ವಿಶ್ವಕಪ್ ಪಂದ್ಯದ ವೇಳೆ ಭೂಕಂಪನ! ಇದು ಆಟಗಾರರ ಅರಿವಿಗೆ ಬರಲಿಲ್ಲ; ಕ್ಯಾಮೆರದಲ್ಲಿ ಸೆರೆಯಾದ ದೃಶ್ಯ ಈಗ ವೈರಲ್

| Updated By: ಪೃಥ್ವಿಶಂಕರ

Updated on: Jan 30, 2022 | 6:29 PM

U19 World Cup 2022: ಸ್ವಲ್ಪ ಸಮಯದ ನಂತರ ಐರ್ಲೆಂಡ್ ಕ್ರಿಕೆಟ್ ಕೂಡ ಭೂಕಂಪವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಇದನ್ನು ಖಚಿತಪಡಿಸಿದೆ. ಟ್ವೀಟ್ ಪ್ರಕಾರ, ಟ್ರಿನಿಡಾಡ್ ಕರಾವಳಿಯಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ.

ವಿಶ್ವಕಪ್ ಪಂದ್ಯದ ವೇಳೆ ಭೂಕಂಪನ! ಇದು ಆಟಗಾರರ ಅರಿವಿಗೆ ಬರಲಿಲ್ಲ; ಕ್ಯಾಮೆರದಲ್ಲಿ ಸೆರೆಯಾದ ದೃಶ್ಯ ಈಗ ವೈರಲ್
ಲೈವ್ ಮ್ಯಾಚ್ ವೇಳೆ ಭೂಕಂಪ
Follow us on

ಕ್ರಿಕೆಟ್ ಪಂದ್ಯಗಳ ವೇಳೆ ಮಳೆ ಬರುವುದು ಸಾಮಾನ್ಯ. ಕೆಲವೊಮ್ಮೆ ಮರಳು ಬಿರುಗಾಳಿ ಬೀಸುವುದನ್ನು ನಾವು ಕಾಣಬಹುದು. ಆದರೆ, ಪಂದ್ಯದ ಸಮಯದಲ್ಲಿ ಭೂಕಂಪ ಆಗುವುದನ್ನು ಅಪರೂಪವಾಗಿ ನೋಡುತ್ತೇವೆ. ಆದರೆ, ಈಗ ಅದು ಕೂಡ ಸಂಭವಿಸಿದೆ. ಇದು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್19 ವಿಶ್ವಕಪ್ 2022 (ICC U-19 World Cup 2022) ರ ಸಂದರ್ಭದಲ್ಲಿ ಸಂಭವಿಸಿದೆ. ಅಚ್ಚರಿಯೆಂದರೆ.. ಭೂಕಂಪಕ್ಕೆ ನೆಲ ನಡುಗಿದರೂ, ಸ್ಟೇಡಿಯಂನಲ್ಲಿದ್ದ ಕ್ಯಾಮೆರಾಗಳು ಅಲುಗಾಡಿದರೂ.. ಆಟಗಾರರಿಗೆ ಏನೂ ತಿಳಿಯದೆ ಪಂದ್ಯ ಮುಂದುವರಿದಿದೆ. ಜನವರಿ 29 ರ ಶನಿವಾರದಂದು ಜಿಂಬಾಬ್ವೆ ಮತ್ತು ಐರ್ಲೆಂಡ್ ಅಂಡರ್-19 ತಂಡಗಳ ನಡುವಿನ ಪ್ಲೇ-ಆಫ್ ಪಂದ್ಯದಲ್ಲಿ ಇದೆಲ್ಲವೂ ಸಂಭವಿಸಿದೆ. ಭೂಕಂಪನದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿರುವುದರಿಂದ ಈ ವಿಡಿಯೋ ಇದೀಗ ವೈರಲ್ ಆಗಿದೆ.

19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಒಂಬತ್ತನೇ ಸ್ಥಾನಕ್ಕಾಗಿ ಪ್ಲೇ-ಆಫ್ ಸೆಮಿಫೈನಲ್ ಪಂದ್ಯ ಶನಿವಾರ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವೆ ನಡೆಯಿತು. ಪಂದ್ಯದಲ್ಲಿ ಜಿಂಬಾಬ್ವೆ ಮೊದಲು ಬ್ಯಾಟ್ ಮಾಡಿತು. ಜಿಂಬಾಬ್ವೆ ಇನ್ನಿಂಗ್ಸ್‌ನಲ್ಲಿ ಈ ಭೂಕಂಪ ಸಂಭವಿಸಿದೆ. ಆರನೇ ಓವರ್​ನಲ್ಲಿ ಜಿಂಬಾಬ್ವೆ ಇನ್ನಿಂಗ್ಸ್ ಸಾಗುತ್ತಿದ್ದಂತೆ ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ದಿಢೀರ್ ಭೂಕಂಪ ಸಂಭವಿಸಿದೆ. ಆದರೆ ಆಟಗಾರರಿಗೆ ಇದು ತಿಳಿದಿಲ್ಲ. ಬೌಲರ್ ಇದರ ಯಾವುದೇ ಅರಿವಿಲ್ಲದೆ ಬೌಲ್ ಮಾಡಿದ್ದರೆ ಬ್ಯಾಟ್ಸ್‌ಮನ್ ಕೂಡ ಸುಲಭವಾಗಿ ಚೆಂಡನ್ನು ಎದುರಿಸಿದ್ದಾರೆ.

