ಸುನಿಲ್ ನರೈನ್ಗೆ ರೆಡ್ ಕಾರ್ಡ್: ಮೈದಾನದಿಂದ ಹೊರಕ್ಕೆ..!
CPL 2023: ಸ್ಲೋ ಓವರ್ ರೇಟ್ಗೆ ತಕ್ಷಣವೇ ಜಾರಿಗೆ ಬರುವಂತಹ ಶಿಕ್ಷೆಯಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ರೆಡ್ ಕಾರ್ಡ್ ನಿಯಮವನ್ನು ಜಾರಿಗೆ ತರಲಾಗಿದೆ. ಈ ನಿಯಮದ ಪ್ರಕಾರ ನಿಧಾನಗತಿಯಲ್ಲಿ ಓವರ್ ಪೂರೈಸಿದ ತಂಡ ಓರ್ವ ಫೀಲ್ಡರ್ನನ್ನು ಕಳೆದುಕೊಳ್ಳಬಹುದು. ಹಾಗೆಯೇ ಬ್ಯಾಟಿಂಗ್ ತಂಡಕ್ಕೆ 5 ರನ್ಗಳ ಪೆನಾಲ್ಟಿ ಕೂಡ ಬೀಳಬಹುದು. ಈ ನಿಯಮದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (CPL 2023) ರೆಡ್ ಕಾರ್ಡ್ ನಿಯಮವನ್ನು ಜಾರಿಗೆ ತರಲಾಗಿದ್ದು, ಇದರ ಮೊದಲ ಬಲಿಪಶುವಾಗಿ ಸುನಿಲ್ ನರೈನ್ ಮೈದಾನ ತೊರೆದಿದ್ದಾರೆ. ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಹಾಗೂ ಟ್ರಿನ್‌ಬಾಗೊ ನೈಟ್ ರೈಡರ್ಸ್ ನಡುವಣ ಪಂದ್ಯದ ವೇಳೆ ಅಂಪೈರ್ ಮೊದಲ ಬಾರಿಗೆ ರೆಡ್ ಕಾರ್ಡ್ ತೋರಿಸಿದರು.
ಈ ಪಂದ್ಯದಲ್ಲಿ ನಿಗದಿತ ಸಮಯದೊಳಗೆ 19 ಓವರ್ಗಳನ್ನು ಪೂರ್ಣಗೊಳಿಸದ ಕಾರಣ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಕ್ಕೆ ಅಂಪೈರ್ ರೆಡ್ ಕಾರ್ಡ್ ತೋರಿಸಿದ್ದರು. ಅಲ್ಲದೆ ಈ ನಿಯಮದಂತೆ ಒಬ್ಬ ಆಟಗಾರನು ಮೈದಾನದಿಂದ ಹೊರಗುಳಿಯಬೇಕಿತ್ತು. ಇಲ್ಲಿ ನಾಯಕ ಕೀರನ್ ಪೊಲಾರ್ಡ್, ಸುನಿಲ್ ನರೈನ್ ಅವರಿಗೆ ರೆಡ್ ಕಾರ್ಡ್ ತೋರಿಸುವಂತೆ ಅಂಪೈರ್ಗೆ ತಿಳಿಸಿದರು. ಅದರಂತೆ 19ನೇ ಓವರ್ ಮುಕ್ತಾಯದ ಬೆನ್ನಲ್ಲೇ ನರೈನ್ ಮೈದಾನ ತೊರೆದರು. ಇದರೊಂದಿಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ರೆಡ್ ಕಾರ್ಡ್ ಪಡೆದ ಮೊದಲ ಆಟಗಾರ ಎನಿಸಿಕೊಂಡರು.
SENT OFF! The 1st ever red card in CPL history. Sunil Narine gets his marching orders 🚨 #CPL23 #SKNPvTKR #RedCard #CricketPlayedLouder #BiggestPartyInSport pic.twitter.com/YU1NqdOgEX
— CPL T20 (@CPL) August 28, 2023
ಏನಿದು ರೆಡ್ ಕಾರ್ಡ್ ನಿಯಮ?
