- Kannada News Photo gallery Cricket photos Hardik Pandya becomes the fastest Indian to hit 100 sixes in IPL
Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್
IPL 2022 Records: ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಐಪಿಎಲ್ನಲ್ಲಿ 357 ಸಿಕ್ಸ್ ಬಾರಿಸಿದ್ದಾರೆ. ಇನ್ನು 2ನೇ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್ ಇದ್ದು, ಎಬಿಡಿ 251 ಸಿಕ್ಸ್ ಸಿಡಿಸಿದ್ದಾರೆ.
Updated on: Apr 11, 2022 | 10:33 PM

ಐಪಿಎಲ್ನ 21ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ವಿಶೇಷ ದಾಖಲೆ ಬರೆದಿದ್ದಾರೆ. ಎಸ್ಆರ್ಹೆಚ್ ವಿರುದ್ದ ನಡೆದ ಈ ಪಂದ್ಯದಲ್ಲಿ ಒಂದು ಸಿಕ್ಸ್ ಬಾರಿಸುವ ಮೂಲಕ ಪಾಂಡ್ಯ ಐಪಿಎಲ್ನಲ್ಲಿ 100 ಸಿಕ್ಸ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದರು.

ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ ವೇಗವಾಗಿ 100 ಸಿಕ್ಸ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಕೂಡ ಅಲಂಕರಿಸಿದ್ದಾರೆ. ವಿಶೇಷ ಎಂದರೆ ಐಪಿಎಲ್ನಲ್ಲಿ ಅತೀ ವೇಗವಾಗಿ 100 ಸಿಕ್ಸ್ ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ತಮ್ಮದಾಗಿಸಿಕೊಂಡಿದ್ದಾರೆ.

ಐಪಿಎಲ್ನಲ್ಲಿ ಅತೀ ವೇಗವಾಗಿ 100 ಸಿಕ್ಸ್ ಬಾರಿಸಿದ ದಾಖಲೆ ಆಂಡ್ರೆ ರಸೆಲ್ ಹೆಸರಿನಲ್ಲಿದೆ. ರಸೆಲ್ 657 ಎಸೆತಗಳನ್ನು ಎದುರಿಸಿ 100 ಸಿಕ್ಸ್ ಪೂರೈಸಿದ್ದರು. 2ನೇ ಸ್ಥಾನದಲ್ಲಿ ಕ್ರಿಸ್ ಗೇಲ್ ಇದ್ದು, ಯುನಿವರ್ಸ್ ಬಾಸ್ ಗೇಲ್ 943 ಎಸೆತಗಳಲ್ಲಿ 100 ಸಿಕ್ಸ್ ಬಾರಿಸಿದ್ದರು.

ಇದೀಗ 1046 ಎಸೆತಗಳನ್ನು ಎದುರಿಸಿರುವ ಹಾರ್ದಿಕ್ ಪಾಂಡ್ಯ 100 ಸಿಕ್ಸ್ ಪೂರೈಸಿದ್ದಾರೆ. ಈ ಮೂಲಕ ಸಿಕ್ಸರ್ ಸರದಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ ವೇಗವಾಗಿ 100 ಸಿಕ್ಸ್ ಪೂರೈಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ ರಿಷಭ್ ಪಂತ್ ಹೆಸರಿನಲ್ಲಿತ್ತು. ಪಂತ್ 1224 ಎಸೆತಗಳಲ್ಲಿ 100 ಸಿಕ್ಸ್ ಪೂರೈಸಿದ್ದರು. ಇದೀಗ ಪಾಂಡ್ಯ 1046 ಎಸೆತಗಳಲ್ಲಿ ಈ ಮೈಲುಗಲ್ಲನ್ನು ಮುಟ್ಟಿದ್ದಾರೆ.

ಸದ್ಯ ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಐಪಿಎಲ್ನಲ್ಲಿ 357 ಸಿಕ್ಸ್ ಬಾರಿಸಿದ್ದಾರೆ. ಇನ್ನು 2ನೇ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್ ಇದ್ದು, ಎಬಿಡಿ 251 ಸಿಕ್ಸ್ ಸಿಡಿಸಿದ್ದಾರೆ. ಇನ್ನು ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಹಿಟ್ಮ್ಯಾನ್ ಒಟ್ಟು 231 ಸಿಕ್ಸ್ ಸಿಡಿಸಿ ದಾಖಲೆ ಬರೆದಿದ್ದಾರೆ. ಇದೀಗ ವೇಗವಾಗಿ 100 ಸಿಕ್ಸ್ ಪೂರೈಸುವ ಮೂಲಕ ಹಾರ್ದಿಕ್ ಪಾಂಡ್ಯ ಸಿಕ್ಸ್ಗಳ ದಾಖಲೆಗಳಿಗೆ ಎಂಟ್ರಿ ಕೊಟ್ಟಿದ್ದಾರೆ.
























