Duleep Trophy 2023: ಸೆಮಿಫೈನಲ್ ಪಂದ್ಯ ಡ್ರಾ: ಫೈನಲ್​ಗೆ​ ಪ್ರವೇಶಿಸಿದ ಪಶ್ಚಿಮ ವಲಯ

| Updated By: ಝಾಹಿರ್ ಯೂಸುಫ್

Updated on: Jul 08, 2023 | 5:47 PM

Duleep Trophy 2023: ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯ ತಂಡದ ಪರ ಚೇತೇಶ್ವರ ಪೂಜಾರ ಶತಕ ಸಿಡಿಸಿದರು. 278 ಎಸೆತಗಳನ್ನು ಎದುರಿಸಿದ ಪೂಜಾರ 1 ಸಿಕ್ಸ್ ಹಾಗೂ 14 ಫೋರ್​ನೊಂದಿಗೆ 133 ರನ್ ಬಾರಿಸಿದರು.

Duleep Trophy 2023: ಸೆಮಿಫೈನಲ್ ಪಂದ್ಯ ಡ್ರಾ: ಫೈನಲ್​ಗೆ​ ಪ್ರವೇಶಿಸಿದ ಪಶ್ಚಿಮ ವಲಯ
West Zone vs Central Zone
Follow us on

Duleep Trophy 2023: ಬೆಂಗಳೂರಿನ ಆಲೂರಿನ ಕೆಎಸ್​ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದುಲೀಪ್ ಟ್ರೋಫಿಯ (Duleep Trophy 2023) ಮೊದಲ ಸೆಮಿಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಪಶ್ಚಿಮ್ ವಲಯ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಪೃಥ್ವಿ ಶಾ (26) ಹಾಗೂ ಪ್ರಿಯಾಂಕ್ ಪಾಂಚಾಲ್ (13) ವಿಫಲರಾಗಿದ್ದರು. ಇನ್ನು ಚೇತೇಶ್ವರ ಪೂಜಾರ (28), ಸೂರ್ಯಕುಮಾರ್ ಯಾದವ್ (7) ಹಾಗೂ ಸರ್ಫರಾಝ್ ಖಾನ್ (0) ಕೂಡ ಬೇಗನೆ ಔಟಾಗಿದ್ದರು. ಇದಾಗ್ಯೂ ಕೆಳ ಕ್ರಮಾಂಕದಲ್ಲಿ 74 ರನ್ ಬಾರಿಸುವ ಮೂಲಕ ಅತಿತ್ ಶೇತ್ ತಂಡಕ್ಕೆ ಆಸರೆಯಾದರು. ಅದರಂತೆ ಪಶ್ಚಿಮ ವಲಯ ತಂಡವು ಮೊದಲ ಇನಿಂಗ್ಸ್​ನಲ್ಲಿ 220 ರನ್ ಪೇರಿಸಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಕೇಂದ್ರ ವಲಯ ತಂಡವು ಅರ್ಝಾನ್ ನಾಗ್ವಾಸ್​ವಲ್ಲ ದಾಳಿ ತತ್ತರಿಸಿತು. 14 ಓವರ್​ಗಳಲ್ಲಿ 74 ರನ್​ ನಿಡಿ ಅರ್ಝಾನ್ 5 ವಿಕೆಟ್ ಕಬಳಿಸುವ ಮೂಲಕ ಕೇಂದ್ರ ವಲಯ ತಂಡವನ್ನು 128 ರನ್​ಗಳಿಗೆ ಆಲೌಟ್ ಮಾಡಿದರು.

