Kieron Pollard: ಕೀರೊನ್ ಪೊಲಾರ್ಡ್ ಸ್ಫೋಟಕ ಸಿಕ್ಸ್ಗೆ ರೋಡ್ಗೆ ಬಿದ್ದ ಚೆಂಡು: ದಂಗಾದ ಇಡೀ ಸ್ಟೇಡಿಯಂ
Desert Vipers vs MI Emirates, ILT20: ಮೊಹಮ್ಮದ್ ವಾಸೀಂ, ಕೀರೊನ್ ಪೊಲಾರ್ಡ್ (Kieron Pollard) ಹಾಗೂ ಆಂಡ್ರೆ ಫ್ಲೆಟ್ಚರ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಎಂಐ ಎಮಿರೇಟ್ಸ್ ತಂಡ 20 ಓವರ್ಗಳಲ್ಲಿ ಗಳಿಸಿದ್ದು 241 ರನ್.
ದುಬೈನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಟಿ20 ಲೀಗ್ (ILT20) ಸಾಕಷ್ಟು ರೋಚಕತೆ ಪಡೆಯುತ್ತಿದೆ. ಪ್ರತಿಯೊಂದು ಪಂದ್ಯ ಹೈವೋಲ್ಟೇಜ್ನಿಂದ ಕೂಡಿದೆ. ಅದರಂತೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡಿಸರ್ಟ್ ವೈಪರ್ಸ್ ವಿರುದ್ಧದ ಪಂದ್ಯದಲ್ಲಿ ಎಂಐ ಎಮಿರೇಟ್ಸ್ (DV vs MIE) ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ಬರೋಬ್ಬರಿ 157 ರನ್ಗಳ ಅಮೋಘ ಗೆಲುವು ಸಾಧಿಸಿತು. ಮೊಹಮ್ಮದ್ ವಾಸೀಂ, ಕೀರೊನ್ ಪೊಲಾರ್ಡ್ (Kieron Pollard) ಹಾಗೂ ಆಂಡ್ರೆ ಫ್ಲೆಟ್ಚರ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಎಂಐ ಎಮಿರೇಟ್ಸ್ ತಂಡ 20 ಓವರ್ಗಳಲ್ಲಿ ಗಳಿಸಿದ್ದು 241 ರನ್. ಈ ಟಾರ್ಗೆಟ್ನ ಹತ್ತಿರ ಕೂಡ ಸುಳಿಯದ ಡಿಸರ್ಟ್ ವೈಪರ್ಸ್ 84 ರನ್ಗೆ ಸರ್ವಪತನ ಕಂಡಿತು. ಅದರಲ್ಲೂ ಈ ಪಂದ್ಯದಲ್ಲಿ ಪೊಲಾರ್ಡ್ ಸಿಡಿಸಿದ ಸಿಕ್ಸ್ ಇಡೀ ಸ್ಟೇಡಿಯಂ ಅನ್ನು ಒಂದು ಕ್ಷಣ ದಂಗಾಗಿಸಿದ್ದು ಸುಳ್ಳಲಿಲ್ಲ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಎಂಐ ಎಮಿರೇಟ್ಸ್ ತಂಡ ಹಿಂದೆಂದೂ ಕಾಣದ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಆಂಡ್ರೆ ಫ್ಲೆಚರ್ ಹಾಗೂ ಮೊಹಮ್ಮದ್ ವಾಸೀಂ ಹೊಡಿಬಡಿ ಆಟವಾಡಿ ದೊಡ್ಡ ಮೊತ್ತ ಕಲೆಹಾಕಲು ಪ್ರಮುಖ ಕಾರಣರಾದರು. ಮೊದಲ ವಿಕೆಟ್ಗೆನೇ ಈ ಜೋಡಿ ಕೇವಲ 12. 3 ಓವರ್ನಲ್ಲಿ 141 ರನ್ ಪೇರಿಸಿತು. 39 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ ಬಾರಿಸಿ 50 ರನ್ಗೆ ಫ್ಲೆಚರ್ ಔಟಾದರೆ, ವಸೀಂ 44 ಎಸೆತಗಳಲ್ಲಿ 11 ಫೋರ್, 4 ಸಿಕ್ಸರ್ನೊಂದಿಗೆ 86 ರನ್ ಚಚ್ಚಿದರು. ಇವರಿಬ್ಬರ ನಿರ್ಗಮನದ ಬಳಿಕ ಶುರುವಾಗಿದ್ದು ನಾಯಕ ಕೀರೊನ್ ಪೊಲಾರ್ಡ್ ಆಟ.
