15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಆಡಿದ ಐದನೇ ಪಂದ್ಯದಲ್ಲೂ ಸೋಲು ಕಂಡಿದೆ. ಬುಧವಾರ ಪಂಜಾಬ್ ಕಿಂಗ್ಸ್ (MI vs PBKS) ವಿರುದ್ಧ ನಡೆದ ಹೈಸ್ಕೋರ್ ಪಂದ್ಯದಲ್ಲೂ ಚೇಸ್ ಮಾಡಲಾಗದೆ ಮುಂಬೈ ತನ್ನ ಮುಂದಿನ ಹಾದಿಯನ್ನು ಕಠಿಣಗೊಳಿಸಿದೆ. ಆದರೆ, ಎಮ್ಐ ಪರ ಜೂನಿಯರ್ ಎಬಿಡಿ, ಬೇಬಿ ಎಬಿಡಿ (Baby ABD) ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ (Dewald Brevis) ಸ್ಫೋಟಕ ಆಟದ ಮೂಲಕ ಗಮನ ಸೆಳೆದರು. 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ಇವರು ಕೇವಲ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಅಮೋಘ ಸಿಕ್ಸ್ ಸಿಡಿಸಿ 49 ರನ್ ಚಚ್ಚಿದರು. ಅದರಲ್ಲೂ ರಾಹುಲ್ ಚಹರ್ ಅವರ ಒಂದು ಓವರ್ನಲ್ಲಿ ಬರೋಬ್ಬರಿ 29 ರನ್ ಸಿಡಿಸಿ ಆರ್ಭಟಿಸಿದರು.
ಹೌದು, 9ನೇ ಓವರ್ ಅನ್ನು ಬೌಲಿಂಗ್ ಮಾಡಲು ರಾಹುಲ್ ಚಹರ್ ಬಂದರು. ಮೊದಲ ಎಸೆತದಲ್ಲಿ ತಿಲಕ್ ವರ್ಮಾ ಸಿಂಗಲ್ ರನ್ ಕಲೆಹಾಕಿದರು. ಎರಡನೇ ಎಸೆತದಲ್ಲಿ ಬ್ರೆವಿಸ್ ಚೆಂಡನ್ನು ಬೌಂಡರಿಗೆ ಅಟ್ಟಿದರು. ಮೂರನೇ ಎಸೆತದಲ್ಲಿ ಲಾಂಗ್ಆನ್ ಮೂಲಕ ಸಿಕ್ಸ್, ನಾಲ್ಕನೇ ಎಸೆತದಲ್ಲಿ ವೈಡ್ ಲಾಂಗ್ಆನ್ನಲ್ಲಿ ಸಿಕ್ಸ್, ಐದನೇ ಎಸೆತದಲ್ಲೂ ಡೀಪ್ ಮಿಡ್ ವಿಕೆಟ್ ಮೂಲಕ ಸಿಕ್ಸ್ ಮತ್ತು ಕೊನೆಯ ಆರನೇ ಎಸೆತದಲ್ಲಿ ಕೂಡ ಲಾಂಗ್ ಆನ್ನಲ್ಲಿ ಸಿಕ್ಸ್ ಸಿಡಿಸಿ ಒಂದೇ ಓವರ್ನಲ್ಲಿ 28 ರನ್ ಚಚ್ಚಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆದರೂ ಮುಂಬೈಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಇವರ ಸ್ಫೋಟಕ ಆಟದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಈ ಪಂದ್ಯದಲ್ಲಿ ಮೊದಲು ಪಂಜಾಬ್ ಕಿಂಗ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಮತ್ತು ಶಿಖರ್ ಧವನ್ 97 ರನ್‌ಗಳ ಅಮೂಲ್ಯ ಜತೆಯಾಟವಾಡಿದರು. ಮಯಾಂಕ್ ಅಗರ್ವಾಲ್ 52 ರನ್ ಗಳಿಸಿ ಔಟ್ ಆದರೆ, ಶಿಖರ್ ಧವನ್ 70 ರನ್ ಗಳಿಸಿ ಅಬ್ಬರಿಸಿದರು. ಇನ್ನುಳಿದಂತೆ ಜಾನಿ ಬೈರ್ ಸ್ಟೋ 12 ರನ್, ಲಿಯಾಮ್ ಲಿವಿಂಗ್ ಸ್ಟೋನ್ 2 ರನ್, ಶಾರುಖ್ ಖಾನ್ 15 ರನ್ ಮತ್ತು ಒಡಿಯನ್ ಸ್ಮಿತ್ ಅಜೇಯ 1 ರನ್ ಕಲೆ ಹಾಕಿದರೆ ಅಂತಿಮ ಹಂತದಲ್ಲಿ ಅಬ್ಬರಿಸಿದ ಜಿತೇಶ್ ಶರ್ಮಾ 15 ಎಸೆತಗಳಲ್ಲಿ ಅಜೇಯ 30 ರನ್ ಬಾರಿಸಿದರು. ಹೀಗೆ ಆರಂಭದಲ್ಲಿ ಅಬ್ಬರಿಸಿ ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆಯನ್ನು ಮೂಡಿಸಿದ್ದ ಪಂಜಾಬ್ ಮೊದಲ ವಿಕೆಟ್ ಕಳೆದುಕೊಂಡ ನಂತರ ರನ್ ಗಳಿಸುವ ವೇಗ ಕಳೆದುಕೊಂಡು 198 ರನ್ ಮಾತ್ರ ಕಲೆಹಾಕುವಲ್ಲಿ ಶಕ್ತವಾಯಿತು.
ಪಂಜಾಬ್ ನೀಡಿದ 199 ರನ್‌ಗಳ ಸವಾಲು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಡೆವಾಲ್ಡ್ ಬ್ರೆವಿಸ್ 49 ರನ್(25 ಬಾಲ್, 4 ಬೌಂಡರಿ, 5 ಸಿಕ್ಸ್) ಹಾಗೂ ಸೂರ್ಯಕುಮಾರ್ ಯಾದವ್ 43 ರನ್(30 ಬಾಲ್, 1 ಬೌಂಡರಿ, 4 ಸಿಕ್ಸ್) ಅಬ್ಬರದ ಆಟವಾಡಿದರು. ಪಂಜಾಬ್ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಈ ಜೋಡಿ, ಮುಂಬೈ ಗೆಲುವಿಗಾಗಿ ಕೆಚ್ಚೆದೆಯ ಆಟವಾಡಿದರು ತಂಡಕ್ಕೆ ಗೆಲುವಿನ ಫಲ ಸಿಗಲಿಲ್ಲ. ಇದಕ್ಕೂ ಮುನ್ನ ಇನ್ನಿಂಗ್ಸ್ ಆರಂಭಿಸಿದ ಮುಂಬೈಗೆ ನಾಯಕ ರೋಹಿತ್ ಶರ್ಮ 28 ರನ್(17 ಬಾಲ್, 3 ಬೌಂಡರಿ, 2 ಸಿಕ್ಸ್) ಬಿರುಸಿನ ಆರಂಭ ನೀಡಿದರೆ, ಇಶಾನ್ ಕಿಶನ್(3) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ 2ನೇ ಕ್ರಮಾಂಕದಲ್ಲಿ ಬಂದ ತಿಲಕ್ ವರ್ಮ 36 ರನ್(20 ಬಾಲ್, 3 ಬೌಂಡರಿ, 2 ಸಿಕ್ಸ್) ಉತ್ತಮ ಪ್ರದರ್ಶನ ನೀಡಿದರಾದರು, ಇಲ್ಲದ ರನ್‌ಗಳಿಸುವ ಯತ್ನದಲ್ಲಿ ರನೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಐಪಿಎಲ್ ಇತಿಹಾಸದಲ್ಲಿ ಐದು ಪಂದ್ಯಗಳನ್ನ ಸೋತು ಮುಂಬೈ ಇದುವರೆಗೆ ನೀಡಿದ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ.
IPL 2022: ನಿಮಗಿಂತ ಬುಮ್ರಾ ಬೆಸ್ಟ್ ಎಂದ ಅಭಿಮಾನಿಗೆ ಖಡಕ್ ಉತ್ತರ ನೀಡಿದ ಡೇಲ್ ಸ್ಟೇಯ್ನ್