ಇದಾದ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯ ತಂಡದ ಪರ ಚೇತೇಶ್ವರ ಪೂಜಾರ ಶತಕ ಸಿಡಿಸಿದರು. 278 ಎಸೆತಗಳನ್ನು ಎದುರಿಸಿದ ಪೂಜಾರ 1 ಸಿಕ್ಸ್ ಹಾಗೂ 14 ಫೋರ್​ನೊಂದಿಗೆ 133 ರನ್ ಬಾರಿಸಿದರು. ಹಾಗೆಯೇ ಸೂರ್ಯಕುಮಾರ್ ಯಾದವ್ 58 ಎಸೆತಗಳಲ್ಲಿ 52 ರನ್​ಗಳಿಸಿದರು. ಪರಿಣಾಮ ದ್ವಿತೀಯ ಇನಿಂಗ್ಸ್​ನಲ್ಲಿ ಪಶ್ಚಿಮ ವಲಯ ತಂಡವು 297 ರನ್​ಗಳಿಸಿತು.

ಮೊದಲ ಇನಿಂಗ್ಸ್​ ಹಿನ್ನಡೆಯೊಂದಿಗೆ 389 ರನ್​ಗಳ ಗುರಿ ಪಡೆದ ಕೇಂದ್ರ ವಲಯ ತಂಡದ ಇನಿಂಗ್ಸ್​ಗೆ ವರುಣ ಅಡ್ಡಿಪಡಿಸಿದನು. ಪರಿಣಾಮ 2ನೇ ಇನಿಂಗ್ಸ್ ಮುಕ್ತಾಯದ ವೇಳೆಗೆ ಕೇಂದ್ರ ವಲಯ ತಂಡವು 4 ವಿಕೆಟ್ ನಷ್ಟಕ್ಕೆ 128 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪಂದ್ಯವು ನೀರಸ ಡ್ರಾನಲ್ಲಿ ಅಂತ್ಯಗೊಂಡಿತು. ಅತ್ತ ಮೊದಲ ಇನಿಂಗ್ಸ್​ನ ಮುನ್ನಡೆಯ ಆಧಾರದ ಮೇಲೆ ಪಶ್ಚಿಮ ವಲಯ ತಂಡವು ದುಲೀಪ್ ಟ್ರೋಫಿಯ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ.

ಕೇಂದ್ರ ವಲಯ ಪ್ಲೇಯಿಂಗ್ ಇಲೆವೆನ್: ಶಿವಂ ಮಾವಿ (ನಾಯಕ), ವಿವೇಕ್ ಸಿಂಗ್ , ಹಿಮಾಂಶು ಮಂತ್ರಿ , ಅಮನದೀಪ್ ಖರೆ , ಧ್ರುವ ಜುರೆಲ್ , ರಿಂಕು ಸಿಂಗ್ , ಉಪೇಂದ್ರ ಯಾದವ್ (ವಿಕೆಟ್ ಕೀಪರ್) , ಸರನ್ಶ್ ಜೈನ್ , ಸೌರಭ್ ಕುಮಾರ್ , ಅವೇಶ್ ಖಾನ್ , ಯಶ್ ಠಾಕೂರ್.

ಇದನ್ನೂ ಓದಿ: India T20 Squad: ಟೀಮ್ ಇಂಡಿಯಾದಲ್ಲಿ ಇಬ್ಬರೇ ಆಲ್​ರೌಂಡರ್​ಗಳು..!

ಪಶ್ಚಿಮ ವಲಯ ಪ್ಲೇಯಿಂಗ್ ಇಲೆವೆನ್: ಪ್ರಿಯಾಂಕ್ ಪಾಂಚಾಲ್ (ನಾಯಕ) , ಪೃಥ್ವಿ ಶಾ ,ಅರ್ಝಾನ್ ಅರ್ಝಾನ್ ನಾಗ್ವಾಸ್​ವಲ್ಲ , ಚಿಂತನ್ ಗಜ , ಹೆತ್ ಪಟೇಲ್ (ವಿಕೆಟ್ ಕೀಪರ್) , ಅತಿತ್ ಶೇಠ್, ಸರ್ಫರಾಜ್ ಖಾನ್ , ಯುವರಾಜ್ ಸಿಂಗ್ ದೋಡಿಯಾ , ಸೂರ್ಯಕುಮಾರ್ ಯಾದವ್ , ಚೇತೇಶ್ವರ ಪೂಜಾರ , ಧರ್ಮೇಂದ್ರ ಸಿನ್ಹ್ ಜಡೇಜಾ.