ದೇವದತ್ ಪಡಿಕ್ಕಲ್‌ಗೆ ಜಾಕ್ಪಾಟ್; ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟ ಆದ ಕನ್ನಡಿಗ
Devdutt Padikkal: ದೇವದತ್ ಪಡಿಕ್ಕಲ್ ಅವರು ಮಹಾರಾಜ ಟ್ರೋಫಿ ಟಿ20 ಹರಾಜಿನಲ್ಲಿ ದುಾರಿ ಬೆಲೆಗೆ ಮಾರಾಟವಾಗಿ ಇತಿಹಾಸ ನಿರ್ಮಿಸಿದ್ದಾರೆ. ಇದು ಮಹಾರಾಜ ಟ್ರೋಫಿ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆ. ಆರ್‌ಸಿಬಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಈ ಯಶಸ್ಸು ಪಡಿಕ್ಕಲ್‌ಗೆ ಸಿಕ್ಕಿದೆ.

ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿ ಒಳ್ಳೆಯ ಪ್ರದರ್ಶನ ನೀಡಿದರು. ಗಾಯ ಆದ ಕಾರಣ ಅವರು ಸೀಸನ್ನಿಂದ ದೂರವೇ ಇರಬೇಕಾಗಿ ಬಂತು. ಈಗ ಅವರು ‘ಮಹಾರಾಜ ಟ್ರೋಫಿ ಟಿ20’ ಆಡಲು ರೆಡಿ ಆಗಿದ್ದಾರೆ. ಯುವ ಆಟಗಾರರ ಮೇಲೆ ತಂಡಗಳು ದೊಡ್ಡ ಮೊತ್ತವನ್ನು ಸುರಿಯತ್ತಿವೆ. ದೇವದತ್ಗೆ (Devadat Padikkal) ಈ ಬಾರಿ ಜಾಕ್ಪಾಟ್ ಹೊಡೆದಿದೆ.
ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ಪರ ದೇವದತ್ ಆಡಿದ್ದರು. ತಂಡದಿಂದ ಅವರನ್ನು ಬಿಟ್ಟ ಬಳಿಕ ಆರ್ಸಿಬಿ ತಂಡ ಪಿಕ್ ಮಾಡಿತು. ಅಲ್ಲಿ ಅವರು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇದು ಮಹರಾಜ ಟ್ರೋಫಿ ಆಕ್ಷನ್ಗೆ ಸಹಕಾರಿ ಆಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯಲ್ಲಿ ಮಹರಾಜ ಟ್ರೋಫಿಗೆ ಜುಲೈ 15ರಂದು ಹರಾಜು ಪ್ರಕ್ರಿಯೆ ನಡೆದಿದೆ. ದೇವದತ್ ಅವರು ಅತಿ ಹೆಚ್ಚು ಬೆಲೆಗೆ ಮಾರಾಟ ಆದ ಆಟಗಾರ ಎನಿಸಿಕೊಂಡಿದ್ದಾರೆ.
ಆರ್ಸಿಬಿ ದೇವದತ್ ಅವರನ್ನು 3.20 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಈಗ ‘ಹುಬ್ಬಳ್ಳಿ ಟೈಗರ್ಸ್’ 13.20 ಲಕ್ಷ ರೂಪಾಯಿಗೆ ಪಡಿಕ್ಕಲ್ನ ಖರೀದಿಸಿದೆ. ಇಡೀ ಮಹರಾಜ ಟ್ರೋಫಿ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟ ಆದ ಆಟಗಾರ ಎನಿಸಿಕೊಂಡಿದ್ದಾರೆ. ಕನ್ನಡಿಗ ಮನೀಶ್ ಪಾಂಡೆಯನ್ನು ‘ಮೈಸೂರು ವಾರಿಯರ್ಸ್’ ತಂಡ 12.20 ಲಕ್ಷ ರೂಪಾಯಿಗೆ ಖರೀದಿಸಿದೆ. ಸನ್ ರೈಸರ್ಸ್ ಹೈದರಾಬಾದ್ನ ಅಭಿನವ್ ಮನೋಹರ್ನ ಹುಬ್ಬಳ್ಳಿ ಟೈಗರ್ಸ್ 12.20 ಲಕ್ಷ ರೂಪಾಯಿ ಕೊಟ್ಟು ಪಡೆದುಕೊಂಡಿದೆ. ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ನ ‘ಮಂಗಳೂರು ಡ್ರ್ಯಾಗನ್ಸ್’ 8.60 ಲಕ್ಷ ರೂಪಾಯಿಗೆ ಪಡೆದುಕೊಂಡಿದೆ.
ಇದನ್ನೂ ಓದಿ: IPL 2025: ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಮಹಾರಾಜ ಟ್ರೋಫಿಯಲ್ಲಿ ಪ್ರತಿ ಫ್ರಾಂಚೈಸಿಯವರು ಎರಡು ಸ್ಥಳೀಯ ಆಟಗಾರರನ್ನು ಇಟ್ಟುಕೊಳ್ಳಲೇಬೇಕು ಎಂಬ ನಿಯಮ ಇದೆ. ಅಂದರೆ ಹುಬ್ಬಳಿ ತಂಡದಲ್ಲಿ ಹುಬ್ಬಳಿ ಮೂಲದ ಇಬ್ಬರು ಆಟಗಾರರು ಇರಲೇಬೇಕು. ಸ್ಥಳೀಯ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಕಾರಣದಿಂದ ಈ ನಿಯಮ ತರಲಾಗಿದೆ. ಮುಚ್ಚಿದ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಅಂದರೆ ಯಾವುದೇ ಅಭಿಮಾನಿಗಳಿಗೆ ಮೈದಾನದಲ್ಲಿ ವೀಕ್ಷಣೆಗೆ ಅವಕಾಶ ಇರೋದಿಲ್ಲ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:56 am, Wed, 16 July 25




