Emerging Asia Cup 2024: ಚೊಚ್ಚಲ ಉದಯೋನ್ಮುಖ ಏಷ್ಯನ್ ಕಿರೀಟ ಮುಡಿಗೇರಿಸಿಕೊಂಡ ಅಫ್ಘಾನಿಸ್ತಾನ

Emerging Asia Cup 2024: ಅಫ್ಘಾನಿಸ್ತಾನ ಎ ತಂಡ ಒಮಾನ್‌ನಲ್ಲಿ ನಡೆದ ಉದಯೋನ್ಮುಖ ಟೀಂ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ ಎ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಆಯಿತು. ಇದು ಅಫ್ಘಾನ್ ತಂಡದ ಮೊದಲ ಏಷ್ಯಾಕಪ್ ಪ್ರಶಸ್ತಿ. ಶ್ರೀಲಂಕಾ 133 ರನ್ ಗಳಿಸಿತು, ಸಹನ್ ಅರಚ್ಚಿ 64 ರನ್ ಗಳಿಸಿದರು. ಅಫ್ಘಾನಿಸ್ತಾನದ ಸೇದಿಕುಲ್ಲಾ ಅಟಲ್ ಅಜೇಯ 55 ರನ್‌ಗಳೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. ಇದು ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಗೆಲುವು.

Emerging Asia Cup 2024: ಚೊಚ್ಚಲ ಉದಯೋನ್ಮುಖ ಏಷ್ಯನ್ ಕಿರೀಟ ಮುಡಿಗೇರಿಸಿಕೊಂಡ ಅಫ್ಘಾನಿಸ್ತಾನ
ಅಫ್ಘಾನಿಸ್ತಾನ ಎ ತಂಡ
Follow us
|

Updated on:Oct 27, 2024 | 10:17 PM

ಒಮಾನ್​ನ ಅಲ್ ಎಮಿರೇಟ್ಸ್‌ ಮೈದಾನದಲ್ಲಿ ನಡೆದ ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ ಎ ತಂಡಗಳ ನಡುವಿನ ಉದಯೋನ್ಮುಖ ಟೀಂ ಏಷ್ಯಾಕಪ್​ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿದ ಅಫ್ಘಾನಿಸ್ತಾನ ಎ ತಂಡ ಇದೇ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಈ ಮೊದಲು ಈ ಪಂದ್ಯಾವಳಿಯಲ್ಲಿ 5 ಆವೃತ್ತಿಗಳು ನಡೆದಿದ್ದು, ಭಾರತ ತಂಡ ಒಮ್ಮೆ ಮಾತ್ರ ಪ್ರಶಸ್ತಿ ಗೆದ್ದಿದ್ದರೆ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ತಲಾ 2 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದವು. ಇನ್ನು ಇದೇ ಮೊದಲ ಬಾರಿಗೆ ಈ ಪಂದ್ಯಾವಳಿಯಲ್ಲಿ ಫೈನಲ್​ಗೆ ಅರ್ಹತೆಗಿಟ್ಟಿಸಿಕೊಂಡಿದ್ದ ಅಫ್ಘಾನಿಸ್ತಾನ ತಂಡ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಲಂಕಾ ತಂಡಕ್ಕೆ ಕಳಪೆ ಆರಂಭ

ಈ ಪಂದ್ಯದಲ್ಲಿ ಶ್ರೀಲಂಕಾ ನಾಯಕ ನುವಾನಿಂದು ಫೆರ್ನಾಂಡೋ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 133 ರನ್ ಕಲೆಹಾಕಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ 4 ವಿಕೆಟ್‌ಗಳು ಕೇವಲ 15 ರನ್‌ಗಳಿಗೆ ಪತನಗೊಂಡವು. ಇದಾದ ಬಳಿಕ ಸಹನ್ ಅರಚ್ಚಿಗೆ ತಂಡದ ಪರ ಮಹತ್ವದ ಇನ್ನಿಂಗ್ಸ್ ಆಡಿ ಅರ್ಧಶತಕ ಗಳಿಸಿದರಾದರೂ ತಂಡದ ಇತರ ಬ್ಯಾಟ್ಸ್‌ಮನ್‌ಗಳಿಂದ ಬೆಂಬಲ ಸಿಗಲಿಲ್ಲ.

ಸಹನ್ ಅರಚ್ಚಿಗೆ ಏಕಾಂಗಿ ಹೋರಾಟ

ಪವನ್ ರತ್ನಾಯಕೆ 20 ರನ್‌ಗಳ ಕೊಡುಗೆ ನೀಡಿದರೆ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ನಿಮೇಶ್ ವಿಮುಕ್ತಿ ಕೂಡ 19 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಸಹಾಯದಿಂದ 23 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದರು. ಸಹನ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 47 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 64 ರನ್ ಗಳಿಸಿದರು. ಅಫ್ಘಾನಿಸ್ತಾನ ಪರ ಬಿಲಾಲ್ ಸಮಿ 3 ವಿಕೆಟ್ ಪಡೆದರೆ ಅಲ್ಲಾ ಗಜನ್ಫರ್ 2 ವಿಕೆಟ್ ಪಡೆದರು.