ಸ್ಲೋ ಓವರ್ ರೇಟ್ಗೆ ತಕ್ಷಣವೇ ಜಾರಿಗೆ ಬರುವಂತಹ ಶಿಕ್ಷೆಯಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ರೆಡ್ ಕಾರ್ಡ್ ನಿಯಮವನ್ನು ಜಾರಿಗೆ ತರಲಾಗಿದೆ. ಈ ನಿಯಮದ ಪ್ರಕಾರ ನಿಧಾನಗತಿಯಲ್ಲಿ ಓವರ್ ಪೂರೈಸಿದ ತಂಡ ಓರ್ವ ಫೀಲ್ಡರ್ನನ್ನು ಕಳೆದುಕೊಳ್ಳಬಹುದು. ಹಾಗೆಯೇ ಬ್ಯಾಟಿಂಗ್ ತಂಡಕ್ಕೆ 5 ರನ್ಗಳ ಪೆನಾಲ್ಟಿ ಕೂಡ ಬೀಳಬಹುದು. ಈ ನಿಯಮದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
- ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಿಯಮದಂತೆ ಸಿಪಿಎಲ್ನಲ್ಲೂ ಒಂದು ಇನಿಂಗ್ಸ್ಗೆ 85 ನಿಮಿಷಗಳನ್ನು ನಿಗದಿ ಮಾಡಲಾಗಿದೆ.
- ಇಲ್ಲಿ ಬೌಲಿಂಗ್ ತಂಡವು 17ನೇ ಓವರ್ ಅನ್ನು 72 ನಿಮಿಷ ಮತ್ತು 15 ಸೆಕೆಂಡುಗಳಲ್ಲಿ ಮುಗಿಸಬೇಕು. ಈ ಸಮಯದೊಳಗೆ 17 ಓವರ್ ಪೂರ್ಣಗೊಳಿಸಲು ವಿಫಲವಾದರೆ ಬೌಂಡರಿ ಲೈನ್ನಿಂದ ಓರ್ವ ಫೀಲ್ಡರ್ ಅನ್ನು 30 ಯಾರ್ಡ್ ಸರ್ಕಲ್ನಲ್ಲಿ ನಿಲ್ಲಿಸಬೇಕಾಗುತ್ತದೆ.
- ಇನ್ನು 18ನೇ ಓವರ್ ಅನ್ನು 76 ನಿಮಿಷಗಳು ಮತ್ತು 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಈ ಸಮಯದೊಳಗೆ 18 ಓವರ್ ಮುಗಿಸಲು ಸಾಧ್ಯವಾಗದಿದ್ದರೆ, ಬೌಂಡರಿ ಲೈನ್ನಿಂದ ಇಬ್ಬರು ಫೀಲ್ಡರ್‌ಗಳನ್ನು ಕಡಿತಗೊಳಿಸಿ 30 ಯಾರ್ಡ್ ಸರ್ಕಲ್ ಒಳಗೆ ನಿಲ್ಲಿಸಬೇಕಾಗುತ್ತದೆ.
- 18ನೇ ಓವರ್‌ನ ಪ್ರಾರಂಭದಲ್ಲಿ ಅಗತ್ಯವಿರುವ ಓವರ್ ರೇಟ್ಗಿಂತ ಹಿಂದೆ ಉಳಿದಿದ್ದರೆ, ಬೌಂಡರಿ ಲೈನ್ನಿಂದ ಓರ್ವ ಆಟಗಾರ 30 ಯಾರ್ಡ್ ಸರ್ಕಲ್ನಲ್ಲಿರಬೇಕಾಗುತ್ತದೆ. ಅಂದರೆ 30 ಯಾರ್ಡ್ ಸರ್ಕಲ್ನಲ್ಲಿ ಒಟ್ಟು 5 ಫೀಲ್ಡರ್ ಇರಬೇಕಾಗುತ್ತದೆ.