ಮನಬಂದಂತೆ ಬ್ಯಾಟ್ ಬೀಸಿದ ಪೊಲಾರ್ಡ್ ಫೋರ್-ಸಿಕ್ಸರ್ಗಳ ಮಳೆ ಸುರಿಸಿದರು. ಕೇವಲ 19 ಎಸೆತಗಳಲ್ಲಿ ತಲಾ 4 ಫೋರ್, ಸಿಕ್ಸರ್ ಸಿಡಿಸಿ ಅಜೇಯ 50 ರನ್ ಬಾರಿಸಿದರು. ಇವರಿಗೆ ಡ್ಯಾನ್ ಮೌಸ್ಲೆ (ಅಜೇಯ 31, 17 ಎಸೆತ) ಉತ್ತಮ ಸಾಥ್ ನೀಡಿದರು. ಇವರ ಈ ಸ್ಪೋಟಕ ಆಟದ ನೆರವಿನಿಂದ ಎಂಐ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 241 ರನ್ ಕಲೆಹಾಕಿತು. ಪೊಲಾರ್ಡ್ ಬ್ಯಾಟಿಂಗ್ನಲ್ಲಿ ಪ್ರಮುಖ ಹೈಲೇಟ್ ಆಗಿದ್ದು ಅವರು ಸಿಡಿಸಿದ ಸಿಕ್ಸರ್. ಪೊಲಾರ್ಡ್ ಬಾರಿಸಿದ ಸಿಕ್ಸ್ಗೆ ಚೆಂಡು ಸ್ಟೇಡಿಯಂನಿಂದಲೇ ಹೊರ ನಡೆದು ರಸ್ತೆಗೆ ತಲುಪಿತು. ಬಳಿಕ ರೋಡ್ನಲ್ಲಿದ್ದ ವ್ಯಕ್ತಿ ಆ ಚೆಂಡನ್ನು ಮೈದಾನಕ್ಕೆ ಎಸೆತದರು. ಮೌಸ್ಲೆ ಕೂಡ ಸಿಕ್ಸ್ ಸಿಡಿಸಿದಾಗ ಚೆಂಡು ರಸ್ತೆಗೆ ತಲುಪಿದ ಘಟನೆ ನಡೆಯಿತು.
IPL 2023: 10 ತಂಡಗಳ ವಿದೇಶಿ ಆಟಗಾರರು: ಹೊಸ ಪ್ಲೇಯರ್ ಆಯ್ಕೆಗೆ ಯಾವ ಟೀಮ್ಗೆ ಚಾನ್ಸ್?
When it’s raining 6️⃣s, There are 2 types of cricket lovers.. 1. Pick and run ?♂️ 2. Pick and return Which category are you?
Book your tickets now : https://t.co/sv2yt8acyL#DPWorldILT20 #ALeagueApart #DVvMIE pic.twitter.com/P0Es01cMz8
— International League T20 (@ILT20Official) January 29, 2023
242 ರನ್ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಡಿಸರ್ಟ್ ವೈಪರ್ಸ್ ತಂಡ 100 ರನ್ ಕೂಡ ಕಲೆಹಾಕಲು ಸಾಧ್ಯವಾಗಲಿಲ್ಲ. ತಂಡದ ಪರ ಯಾವೊಬ್ಬ ಬ್ಯಾಟರ್ನ ಸ್ಕೋರ್ 15ರ ಗಡಿ ದಾಟಲಿಲ್ಲ. ಟಾಮ್ ಕುರ್ರನ್ ಹಾಗೂ ಮಾರ್ಕ್ ವಾಟ್ 12 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿತ್ತು. ಕೇವಲ 12.1 ಓವರ್ಗಳಲ್ಲಿ 84 ರನ್ಗೆ ಡಿಸರ್ಟ್ ವೈಪರ್ಸ್ ತಂಡ ಆಲೌಟ್ ಆಯಿತು. ಎಂಐ ಪರ ಫಜಲ್ಲಖ್ ಫಾರುಖಿ 3 ವಿಕೆಟ್ ಕಿತ್ತರೆ, ಜಹೂರ್ ಖಾನ್ ಹಾಗೂ ಇಮ್ರಾನ್ ತಾಹಿರ್ ತಲಾ 2 ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 am, Tue, 31 January 23