England Squad: ಇಂಗ್ಲೆಂಡ್ ಟೆಸ್ಟ್ ತಂಡ ಪ್ರಕಟ

|

Updated on: Jul 02, 2024 | 8:00 AM

James Anderson: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ 41 ವರ್ಷದ ಜೇಮ್ಸ್ ಅ್ಯಂಡರ್ಸನ್ ಸ್ಥಾನ ಪಡೆದಿದ್ದಾರೆ. ಜುಲೈ 10 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅ್ಯಂಡರ್ಸನ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ. ಹೀಗಾಗಿ ವಿಂಡೀಸ್ ವಿರುದ್ಧದ ಮೊದಲ ಪಂದ್ಯ ಇಂಗ್ಲೆಂಡ್ ಪಾಲಿಗೆ ತುಂಬಾ ಮಹತ್ವದ್ದು.

England Squad: ಇಂಗ್ಲೆಂಡ್ ಟೆಸ್ಟ್ ತಂಡ ಪ್ರಕಟ
England
Follow us on

ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡವನ್ನು (England) ಪ್ರಕಟಿಸಲಾಗಿದೆ. 14 ಸದಸ್ಯರ ಈ ತಂಡವನ್ನು ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದಾರೆ. ಈ ಸರಣಿಯ ಮೊದಲೆರಡು ಪಂದ್ಯಗಳಿಗೆ ಆಯ್ಕೆ ಮಾಡಲಾದ ಈ ತಂಡದಿಂದ ಅನುಭವಿ ವಿಕೆಟ್‌ಕೀಪರ್ ಜಾನಿ ಬೈರ್‌ಸ್ಟೋವ್ ಮತ್ತು ಬೆನ್ ಫೋಕ್ಸ್ ಅವರನ್ನು ಕೈ ಬಿಡಲಾಗಿದೆ. ಬದಲಾಗಿ ಅನ್ ಕ್ಯಾಪ್ಡ್ ಜೇಮೀ ಸ್ಮಿತ್ ಮತ್ತು ಡಿಲನ್ ಪೆನ್ನಿಂಗ್‌ಟನ್‌ ಅವರಿಗೆ ಚೊಚ್ಚಲ ಅವಕಾಶ ನೀಡಲಾಗಿದೆ.

ಈ ವರ್ಷದ ಆರಂಭದಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರನ್​ಗಳಿಸಲು ಪರದಾಡಿದ್ದ ಬೈರ್‌ಸ್ಟೋವ್ ಬದಲಿಯಾಗಿ 23ರ ಹರೆಯದ ವಿಕೆಟ್‌ ಕೀಪರ್ ಸ್ಮಿತ್ ಆಯ್ಕೆಯಾಗಿದ್ದಾರೆ. ಅಲ್ಲದೆ ಫೋಕ್ಸ್‌ ಕೂಡ ಇಂಗ್ಲೆಂಡ್ ತಂಡದಿಂದ ಹೊರಬಿದ್ದಿರುವ ಕಾರಣ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್​ನಲ್ಲಿ ವಿಕೆಟ್ ಕೀಪರ್​ ಆಗಿ ಜೇಮೀ ಸ್ಮಿತ್​ಗೆ ಸ್ಥಾನ ಸಿಗಬಹುದು.

ಇನ್ನು ಇಂಗ್ಲೆಂಡ್ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದ ಜ್ಯಾಕ್ ಲೀಚ್, ಒಲೀ ರಾಬಿನ್ಸನ್ ಮತ್ತು ಮಾರ್ಕ್ ವುಡ್ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಹಿರಿಯ ವೇಗಿ ಜೇಮ್ಸ್ ಅ್ಯಂಡರ್ಸನ್ ತಂಡದಲ್ಲಿದ್ದು, ಜುಲೈ 10 ರಂದು ಲಾರ್ಡ್ಸ್​ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಜಿಮ್ಮಿ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದಾರೆ. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಡಿಲನ್ ಪೆನ್ನಿಂಗ್‌ಟನ್​ಗೆ ಚಾನ್ಸ್ ಸಿಗಬಹುದು.

ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೋ ರೂಟ್ , ಜೇಮ್ಸ್ ಅ್ಯಂಡರ್ಸನ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಡಾನ್ ಲಾರೆನ್ಸ್, ಡಿಲನ್ ಪೆನ್ನಿಂಗ್ಟನ್, ಆಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್.

ಇದನ್ನೂ ಓದಿ: Shoaib Akhtar: ಭಗವದ್ಗೀತೆ ಶ್ಲೋಕ ಹಂಚಿಕೊಂಡ ಶೊಯೇಬ್ ಅಖ್ತರ್

ಇಂಗ್ಲೆಂಡ್-ವೆಸ್ಟ್ ಇಂಡೀಸ್ ವೇಳಾಪಟ್ಟಿ:

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಸರಣಿಯು ಜುಲೈ 10 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಗೆ ಇಂಗ್ಲೆಂಡ್ ಆತಿಥ್ಯವಹಿಸುತ್ತಿದೆ. ಇನ್ನು ಈ ಸರಣಿಯ ಮೊದಲ ಪಂದ್ಯದ ಮೂಲಕ ಜೇಮ್ಸ್ ಅ್ಯಂಡರ್ಸನ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ. ಹೀಗಾಗಿ ಲಾರ್ಡ್ಸ್​ನಲ್ಲಿ ನಡೆಯಲಿರುವ ಮೊದಲ ಪಂದ್ಯವು ಇಂಗ್ಲೆಂಡ್ ಪಾಲಿಗೆ ತುಂಬಾ ಮಹತ್ವದ್ದು. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಲೆಜೆಂಡ್ ವೇಗಿಗೆ ಗೆಲುವಿನ ಬೀಳ್ಕೊಡುಗೆ ನೀಡಲು ಬೆನ್ ಸ್ಟೋಕ್ಸ್ ಪಡೆ ಪ್ಲ್ಯಾನ್ ರೂಪಿಸಿಕೊಂಡಿದೆ.

ಪಂದ್ಯ ದಿನಾಂಕ ಸ್ಥಳ
ಮೊದಲ ಟೆಸ್ಟ್ ಜುಲೈ 10  ರಿಂದ 14 ಲಾರ್ಡ್ಸ್​
ದ್ವಿತೀಯ ಟೆಸ್ಟ್ ಜುಲೈ 18 – 22 ಟ್ರೆಂಟ್ ಬ್ರಿಡ್ಜ್
ತೃತೀಯ ಟೆಸ್ಟ್ ಜುಲೈ 26 – 30 ಎಡ್ಜ್​ಬಾಸ್ಟನ್

 

 

Published On - 7:59 am, Tue, 2 July 24