IND vs NZ 3rd T20I: ಆರಂಭಿಕರಿಬ್ಬರ ವೈಫಲ್ಯ: ಯುವ ಬ್ಯಾಟರ್ಗೆ ಅವಕಾಶ ಸಾಧ್ಯತೆ
IND vs NZ 3rd T20I: ಏಕದಿನ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಈ ಇಬ್ಬರು ಆಟಗಾರರು ಟಿ20 ಕ್ರಿಕೆಟ್ನಲ್ಲಿ ರನ್ಗಳಿಸಲು ಪರದಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಕಳೆದ 5 ಇನಿಂಗ್ಸ್ಗಳ ಅಂಕಿ ಅಂಶಗಳು.
India vs New Zealand 3rd T20: ಭಾರತ-ನ್ಯೂಜಿಲೆಂಡ್ ನಡುವಣ 3ನೇ ಟಿ20 ಪಂದ್ಯವು ಬುಧವಾರ ನಡೆಯಲಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆದ್ದರೆ, ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಜಯ ಸಾಧಿಸಿತ್ತು. ಹೀಗಾಗಿಯೇ ಮೂರನೇ ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ. ಅತ್ತ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಕಳೆದ ಎರಡು ಪಂದ್ಯಗಳಲ್ಲೂ ಭಾರತ ತಂಡದ ಆರಂಭಿಕರಾದ ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ವೈಫಲ್ಯ ಹೊಂದಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಈ ಇಬ್ಬರು ಆಟಗಾರರು ಟಿ20 ಕ್ರಿಕೆಟ್ನಲ್ಲಿ ರನ್ಗಳಿಸಲು ಪರದಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಕಳೆದ 5 ಇನಿಂಗ್ಸ್ಗಳ ಅಂಕಿ ಅಂಶಗಳು.
ಇಶಾನ್ ಕಿಶನ್ ಕಳೆದ 5 ಟಿ20 ಪಂದ್ಯಗಳಲ್ಲಿ ಕ್ರಮವಾಗಿ 37, 2, 1, 4 ಮತ್ತು 19 ರನ್‌ಗಳಿಸಿ ಔಟಾಗಿದ್ದಾರೆ. ಅಂದರೆ ಕೊನೆಯ ಐದು ಇನಿಂಗ್ಸ್ನಲ್ಲಿ ಒಂದೇ ಒಂದು ಅರ್ಧಶತಕ ಕೂಡ ಮೂಡಿ ಬಂದಿಲ್ಲ. ಅದರಲ್ಲೂ ಕೇವಲ ಒಂದು ಬಾರಿಯಷ್ಟೇ 20 ಕ್ಕೂ ಅಧಿಕ ರನ್ಗಳಿಸಿದ್ದಾರೆ.
ಮತ್ತೊಂದೆಡೆ ಶುಭ್ಮನ್ ಗಿಲ್ ಅವರ ಪ್ರದರ್ಶನ ಇಶಾನ್ ಕಿಶನ್ಗಿಂತ ಕೂಡ ಭಿನ್ನವಾಗಿಲ್ಲ. ಕಳೆದ 5 ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 7, 5, 46, 7, 11 ರನ್‌ಗಳಿಸಿ ಔಟಾಗಿದ್ದಾರೆ. ಅಂದರೆ ಗಿಲ್ ಕೂಡ ಕೊನೆಯ 5 ಇನಿಂಗ್ಸ್ನಲ್ಲಿ ಒಂದು ಬಾರಿ ಮಾತ್ರ 15 ಕ್ಕಿಂತ ಹೆಚ್ಚು ರನ್ಗಳಿಸಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆರಂಭಿಕ ಆಟಗಾರ ಬದಲಾಗುವುದು ಬಹುತೇಕ ಖಚಿತ ಎನ್ನಬಹುದು.
Also Read: ICC Rankings 2023: ಐಸಿಸಿ ರ್ಯಾಂಕಿಂಗ್ನಲ್ಲಿ ಟೀಮ್ ಇಂಡಿಯಾದ ಮೂವರು ನಂಬರ್ 1
ಇಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ಕಾರಣ ಪ್ಲೇಯಿಂಗ್ ಇಲೆವೆನ್ನಲ್ಲಿ ಉಳಿದುಕೊಳ್ಳುವ ಸಾಧ್ಯತೆಯಿದೆ. ಬದಲಾಗಿ ಶುಭ್ಮನ್ ಗಿಲ್ ಸ್ಥಾನದಲ್ಲಿ ಯುವ ಬ್ಯಾಟರ್ ಪೃಥ್ವಿ ಶಾ ಕಣಕ್ಕಿಳಿಯಬಹುದು. ಏಕೆಂದರೆ ಕಳೆದ ಎರಡು ಪಂದ್ಯಗಳಲ್ಲಿ ಬೆಂಚ್ ಕಾದಿರುವ ಯುವ ದಾಂಡಿಗ ಪೃಥ್ವಿ ಸ್ಪೋಟಕ ಆರಂಭಿಕ ಆಟಗಾರ.
ಈಗಾಗಲೇ ಐಪಿಎಲ್ನಲ್ಲಿ 63 ಬಾರಿ ಇನಿಂಗ್ಸ್ ಆರಂಭಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ 147ರ ಸ್ಟ್ರೈಕ್ ರೇಟ್ನಲ್ಲಿ ಒಟ್ಟು 1588 ರನ್ ಕಲೆಹಾಕಿದ್ದಾರೆ. ಹೀಗಾಗಿ ಶುಭ್ಮನ್ ಗಿಲ್ ಬದಲಿಗೆ 23 ವರ್ಷದ ಪೃಥ್ವಿ ಶಾಗೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
ಟೀಮ್ ಇಂಡಿಯಾ ಟಿ20 ತಂಡ:
ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.