- 19ನೇ ಓವರ್‌ನ ಪ್ರಾರಂಭದಲ್ಲಿ ಓವರ್ ರೇಟ್ನಲ್ಲಿ ಹಿಂದೆ ಉಳಿದಿದ್ದರೆ, ಬೌಂಡರಿ ಲೈನ್ನಿಂದ ಇಬ್ಬರು ಫೀಲ್ಡರ್ಗಳು 30 ಯಾರ್ಡ್ ಸರ್ಕಲ್ನಲ್ಲಿ ಫೀಲ್ಡಿಂಗ್ ಮಾಡಬೇಕಾಗುತ್ತದೆ. ಅಂದರೆ 30 ಯಾರ್ಡ್ ಸರ್ಕಲ್ನಲ್ಲಿ ಒಟ್ಟು 6 ಫೀಲ್ಡರ್ಗಳಿರಬೇಕಾಗುತ್ತದೆ.
- 20ನೇ ಓವರ್‌ನ ಆರಂಭದ ವೇಳೆ ಓವರ್ ರೇಟ್ನಲ್ಲಿ ಹಿಂದೆ ಉಳಿದಿದ್ದರೆ, ಓರ್ವ ಫೀಲ್ಡರ್ ಮೈದಾನ ತೊರೆಯಬೇಕಾಗುತ್ತದೆ. ಅಂದರೆ 10 ಮಂದಿಯೊಂದಿಗೆ ಫೀಲ್ಡಿಂಗ್ ಮಾಡಬೇಕಾಗುತ್ತದೆ. ಇಲ್ಲಿ ಯಾರು ಮೈದಾನದಿಂದ ಹೊರಬೇಕು ಎಂಬುದನ್ನು ನಾಯಕ ನಿರ್ಧರಿಸುತ್ತಾನೆ.
- ಇನ್ನು ಬ್ಯಾಟಿಂಗ್ ತಂಡವು ಪಂದ್ಯವನ್ನು ನಿಧಾನಗೊಳಿಸಿದರೆ ರನ್ಗಳ ದಂಡ ವಿಧಿಸಲಾಗುತ್ತದೆ. ಅಂದರೆ ಬ್ಯಾಟಿಂಗ್ಗೆ ನಿಲ್ಲಲು ಅಥವಾ ಗ್ಲೌಸ್ ಮತ್ತು ಬ್ಯಾಟ್ಗಳನ್ನು ಬದಲಿಸುವ ಮೂಲಕ ಪಂದ್ಯದ ಸಮಯವನ್ನು ವ್ಯರ್ಥ ಮಾಡಿದರೆ 5 ರನ್ಗಳ ಪೆನಾಲ್ಟಿ ಬೀಳಲಿದೆ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಫೀಲ್ಡ್ ಅಂಪೈರ್ ರೆಡ್ ಕಾರ್ಡ್ ತೋರಿಸಿ ಈ ನಿಯಮವನ್ನು ತಕ್ಷಣವೇ ಜಾರಿಗೊಳಿಸುತ್ತಾರೆ. ಅದರಂತೆ ಟ್ರಿನ್‌ಬಾಗೊ ನೈಟ್ ರೈಡರ್ಸ್ 20ನೇ ಓವರ್‌ನ ಆರಂಭದ ವೇಳೆ ಓವರ್ ರೇಟ್ನಲ್ಲಿ ಹಿಂದೆ ಉಳಿದಿದ್ದ ಕಾರಣ ಸುನಿಲ್ ನರೈನ್ ಅವರನ್ನು ಹೊರಗೆ ಕಳುಹಿಸಿ, ಕೊನೆಯ ಓವರ್ನಲ್ಲಿ 10 ಮಂದಿಯೊಂದಿಗೆ ಫೀಲ್ಡಿಂಗ್ ಮಾಡಿದೆ.