ಸೆಹ್ವಾಗ್-ದ್ರಾವಿಡ್ ಪುತ್ರರ ಮುಖಾಮುಖಿಯಲ್ಲಿ ಮಿಂಚಿದ್ದು ಯಾರು?

Aryavir and Anvay: ದೇಶೀಯ ಅಂಗಳದಲ್ಲಿ 16 ವರ್ಷದೊಳಗಿನ ವಿಜಯ್ ಮರ್ಚೆಂಟ್ ಟ್ರೋಫಿಯನ್ನು ಆಯೋಜಿಸಲಾಗಿದೆ. ಈ ಟೂರ್ನಿಯಲ್ಲಿ ಕರ್ನಾಟಕ ತಂಡ ದೆಹಲಿ ತಂಡಗಳು ಮುಖಾಮುಖಿಯಾಗಿವೆ. ಇಲ್ಲಿ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿದ್ದರೆ, ಸೆಹ್ವಾಗ್ ಪುತ್ರ ಆರ್ಯವೀರ್ ದೆಹಲಿ ಪರ ಆಡುತ್ತಿದ್ದಾರೆ.

ಸೆಹ್ವಾಗ್-ದ್ರಾವಿಡ್ ಪುತ್ರರ ಮುಖಾಮುಖಿಯಲ್ಲಿ ಮಿಂಚಿದ್ದು ಯಾರು?
Sehwag-Dravid
Updated By: ಝಾಹಿರ್ ಯೂಸುಫ್

Updated on: Dec 12, 2023 | 7:11 PM

ರಾಹುಲ್ ದ್ರಾವಿಡ್ (Rahul Dravid) ಮತ್ತು ವೀರೇಂದ್ರ ಸೆಹ್ವಾಗ್ (Virender Sehwag) ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರುಗಳು. ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿರುವ ದ್ರಾವಿಡ್ ಅವರನ್ನು ಗೋಡೆ ಎಂದು ವರ್ಣಿಸಲಾಗುತ್ತಿತ್ತು. ಇದೇ ವೇಳೆ ಮತ್ತೊಂದೆಡೆ ವೀರೇಂದ್ರ ಸೆಹ್ವಾಗ್​ ಅವರನ್ನು ಸಿಡಿಲಬ್ಬರದ ಸಿಡಿಲಮರಿ ಎಂದು ಕರೆಯಲಾಗುತ್ತಿತ್ತು. ಅಂದರೆ ಇಬ್ಬರ ಬ್ಯಾಟಿಂಗ್ ಶೈಲಿಯು ತದ್ವಿರುದ್ಧ. ಸೆಹ್ವಾಗ್ ಸ್ಪೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದರೆ, ದ್ರಾವಿಡ್ ಜವಾಬ್ದಾರಿಯುತ ಆಟಕ್ಕೆ ಫೇಮಸ್​. ಇದೀಗ ಈ ಇಬ್ಬರು ದಿಗ್ಗಜರ ಮಕ್ಕಳು ಮುಖಾಮುಖಿಯಾಗಿದ್ದಾರೆ. ಅದು ಕೂಡ ರಾಜ್ಯ ತಂಡಗಳನನ್ನು ಪ್ರತಿನಿಧಿಸುವ ಮೂಲಕ ಎಂಬುದು ವಿಶೇಷ.

ದೇಶೀಯ ಅಂಗಳದಲ್ಲಿ 16 ವರ್ಷದೊಳಗಿನ ವಿಜಯ್ ಮರ್ಚೆಂಟ್ ಟ್ರೋಫಿಯನ್ನು ಆಯೋಜಿಸಲಾಗಿದೆ. ಈ ಟೂರ್ನಿಯಲ್ಲಿ ಕರ್ನಾಟಕ ತಂಡ ದೆಹಲಿ ತಂಡಗಳು ಮುಖಾಮುಖಿಯಾಗಿವೆ. ಇಲ್ಲಿ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿದ್ದರೆ, ಸೆಹ್ವಾಗ್ ಪುತ್ರ ಆರ್ಯವೀರ್ ದೆಹಲಿ ಪರ ಆಡುತ್ತಿದ್ದಾರೆ.

