Team India: ಭಾರತ 3 ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರವಹಿಸಿದ 3 ಕ್ಯಾಚ್ಗಳು ನಿಮಗೆ ನೆನಪಿದೆಯಾ?
Team India: ಹಾರ್ದಿಕ್ ಪಾಂಡ್ಯ ಬೌಲ್ ಮಾಡಿದ 20 ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಅದೊಂದು ಅದ್ಭುತ ಕ್ಯಾಚ್ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿತು ಎಂಬುದರಲ್ಲಿ ಸಂದೇಹವಿಲ್ಲ. ಇದರಂತೆಯೇ ಟೀಂ ಇಂಡಿಯಾ ಗೆದ್ದಿರುವ 2007 ಹಾಗೂ 1983 ರ ವಿಶ್ವಕಪ್ನಲ್ಲೂ ಭಾರತೀಯ ಆಟಗಾರರು ಹಿಡಿದ ಕ್ಯಾಚ್ಗಳು ತಂಡವನ್ನು ಚಾಂಪಿಯನ್ ಮಾಡಿದ್ದವು. ಆ ಕ್ಯಾಚ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಗೂ ಗೆಲ್ಲುವಲ್ಲಿ ಯಶಸ್ವಿಯಾಯಿತು. ಈ ಗೆಲುವಿನಲ್ಲಿ ಪ್ರಮುಖ ಕಾರಣವಾಗಿದ್ದು, ಹಾರ್ದಿಕ್ ಪಾಂಡ್ಯ ಬೌಲ್ ಮಾಡಿದ ಆ ಎರಡು ಓವರ್ಗಳು. ಅದರಲ್ಲೂ ಪಾಂಡ್ಯ ಬೌಲ್ ಮಾಡಿದ 20 ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಅದೊಂದು ಅದ್ಭುತ ಕ್ಯಾಚ್. ಆ ಒಂದು ಕ್ಯಾಚ್, ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿತು ಎಂಬುದರಲ್ಲಿ ಸಂದೇಹವಿಲ್ಲ. ಇದರಂತೆಯೇ ಟೀಂ ಇಂಡಿಯಾ ಗೆದ್ದಿರುವ 2007 ಹಾಗೂ 1983 ರ ವಿಶ್ವಕಪ್ನಲ್ಲೂ ಭಾರತೀಯ ಆಟಗಾರರು ಹಿಡಿದ ಕ್ಯಾಚ್ಗಳು ತಂಡವನ್ನು ಚಾಂಪಿಯನ್ ಮಾಡಿದ್ದವು. ಆ ಕ್ಯಾಚ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
2007 ರ ಟಿ20 ವಿಶ್ವಕಪ್
2007 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಮೊದಲ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆ ಆವೃತ್ತಿಯ ಫೈನಲ್ ಪಂದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದಿತ್ತು. ಅತ್ಯಂತ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರ ಮಿಸ್ಬಾ ಉಲ್ ಹಕ್ ಏಕಾಂಗಿಯಾಗಿ ಪಂದ್ಯವನ್ನು ಗೆಲುವಿನ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದರು. ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲ್ಲಲು 12 ರನ್‌ಗಳ ಅಗತ್ಯವಿತ್ತು.
#OnThisDay in 2007!
The @msdhoni-led #TeamIndia created history as they lifted the ICC World T20 Trophy. 🏆 👏
Relive that title-winning moment 🎥 👇 pic.twitter.com/wvz79xBZJv
— BCCI (@BCCI) September 24, 2021
ಭಾರತದ ಪರ ಜೋಗಿಂದರ್ ಸಿಂಗ್ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದರು. ಮೊದಲ ಎರಡು ಎಸೆತಗಳಲ್ಲಿ ಪಾಕ್ ತಂಡ 7 ರನ್ ಗಳಿಸಿತ್ತು. ಹೀಗಾಗಿ ಪಾಕಿಸ್ತಾನ ಗೆಲ್ಲಲು 4 ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿತ್ತು. ಸ್ಟ್ರೈಕ್ನಲ್ಲಿದ್ದ ಮಿಸ್ಬಾ, ಜೋಗಿಂದರ್ ಶರ್ಮಾ ಅವರ ಎಸೆತದಲ್ಲಿ ಸ್ಕೂಪ್ ಶಾಟ್ ಆಡಲು ಪ್ರಯತ್ನಿಸಿದರು. ಆದರೆ ಶಾರ್ಟ್ ಫೈನ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಎಸ್ ಶ್ರೀಶಾಂತ್ ಆ ಚೆಂಡನ್ನು ಕ್ಯಾಚ್ ಮಾಡಿ ಭಾರತ ಚಾಂಪಿಯನ್ ಆಗುವಂತೆ ಮಾಡಿದ್ದರು.