ಮೊದಲ ಎಸೆತದಲ್ಲೇ ವಿಕೆಟ್

ಇನ್ನು ಶ್ರೀಲಂಕಾ ನೀಡಿದ ಅಫ್ಘಾನಿಸ್ತಾನ ತಂಡಕ್ಕೂ ಆರಂಭಿಕ ಆಘಾತ ಎದುರಾಯಿತು. ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಆರಂಭಿಕ ಜುಬೈದ್ ಅಕ್ಬರಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಸೇದಿಕುಲ್ಲಾ ಅಟಲ್ ಹಾಗೂ ನಾಯಕ ದರ್ವಿಶ್ ರಸೂಲಿ ಎರಡನೇ ವಿಕೆಟ್​ಗೆ 42 ರನ್​ಗಳ ಜೊತೆಯಾಟ ನೀಡಿದರು. ಆದರೆ ಈ ವೇಳೆ ನಾಯಕ ರಸೂಲಿ 20 ಎಸೆತಗಳಲ್ಲಿ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ ಕರೀಂ ಜನತ್ 27 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಸಹಿತ 33 ರನ್​ಗಳ ಕಾಣಿಕೆ ನೀಡಿ ಪೆವಿಲಿಯನ್ ಸೇರಿಕೊಂಡರು.

ಅಫ್ಘಾನ್ ತಂಡಕ್ಕೆ ಐತಿಹಾಸಿಕ ಗೆಲುವು

ಕೊನೆಯವರೆಗೂ ನಿಂತು ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಸೇದಿಕುಲ್ಲಾ ಅಟಲ್ 55 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 55 ರನ್​ ಬಾರಿಸಿ ತಂಡವನ್ನು ಐತಿಹಾಸಿಕ ಗೆಲುವಿಗೆ ಮುನ್ನಡೆಸಿದರು. ಕೊನೆಯಲ್ಲಿ ಕೇವಲ 6 ಎಸೆತಗಳಲ್ಲಿ 16 ರನ್ ಬಾರಿಸಿದ ಮೊಹಮ್ಮದ್ ಇಶಾಕ್ ಕೂಡ ತಂಡದ ಗೆಲುವಿಗೆ ಕಾರಣರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:14 pm, Sun, 27 October 24

ಹಾಸನಾಂಬೆ ದರ್ಶನ ಪಡೆದ ಬಳಿಕ ಡಿ ಬಾಸ್ ಬಗ್ಗೆ ಮಾತಾಡಿದ ಗೆಳೆಯ ತರುಣ್ ಸುಧೀರ್
ಹಾಸನಾಂಬೆ ದರ್ಶನ ಪಡೆದ ಬಳಿಕ ಡಿ ಬಾಸ್ ಬಗ್ಗೆ ಮಾತಾಡಿದ ಗೆಳೆಯ ತರುಣ್ ಸುಧೀರ್
ಪ್ರಾರ್ಥನೆ ವೇಳೆ ಬಿತ್ತು ಹೂವು: ಕುಮಾರಸ್ವಾಮಿಗೆ ಶುಭ ಸೂಚನೆನಾ?
ಪ್ರಾರ್ಥನೆ ವೇಳೆ ಬಿತ್ತು ಹೂವು: ಕುಮಾರಸ್ವಾಮಿಗೆ ಶುಭ ಸೂಚನೆನಾ?
ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ರೈಲು!
ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ರೈಲು!
ಬಿಗ್​ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು
ಬಿಗ್​ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು
ಮಾಧುರಿ ಜೊತೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಬಿದ್ದ ನಟಿ ವಿದ್ಯಾ ಬಾಲನ್
ಮಾಧುರಿ ಜೊತೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಬಿದ್ದ ನಟಿ ವಿದ್ಯಾ ಬಾಲನ್
ವಕ್ಫ್​ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್​
ವಕ್ಫ್​ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್​
ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ, ಪುತ್ರನ ಗೆಲುವಿಗಾಗಿ ವಿಶೇಷ ಪೂಜೆ
ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ, ಪುತ್ರನ ಗೆಲುವಿಗಾಗಿ ವಿಶೇಷ ಪೂಜೆ
30 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಇದ್ದ ಬ್ಯಾಗ್ ವಾಪಸ್ ನೀಡಿದ ಕಂಡಕ್ಟರ್
30 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಇದ್ದ ಬ್ಯಾಗ್ ವಾಪಸ್ ನೀಡಿದ ಕಂಡಕ್ಟರ್
ಹೊನವಾಡ ಗ್ರಾಮದ 11 ಎಕರೆ ಜಮೀನು ಮಾತ್ರ ವಕ್ಫ್​ಗೆ ಸೇರಿದ್ದು; ಎಂ ಬಿ ಪಾಟೀಲ್
ಹೊನವಾಡ ಗ್ರಾಮದ 11 ಎಕರೆ ಜಮೀನು ಮಾತ್ರ ವಕ್ಫ್​ಗೆ ಸೇರಿದ್ದು; ಎಂ ಬಿ ಪಾಟೀಲ್
ವೀಕೆಂಡ್‌ನಲ್ಲಿ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ
ವೀಕೆಂಡ್‌ನಲ್ಲಿ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