AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಐಪಿಎಲ್ ಯಾವಾಗ ಆರಂಭ? ಇಲ್ಲಿದೆ ಮಾಹಿತಿ

IPL 2022 Starting Date: ಐಪಿಎಲ್ ಟೂರ್ನಿ ಆರಂಭವಾದರೆ, ಲೀಗ್​ ಹಂತದ ಪಂದ್ಯಗಳು ಮುಂಬೈನಲ್ಲೇ ನಡೆಯುವ ಸಾಧ್ಯತೆ ಹೆಚ್ಚಿದೆ. ಇನ್ನು ಪ್ಲೇ ಆಫ್ ಪಂದ್ಯಗಳನ್ನು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್​ನಲ್ಲಿ ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.

TV9 Web
| Edited By: |

Updated on: Feb 20, 2022 | 4:09 PM

Share
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಯಾವಾಗ ಶುರು ಎಂಬ ಚರ್ಚೆಗಳು ಜೋರಾಗಿದೆ. ಏಕೆಂದರೆ ಈ ಹಿಂದೆ ಏಪ್ರಿಲ್​ 2 ರಿಂದ ಟೂರ್ನಿಗೆ ಚಾಲನೆ ನೀಡಲಾಗುತ್ತೆ ಎನ್ನಲಾಗಿತ್ತು. ಇದಾದ ಬಳಿಕ ಮಾರ್ಚ್​ ಅಂತ್ಯದಲ್ಲಿ ಆರಂಭವಾಗಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಅದರಂತೆ ಮಾರ್ಚ್​ 27 ಕ್ಕೆ ಆರಂಭವಾಗಲಿದೆ ಎನ್ನಲಾಗಿತ್ತು.

1 / 6
ಇದೀಗ ಮಾರ್ಚ್​ ತಿಂಗಳಲ್ಲೇ ಟೂರ್ನಿ ಶುರುವಾಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಐಪಿಎಲ್ ನೇರ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ನೆಟ್​ವರ್ಕ್​ ಇದೀಗ ಐಪಿಎಲ್​ ಸೀಸನ್​ 15 ಅನ್ನು ಮಾರ್ಚ್​ 26 ರಿಂದ ಶುರು ಮಾಡುವಂತೆ ಬಿಸಿಸಿಐಗೆ ಮನವಿ ಸಲ್ಲಿಸಿದೆ ಎಂದು ವರದಿಯಾಗಿದೆ.

2 / 6
ಈ ಬಗ್ಗೆ ಪ್ರಸಾರಕರು ಮತ್ತು ಬಿಸಿಸಿಐ ನಡುವೆ ಮಾತುಕತೆ ನಡೆಯುತ್ತಿದೆ. ಮಾರ್ಚ್ 26 ಶನಿವಾರವಾಗಿದ್ದು, ಹೀಗಾಗಿ ಉದ್ಘಾಟನಾ ಪಂದ್ಯವನ್ನು ವೀಕೆಂಡ್​ನಲ್ಲಿ ಆರಂಭಿಸುವಂತೆ ಕೋರಲಾಗಿದೆ. ಅಷ್ಟೇ ಅಲ್ಲದೆ ಮಾರ್ಚ್ 27 ಭಾನುವಾರ ಆಗಿರುವ ಕಾರಣ 2 ಪಂದ್ಯಗಳನ್ನು ಆಡಿಸುವಂತೆ ಸ್ಟಾರ್ ನೆಟ್​ವರ್ಕ್​ ಬಿಸಿಸಿಐಗೆ ತಿಳಿಸಿದೆ ಎಂಬ ಮಾಹಿತಿಯನ್ನು ಫ್ರಾಂಚೈಸಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

3 / 6
ಹೀಗಾಗಿ ಮಾರ್ಚ್​ 26 ಅಥವಾ ಮಾರ್ಚ್ 27 ರಂದು ಐಪಿಎಲ್ ಶುರುವಾಗುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಇದಾಗ್ಯೂ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಒಪ್ಪಿಗೆಗಾಗಿ ಕಾಯುತ್ತಿದ್ದು, ಇದಾದ ಬಳಿಕ ಟೂರ್ನಿ ಎಲ್ಲಿ ಆಯೋಜಿಸಬೇಕೆಂಬುದನ್ನು ನಿರ್ಧರಿಸಲಾಗುತ್ತದೆ. ಏಕೆಂದರೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿ  ಟೂರ್ನಿ ಲೀಗ್ ಸುತ್ತುಗಳನ್ನು ಮಹಾರಾಷ್ಟ್ರದಲ್ಲಿ ಮಾತ್ರ ನಡೆಸಲು ಬಿಸಿಸಿಐ ಪ್ಲ್ಯಾನ್​ ರೂಪಿಸಿದೆ.

4 / 6
ಇದಕ್ಕಾಗಿ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ವಾಂಖೆಡೆ ಸ್ಟೇಡಿಯಂ, ಬ್ರಬೋರ್ನ್ ಸ್ಟೇಡಿಯಂ, ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಪುಣೆ ಕ್ರಿಕೆಟ್ ಸ್ಟೇಡಿಯಂಗಳನ್ನು ಆಯ್ಕೆ ಮಾಡಿಕೊಂಡಿದೆ. ಆದರೆ 10 ತಂಡಗಳಿರುವ ಕಾರಣ ಅಭ್ಯಾಸಕ್ಕೆ ಮೈದಾನ ಒದಗಿಸುವುದು ಇದೀಗ ಬಿಸಿಸಿಐಗೆ ದೊಡ್ಡ ಸವಾಲಾಗಿದೆ. ಇದಕ್ಕಾಗಿ ಬಿಸಿಸಿಐ ಎಂಸಿಎ ಸ್ಟೇಡಿಯಂನಲ್ಲೇ ಬದಲಿ ವ್ಯವಸ್ಥೆ ಮಾಡುವ ಬಗ್ಗೆ ಕೂಡ ಚಿಂತಿಸಿದೆ.

5 / 6
ಒಟ್ಟಿನಲ್ಲಿ ಮಾರ್ಚ್​ ಕೊನೆಯ ವಾರದಲ್ಲಿ ಐಪಿಎಲ್ ಟೂರ್ನಿ ಆರಂಭವಾದರೆ, ಲೀಗ್​ ಹಂತದ ಪಂದ್ಯಗಳು ಮುಂಬೈನಲ್ಲೇ ನಡೆಯುವ ಸಾಧ್ಯತೆ ಹೆಚ್ಚಿದೆ. ಇನ್ನು ಪ್ಲೇ ಆಫ್ ಪಂದ್ಯಗಳನ್ನು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್​ನಲ್ಲಿ ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಮುಂದಿನ ತಿಂಗಳ 26 ಅಥವಾ 27 ರಿಂದ ರಂಗು ರಂಗಿನ ಕ್ರಿಕೆಟ್ ಟೂರ್ನಿಗೆ ಚಾಲನೆ ಸಿಗುವುದು ಬಹುತೇಕ ಖಚಿತ ಎನ್ನಬಹುದು.

6 / 6