1983 ರ ಏಕದಿನ ವಿಶ್ವಕಪ್
1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತ್ತು. ಭಾರತ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತ್ತು. ಆದರೆ ಈ ಪಂದ್ಯದಲ್ಲಿ ಕಪಿಲ್ ದೇವ್ ಹಿಡಿದ ಆ ಕ್ಯಾಚ್‌ನಿಂದ ಇಡೀ ಪಂದ್ಯದ ಗತಿಯೇ ಬದಲಾಯಿತು. ಈ ಪಂದ್ಯದಲ್ಲಿ ಭಾರತ, ವೆಸ್ಟ್ ಇಂಡೀಸ್ಗೆ 184 ರನ್ ಗಳ ಗುರಿ ನೀಡಿತ್ತು. ಹೀಗಾಗಿ ಬಲಿಷ್ಠ ವೆಸ್ಟ್ ಇಂಡೀಸ್ ಆರಾಮವಾಗಿ ಗೆಲ್ಲುತ್ತದೆ ಎಂದು ತೋರುತ್ತಿತ್ತು. ಆದರೆ ಕಪಿಲ್ ದೇವ್ ಆ ತಂಡದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ವಿವ್ ರಿಚರ್ಡ್ಸ್ ನೀಡಿದ ಕ್ಯಾಚ್ ಅನ್ನು ಹಿಡಿಯುವ ಮೂಲಕ ಪಂದ್ಯವನ್ನು ಟೀಂ ಇಂಡಿಯಾ ಕಡೆಗೆ ತಿರುಗಿಸಿದರು.
History repeat kar do 🙌🙌🙌🙌🙌 Tab bhi 183 hi runs hue theyy Kapil Dev’s running catch made Viv Richards to leave the ground in 1983 World Cup VC owner from u tube account pic.twitter.com/d9egK8VPby
— Geet@Maan 🫶🫶 (@Mayuri302) November 19, 2023
ಅಂದು ಮೈದಾನಕ್ಕಿಳಿದಿದ್ದ ರಿಚರ್ಡ್ಸ್, ಎಂದಿನಂತೆ ಮೈದಾನಕ್ಕೆ ಬಂದ ತಕ್ಷಣ ಭಾರತೀಯ ಬೌಲರ್‌ಗಳನ್ನು ದಂಡಿಸಲು ಪ್ರಾರಂಭಿಸಿದ್ದರು. ಆದರೆ ಮದನ್ ಲಾಲ್ ಅವರ ಎಸೆತದಲ್ಲಿ ಅವರು ಲೆಗ್ ಸೈಡ್‌ನಲ್ಲಿ ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಗಾಳಿಯಲ್ಲಿ ಹೋಯಿತು. ಈ ವೇಳೆ ಸ್ಕ್ವೇರ್ ಲೆಗ್‌ನಲ್ಲಿ ಹಿಮ್ಮುಖವಾಗಿ ಓಡಿ ಕಪಿಲ್ ದೇವ್ ಅದ್ಭುತ ಕ್ಯಾಚ್ ಪಡೆದರು. ಆ ಒಂದು ಕ್ಯಾಚ್ ಭಾರತವನ್ನು ಮೊದಲ ಬಾರಿಗೆ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿತು.
View this post on Instagram
2024 ರ ಟಿ20 ವಿಶ್ವಕಪ್
ಇದೀಗ ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ವಿಶ್ವಕಪ್ ಇತಿಹಾಸದಲ್ಲಿ ಅತ್ಯುತ್ತಮ ಕ್ಯಾಚ್ ಎಂದು ಕರೆದರೆ ತಪ್ಪಾಗದು. ದಕ್ಷಿಣ ಆಫ್ರಿಕಾ ತಂಡವು ಬಹುತೇಕ ಗೆಲ್ಲುವ ಸ್ಥಿತಿಯಲ್ಲಿತ್ತು. ಈ ವೇಳೆ 20 ನೇ ಓವರ್ನ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್‌ಗಟ್ಟಲು ಪ್ರಯತ್ನಿಸಿದರು. ಆದರೆ ಸೂರ್ಯಕುಮಾರ್ ಸಿಕ್ಸರ್ ಅನ್ನು ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಆ ಚೆಂಡು ಬೌಂಡರಿಯಿಂದ ಹೊರಹೋಗುತ್ತದೆ ಎಂಬುದನ್ನು ಅರಿತ ಅವರು ಮೊದಲು ಚೆಂಡನ್ನು ಹಿಡಿದು, ಮೇಲಕ್ಕೆ ಎಸೆದು, ಬೌಂಡರಿ ಗೆರೆಯಿಂದ ಆಚೆ ಹೋಗಿ ಮತ್ತೆ ಒಳಕ್ಕೆ ಬಂದು ಕ್ಯಾಚ್ ಅನ್ನು ಪೂರ್ಣಗೊಳಿಸಿದರು. ಮಿಲ್ಲರ್ ಔಟಾಗುತ್ತಿದ್ದಂತೆಯೇ ಭಾರತದ ಗೆಲುವು ಖಚಿತವಾಗಿದ್ದು, ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಕ್ಯಾಚ್ಗಳ ಪಟ್ಟಿಯಲ್ಲಿ ಸೂರ್ಯ ಅವರ ಕ್ಯಾಚ್ ಕೂಡ ದಾಖಲಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:50 pm, Mon, 1 July 24