20 ಸೆಕೆಂಡುಗಳ ಕಾಲ ಮೈದಾನ ಅಲುಗಾಡಿದರೂ ಯಾವ ಆಟಗಾರರಿಗೂ ಗೊತ್ತಾಗಲಿಲ್ಲ
ಆದಾಗ್ಯೂ, ಪಂದ್ಯದ ನೇರ ಪ್ರಸಾರಕ್ಕಾಗಿ ಮೈದಾನದಲ್ಲಿ ಅಳವಡಿಸಲಾದ ಕ್ಯಾಮರಾ ಅಲುಗಾಡಲು ಪ್ರಾರಂಭಿಸಿತು. ಸುಮಾರು 20 ಸೆಕೆಂಡುಗಳ ಕಾಲ ಬಲವಾದ ನಡುಕ ಸಂಭವಿಸಿದ್ದು ಕ್ಯಾಮೆರಾ ವೇಗವಾಗಿ ಅಲುಗಾಡುತ್ತಿರುವುದನ್ನು ನಾವು ಕಾಣಬಹುದು. ಅದೇ ಸಮಯದಲ್ಲಿ, ಪಂದ್ಯದ ವೀಕ್ಷಕ ವಿವರಣೆಗಾರರು ಇದನ್ನು ಖಚಿತಪಡಿಸಿದ್ದಾರೆ. ಕಾಮೆಂಟರಿ ಬಾಕ್ಸ್ ಸಂಪೂರ್ಣವಾಗಿ ಅಲುಗಾಡುತ್ತಿದೆ ಮತ್ತು ರೈಲು ಅವರ ಹಿಂದೆ ಹೋದಂತೆ ಭಾಸವಾಗುತ್ತಿದೆ ಎಂದು ವೀಕ್ಷಕ ವಿವರಣೆಗಾರರು ಕೂಡ ಹೇಳಿದ್ದಾರೆ. ಆದರೆ ಇದು ಆಟಗಾರರ ಅರಿವಿಗೆ ಬಂದಿಲ್ಲ.

ಸ್ವಲ್ಪ ಸಮಯದ ನಂತರ ಐರ್ಲೆಂಡ್ ಕ್ರಿಕೆಟ್ ಕೂಡ ಭೂಕಂಪವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಇದನ್ನು ಖಚಿತಪಡಿಸಿದೆ. ಟ್ವೀಟ್ ಪ್ರಕಾರ, ಟ್ರಿನಿಡಾಡ್ ಕರಾವಳಿಯಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ.

ಐರ್ಲೆಂಡ್ ಬೌಲರ್ ಪ್ರಬಲ ಬೌಲಿಂಗ್
ಭೂಕಂಪದಿಂದ ಯಾವುದೇ ಹಾನಿ ಅಥವಾ ಸ್ಪರ್ಧೆಯ ಮೇಲೆ ಪರಿಣಾಮ ಬೀರಿಲ್ಲ ಎಂದು ತಿಳಿದುಬಂದಿದೆ. ಜಿಂಬಾಬ್ವೆ 5 ವಿಕೆಟ್ ಕಬಳಿಸಿ ಯಾವುದೇ ಕಷ್ಟವಿಲ್ಲದೆ ಇನಿಂಗ್ಸ್ ಪೂರ್ಣಗೊಳಿಸಿತು. ಆದಾಗ್ಯೂ, ಐರ್ಲೆಂಡ್ ಬೌಲರ್ ಮುಝಮ್ಮಿಲ್ ಶೆರ್ಜಾದ್ ತಮ್ಮ ಮಧ್ಯಮ ವೇಗದಿಂದ ಜಿಂಬಾಬ್ವೆ ಬ್ಯಾಟಿಂಗ್ ಅನ್ನು ತೊಂದರೆಗೊಳಿಸಿದರು. ಮುಝಮ್ಮಿಲ್ 7.4 ಓವರ್‌ಗಳಲ್ಲಿ 5 ವಿಕೆಟ್‌ ಕಬಳಿಸಿದರು. ಜಿಂಬಾಬ್ವೆ ತನ್ನ ಇನ್ನಿಂಗ್ಸ್‌ನಲ್ಲಿ 166 ರನ್‌ಗಳಿಗೆ ಆಲೌಟ್ ಆಯಿತು.

Published On - 6:25 pm, Sun, 30 January 22