ತುಂಬಾ ನೋವಾಯ್ತು; ಕೊಹ್ಲಿಯ ಆ ಎರಡು ಸಿಕ್ಸರ್‌ಗಳ ಶಾಕ್ನಿಂದ ಇನ್ನೂ ಹೊರಬರದ ಪಾಕ್ ವೇಗಿ
ಅಂತಹ ಹೊಡೆತಗಳನ್ನು ಬಹಳ ಅಪರೂಪವಾಗಿ ಆಡಲಾಗುತ್ತದೆ. ಆದರೆ ಆ ಸಿಕ್ಸರ್ ತಿಂದ ನಂತರ ನನಗೆ ವೈಯಕ್ತಿಕವಾಗಿ ತುಂಬಾ ನೋವಾಯ್ತು ಎಂದು ಪಾಕಿಸ್ತಾನದ ವೇಗದ ಬೌಲರ್ ರೌಫ್ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ (T20 World Cup) ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು 10 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿದ್ದ ಟೀಂ ಇಂಡಿಯಾ (Team India) ಮತ್ತೊಮ್ಮೆ ಖಾಲಿ ಕೈಯಲ್ಲಿ ಐಸಿಸಿ ಈವೆಂಟ್ನಿಂದ ವಾಪಸ್ ಬರಬೇಕಾಯಿತು. ಆದರೆ ಈ ಚುಟುಕು ಸಮರ ಟೀಂ ಇಂಡಿಯಾ ಅಭಿಮಾನಿಗಳ ಮನಸ್ಸಲ್ಲಿ ಇನ್ನೂ ಅಚ್ಚಳಿಯದೆ ಉಳಿಯಲು ಕಾರಣವೆಂದರೆ ಅದೊಂದು ಪಂದ್ಯ. ವಾಸ್ತವವಾಗಿ ಭಾರತ ಮತ್ತು ಪಾಕಿಸ್ತಾನ (India and Pakistan) ನಡುವೆ ನಡೆದ ಉಭಯ ತಂಡಗಳ ಮೊದಲ ಪಂದ್ಯದಲ್ಲಿ ಪಾಕ್ ತಂಡವನ್ನು ಮಣಿಸಿದ ಟೀಂ ಇಂಡಿಯಾ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಆದರೆ ಕೊನೆಯ ಕ್ಷಣದವರೆಗೂ ಪಾಕಿಸ್ತಾನದ ಕಡೆ ವಾಲಿದ್ದ ವಿಜಯಲಕ್ಷ್ಮಿ, ಕೊಹ್ಲಿಯ ಅವಿಸ್ಮರಣೀಯ ಇನ್ನಿಂಗ್ಸ್ನಿಂದಾಗಿ ಭಾರತದ ಪಾಲಾಗಿತ್ತು. ಈ ಪಂದ್ಯದ 19ನೇ ಓವರ್‌ನಲ್ಲಿ ಪಾಕ್ ವೇಗಿ ಹ್ಯಾರಿಸ್ ರೌಫ್ (Haris Rauf) ಮೇಲೆ ಕೊಹ್ಲಿ (Virat Kohli) ಬಾರಿಸಿದ ಆ ಎರಡು ಸಿಕ್ಸರ್ಗಳು ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿದ್ದವು. ಈ ಎರಡು ಸಿಕ್ಸರ್ಗಳಿಂದಲೇ ಟಿ20 ವಿಶ್ವಕಪ್ ಅನ್ನು ಇನ್ನೂ ಕೂಡ ನೆನೆಯಲಾಗುತ್ತದೆ. ಆದರೆ ಈ ಎರಡು ಸಿಕ್ಸರ್ಗಳನ್ನು ಹೊಡೆಸಿಕೊಂಡ ಪಾಕ್ ವೇಗಿ ರೌಫ್ಗೆ ಮಾತ್ರ ಆ ಶಾಕ್ನಿಂದ ಇನ್ನೂ ಹೊರಬರಲಾಗುತ್ತಿಲ್ಲ.
ಪಾಕಿಸ್ತಾನ ವಿರುದ್ಧದ ಆ ಪಂದ್ಯದಲ್ಲಿ ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದ್ದರು. ಅದರಲ್ಲೂ ಕೊನೆಯ 18 ಎಸೆತಗಳಲ್ಲಿ 48 ರನ್ ಅಗತ್ಯವಿದ್ದಾಗ ಗೆಲುವಿನ ಹೊರೆ ಹೊತ್ತಿದ್ದ ಕೊಹ್ಲಿ 19ನೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಬಾರಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ದರು. ಕೊನೆಯ 8 ಎಸೆತಗಳಲ್ಲಿ ಭಾರತಕ್ಕೆ 28 ರನ್‌ಗಳ ಅಗತ್ಯವಿತ್ತು. ಕೊಹ್ಲಿ ಮುಂದೆ ಪಾಕ್ ವೇಗದ ಬೌಲರ್ ರೌಫ್ ಇದ್ದರು. ಓವರ್ನ ಮೊದಲ 4 ಎಸೆತಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡದ ರೌಫ್ ಕೊನೆಯ ಎರಡು ಎಸೆತಗಳನ್ನು ಇದೇ ರೀತಿ ಕೊನೆಗೊಳಿಸಲು ತಯಾರಿ ನಡೆಸಿದ್ದರು. ಆದರೆ 19ನೇ ಓವರ್ನ 5ನೇ ಎಸೆತವನ್ನು ನೇರ ಬ್ಯಾಟ್‌ನಿಂದ ಲಾಂಗ್ ಆನ್‌ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದ ಕೊಹ್ಲಿ ಎಲ್ಲರನ್ನು ಆಶ್ಚರ್ಯಗೊಳಿಸಿದರು.
