T20 Rohit Sharma lead Team India won the last t20 match against west indies know the reason of win

1 / 5
ಈ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆದರೆ ಸೂರ್ಯಕುಮಾರ್ ಯಾದವ್ ಮತ್ತು ವೆಂಕಟೇಶ್ ಅಯ್ಯರ್ ಐದನೇ ವಿಕೆಟ್​ಗೆ ಉತ್ತಮ ಜೊತೆಯಾಟ ನೀಡುವ ಮೂಲಕ ತಂಡ ತಂಡ ಮೊತ್ತ ಕಲೆಹಾಕಲು ಕಾರಣವಾದರು. ಇಬ್ಬರೂ 37 ಎಸೆತಗಳಲ್ಲಿ 91 ರನ್ಗಳನ್ನು ಸೇರಿಸಿದರು, ಇದರ ಪರಿಣಾಮ ಭಾರತವು ವಿಂಡೀಸ್ ವಿರುದ್ಧ 184 ರನ್​ಗಳ ಪ್ರಬಲ ಸ್ಕೋರ್ ಗಳಿಸಿತು. ಕೊನೆಯ ಐದು ಓವರ್​ಗಳಲ್ಲಿ ಈ ಜೋಡಿ 86 ರನ್ ಗಳಿಸಿತು. ಸೂರ್ಯಕುಮಾರ್ 31 ಎಸೆತಗಳಲ್ಲಿ 65 ರನ್ ಮತ್ತು ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ ಔಟಾಗದೆ 35 ರನ್ ಗಳಿಸಿದರು.

2 / 5
ಹೀಗೆ ಭಾರತವು ಕಠಿಣ ಸವಾಲು ನೀಡಿದ ಬಳಿಕ ವೆಸ್ಟ್ ಇಂಡೀಸ್​ಗೆ ಆರಂಭಿಕ ಆಘಾತಗಳನ್ನು ನೀಡಬೇಕಾಗಿತ್ತು. ಅದರಲ್ಲೂ ಟೀಮ್ ಇಂಡಿಯಾ ಯಶಸ್ವಿಯಾಗಿ ಎದುರಾಳಿಗೆ ಒತ್ತಡ ಹೇರಿತು. ಮೊದಲ ಓವರ್​​ನಲ್ಲಿ ದೀಪಕ್ ಚಹಾರ್ ಕೈಲ್ ಮೈಯರ್ಸ್ ಅವರನ್ನು ಔಟ್ ಮಾಡಿದರೆ ಇದರ ಬೆನ್ನಲ್ಲೇ ಶಾಯ್ ಹೋಪ್​ಗೆ ಪೆವಿಲಿಯನ್ ಹಾದಿ ತೋರಿಸಿದರು.

3 / 5
ಆರಂಭಿಕ ಹಿನ್ನಡೆಯ ನಂತರ ವಿಂಡೀಸ್ ತಂಡಕ್ಕೆ ಸುದೀರ್ಘ ಜೊತೆಯಾಟದ ಅಗತ್ಯವಿತ್ತು. ಆದರೆ, ವಿಂಡೀಸ್ ಬ್ಯಾಟ್ಸ್​ಮನ್​ಗಳ ಜೊತೆಯಾಟಕ್ಕೆ ಭಾರತ ಅವಕಾಶ ನೀಡಲಿಲ್ಲ. ನಿಕೋಲಸ್ ಪೂರನ್ ಮತ್ತು ರೋವ್ಮನ್ ಪೊವೆಲ್ ಮೂರನೇ ವಿಕೆಟ್​ಗೆ 47 ರನ್ ಸೇರಿಸಿದರು. ಆದರೆ ಭಾರತ ಈ ಜೊತೆಯಾಟವನ್ನು ಸಮಯಕ್ಕೆ ಸರಿಯಾಗಿ ಮುರಿಯಲು ಯಶಸ್ವಿಯಾಯಿತು. ಇದಾದ ನಂತರ, ಪೂರನ್ ಮತ್ತು ರೊಮಾರಿಯೊ ಶೆಫರ್ಡ್ ಜೊತೆಯಾಟಕ್ಕೆ 48 ರನ್​ಗಳಲ್ಲಿ ಬ್ರೇಕ್ ಹಾಕಿತು.

4 / 5
ಆದರೆ, ನಿಕೋಲಸ್ ಪೂರನ್ ಏಕಾಂಗಿ ಹೋರಾಟ ಭಾರತಕ್ಕೆ ಕಾಡುತ್ತಲೇ ಇತ್ತು. ಅಂತಿಮವಾಗಿ ಇವರನ್ನು 61 ರನ್​ಗೆ ಠಾಕೂರ್ ಔಟ್ ಮಾಡಿ ಪಂದ್ಯವನ್ನು ಭಾರತದ ಕಡೆ ತಿರುಗಿಸಿದರು. ನಂತರ ಬಂದ ಯಾವುದೇ ಬ್ಯಾಟ್ಸ್​ಮನ್​ ಭಾರತೀಯ ಬೌಲರ್ಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಭಾರತ 17 ರನ್​ಗಳ ಜಯ ಸಾಧಿಸಿ ಟಿ20 ರ್ಯಾಂಕಿಂಗ್​ನಲ್ಲಿ ನಂಬರ್ 1 ಪಟ್ಟಕ್ಕೇರಿದೆ.

5 / 5

Published On - 10:51 am, Mon, 21 February 22

Follow us
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!