ದಾದಾ, ಯುವಿ, ವಾಸ್… ಡೆಲ್ಲಿ ಕ್ಯಾಪಿಟಲ್ಸ್ ಹೊಸ ‘ಮಾಸ್ಟರ್ ಮೈಂಡ್ಸ್’

ಭಾರತೀಯ ಕ್ರಿಕೆಟ್‌ಗೆ ಆಕ್ರಮಣಕಾರಿ ಆಟದ ಶೈಲಿಯನ್ನು ಪರಿಚಯಿಸಿದ ಸೌರವ್ ಗಂಗೂಲಿ ಮತ್ತು ಎರಡು ಬಾರಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಮ್ಯಾಚ್ ವಿನ್ನರ್ ಯುವರಾಜ್ ಸಿಂಗ್ ಈಗ ಒಂದೇ ಡಗೌಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ! ಹೌದು, ಮುಂಬರುವ ಐಪಿಎಲ್ ಸೀಸನ್-20 ಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಅಸಾಧಾರಣ ಕೋಚಿಂಗ್ ಪ್ಯಾನೆಲ್ ಒಂದನ್ನು ಅಖಾಡಕ್ಕಿಳಿಸಲು ಸಂಪೂರ್ಣವಾಗಿ ಸಜ್ಜಾಗಿದೆ.

ದಾದಾ, ಯುವಿ, ವಾಸ್... ಡೆಲ್ಲಿ ಕ್ಯಾಪಿಟಲ್ಸ್ ಹೊಸ ಮಾಸ್ಟರ್ ಮೈಂಡ್ಸ್
ದಾದಾ, ಯುವಿ, ವಾಸ್
Image Credit source: x.com

Updated on: Sep 13, 2026 | 12:25 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20 ಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಭರ್ಜರಿ ಸಿದ್ಧತೆಗಳನ್ನು ಆರಂಭಿಸಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಡೆಲ್ಲಿ ತಂಡದ ಹೊಸ ಕೋಚಿಂಗ್ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಈ ಕೋಚಿಂಗ್ ಬಳಗದಲ್ಲಿ ಟೀಮ್ ಇಂಡಿಯಾದ ಮೂವರು ಮಾಜಿ ಕ್ರಿಕೆಟಿಗರು ಹಾಗೂ ಶ್ರೀಲಂಕಾದ ಮಾಜಿ ವೇಗಿ ಕಾಣಿಸಿಕೊಂಡಿರುವುದು ವಿಶೇಷ. ಅದರಂತೆ ಮುಂಬರುವ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್‌ಗಳಾಗಿ ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಚಾಮಿಂಡ ವಾಸ್ ಹಾಗೂ ಅಮಿತ್ ಮಿಶ್ರಾ ಕಾರ್ಯನಿರ್ವಹಿಸಲಿದ್ದಾರೆ.

  • ಮುಖ್ಯ ಕೋಚ್: ಸೌರವ್ ಗಂಗೂಲಿ (ಟೀಮ್ ಇಂಡಿಯಾದ ಮಾಜಿ ನಾಯಕ)
  • ಸಹಾಯಕ ಕೋಚ್: ಯುವರಾಜ್ ಸಿಂಗ್ (ಭಾರತದ ವಿಶ್ವಕಪ್ ಹೀರೊ)
  • ವೇಗದ ಬೌಲಿಂಗ್ ಕೋಚ್: ಚಾಮಿಂಡ ವಾಸ್ (ಶ್ರೀಲಂಕಾದ ಮಾಜಿ ದಿಗ್ಗಜ ವೇಗಿ)
  • ಸ್ಪಿನ್ ಬೌಲಿಂಗ್ ಕೋಚ್: ಅಮಿತ್ ಮಿಶ್ರಾ (ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್)

ಮಾಲೀಕರು ಬದಲಾವಣೆ:

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು JSW ಗ್ರೂಪ್ ಮತ್ತು GMR ಗ್ರೂಪ್ ನಡುವಿನ 50:50 ಜಂಟಿ ಮಾಲೀಕತ್ವದಲ್ಲಿದೆ. ಇವರಿಬ್ಬರ ನಡುವಿನ ಒಪ್ಪಂದದ ಪ್ರಕಾರ, ಪುರುಷರ ಐಪಿಎಲ್ ತಂಡದ ಕ್ರಿಕೆಟ್ ಕಾರ್ಯಾಚರಣೆಯ ಜವಾಬ್ದಾರಿಯನ್ನು ತಲಾ 2 ವರ್ಷಗಳ ಅವಧಿಗೆ ಸರದಿಯ ಆಧಾರದ ಮೇಲೆ ನಿರ್ವಹಿಸಲಾಗುತ್ತದೆ.

ಐಪಿಎಲ್​ 2025 ಮತ್ತು 2026ರ ಸೀಸನ್‌ಗಳಕ್ಕು ತಂಡದ ಸಂಪೂರ್ಣ ಜವಾಬ್ದಾರಿ GMR ಗ್ರೂಪ್ ಬಳಿ ಇತ್ತು. ಈ ಅವಧಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮುಖ್ಯ ಕೋಚ್ ಆಗಿ ಹೇಮಂಗ್ ಬದಾನಿ ಮತ್ತು ವೇಣುಗೋಪಾಲ್ ರಾವ್ ಕ್ರಿಕೆಟ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.

ಇದೀಗ 2027 ಮತ್ತು 2028ರ ಸೀಸನ್​ಗಾಗಿ JSW ಗ್ರೂಪ್ ಡೆಲ್ಲಿ ಕ್ಯಾಪಿಟಲ್ಸ್​ ಕಾರ್ಯಾಚರಣೆಯ ಜವಾಬ್ದಾರಿಯನ್ನು ಪಡೆದುಕೊಂಡಿದೆ. ಅದರಂತೆ ಇದೀಗ ಕೋಚಿಂಗ್ ಸಿಬ್ಬಂದಿಗಳಲ್ಲಿ ಮಹತ್ವದ ಬದಲಾವಣೆಯಾಗಿದೆ.

ಡೆಲ್ಲಿ ಶಿಬಿರದಲ್ಲಿ ಲಂಕಾ ಮಾಜಿ ವೇಗಿ:

ಫ್ರಾಂಚೈಸಿಯು ಈ ಹೊಸ ಬದಲಾವಣೆಗಳನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸದಿದ್ದರೂ, ಹೊಸದಾಗಿ ನೇಮಕಗೊಂಡಿರುವ ವೇಗದ ಬೌಲಿಂಗ್ ಕೋಚ್ ಚಮಿಂಡಾ ವಾಸ್ ಅವರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಿ-ಸೀಸನ್ ಟ್ರಯಲ್ಸ್‌ನಲ್ಲಿ ವಾಸ್ ಭಾಗವಹಿಸಿದ್ದು, ಯುವ ಪ್ರತಿಭೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಸಚಿನ್ ಸಾರ್ವಕಾಲಿಕ ರನ್ ದಾಖಲೆ ಮುರಿಯಲಿದ್ದಾರಾ ಜೋ ರೂಟ್?

ಒಟ್ಟಾರೆಯಾಗಿ, ಮೆಗಾ ಹರಾಜಿಗೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಈ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಕ್ರಿಕೆಟ್ ಜಗತ್ತಿನ ಈ ದಿಗ್ಗಜರ ಮಾರ್ಗದರ್ಶನದಲ್ಲಿ ತಂಡವು ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

 

Loading...
Unable to load recommendations.
Follow Us