ಶ್ರೀಲಂಕಾದಲ್ಲಿ ನಿನ್ನೆಯಿಂದ ಅಂದರೆ, ಜುಲೈ 13ರಿಂದ ಆರಂಭವಾಗಿರುವ ಎಸಿಸಿ ಎಮರ್ಜಿಂಗ್ ಏಷ್ಯಾಕಪ್-2023 (ACC Men’s Emerging Asia Cup 2023)ರಲ್ಲಿ ಭಾರತ-ಎ (India- A) ತಂಡ ಶುಕ್ರವಾರದಿಂದ ತನ್ನ ಅಭಿಯಾನ ಆರಂಭಿಸಿದೆ. ತನ್ನ ಮೊದಲ ಪಂದ್ಯದಲ್ಲಿ ಯುಎಇ ಎ (UAE-A) ತಂಡವನ್ನು ಎದುರಿಸುತ್ತಿರುವ ಭಾರತ, ಎರಡನೇ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸಲಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಯಶ್ ಧುಲ್ (Yash Dhull) ನಾಯಕತ್ವದಲ್ಲಿ ಕಣಕ್ಕಿಳಿದಿದ್ದು, ಈ ಪಂದ್ಯದಲ್ಲಿ ಭಾರತ-ಎ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.
ಭಾರತ ಇದುವರೆಗೆ ಉದಯೋನ್ಮುಖ ಏಷ್ಯಾಕಪ್ ಅನ್ನು ಒಮ್ಮೆ ಮಾತ್ರ ಗೆದ್ದಿದೆ. 2013ರಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಪ್ರಶಸ್ತಿ ಗೆದ್ದಿತ್ತು. ಆದರೆ ಅಂದಿನಿಂದ ಭಾರತಕ್ಕೆ ಈ ಟೂರ್ನಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಬರ ನೀಗಿಸಲು ಯಶ್ ಧುಲ್ ನಾಯಕತ್ವದ ಟೀಂ ಇಂಡಿಯಾ ಪ್ರಯತ್ನಿಸಲಿದೆ. ಟೀಂ ಇಂಡಿಯಾದ ಮೊದಲ ಪಂದ್ಯ ಯುಎಇ ಎದುರು ಆರಂಭವಾಗಿದ್ದು, ಇದರೊಂದಿಗೆ ತಂಡ ಪ್ಲೇಯಿಂಗ್-11 ಕೂಡ ಪ್ರಕಟಗೊಂಡಿದೆ.
A look at the Playing XI of India 'A' for their opening clash??
Follow the match ▶️ https://t.co/prDsfa2PWc#ACCMensEmergingTeamsAsiaCup | #ACC pic.twitter.com/le59NRmOgT
— BCCI (@BCCI) July 14, 2023
ಕಳೆದ ವರ್ಷ ನಡೆದ ಐಸಿಸಿ ಅಂಡರ್-19 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಯಶ್ ಧುಲ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಈಗ ಉದಯೋನ್ಮುಖ ಏಷ್ಯಾಕಪ್‌ನಲ್ಲೂ ಯಶ್ ತಂಡವನ್ನು ಗೆಲುವಿನತ್ತ ಮುನ್ನಡೆಸಲಿದ್ದಾರೆ. ಯಶ್ ಧುಲ್ ಸಾರಥ್ಯದ ತಂಡದಲ್ಲಿ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಧ್ರುವ ಜುರೈಲ್, ಆಕಾಶ್ ಸಿಂಗ್ ಅವರಂತಹ ಪ್ರತಿಭಾವಂತ ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಎಲ್ಲಾ ಆಟಗಾರರು ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಈಗ ಏಷ್ಯಾಕಪ್ನಲ್ಲಿ ಭಾರತವನ್ನು ಚಾಂಪಿಯನ್ ಮಾಡಲು ಪ್ರಯತ್ನಿಸಲಿದ್ದಾರೆ.
ಎಸಿಸಿ ಎಮರ್ಜಿಂಗ್ ಏಷ್ಯಾಕಪ್ನಲ್ಲಿ ಯುಎಇ ವಿರುದ್ಧ ಮೊದಲ ಪಂದ್ಯವನ್ನಾಡುತ್ತಿರುವ ಭಾರತ, ಈ ಪಂದ್ಯದ ನಂತರ ಜುಲೈ 17 ರಂದು ನೇಪಾಳ-ಎ ವಿರುದ್ಧ ಪಂದ್ಯವನ್ನು ಆಡಬೇಕಾಗಿದೆ. ಬಳಿಕ ಜುಲೈ 19 ರಂದು ಭಾರತ-ಎ ಪಾಕಿಸ್ತಾನ-ಎ ತಂಡವನ್ನು ಎದುರಿಸಲಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳಿದ್ದು, ತಲಾ ನಾಲ್ಕು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್ ಆಡಲಿವೆ. ಆ ಬಳಿಕ ಸೆಮಿಫೈನಲ್ನಲ್ಲಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯುವ ಎರಡು ತಂಡಗಳು ಫೈನಲ್ ಆಡಲಿವೆ.
ಯುಎಇ ವಿರುದ್ಧ ಭಾರತದ ಪ್ಲೇಯಿಂಗ್-11 ಹೀಗಿದೆ: ಯಶ್ ಧುಲ್ (ನಾಯಕ), ಅಭಿಷೇಕ್ ಶರ್ಮಾ (ಉಪನಾಯಕ), ನಿಕಿನ್ ಜೋಸ್, ರಿಯಾನ್ ಪರಾಗ್, ನಿಶಾಂತ್ ಸಿಧು, ಧ್ರುವ ಜುರೈಲ್ (ವಿಕೆಟ್ ಕೀಪರ್), ಮಾನವ್ ಸುತಾರ್, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:26 am, Fri, 14 July 23