IND vs SL: 152, 140 ರನ್.. ಗುವಾಹಟಿಯಲ್ಲಿ ಕಿಂಗ್ ಕೊಹ್ಲಿ- ಹಿಟ್ಮ್ಯಾನ್ ರೋಹಿತ್ನದ್ದೇ ದರ್ಬಾರು..!
ತುಂಬಾ ನೋವಾಯ್ತು- ರೌಫ್
ಆ ಸಿಕ್ಸರ್‌ಗಳ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ವೇಗದ ಬೌಲರ್ ರೌಫ್, ಅಂತಹ ಹೊಡೆತಗಳನ್ನು ಬಹಳ ಅಪರೂಪವಾಗಿ ಆಡಲಾಗುತ್ತದೆ. ಆದರೆ ಆ ಸಿಕ್ಸರ್ ತಿಂದ ನಂತರ ನನಗೆ ವೈಯಕ್ತಿಕವಾಗಿ ತುಂಬಾ ನೋವಾಯ್ತು. ಚೆಂಡು ಸಿಕ್ಸರ್‌ಗೆ ಹೋದಾಗ ನನಗೆ ಸಾಕಷ್ಟು ನೋವಾಯ್ತು. ಆದರೆ ನಾನು ಆ ಸಮಯದಲ್ಲಿ ಏನನ್ನೂ ತೊರ್ಪಡಿಸಲಿಲ್ಲ.
Haris Rauf about Virat Kohli #INDvSL #ViratKohli #Kohli #SuryakumarYadav #Rizwan #Malik #BabarAzam? #AhmadShahzad pic.twitter.com/KMchDHJjU2
— For no reason (@Ayaztanveer141) January 7, 2023
ಕ್ರಿಕೆಟ್ ಬಲ್ಲವರಿಗೆ ಆತ (ಕೊಹ್ಲಿ) ಎಂತಹ ಆಟಗಾರ ಎಂಬುದು ಕೂಡ ಗೊತ್ತು. ಆದರೆ ಕೊಹ್ಲಿ ಆ ರೀತಿಯ ಶಾಟ್ಗಳನ್ನು ಮತ್ತೆ ಆಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅಂತಹ ಹೊಡೆತಗಳನ್ನು ಅಪರೂಪವಾಗಿ ಆಡಲಾಗುತ್ತದೆ. ನೀವು ಅವುಗಳನ್ನು ಮತ್ತೆ ಮತ್ತೆ ಆಡಲು ಸಾಧ್ಯವಿಲ್ಲ. ಆದರೆ ಆ ಶಾಟ್ ಹೊಡೆಯುವಲ್ಲಿ ಕೊಹ್ಲಿಯ ಟೈಮಿಂಗ್ಸ್ ನಿಖರವಾಗಿತ್ತು. ಅದಕ್ಕಾಗಿಯೇ ಅವರು ಆ ಸಿಕ್ಸರ್ ಬಾರಿಸಿದರು ಎಂದಿದ್ದಾರೆ.
ಪಂದ್ಯ ಹೀಗಿತ್ತು
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಎಂಟು ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತ್ತು. ಪಾಕ್ ಪರ ಶಾನ್ ಮಸೂದ್ ಮತ್ತು ಇಫ್ತಿಕರ್ ಅಹ್ಮದ್ ಅರ್ಧಶತಕ ಬಾರಿಸಿ ತಂಡವನ್ನು ಗೌರವ ಮೊತ್ತಕ್ಕೆ ಕೊಂಡೊಯ್ದರು. ಮಸೂದ್ ಔಟಾಗದೆ 52 ಮತ್ತು ಇಫ್ತಿಕರ್ 51 ರನ್ ಗಳಿಸಿದರು.
ಆದರೆ ಈ ಗುರಿ ಬೆನ್ನಟ್ಟಿದ ಭಾರತದ ಆರಂಭವೂ ಉತ್ತಮವಾಗಿರಲಿಲ್ಲ. ಟೀಂ ಇಂಡಿಯಾದ ಅಗ್ರ ಕ್ರಮಾಂಕ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಆದರೆ ಆರಂಭಿಕ ಆಘಾತದ ನಂತರ ಇನ್ನಿಂಗ್ಸ್ ಹೊರೆ ಹೊತ್ತ ಹಾರ್ದಿಕ್ ಪಾಂಡ್ಯ ಮತ್ತು ಕೊಹ್ಲಿ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದರು. ಪಾಂಡ್ಯ 37 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಿತ 40 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Mon, 9 January 23