ಮೂರು ದಿನಗಳ ಈ ಪಂದ್ಯದ ಮೊದಲ ದಿನ ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು 56.3 ಓವರ್‌ಗಳಲ್ಲಿ ಕೇವಲ 144 ರನ್‌ಗಳಿಗೆ ಆಲೌಟ್ ಆಯಿತು. ದ್ರಾವಿಡ್ ಪುತ್ರ ಅನ್ವೇ ಈ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೇ ನಿರಾಸೆ ಮೂಡಿಸಿದರು.
ಆದರೆ ದೆಹಲಿ ಪರ ಸೆಹ್ವಾಗ್ ಪುತ್ರ ಆರ್ಯವೀರ್ ಭರ್ಜರಿ ಅರ್ಧಶತಕ ಬಾರಿಸಿದ್ದಾರೆ. ಮೊದಲ ದಿನ 50 ರನ್ ಗಳಿಸಿ ಅಜೇಯರಾಗಿ ಮರಳಿದ್ದರು. ಇದಾಗ್ಯೂ 2ನೇ ದಿನದಾಟದ ಆರಂಭದಲ್ಲೇ ಔಟಾದರು.

ಈ ಪಂದ್ಯದಲ್ಲಿ ಆರ್ಯವೀರ್ 8 ಫೋರ್​ ಮತ್ತು ಒಂದು ಸಿಕ್ಸರ್ ಒಳಗೊಂಡಂತೆ 54 ರನ್ ಬಾರಿಸಿ ಮಿಂಚಿದ್ದಾರೆ. ಅಲ್ಲದೆ ಈ ಅರ್ಧಶತಕದ ನೆರವಿನಿಂದ ದೆಹಲಿ ತಂಡವು ಕರ್ನಾಟಕ ವಿರುದ್ಧ ಮೇಲುಗೈ ಸಾಧಿಸಿದೆ. ಇನ್ನೂ ಒಂದು ದಿನದಾಟ ಬಾಕಿಯಿದ್ದು, ಈ ಇನಿಂಗ್ಸ್​ನಲ್ಲಿ ದ್ರಾವಿಡ್ ಪುತ್ರ ಅನ್ವಯ್ ಕಮಾಲ್ ಮಾಡಲಿದ್ದಾರಾ ಕಾದು ನೋಡಬೇಕಿದೆ.

ಎಲ್ಲರ ಕಣ್ಣು ಯುವ ಪ್ರತಿಭೆಗಳ ಮೇಲೆ:

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ದೇಶಿ ಕ್ರಿಕೆಟ್‌ಗೆ ಕಾಲಿಟ್ಟಾಗ ಸುದ್ದಿಯಾಗಿದ್ದರು. ಸದ್ಯ ಅರ್ಜುನ್ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುತ್ತಿದ್ದಾರೆ. ಇದೀಗ ದ್ರಾವಿಡ್ ಮತ್ತು ಸೆಹ್ವಾಗ್ ಪುತ್ರರು ಕೂಡ ತಮ್ಮ ಆಟದಿಂದ ಸುದ್ದಿಯಾಗತೊಡಗಿದ್ದಾರೆ.

ಇದನ್ನೂ ಓದಿ: IPL 2024 Auction: ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 333 ಆಟಗಾರರ ಪಟ್ಟಿ ಇಲ್ಲಿದೆ

ಇತ್ತೀಚೆಗಷ್ಟೇ ದ್ರಾವಿಡ್ ಮಗನ ಪಂದ್ಯ ವೀಕ್ಷಿಸುತ್ತಿರುವ ಫೋಟೋ ವೈರಲ್ ಆಗಿತ್ತು. ಅನ್ವಯ್ ಅಲ್ಲದೆ ದ್ರಾವಿಡ್ ಅವರ ಮತ್ತೊಬ್ಬ ಪುತ್ರ ಸಮಿತ್ ಕೂಡ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಮುಂದೊಂದು ದಿನ ತಂದೆಯಂತೆ ಮಕ್ಕಳೂ ಕೂಡ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದರೂ ಅಚ್ಚರಿಪಡಬೇಕಿಲ್ಲ.