IPL 2022: ನಿಮಗಿಂತ ಬುಮ್ರಾ ಬೆಸ್ಟ್​ ಎಂದ ಅಭಿಮಾನಿಗೆ ಖಡಕ್ ಉತ್ತರ ನೀಡಿದ ಡೇಲ್ ಸ್ಟೇಯ್ನ್

Dale Steyn: ಸೌತ್ ಆಫ್ರಿಕಾ ತಂಡದ ಮಾಜಿ ವೇಗಿ ಪ್ರಸ್ತುತ ಎಸ್​ಆರ್​ಹೆಚ್​ ತಂಡ ಬೌಲಿಂಗ್ ಕೋಚ್ ಡೇಲ್ ಸ್ಟೇಯ್ನ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಮೀನನ್ನು ಹಿಡಿದಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು.

IPL 2022: ನಿಮಗಿಂತ ಬುಮ್ರಾ ಬೆಸ್ಟ್​ ಎಂದ ಅಭಿಮಾನಿಗೆ ಖಡಕ್ ಉತ್ತರ ನೀಡಿದ ಡೇಲ್ ಸ್ಟೇಯ್ನ್
Dale Steyn-Jasprit Bumrah
Follow us
TV9 Web
| Updated By: ಝಾಹಿರ್ ಯೂಸುಫ್

Updated on: Apr 13, 2022 | 7:26 PM

ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಜಸ್ಪ್ರೀತ್ ಬುಮ್ರಾ ಪ್ರಸ್ತುತ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು. ಟಿ20, ಏಕದಿನ ಅಥವಾ ಟೆಸ್ಟ್ ಆಗಿರಲಿ, ಬುಮ್ರಾ ಎಲ್ಲಾ ಫಾರ್ಮ್ಯಾಟ್‌ಗಳಲ್ಲೂ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಇದೀಗ ಐಪಿಎಲ್​ನಲ್ಲೂ ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಇದಾಗ್ಯೂ ಆಸ್ಟ್ರೇಲಿಯದ ಪ್ಯಾಟ್ ಕಮ್ಮಿನ್ಸ್ ಮತ್ತು ಪಾಕಿಸ್ತಾನದ ಶಾಹೀನ್ ಶಾ ಆಫ್ರಿದಿ ಸೇರಿದಂತೆ ಅನೇಕ ಸ್ಪರ್ಧಿಗಳು ಅಗ್ರಸ್ಥಾನದಲ್ಲಿ ಇರುವುದರಿಂದ ಪ್ರಸ್ತುತ ಅತ್ಯುತ್ತಮ ವೇಗಿ ಯಾರು ಎಂಬ ಚರ್ಚೆ ನಡೆಯುತ್ತಿದೆ. ಬುಮ್ರಾ ಅಭಿಮಾನಿಗಳು ನಿಸ್ಸಂಶಯವಾಗಿ ಅವರೇ ಅತ್ಯುತ್ತಮ ಬೌಲರ್ ಎಂದು ನಂಬಿದ್ದಾರೆ. ಹೀಗೆ ಬುಮ್ರಾ ಅಭಿಮಾನಿಯೊಬ್ಬರು ಏನೋ ಹೇಳಲು ಹೋಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

ಸೌತ್ ಆಫ್ರಿಕಾ ತಂಡದ ಮಾಜಿ ವೇಗಿ ಪ್ರಸ್ತುತ ಎಸ್​ಆರ್​ಹೆಚ್​ ತಂಡ ಬೌಲಿಂಗ್ ಕೋಚ್ ಡೇಲ್ ಸ್ಟೇಯ್ನ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಮೀನು ಹಿಡಿದಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಅಲ್ಲದೆ ಈ ಬಗ್ಗೆ ವೀಕ್ಷಿಸಲು ನನ್ನ ಇನ್​ಸ್ಟಾಗ್ರಾಮ್​ನಲ್ಲಿ ನೋಡಬಹುದು ಎಂದು ಬರೆದುಕೊಂಡಿದ್ದರು. ಇದು ಫೋಟೋಗೆ ಯಾವುದೇ ಸಂಬಂಧವಿಲ್ಲದಿದ್ದರೂ, ಕ್ರಿಕೆಟ್ ಪ್ರೇಮಿಯೊಬ್ಬರು “ಬುಮ್ರಾ ನಿಮಗಿಂತ ಉತ್ತಮ.” ಎಂದು ಬರೆದು ಸ್ಟೇಯ್ನ್​ಗೆ ರಿಪ್ಲೈ ನೀಡಿದ್ದರು.

ಅನಿರೀಕ್ಷಿತ ಎಂಬಂತೆ ಡೇಲ್ ಸ್ಟೇಯ್ನ್​ ಈ ಪ್ರತಿಕ್ರಿಯೆಗೆ ರಿಪ್ಲೈ ನೀಡಿದ್ದಾರೆ. “ಬುಮ್ರಾ ನಿಮಗಿಂತ ಉತ್ತಮ.” ಎಂದ ಪ್ರತಿಕ್ರಿಯೆಗೆ ಉತ್ತರಿಸಿದ ಸ್ಟೇಯ್ನ್ ಖಂಡಿತವಾಗಿಯೂ, ಏಕೆಂದರೆ ನಾನು ಈಗ ನಿವೃತ್ತನಾಗಿದ್ದೇನೆ ಎಂದಿದ್ದಾರೆ. ಇತ್ತ ಸ್ಟೇಯ್ನ್ ಖಡಕ್ ಉತ್ತರ ನೋಡಿರುವ ಅಭಿಮಾನಿಗಳು ಇದೀಗ ಅದನ್ನು ವೈರಲ್ ಮಾಡಿದ್ದಾರೆ. ಅಲ್ಲದೆ ತಲೆಬುಡ ಇಲ್ಲದೆ ಪ್ರತಿಕ್ರಿಯಿಸುವವರಿಗೆ ಇಂತಹ ಉತ್ತರಗಳೇ ಸೂಕ್ತ ಎಂದು ಅನೇಕ ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಸಾಯನ್ ಹೆಸರಿನ ಖಾತೆಯಿಂದ ಮೂಡಿಬಂದ ಉತ್ತರಕ್ಕೆ ಡೇಲ್ ಸ್ಟೇಯ್ನ್ ನೀಡಿರುವ ಪ್ರತ್ಯುತ್ತರ ಇದೀಗ ವೈರಲ್ ಆಗಿದ್ದು, ಇಲ್ಲೂ ಕೂಡ ಯಾರು ಬೆಸ್ಟ್ ಬೌಲರ್ ಎಂಬ ಚರ್ಚೆಗಳು ಮುಂದುವರೆದಿದೆ.

ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು