Ollie Robinson: ಒಂದೇ ಓವರ್​ನಲ್ಲಿ 43 ರನ್ ನೀಡಿದ ಇಂಗ್ಲೆಂಡ್ ವೇಗಿ: ವಿಡಿಯೋ ನೋಡಿ

Ollie Robinson: ಒಲೀ ರಾಬಿನ್ಸನ್ ಇಂಗ್ಲೆಂಡ್ ಟೆಸ್ಟ್ ತಂಡದ ಖಾಯಂ ಸದಸ್ಯ. ಈಗಾಗಲೇ ಇಂಗ್ಲೆಂಡ್ ಪರ 20 ಟೆಸ್ಟ್ ಪಂದ್ಯಗಳನ್ನಾಡಿರುವ ರಾಬಿನ್ಸನ್ 76 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ವೇಳೆ ಮೂರು ಬಾರಿ 5 ವಿಕೆಟ್ ಉರುಳಿಸಿದ್ದರು. ಹಾಗೆಯೇ ಬ್ಯಾಟಿಂಗ್​ನಲ್ಲೂ ಒಂದು ಅರ್ಧಶತಕದೊಂದಿಗೆ 410 ರನ್ ಕಲೆಹಾಕಿದ್ದಾರೆ. ಆದರೆ ಇದೀಗ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅತ್ಯಂತ ದುಬಾರಿ ಓವರ್​ ಮೂಲಕ ಸುದ್ದಿಯಾಗಿದ್ದು ಮಾತ್ರ ವಿಪಯಾರ್ಸ.

Ollie Robinson: ಒಂದೇ ಓವರ್​ನಲ್ಲಿ 43 ರನ್ ನೀಡಿದ ಇಂಗ್ಲೆಂಡ್ ವೇಗಿ: ವಿಡಿಯೋ ನೋಡಿ
Ollie Robinson
Follow us
|

Updated on: Jun 27, 2024 | 2:53 PM

ಒಂದೇ ಓವರ್​ನಲ್ಲಿ ಬರೋಬ್ಬರಿ 43 ರನ್ ನೀಡುವ ಮೂಲಕ ಇಂಗ್ಲೆಂಡ್ ವೇಗಿ ಒಲೀ ರಾಬಿನ್ಸನ್ (Ollie Robinson) ಅತ್ಯಂತ ಕೆಟ್ಟ ದಾಖಲೆ ಬರೆದಿದ್ದಾರೆ. ಈ ಮೂಲಕ ಕೌಂಟಿ ಚಾಂಪಿಯನ್​ಶಿಪ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ಕಳಪೆ ದಾಖಲೆ ಅಲೆಕ್ಸ್ ಟ್ಯೂಡರ್ ಹೆಸರಿನಲ್ಲಿತ್ತು. 1998 ರಲ್ಲಿ ಸರ್ರೆ ಪರ ಕಣಕ್ಕಿಳಿದಿದ್ದ ಅಲೆಕ್ಸ್ ಟ್ಯೂಡರ್ ಲಂಕಾಶೈರ್ ವಿರುದ್ದದ ಪಂದ್ಯದಲ್ಲಿ 38 ರನ್ ನೀಡಿದ್ದರು. ಇದೀಗ 43 ರನ್​ಗಳನ್ನು ಬಿಟ್ಟುಕೊಡುವ ಮೂಲಕ ಒಲೀ ರಾಬಿನ್ಸನ್ ಅತ್ಯಂತ ಕಳಪೆ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

5 ಭರ್ಜರಿ ಸಿಕ್ಸ್ – 2 ಫೋರ್:

ಇಂಗ್ಲೆಂಡ್​ನ ಕೌಂಟಿ ಚಾಂಪಿಯನ್​ಶಿಪ್​ನ ಡಿವಿಷನ್ ಟು ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ಮತ್ತು ಸಸೆಕ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸಸೆಕ್ಸ್ ಪರ ಕಣಕ್ಕಿಳಿದಿದ್ದ ಒಲೀ ರಾಬಿನ್ಸನ್ 13ನೇ ಓವರ್​ನಲ್ಲಿ ಬರೋಬ್ಬರಿ 43 ರನ್ ನೀಡಿದರು.

ಈ ಓವರ್​ನ ಮೊದಲ ಎಸೆತದಲ್ಲೇ ಸಿಕ್ಸ್ ನೀಡಿದ ರಾಬಿನ್ಸನ್, ಎರಡನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಹೊಡೆಸಿಕೊಂಡರು. ಆದರೆ ಇದು ನೋಬಾಲ್ ಆಗಿತ್ತು. ಇನ್ನು ಮರು ಎಸೆತದಲ್ಲಿ ಫೋರ್ ನೀಡಿದರು. ಇನ್ನು ಮೂರನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಹೊಡೆಸಿಕೊಂಡರು.

