T20 World Cup 2024: ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ; ಶ್ರೀಲಂಕಾ ಕ್ರಿಕೆಟ್ ತೊರೆದ ಇಬ್ಬರು ಲೆಜೆಂಡ್ಸ್..!
T20 World Cup 2024: ಮಹೇಲಾ ಜಯವರ್ಧನೆ ಶ್ರೀಲಂಕಾದ ಮಾಜಿ ನಾಯಕ ಕೂಡ ಆಗಿದ್ದಾರೆ. ಅವರ ರಾಜೀನಾಮೆ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ದೊಡ್ಡ ಹೊಡೆತವಾಗಿದೆ. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಮಂಡಳಿ ಮತ್ತೊಂದು ದೊಡ್ಡ ಹಿನ್ನಡೆ ಅನುಭವಿಸಿದ್ದು, ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
2024 ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಕಳಪೆ ಪ್ರದರ್ಶನದಿಂದಾಗಿ ತಂಡವು ಗುಂಪು ಹಂತದಿಂದಲೇ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಮ್ಮೆ ಚಾಂಪಿಯನ್ ಆಗಿರುವ ಶ್ರೀಲಂಕಾ ತಂಡ ನಿರೀಕ್ಷೆಗಿಂತ ಕಳಪೆ ಪ್ರದರ್ಶನ ನೀಡಿದೆ. ಈ ಸೋಲನ್ನು ಮರೆಯಲು ತಂಡಕ್ಕೆ ಸಾಧ್ಯವಾಗದೇ ಶ್ರೀಲಂಕಾ ಕ್ರಿಕೆಟ್ನಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿದೆ. 2 ದಿನಗಳಲ್ಲಿ ಶ್ರೀಲಂಕಾ ತಂಡದ ಇಬ್ಬರು ಅನುಭವಿಗಳು ತಂಡವನ್ನು ತೊರೆದಿದ್ದಾರೆ. ಶ್ರೀಲಂಕಾ ತಂಡದ ಸಲಹಾ ಕೋಚ್ ಮಹೇಲಾ ಜಯವರ್ಧನೆ ನಿನ್ನೆ ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಹೇಲಾ ಜಯವರ್ಧನೆ ಶ್ರೀಲಂಕಾದ ಮಾಜಿ ನಾಯಕ ಕೂಡ ಆಗಿದ್ದಾರೆ. ಅವರ ರಾಜೀನಾಮೆ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ದೊಡ್ಡ ಹೊಡೆತವಾಗಿದೆ. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಮಂಡಳಿ ಮತ್ತೊಂದು ದೊಡ್ಡ ಹಿನ್ನಡೆ ಅನುಭವಿಸಿದ್ದು, ತಂಡದ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ವೈಯಕ್ತಿಕ ಕಾರಣಗಳಿಂದ ಕ್ರಿಸ್ ಸಿಲ್ವರ್‌ವುಡ್ ತಮ್ಮ ಸ್ಥಾನವನ್ನು ತೊರೆದಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಆದರೆ ತಂಡದ ಪ್ರದರ್ಶನದಿಂದ ಅವರು ಸಾಕಷ್ಟು ನಿರಾಸೆಗೊಂಡಿದ್ದಾರೆ ಎಂಬುದು ಗುಸುಗುಸು.
T20 World Cup 2024: ಆಫ್ರಿಕಾ ವಿರುದ್ಧ ಸೋಲು; ಐಸಿಸಿ ವಿರುದ್ಧ ಆರೋಪಗಳ ಸುರಿಮಳೆಗೈದ ಲಂಕಾ ಆಟಗಾರರು..!
ರಾಜೀನಾಮೆ ಪತ್ರದಲ್ಲಿ ಏನಿದೆ?
