AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs NZ: ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಹೀನಾಯವಾಗಿ ಸೋತ ನ್ಯೂಜಿಲೆಂಡ್

England Wins 1st Test vs New Zealand at Lord's: ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ನಲ್ಲಿ, ಇಂಗ್ಲೆಂಡ್ 115 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಬೌಲರ್‌ಗಳ ಪ್ರಾಬಲ್ಯ ಮೆರೆದ ಈ ಪಂದ್ಯದಲ್ಲಿ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಈ ಸೋಲಿನಿಂದಾಗಿ ನ್ಯೂಜಿಲೆಂಡ್ WTC ಅಂಕಪಟ್ಟಿಯಲ್ಲಿ 2ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ENG vs NZ: ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಹೀನಾಯವಾಗಿ ಸೋತ ನ್ಯೂಜಿಲೆಂಡ್
Eng Vs Nz
ಪೃಥ್ವಿಶಂಕರ
|

Updated on:Jun 07, 2026 | 7:07 PM

Share

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ (England vs New Zealand) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lord’s Cricket Ground) ನಡೆದ ಮೊದಲ ಟೆಸ್ಟ್ ಪಂದ್ಯ 4ನೇ ದಿನದ ಮೊದಲ ಸೆಷನ್‌ನಲ್ಲಿಯೇ ಅಂತ್ಯವಾಯಿತು. ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್, ನ್ಯೂಜಿಲೆಂಡ್ ತಂಡವನ್ನು 115 ರನ್​ಗಳಿಂದ ಮಣಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಗೆಲುವಿಗೆ 254 ರನ್​ಗಳ ಗುರಿ ಪಡೆದಿದ್ದ ನ್ಯೂಜಿಲೆಂಡ್ ಕೇವಲ 40.3 ಓವರ್ ಬ್ಯಾಟಿಂಗ್‌ ಮಾಡಿ 138 ರನ್ ಕಲೆಹಾಕುವುದರೊಳಗೆ ತನ್ನಲ್ಲೇ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತು.

ಇಂಗ್ಲೆಂಡ್​ಗೆ ಏಕಪಕ್ಷೀಯ ಗೆಲುವು

ಈ ಇಡೀ ಪಂದ್ಯದಲ್ಲಿ ಬೌಲರ್​ಗಳ ಪಾರುಪತ್ಯವೇ ಹೆಚ್ಚಿತ್ತು. ಲಾರ್ಡ್ಸ್‌ನ ಬೌಲಿಂಗ್‌ ಸಹಾಯಕವಾದ ಈ ಪಿಚ್‌ನಲ್ಲಿ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ವೇಗದ ಬೌಲರ್‌ಗಳು ಪಂದ್ಯದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು. ಇತ್ತ ತವರಿನ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದ ಇಂಗ್ಲೆಂಡ್‌ನ ಬೌಲರ್‌ಗಳು ನ್ಯೂಜಿಲೆಂಡ್‌ನ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್‌ನ ಇನ್ನಿಲ್ಲದಂತೆ ಕಾಡಿದರು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಕೇವಲ 140 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಇತ್ತ ಇಂಗ್ಲೆಂಡ್‌ ಬೌಲರ್‌ಗಳ ಮುಂದೆ ಮಂಡಿಯೂರಿದ ನ್ಯೂಜಿಲೆಂಡ್ ಕೇವಲ 113 ರನ್‌ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು.

ಆದಾಗ್ಯೂ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 226 ರನ್ ಕಲೆಹಾಕಿತು. ತಂಡದ ಪರ ಎಮಿಲಿಯೊ ಗೇ ನಿರ್ಣಾಯಕ 57 ರನ್​ಗಳ ಇನ್ನಿಂಗ್ಸ್ ಅಡಿದರೆ, ಜೇಮೀ ಸ್ಮಿತ್ ಕೂಡ 39 ರನ್ ಬಾರಿಸಿದರು. ಕೊನೆಯಲ್ಲಿ ಓಲ್ಲಿ ರಾಬಿನ್ಸನ್ 29 ರನ್ ಬಾರಿಸಿ ತಂಡ ಈ ಸ್ಕೋರ್ ತಲುಪಲು ಸಹಾಯ ಮಾಡಿದರು. ಅಂತಿಮವಾಗಿ 253 ರನ್‌ಗಳ ಗುರಿ ಪಡೆದಿದ್ದ ನ್ಯೂಜಿಲೆಂಡ್ ಕೇವಲ 138 ರನ್‌ಗಳಿಗೆ ಆಲೌಟ್ ಆಗಿ ಪಂದ್ಯವನ್ನು 115 ರನ್‌ಗಳಿಂದ ಸೋತಿತು.