ನಾಲ್ಕನೇ ಎಸೆತದಲ್ಲಿ ಮತ್ತೊಂದು ಫೋರ್ ನೀಡಿದರೆ, 5ನೇ ಎಸೆತದಲ್ಲಿ ಸಿಕ್ಸ್ ಹೊಡೆಸಿಕೊಂಡರು. ಇದು ನೋಬಾಲ್ ಆಗಿತ್ತು. ಮರು ಎಸೆತದಲ್ಲಿ ಮತ್ತೊಂದು ಫೋರ್ ಚಚ್ಚಿಸಿಕೊಂಡರು. ಇನ್ನು ಆರನೇ ಎಸೆತದಲ್ಲಿ ಸಿಕ್ಸ್ ನೀಡಿದರು. ಇದು ಸಹ ನೋಬಾಲ್ ಆಗಿತ್ತು. ಇನ್ನು ಕೊನೆಯ ಎಸೆತದಲ್ಲಿ ಒಂದು ರನ್ ನೀಡುವ ಮೂಲಕ ಒಟ್ಟು 43 ರನ್​ಗಳು ಬಿಟ್ಟುಕೊಟ್ಟರು.

ಒಲೀ ರಾಬಿನ್ಸನರ್ ಓವರ್​: 6, 6nb, 4, 6, 4, 6nb, 4, 6nb, 1.

ಫಸ್ಟ್ ಕ್ಲಾಸ್​ ಕ್ರಿಕೆಟ್​ನಲ್ಲಿ ಸೆಕೆಂಡ್ ಕ್ಲಾಸ್ ರೆಕಾರ್ಡ್:

ಇದು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಮೂಡಿಬಂದ 2ನೇ ದುಬಾರಿ ಓವರ್ ಎಂಬುದು ವಿಶೇಷ. ಇದಕ್ಕೂ ಮುನ್ನ ನ್ಯೂಝಿಲೆಂಡ್​ನ ರಾಬರ್ಟ್ ವ್ಯಾನ್ಸ್ ಒಂದೇ ಓವರ್​ನಲ್ಲಿ ಬರೋಬ್ಬರಿ 77 ರನ್ ನೀಡಿದ್ದರು.

1989 ರಲ್ಲಿ ನಡೆದ ಕ್ಯಾಂಟಬರ್ರಿ ವಿರುದ್ಧದ ಪಂದ್ಯದಲ್ಲಿ ವೆಲ್ಲಿಂಗ್ಟನ್ ಪರ ಕಣಕ್ಕಿಳಿದಿದ್ದ ರಾಬರ್ಟ್ ವ್ಯಾನ್ಸ್ ಹೆಚ್ಚುವರಿ ಎಸೆತಗಳೊಂದಿಗೆ ಬರೋಬ್ಬರಿ 77 ರನ್ ನೀಡಿರುವುದು ಅತ್ಯಂತ ಕೆಟ್ಟ ದಾಖಲೆಯಾಗಿದೆ. ಇದೀಗ ಒಲೀ ರಾಬಿನ್ಸನ್ ಲೀಸೆಸ್ಟರ್‌ಶೈರ್ ವಿರುದ್ಧ 43 ರನ್ ನೀಡುವ ಮೂಲಕ ಈ ಕೆಟ್ಟ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.

ಇದನ್ನೂ ಓದಿ: South Africa: ವಿಶ್ವಕಪ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಸೌತ್ ಆಫ್ರಿಕಾ

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ನೀಡಿದ ಬೌಲರ್​ಗಳು:

  • ರಾಬರ್ಟ್ ವ್ಯಾನ್ಸ್ – 77 ರನ್ – ವೆಲ್ಲಿಂಗ್ಟನ್ vs ಕ್ಯಾಂಟರ್ಬರಿ (1989-90)
  • ಒಲೀ ರಾಬಿನ್ಸನ್ – 43 ರನ್ – ಸಸೆಕ್ಸ್ vs ಲೀಸೆಸ್ಟರ್‌ಶೈರ್ (2024)
  • ಅಲೆಕ್ಸ್ ಟ್ಯೂಡರ್ – 38 ರನ್ – ಸರ್ರೆ vs ಲಂಕಾಶೈರ್ (1998)
  • ಶೋಯೆಬ್ ಬಶೀರ್ – 38 ರನ್ – ವೋರ್ಸೆಸ್ಟರ್‌ಶೈರ್ vs ಸರ್ರೆ (2024)
  • ಮಾಲ್ಕಮ್ ನ್ಯಾಶ್ – 36 ರನ್ – ಗ್ಲಾಮೋರ್ಗನ್ vs ನಾಟಿಂಗ್‌ಹ್ಯಾಮ್‌ಶೈರ್ (1968)
  • ತಿಲಕ್ ರಾಜ್ – 36 ರನ್ – ಬರೋಡಾ vs ಬಾಂಬೆ (1984-85)
ತಾಜಾ ಸುದ್ದಿ
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು