- Kannada News Photo gallery Cricket photos WIPL 2023: BCCI announces Women's Premier League 5 Teams Kannada News zp
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ
WIPL 2023 Teams: ಮಹಿಳಾ ಐಪಿಎಲ್ ತಂಡಗಳ ಹರಾಜು ಹಾಗೂ ಮಾಧ್ಯಮ ಹಕ್ಕುಗಳ ಮಾರಾಟದಿಂದಲೇ ಇದೀಗ ಬಿಸಿಸಿಐ 5,620.99 ಕೋಟಿ ರೂ. ಆದಾಯಗಳಿಸಿದೆ.
Updated on: Jan 25, 2023 | 3:54 PM

ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಗಾಗಿ ಐದು ತಂಡಗಳ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದೆ. 5 ತಂಡಗಳ ಹರಾಜಿನ ಮೂಲಕ ಬಿಸಿಸಿಐ ಒಟ್ಟು 4669.99 ಕೋಟಿ ರೂ. ಆದಾಯಗಳಿಸಿದೆ. ಈ ಐದು ತಂಡಗಳಲ್ಲಿ 3 ತಂಡಗಳನ್ನು ಪುರಷರ ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿರುವುದು ವಿಶೇಷ.

ಇನ್ನು ಅತೀ ಹೆಚ್ಚು ಮೊತ್ತ ನೀಡಿ ತಂಡವನ್ನು ಖರೀದಿಸಿರುವುದು ಅದಾನಿ ಗ್ರೂಪ್. ಅದಾನಿ ಸ್ಪೋರ್ಟ್ಸ್ಲೈನ್ ಪ್ರೈವೇಟ್ ಲಿಮಿಟೆಡ್ 1289 ಕೋಟಿ ರೂ. ನೀಡಿ ಅಹದಾಬಾದ್ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿದೆ. ಹಾಗಿದ್ರೆ ಮಹಿಳಾ ಐಪಿಎಲ್ನ ಫ್ರಾಂಚೈಸಿಗಳು ಯಾರೆಲ್ಲಾ ಎಂದು ನೋಡೋಣ...

1- ಅದಾನಿ ಸ್ಪೋರ್ಟ್ಸ್ಲೈನ್- ಅಹಮದಾಬಾದ್ (1289 ಕೋಟಿ ರೂ.)

2- ಇಂಡಿಯಾವಿನ್ ಸ್ಪೋರ್ಟ್ಸ್- ಮುಂಬೈ (912. 99 ಕೋಟಿ ರೂ.)

3- ರಾಯಲ್ ಚಾಲೆಂಜರ್ಸ್ ಬೆಂಗಳೂರು- ಬೆಂಗಳೂರು ( 901 ಕೋಟಿ ರೂ.)

4- JSW GMR ಗ್ರೂಪ್- ಡೆಲ್ಲಿ (810 ಕೋಟಿ ರೂ.)

5- ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್- ಲಕ್ನೋ (757 ಕೋಟಿ ರೂ.)

ಇದಕ್ಕೂ ಮುನ್ನ ಮಹಿಳಾ ಐಪಿಎಲ್ನ ಪ್ರಸಾರ ಹಕ್ಕನ್ನು ಬಿಸಿಸಿಐ ಬರೋಬ್ಬರಿ 951 ಕೋಟಿಗೆ ಮಾರಾಟ ಮಾಡಿತ್ತು. ಅಂದರೆ ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ. ಆದಾಯಗಳಿಸಲಿದೆ. ಅದರಂತೆ 2023 ರಿಂದ 2027 ರವರೆಗಿನ ಸೀಸನ್‌ಗಳು ಸ್ಪೋಟ್ಸ್-18 ಹಾಗೂ ಜಿಯೋ ಆ್ಯಪ್ಗಳಲ್ಲಿ ಪ್ರಸಾರವಾಗಲಿದೆ.

ಮಹಿಳಾ ಐಪಿಎಲ್ ತಂಡಗಳ ಹರಾಜು ಹಾಗೂ ಮಾಧ್ಯಮ ಹಕ್ಕುಗಳ ಮಾರಾಟದಿಂದಲೇ ಇದೀಗ ಬಿಸಿಸಿಐ 5,620.99 ಕೋಟಿ ರೂ. ಆದಾಯಗಳಿಸಿದೆ.
























