Virender Sehwag: ಫಿನಿಶರ್ ಅಂತ ಆಯ್ಕೆ ಮಾಡಿ, ಡ್ರೆಸ್ಸಿಂಗ್ ರೂಮ್​ನಲ್ಲಿ ಕೂರಿಸಿದ್ರೆ, ಪಂದ್ಯ ಗೆಲ್ಲಕ್ಕಾಗುತ್ತಾ?

| Updated By: ಝಾಹಿರ್ ಯೂಸುಫ್

Updated on: Sep 10, 2022 | 10:34 AM

Dinesh Karthik: ಪಾಕಿಸ್ತಾನ್ ಹಾಗೂ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಆಲ್​ರೌಂಡರ್ ಆಗಿ ಆಯ್ಕೆಯಾಗಿದ್ದ ದೀಪಕ್ ಹೂಡಾಗೆ ಯಾವುದೇ ಓವರ್ ನೀಡಿರಲಿಲ್ಲ. ಅಂದರೆ ಹೂಡಾ ಕೇವಲ ಬ್ಯಾಟ್ಸ್​ಮನ್​ ಆಗಿ ತಂಡಕ್ಕೆ ಆಯ್ಕೆಯಾಗಿದ್ದರು.

Virender Sehwag: ಫಿನಿಶರ್ ಅಂತ ಆಯ್ಕೆ ಮಾಡಿ, ಡ್ರೆಸ್ಸಿಂಗ್ ರೂಮ್​ನಲ್ಲಿ ಕೂರಿಸಿದ್ರೆ, ಪಂದ್ಯ ಗೆಲ್ಲಕ್ಕಾಗುತ್ತಾ?
Dinesh Karthik-Sehwag
Follow us on

ಏಷ್ಯಾಕಪ್​ನಲ್ಲಿನ (Asia Cup 2022) ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ (Team India) ಆಯ್ಕೆಯ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಕಣಕ್ಕಿಳಿಸಿದ ಪ್ಲೇಯಿಂಗ್ ಇಲೆವೆನ್​ ಸಮತೋಲನದಿಂದ ಕೂಡಿರಲಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ (Virender Sehwag) ಕೂಡ ಪ್ರತಿಕ್ರಿಯಿಸಿದ್ದು, ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದಕ್ಕೆ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸೆಹ್ವಾಗ್, ಒಬ್ಬ ಆಟಗಾರನನ್ನು ಫಿನಿಶರ್ ಪಾತ್ರಕ್ಕೆ ಆಯ್ಕೆ ಮಾಡಿ, ಆತನನ್ನು ಡ್ರೆಸ್ಸಿಂಗ್ ರೂಮ್​ನಲ್ಲಿ ಕೂರಿಸಿದರೆ ಪಂದ್ಯ ಗೆಲ್ಲಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನೇಶ್ ಕಾರ್ತಿಕ್ ಅವರನ್ನು ಯಾಕಾಗಿ ಕೈ ಬಿಟ್ಟಿದ್ದಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ.

ಡಿಕೆ ಬದಲು ದೀಪಕ್ ಹೂಡಾಗೆ ಚಾನ್ಸ್ ನೀಡಿದ್ದೀರಿ. ಇಲ್ಲಿ ಹೂಡಾರನ್ನು ಒಂದು ಓವರ್ ಬೌಲಿಂಗ್ ಮಾಡಲು ಆಯ್ಕೆ ಮಾಡಿದ್ದೀರಿ. ಅದನ್ನು ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿಯೇ ಮಾಡಬಹುದಲ್ಲವೇ?. ಅದರ ಬದಲಿಗೆ ದಿನೇಶ್ ಕಾರ್ತಿಕ್​​ಗೆ ಚಾನ್ಸ್ ನೀಡಿದರೆ, ಕೊನೆಯ 4 ಎಸೆತಗಳಲ್ಲಿ ಅವರಿಂದ ಎರಡಾದರೂ ಬಿಗ್ ಹಿಟ್​ಗಳನ್ನು ನಿರೀಕ್ಷಿಸಬಹುದು ಎಂದು ಸೆಹ್ವಾಗ್ ತಿಳಿಸಿದರು.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದಾಗ್ಯೂ ನನಗೆ ದೀಪಕ್ ಹೂಡಾ ಅವರ ಆಯ್ಕೆಯೇ ಅರ್ಥವಾಗುತ್ತಿಲ್ಲ. ನೀವು ಈಗಾಗಲೇ ಡಿಕೆಯನ್ನು ಫಿನಿಶರ್ ಆಗಿ ಆಯ್ಕೆ ಮಾಡಿದ್ದೀರಿ. 37 ನೇ ವಯಸ್ಸಿನಲ್ಲಿ ಅವರನ್ನು ಆಯ್ಕೆ ಮಾಡಿರುವುದು ಆತನ ಫಿನಿಶಿಂಗ್ ಸಾಮರ್ಥ್ಯದ ಕಾರಣ ಅಲ್ಲವೇ. ಆದರೆ ಈಗ ಚಾನ್ಸ್ ನೀಡುತ್ತಿಲ್ಲ ಎಂದರೆ ಏನರ್ಥ? ಎಂದು ಸೆಹ್ವಾಗ್ ಪ್ರಶ್ನಿಸಿದರು.

ನನ್ನ ಪ್ರಕಾರ ಅತ್ಯುತ್ತಮ ಫಿನಿಶರ್​ ತಂಡದಲ್ಲಿದ್ದರೂ ಆತನನ್ನು ಆಡಿಸದೇ ಇರುವುದು ದೊಡ್ಡ ತಪ್ಪು. ಯಾವುದೇ ಆಟಗಾರ ಡ್ರೆಸ್ಸಿಂಗ್ ರೂಮ್​ನಲ್ಲಿ ಕುಳಿತು ಮ್ಯಾಚ್ ಫಿನಿಶ್ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಿರಲಿ ಟೀಮ್ ಇಂಡಿಯಾ ನಾಯಕ ಹಾಗೂ ಕೋಚ್ ನಿರ್ಧಾರವನ್ನು ಸೆಹ್ವಾಗ್ ವ್ಯಂಗ್ಯವಾಡಿದ್ದಾರೆ.

ಅಚ್ಚರಿ ಎಂದರೆ ಪಾಕಿಸ್ತಾನ್ ಹಾಗೂ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಆಲ್​ರೌಂಡರ್ ಆಗಿ ಆಯ್ಕೆಯಾಗಿದ್ದ ದೀಪಕ್ ಹೂಡಾಗೆ ಯಾವುದೇ ಓವರ್ ನೀಡಿರಲಿಲ್ಲ. ಅಂದರೆ ಹೂಡಾ ಕೇವಲ ಬ್ಯಾಟ್ಸ್​ಮನ್​ ಆಗಿ ತಂಡಕ್ಕೆ ಆಯ್ಕೆಯಾಗಿದ್ದರು. ಹಾಗಿದ್ರೆ ದಿನೇಶ್ ಕಾರ್ತಿಕ್ ಅವರನ್ನೇ ಬ್ಯಾಟ್ಸ್​ಮನ್ ಆಗಿ ತಂಡದಲ್ಲಿರಿಸಿಕೊಳ್ಳಬಹುದಿತಲ್ವಾ ಎಂಬುದು ಈಗ ಕ್ರಿಕೆಟ್ ಪ್ರೇಮಿಗಳ ಪ್ರಶ್ನೆ.