ಲಾರ್ಡ್ಸ್​ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ

WTC ಪಾಯಿಂಟ್ಸ್ ಪಟ್ಟಿಯಲ್ಲಿ ಬದಲಾವಣೆ

ಈ ಪಂದ್ಯಕ್ಕೂ ಮುನ್ನ, ನ್ಯೂಜಿಲೆಂಡ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‘ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದಾಗ್ಯೂ, ಇಂಗ್ಲೆಂಡ್ ವಿರುದ್ಧದ ಈ ಹೀನಾಯ ಸೋಲಿನ ನಂತರ, ಕಿವೀಸ್ ಪಾಯಿಂಟ್‌ ಪಟ್ಟಿಯಲ್ಲಿ ಕುಸಿತ ಅನುಭವಿಸಿದ್ದು, ನೇರವಾಗಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಏತನ್ಮಧ್ಯೆ, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನಕ್ಕೆ ಮತ್ತು ಶ್ರೀಲಂಕಾ ಮೂರನೇ ಸ್ಥಾನಕ್ಕೆ ಏರಿದೆ. ಆದರೆ ಈ ಗೆಲುವಿನ ಹೊರತಾಗಿಯೂ ಇಂಗ್ಲೆಂಡ್ ಏಳನೇ ಸ್ಥಾನದಲ್ಲೇ ಉಳಿದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Sun, 7 June 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ
ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟನೆ
ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ವಿಠ್ಠಲ್ ಹಲಗೇಕರ್​​​ಗೆ ಜನರಿಂದ ಕ್ಲಾಸ್
ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶಾಸಕ ವಿಠ್ಠಲ್ ಹಲಗೇಕರ್​​​ಗೆ ಜನರಿಂದ ಕ್ಲಾಸ್
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಸಾಯಿಕುಮಾರ್ ಮಾತು: ನಟ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಸಾಯಿಕುಮಾರ್ ಮಾತು: ನಟ ಹೇಳಿದ್ದೇನು?
‘ಪ್ರೇಮದ ಊರಲಿ’ ಎಫೆಕ್ಟ್: ಚಿತ್ರೀಕರಣ ನಡೆದ ಸೀಗೆಗುಡ್ಡದಲ್ಲಿ ಜನಸಾಗರ
‘ಪ್ರೇಮದ ಊರಲಿ’ ಎಫೆಕ್ಟ್: ಚಿತ್ರೀಕರಣ ನಡೆದ ಸೀಗೆಗುಡ್ಡದಲ್ಲಿ ಜನಸಾಗರ
ವಾರಾಣಸಿಯ ನಮೋ ಘಾಟ್‌ನಲ್ಲಿ ಪ್ರಧಾನಿ ಮೋದಿಯ ಮನಸೆಳೆದ ಏರ್ ಶೋ
ವಾರಾಣಸಿಯ ನಮೋ ಘಾಟ್‌ನಲ್ಲಿ ಪ್ರಧಾನಿ ಮೋದಿಯ ಮನಸೆಳೆದ ಏರ್ ಶೋ
ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ ಸಿದ್ದರಾಮಯ್ಯ
ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ ಸಿದ್ದರಾಮಯ್ಯ
ಗಗನ್​​ಗೆ ಕೌಂಟರ್ ಕೊಟ್ಟ ಆಸಿಯಾ, ಸೋನಿಕಾ ಇಂದ ಆಸಿಯಾಗೆ ಟಾಂಗ್​​: ವಿಡಿಯೋ
ಗಗನ್​​ಗೆ ಕೌಂಟರ್ ಕೊಟ್ಟ ಆಸಿಯಾ, ಸೋನಿಕಾ ಇಂದ ಆಸಿಯಾಗೆ ಟಾಂಗ್​​: ವಿಡಿಯೋ
'ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ'; ಖರ್ಗೆ
'ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ'; ಖರ್ಗೆ