ಕರ್ನಾಟಕ U19 ತಂಡಕ್ಕೆ ರಾಹುಲ್ ದ್ರಾವಿಡ್ ಪುತ್ರ ಆಯ್ಕೆ..!

Rahul Dravid: ರಾಹುಲ್ ದ್ರಾವಿಡ್ ಅವರ ಇಬ್ಬರು ಮಕ್ಕಳು ತಂದೆಯ ಹಾದಿಯಲ್ಲಿ ಸಾಗಿದ್ದಾರೆ. ಹಿರಿಯ ಮಗ ಸಮಿತ್ ಹಾಗೂ ಕಿರಿಯ ಮಗ ಅನ್ವಯ್ ಕ್ರಿಕೆಟನ್ನು ಆಯ್ಕೆ ಮಾಡಿಕೊಂಡಿದ್ದು, ಇದೀಗ ತಂದೆಯಂತೆ ಕ್ರೀಡಾ ಅಂಗಳದಲ್ಲಿ ಸಾಧನೆ ಮಾಡಲು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಕರ್ನಾಟಕ U19 ತಂಡಕ್ಕೆ ರಾಹುಲ್ ದ್ರಾವಿಡ್ ಪುತ್ರ ಆಯ್ಕೆ..!
Rahul Dravid-Samit Dravid
Follow us
TV9 Web
| Updated By: ಝಾಹಿರ್ ಯೂಸುಫ್

Updated on:Sep 23, 2023 | 9:27 PM

ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ಮತ್ತು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕರ್ನಾಟಕ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಮುಂಬರುವ ವಿನೂ ಮಂಕಡ್ ಟ್ರೋಫಿಗಾಗಿ ಆಯ್ಕೆ ಮಾಡಲಾಗಿರುವ ಕರ್ನಾಟಕದ 15 ಸದಸ್ಯರ ತಂಡದಲ್ಲಿ 17 ವರ್ಷದ ಸಮಿತ್ ಸ್ಥಾನ ಪಡೆದಿದ್ದಾರೆ.

ಇನ್ನು ಕರ್ನಾಟಕ ಅಂಡರ್ 19 ತಂಡವನ್ನು ಧೀರಜ್ ಗೌಡ ಮುನ್ನಡೆಸಲಿದ್ದು, ಧ್ರುವ್ ಪ್ರಭಾಕರ್ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವಿಕೆಟ್ ಕೀಪರ್​ಗಳಾಗಿ ಹರ್ಷಿಲ್ ಧರ್ಮಾನಿ ಹಾಗೂ ಯುವರಾಜ್ ಅರೋರ ಆಯ್ಕೆಯಾಗಿದ್ದಾರೆ.

ತಂದೆಯ ಹಾದಿಯಲ್ಲಿ ಮಕ್ಕಳು:

ರಾಹುಲ್ ದ್ರಾವಿಡ್ ಅವರ ಇಬ್ಬರು ಮಕ್ಕಳು ತಂದೆಯ ಹಾದಿಯಲ್ಲಿ ಸಾಗಿದ್ದಾರೆ. ಹಿರಿಯ ಮಗ ಸಮಿತ್ ಹಾಗೂ ಕಿರಿಯ ಮಗ ಅನ್ವಯ್ ಕ್ರಿಕೆಟನ್ನು ಆಯ್ಕೆ ಮಾಡಿಕೊಂಡಿದ್ದು, ಇದೀಗ ತಂದೆಯಂತೆ ಕ್ರೀಡಾ ಅಂಗಳದಲ್ಲಿ ಸಾಧನೆ ಮಾಡಲು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಈ ವರ್ಷ ಜನವರಿಯಲ್ಲಿ ನಡೆದ 14 ವರ್ಷದೊಳಗಿನವರ ಅಂತರ ವಲಯ ಟೂರ್ನಿಯಲ್ಲಿ ಅನ್ವಯ್ ದ್ರಾವಿಡ್ ಕರ್ನಾಟಕ ಅಂಡರ್ 14 ತಂಡವನ್ನು ಮುನ್ನಡೆಸಿದ್ದರು. ಇದಕ್ಕೂ ಮುನ್ನ 2019-20ರ ಅಂತರ ವಲಯ ಪಂದ್ಯಗಳಲ್ಲಿ ಅನ್ವಯ್ 2 ದ್ವಿಶತಕ ಬಾರಿಸಿ ಮಿಂಚಿದ್ದರು. ಇದೀಗ ಸಮಿತ್ ದ್ರಾವಿಡ್ ಕೂಡ ಅಂಡರ್ 19 ತಂಡದ ಮೂಲಕ ಮಿಂಚಲು ರೆಡಿಯಾಗಿದ್ದಾರೆ.

ವಿನೂ ಮಂಕಡ್ ಟ್ರೋಫಿ 2023:

ಈ ಬಾರಿಯ ವಿನೂ ಮಂಕಡ್ ಟೂರ್ನಿಯು ಅಕ್ಟೋಬರ್ 12 ರಿಂದ ಶುರುವಾಗಲಿದೆ. ಹೈದರಾಬಾದ್​ನಲ್ಲಿ ನಡೆಯಲಿರುವ 19 ವರ್ಷದೊಳಗಿನವರ ಈ ಪಂದ್ಯಾವಳಿಯ ಫೈನಲ್ ಮ್ಯಾಚ್ ಅಕ್ಟೋಬರ್ 20 ರಂದು ನಡೆಯಲಿದೆ.

ಇದನ್ನೂ ಓದಿ: ಗೆದ್ದ ಟೀಮ್ ಇಂಡಿಯಾ: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

ಕರ್ನಾಟಕ ಅಂಡರ್ 19 ತಂಡ: ಧೀರಜ್ ಜೆ. ಗೌಡ (ನಾಯಕ), ಧುರ್ವ್ ಪ್ರಭಾಕರ್ (ಉಪನಾಯಕ), ಕಾರ್ತಿಕ್ ಎಸ್​ಯು, ಶಿವಂ ಸಿಂಗ್, ಹರ್ಷಿಲ್ ಧರ್ಮಾನಿ (ವಿಕೆಟ್ ಕೀಪರ್), ಸಮಿತ್ ದ್ರಾವಿಡ್, ಯುವರಾಜ್ ಅರೋರಾ (ವಿಕೆಟ್ ಕೀಪರ್), ಹಾರ್ದಿಕ್ ರಾಜ್, ಆರವ್ ಮಹೇಶ್, ಆದಿತ್ಯ ನಾಯರ್, ಧನುಷ್ ಗೌಡ, ಶಿಖರ್ ಶೆಟ್ಟಿ, ಸಮರ್ಥ್ ನಾಗರಾಜ್, ಕಾರ್ತಿಕೇಯ ಕೆ.ಪಿ, ನಿಶ್ಚಿತ್ ಪೈ.

Published On - 9:23 pm, Sat, 23 September 23

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