Kieron Pollard: ಕೀರೊನ್ ಪೊಲಾರ್ಡ್ ಸ್ಫೋಟಕ ಸಿಕ್ಸ್​ಗೆ ರೋಡ್​ಗೆ ಬಿದ್ದ ಚೆಂಡು: ದಂಗಾದ ಇಡೀ ಸ್ಟೇಡಿಯಂ

|

Updated on: Jan 31, 2023 | 11:06 AM

Desert Vipers vs MI Emirates, ILT20: ಮೊಹಮ್ಮದ್ ವಾಸೀಂ, ಕೀರೊನ್ ಪೊಲಾರ್ಡ್ (Kieron Pollard) ಹಾಗೂ ಆಂಡ್ರೆ ಫ್ಲೆಟ್ಚರ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಎಂಐ ಎಮಿರೇಟ್ಸ್ ತಂಡ 20 ಓವರ್​ಗಳಲ್ಲಿ ಗಳಿಸಿದ್ದು 241 ರನ್.

Kieron Pollard: ಕೀರೊನ್ ಪೊಲಾರ್ಡ್ ಸ್ಫೋಟಕ ಸಿಕ್ಸ್​ಗೆ ರೋಡ್​ಗೆ ಬಿದ್ದ ಚೆಂಡು: ದಂಗಾದ ಇಡೀ ಸ್ಟೇಡಿಯಂ
kieron pollard SIX
Follow us on

ದುಬೈನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಟಿ20 ಲೀಗ್ (ILT20) ಸಾಕಷ್ಟು ರೋಚಕತೆ ಪಡೆಯುತ್ತಿದೆ. ಪ್ರತಿಯೊಂದು ಪಂದ್ಯ ಹೈವೋಲ್ಟೇಜ್​ನಿಂದ ಕೂಡಿದೆ. ಅದರಂತೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡಿಸರ್ಟ್ ವೈಪರ್ಸ್ ವಿರುದ್ಧದ ಪಂದ್ಯದಲ್ಲಿ ಎಂಐ ಎಮಿರೇಟ್ಸ್ (DV vs MIE) ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ಬರೋಬ್ಬರಿ 157 ರನ್​ಗಳ ಅಮೋಘ ಗೆಲುವು ಸಾಧಿಸಿತು. ಮೊಹಮ್ಮದ್ ವಾಸೀಂ, ಕೀರೊನ್ ಪೊಲಾರ್ಡ್ (Kieron Pollard) ಹಾಗೂ ಆಂಡ್ರೆ ಫ್ಲೆಟ್ಚರ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಎಂಐ ಎಮಿರೇಟ್ಸ್ ತಂಡ 20 ಓವರ್​ಗಳಲ್ಲಿ ಗಳಿಸಿದ್ದು 241 ರನ್. ಈ ಟಾರ್ಗೆಟ್​ನ ಹತ್ತಿರ ಕೂಡ ಸುಳಿಯದ ಡಿಸರ್ಟ್ ವೈಪರ್ಸ್ 84 ರನ್​ಗೆ ಸರ್ವಪತನ ಕಂಡಿತು. ಅದರಲ್ಲೂ ಈ ಪಂದ್ಯದಲ್ಲಿ ಪೊಲಾರ್ಡ್ ಸಿಡಿಸಿದ ಸಿಕ್ಸ್ ಇಡೀ ಸ್ಟೇಡಿಯಂ ಅನ್ನು ಒಂದು ಕ್ಷಣ ದಂಗಾಗಿಸಿದ್ದು ಸುಳ್ಳಲಿಲ್ಲ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಎಂಐ ಎಮಿರೇಟ್ಸ್ ತಂಡ ಹಿಂದೆಂದೂ ಕಾಣದ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಆಂಡ್ರೆ ಫ್ಲೆಚರ್ ಹಾಗೂ ಮೊಹಮ್ಮದ್ ವಾಸೀಂ ಹೊಡಿಬಡಿ ಆಟವಾಡಿ ದೊಡ್ಡ ಮೊತ್ತ ಕಲೆಹಾಕಲು ಪ್ರಮುಖ ಕಾರಣರಾದರು. ಮೊದಲ ವಿಕೆಟ್​ಗೆನೇ ಈ ಜೋಡಿ ಕೇವಲ 12. 3 ಓವರ್​ನಲ್ಲಿ 141 ರನ್ ಪೇರಿಸಿತು. 39 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ ಬಾರಿಸಿ 50 ರನ್​ಗೆ ಫ್ಲೆಚರ್ ಔಟಾದರೆ, ವಸೀಂ 44 ಎಸೆತಗಳಲ್ಲಿ 11 ಫೋರ್, 4 ಸಿಕ್ಸರ್​ನೊಂದಿಗೆ 86 ರನ್ ಚಚ್ಚಿದರು. ಇವರಿಬ್ಬರ ನಿರ್ಗಮನದ ಬಳಿಕ ಶುರುವಾಗಿದ್ದು ನಾಯಕ ಕೀರೊನ್ ಪೊಲಾರ್ಡ್ ಆಟ.

