ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಲ್‌ರೌಂಡರ್ ಡ್ವೇನ್ ಪ್ರಿಟೋರಿಯಸ್ (Dwaine Pretorius) ತಮ್ಮ 33 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ (Retirement ) ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ಪರ 30 ಟಿ20, 27 ಏಕದಿನ ಹಾಗೂ 3 ಟೆಸ್ಟ್ ಪಂದ್ಯಗಳನ್ನು ಆಡಿರುವ ಪ್ರಿಟೋರಿಯಸ್ ಕಳೆದ ವರ್ಷ ಅಕ್ಟೋಬರ್ನಲ್ಲಿ ಭಾರತದ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇಂದೋರ್‌ನಲ್ಲಿ ನಡೆದ ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಪ್ರಿಟೋರಿಯಸ್ 8 ರನ್‌ಗಳಿಸಿ ಆಡುತ್ತಿದ್ದ ಸೂರ್ಯ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ (International Cricket) ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಈ ಆಲ್‌ರೌಂಡರ್ ತಮ್ಮ ವೃತ್ತಿಜೀವನವನ್ನು ಉಳಿದ ಟಿ20 ಮತ್ತು ಇತರ ಕಿರು ಸ್ವರೂಪಗಳ ಮೇಲೆ ಕೇಂದ್ರೀಕರಿಸಲು ಬಯಸುವುದಾಗಿ ಹೇಳಿಕೊಂಡಿದ್ದಾರೆ..
ದಕ್ಷಿಣ ಆಫ್ರಿಕಾ ಪರ 2 ವಿಶ್ವಕಪ್ ಆಡಿರುವ ಪ್ರಿಟೋರಿಯಸ್, ದಕ್ಷಿಣ ಆಫ್ರಿಕಾ ಪರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ಸಹ ಹೊಂದಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 17 ರನ್‌ಗಳಿಗೆ 5 ವಿಕೆಟ್ ಪಡೆದಿದ್ದು ಪ್ರಿಟೋರಿಯಸ್ ಅವರ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿದೆ. ಕಳೆದ ವರ್ಷ ಆಡಿದ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಮೊದಲ ಆಯ್ಕೆಯ ಆಲ್‌ರೌಂಡರ್ ಆಗಿದ್ದ ಪ್ರಿಟೋರಿಯಸ್, ಪಂದ್ಯಾವಳಿ ಪ್ರಾರಂಭವಾಗುವ ಮೊದಲೇ ಗಾಯಗೊಂಡಿದ್ದರಿಂದ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದರು.
IND v SL: ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದಿಂದ ಹೊರಬಿದ್ದ ಜಸ್ಪ್ರೀತ್ ಬುಮ್ರಾ..!
ದಕ್ಷಿಣ ಆಫ್ರಿಕಾ ಪರ 3 ಟೆಸ್ಟ್ ಪಂದ್ಯಗಳನ್ನಾಡಿರುವ ಪ್ರಿಟೋರಿಯಸ್, ಒಟ್ಟು 7 ವಿಕೆಟ್ ಪಡೆದಿದ್ದಾರೆ. ಹಾಗೆಯೇ 27 ಏಕದಿನ ಪಂದ್ಯಗಳಲ್ಲಿ 35 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ 30 ಟಿ20 ಪಂದ್ಯಗಳಲ್ಲಿ 35 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಪ್ರಿಟೋರಿಯಸ್, ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರಾದರೂ ವಿದೇಶಿ ಲೀಗ್ಗಳಲ್ಲಿ ಆಡುವುದಾಗಿ ಹೇಳಿಕೊಂಡಿದ್ದಾರೆ. ಪ್ರಿಟೋರಿಯಸ್ ಐಪಿಎಲ್ ಮಾತ್ರವಲ್ಲದೆ SA20 ಲೀಗ್ನಲ್ಲೂ ಆಡುತ್ತಾರೆ. ಈ ಟೂರ್ನಿ ಫೆಬ್ರವರಿ 11 ರವರೆಗೆ ನಡೆಯಲಿದ್ದು, ಆ ಬಳಿಕ ಅವರು ಐಪಿಎಲ್‌ನಲ್ಲಿ ಬ್ಯುಸಿಯಾಗಲಿದ್ದಾರೆ. ನಂತರ ಆಗಸ್ಟ್‌ನಲ್ಲಿ, ದಿ ಹಂಡ್ರೆಡ್ ಲೀಗ್ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:21 pm, Mon, 9 January 23