RCB ಜೆರ್ಸಿಯನ್ನು ತೆಗೆದು ಹಾಕುವಂತೆ ಜೈಲರ್ ನಿರ್ಮಾಪಕರಿಗೆ ಕೋರ್ಟ್ ಸೂಚನೆ

| Updated By: ಝಾಹಿರ್ ಯೂಸುಫ್

Updated on: Aug 28, 2023 | 6:20 PM

RCB: ನಮ್ಮ ಅನುಮತಿಯಿಲ್ಲದೆ ತಮ್ಮ ಜೆರ್ಸಿಯನ್ನು ಬಳಸಿ ನಕಾರಾತ್ಮಕವಾಗಿ ಬಿಂಬಿಸಲಾಗಿದೆ. ಇದರಿಂದ ಆರ್​ಸಿಬಿ ಬ್ರ್ಯಾಂಡ್ ಇಮೇಜ್​ಗೆ ಮತ್ತು ಇಕ್ವಿಟಿಗೆ ಹಾನಿಯುಂಟಾಗುತ್ತಿದೆ. ಹೀಗಾಗಿ ಈ ದೃಶ್ಯಗಳನ್ನು ಚಿತ್ರದಿಂದ ತೆಗೆದು ಹಾಕುವಂತೆ ಆರ್​ಸಿಬಿ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಕೋರ್ಟ್​ ಮೆಟ್ಟಿಲೇರಿದ್ದರು.

RCB ಜೆರ್ಸಿಯನ್ನು ತೆಗೆದು ಹಾಕುವಂತೆ ಜೈಲರ್ ನಿರ್ಮಾಪಕರಿಗೆ ಕೋರ್ಟ್ ಸೂಚನೆ
Jailer - RCB
Follow us on

ಸೆಪ್ಟೆಂಬರ್ 1 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಜೆರ್ಸಿಯನ್ನು ಹೊಂದಿರುವ ದೃಶ್ಯವನ್ನು ಯಾವುದೇ ಥಿಯೇಟರ್‌ಗಳಲ್ಲಿ ಪ್ರದರ್ಶಿಸದಂತೆ “ಜೈಲರ್” ಚಲನಚಿತ್ರದ ನಿರ್ಮಾಪಕರಿಗೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದ ಪಾತ್ರವೊಂದಕ್ಕೆ ಆರ್​ಸಿಬಿ ಜೆರ್ಸಿಯನ್ನು ಬಳಸಲಾಗಿದೆ. ಇದೀಗ ಈ ಆರ್​ಸಿಬಿ ಜೆರ್ಸಿಯ ಧರಿಸಿರುವ ಪಾತ್ರಧಾರಿಯ ದೃಶ್ಯಕ್ಕೆ ಕತ್ತರಿ ಹಾಕುವಂತೆ ಕೋರ್ಟ್​ ಸೂಚಿಸಿದೆ.

ಈ ಚಿತ್ರದ ಕಾಂಟ್ರಾಕ್ಟ್​ ಕಿಲ್ಲರ್ ಪಾತ್ರದಲ್ಲಿ ಆರ್​ಸಿಬಿ ಜೆರ್ಸಿ ಧರಿಸಿರುವ ವ್ಯಕ್ತಿ ಕಾಣಿಸಿಕೊಂಡಿದ್ದರು. ಅಲ್ಲದೆ ಈ ಪಾತ್ರಧಾರಿ ಮಹಿಳೆಯ ಬಗ್ಗೆ ಅವಹೇಳನಕಾರಿ ಮತ್ತು ಸ್ತ್ರೀದ್ವೇಷದ ಡೈಲಾಗ್​ಗಳನ್ನು ಹೇಳುವುದನ್ನು ಜೈಲರ್​ ಚಿತ್ರದಲ್ಲಿ ಕಾಣಬಹುದು. ಇದರ ವಿರುದ್ಧ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಕೋರ್ಟ್ ಮೆಟ್ಟಿಲೇರಿದ್ದರು.

ನಮ್ಮ ಅನುಮತಿಯಿಲ್ಲದೆ ತಮ್ಮ ಜೆರ್ಸಿಯನ್ನು ಬಳಸಿ ನಕಾರಾತ್ಮಕವಾಗಿ ಬಿಂಬಿಸಲಾಗಿದೆ. ಇದರಿಂದ ಆರ್​ಸಿಬಿ ಬ್ರ್ಯಾಂಡ್ ಇಮೇಜ್​ಗೆ ಮತ್ತು ಇಕ್ವಿಟಿಗೆ ಹಾನಿಯುಂಟಾಗುತ್ತಿದೆ ಎಂದು ಆರ್​ಸಿಬಿ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ವಾದವನ್ನು ಮುಂದಿಟ್ಟಿದೆ.

ಈ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್, ಜೈಲರ್ ಚಿತ್ರದಿಂದ ಈ ದೃಶ್ಯವನ್ನು ಅಥವಾ ಆರ್​ಸಿಬಿ ಜೆರ್ಸಿ ಧರಿಸಿರುವುದನ್ನು ತೆಗೆದು ಹಾಕುವಂತೆ ಸೂಚಿಸಿದೆ. ಅಷ್ಟೇ ಅಲ್ಲದೆ ಚಿತ್ರವು ಟಿವಿ, ಸ್ಯಾಟ್​ಲೈಟ್ ಅಥವಾ ಒಟಿಟಿಯಲ್ಲಿ ಬಿಡುಗಡೆ ಮೊದಲು ಈ ದೃಶ್ಯವನ್ನು ಎಡಿಟ್ ಮಾಡಬೇಕೆಂದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: RCB ಯಿಂದ ಇಬ್ಬರು, CSK ಯಿಂದ ಒಬ್ಬರು: ತಂಡದಲ್ಲಿ ಮುಂಬೈ ಅವರದ್ದೇ ದರ್ಬಾರು..!

ದೆಹಲಿ ಹೈಕೋರ್ಟ್​ನ ಈ ಎಲ್ಲಾ ಆದೇಶಗಳಿಗೂ ಜೈಲರ್​ ನಿರ್ಮಾಪಕರು ಒಪ್ಪಿಗೆ ಸೂಚಿಸಿದ್ದಾರೆ. ಹಾಗೆಯೇ ಸದ್ಯ ಥಿಯೇಟರ್​ನಲ್ಲಿರುವ ಜೈಲರ್ ಚಿತ್ರದಿಂದ, ಸೆಪ್ಟೆಂಬರ್ 1 ರೊಳಗೆ ಆರ್​ಸಿಬಿ ಜೆರ್ಸಿಯ ದೃಶ್ಯವನ್ನು ತೆಗೆದು ಹಾಕುವಂತೆ ಕೋರ್ಟ್ ಸೂಚಿಸಿದೆ. ಹಾಗೆಯೇ ನ್ಯಾಯಾಲಯದ ಸಂಪೂರ್ಣ ಶುಲ್ಕವನ್ನು ಫಿರ್ಯಾದಿದಾರರಿಗೆ ಮರುಪಾವತಿಸಲು ದೆಹಲಿ ಹೈಕೋರ್ಟ್ ಆದೇಶಿಸಿದೆ.

 

Published On - 6:18 pm, Mon, 28 August 23