ಇದನ್ನೂ ಓದಿ
WIW vs INDW: ವಿಂಡೀಸ್ ವಿರುದ್ಧ ಭಾರತಕ್ಕೆ 8 ವಿಕೆಟ್​ಗಳ ಜಯ: ಫೆ. 2ಕ್ಕೆ ಆಫ್ರಿಕಾ ವಿರುದ್ಧ ಫೈನಲ್ ಫೈಟ್
IND vs NZ 3rd T20I: ಭಾರತ-ನ್ಯೂಜಿಲೆಂಡ್ ಸರಣಿ ನಿರ್ಣಾಯಕ ತೃತೀಯ ಟಿ20 ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ?
IND vs NZ 3rd T20I: ಆರಂಭಿಕರಿಬ್ಬರ ವೈಫಲ್ಯ: ಯುವ ಬ್ಯಾಟರ್​​ಗೆ ಅವಕಾಶ ಸಾಧ್ಯತೆ
Yuzvendra Chahal: ಟೀಮ್ ಇಂಡಿಯಾ ಪರ ಹೊಸ ದಾಖಲೆ ಬರೆದ ಚಹಾಲ್

ಮನಬಂದಂತೆ ಬ್ಯಾಟ್ ಬೀಸಿದ ಪೊಲಾರ್ಡ್ ಫೋರ್-ಸಿಕ್ಸರ್​ಗಳ ಮಳೆ ಸುರಿಸಿದರು. ಕೇವಲ 19 ಎಸೆತಗಳಲ್ಲಿ ತಲಾ 4 ಫೋರ್, ಸಿಕ್ಸರ್ ಸಿಡಿಸಿ ಅಜೇಯ 50 ರನ್ ಬಾರಿಸಿದರು. ಇವರಿಗೆ ಡ್ಯಾನ್ ಮೌಸ್ಲೆ (ಅಜೇಯ 31, 17 ಎಸೆತ) ಉತ್ತಮ ಸಾಥ್ ನೀಡಿದರು. ಇವರ ಈ ಸ್ಪೋಟಕ ಆಟದ ನೆರವಿನಿಂದ ಎಂಐ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 241 ರನ್ ಕಲೆಹಾಕಿತು. ಪೊಲಾರ್ಡ್ ಬ್ಯಾಟಿಂಗ್​ನಲ್ಲಿ ಪ್ರಮುಖ ಹೈಲೇಟ್ ಆಗಿದ್ದು ಅವರು ಸಿಡಿಸಿದ ಸಿಕ್ಸರ್. ಪೊಲಾರ್ಡ್ ಬಾರಿಸಿದ ಸಿಕ್ಸ್​ಗೆ ಚೆಂಡು ಸ್ಟೇಡಿಯಂನಿಂದಲೇ ಹೊರ ನಡೆದು ರಸ್ತೆಗೆ ತಲುಪಿತು. ಬಳಿಕ ರೋಡ್​ನಲ್ಲಿದ್ದ ವ್ಯಕ್ತಿ ಆ ಚೆಂಡನ್ನು ಮೈದಾನಕ್ಕೆ ಎಸೆತದರು. ಮೌಸ್ಲೆ ಕೂಡ ಸಿಕ್ಸ್​ ಸಿಡಿಸಿದಾಗ ಚೆಂಡು ರಸ್ತೆಗೆ ತಲುಪಿದ ಘಟನೆ ನಡೆಯಿತು.

IPL 2023: 10 ತಂಡಗಳ ವಿದೇಶಿ ಆಟಗಾರರು: ಹೊಸ ಪ್ಲೇಯರ್​ ಆಯ್ಕೆಗೆ ಯಾವ ಟೀಮ್​ಗೆ ಚಾನ್ಸ್​?

 

242 ರನ್​ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಡಿಸರ್ಟ್ ವೈಪರ್ಸ್ ತಂಡ 100 ರನ್ ಕೂಡ ಕಲೆಹಾಕಲು ಸಾಧ್ಯವಾಗಲಿಲ್ಲ. ತಂಡದ ಪರ ಯಾವೊಬ್ಬ ಬ್ಯಾಟರ್​ನ ಸ್ಕೋರ್ 15ರ ಗಡಿ ದಾಟಲಿಲ್ಲ. ಟಾಮ್ ಕುರ್ರನ್ ಹಾಗೂ ಮಾರ್ಕ್ ವಾಟ್ 12 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿತ್ತು. ಕೇವಲ 12.1 ಓವರ್​ಗಳಲ್ಲಿ 84 ರನ್​ಗೆ ಡಿಸರ್ಟ್ ವೈಪರ್ಸ್ ತಂಡ ಆಲೌಟ್ ಆಯಿತು. ಎಂಐ ಪರ ಫಜಲ್ಲಖ್ ಫಾರುಖಿ 3 ವಿಕೆಟ್ ಕಿತ್ತರೆ, ಜಹೂರ್ ಖಾನ್ ಹಾಗೂ ಇಮ್ರಾನ್ ತಾಹಿರ್ ತಲಾ 2 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:06 am, Tue, 31 January 23