ಮಾಧ್ಯಮ ವರದಿಗಳ ಪ್ರಕಾರ, ಕ್ರಿಸ್ ಸಿಲ್ವರ್‌ವುಡ್ ತನ್ನ ರಾಜೀನಾಮೆ ಪತ್ರದಲ್ಲಿ ಅಂತರರಾಷ್ಟ್ರೀಯ ಕೋಚ್ ಆಗಿರುವುದು ಎಂದರೆ ತನ್ನ ಕುಟುಂಬದಿಂದ ದೀರ್ಘಕಾಲ ದೂರವಿರುವುದು ಎಂದರ್ಥ. ನನ್ನ ಮನೆಯವರೊಂದಿಗೆ ಮಾತನಾಡಿ, ಭಾರವಾದ ಹೃದಯದಿಂದ ನಾನು ಮನೆಗೆ ಮರಳಬೇಕು ಎಂದು ನಿರ್ಧರಿಸಿದೆ. ಶ್ರೀಲಂಕಾ ಕ್ರಿಕೆಟ್‌ನ ಭಾಗವಾಗಿರುವುದು ನನಗೆ ಹೆಮ್ಮೆಯ ವಿಷಯ. ನಾನು ಅನೇಕ ಆಹ್ಲಾದಕರ ನೆನಪುಗಳೊಂದಿಗೆ ಇಲ್ಲಿಂದ ಹಿಂತಿರುಗುತ್ತೇನೆ ಎಂದು ಬರೆದಿದ್ದಾರೆ.
Step down as England coach and won the Asia Cup with Sri Lanka as a coach – The return of Chris Silverwood. pic.twitter.com/ds6VGhNuSF
— Johns. (@CricCrazyJohns) September 11, 2022
ಏಷ್ಯಾಕಪ್ ಗೆದ್ದಿದ್ದ ಶ್ರೀಲಂಕಾ
ಕ್ರಿಸ್ ಸಿಲ್ವರ್‌ವುಡ್ ತಮ್ಮ ಅಧಿಕಾರಾವಧಿಯ ಆರಂಭದಲ್ಲಿಯೇ ಶ್ರೀಲಂಕಾಕ್ಕೆ ಉತ್ತಮ ಯಶಸ್ಸನ್ನು ತಂದುಕೊಟ್ಟಿದ್ದರು. ಅವರ ಕೋಚಿಂಗ್ ಅಡಿಯಲ್ಲಿ ಶ್ರೀಲಂಕಾ 2022 ರ ಏಷ್ಯಾಕಪ್ ಅನ್ನು ಗೆದ್ದುಕೊಂಡಿತು. ಇದಾದ ಬಳಿಕ ಆಸ್ಟ್ರೇಲಿಯ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲೂ ಶ್ರೀಲಂಕಾ 3-2 ಅಂತರದಲ್ಲಿ ಜಯಭೇರಿ ಬಾರಿಸಿತ್ತು. ಅದೇ ಸಮಯದಲ್ಲಿ, ಶ್ರೀಲಂಕಾ 2023 ರ ಏಷ್ಯಾಕಪ್ನಲ್ಲಿ ರನ್ನರ್ ಅಪ್ ಆಯಿತು. ಆದರೆ, ಏಕದಿನ ಹಾಗೂ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾದ ಪ್ರದರ್ಶನ ನಿರಾಶಾದಾಯಕವಾಗಿತ್ತು.
ಶ್ರೀಲಂಕಾದ ಪ್ರದರ್ಶನ ಹೇಗಿತ್ತು?
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾದ ಪ್ರದರ್ಶನ ಅತ್ಯಂತ ನಿರಾಶಾದಾಯಕವಾಗಿತ್ತು. ತಂಡ ಈ ಬಾರಿ ಗುಂಪು ಹಂತದಿಂದಲೇ ಟೂರ್ನಿಯಿಂದ ಹೊರಬಿದ್ದಿತ್ತು. ಟೂರ್ನಿಯಲ್ಲಿ ಶ್ರೀಲಂಕಾ ತನ್ನ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಿತ್ತು. ಇದರಲ್ಲಿ 6 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿತು. ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ 2 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು. ಈ ಸೋಲಿನ ನಂತರವೇ ಗುಂಪು ಹಂತದಲ್ಲೇ ಹೊರಗುಳಿಯುವ ಕತ್ತಿ ಶ್ರೀಲಂಕಾದ ಮೇಲೆ ತೂಗಿತು. ನೇಪಾಳ ವಿರುದ್ಧ ನಡೆಯಬೇಕಿದ್ದ ಮೂರನೇ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ತಂಡ 1 ಅಂಕಕ್ಕೆ ತೃಪ್ತಿಪಡಬೇಕಾಯಿತು. ಗುಂಪು ಹಂತದ ತನ್ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ 83 ರನ್‌ಗಳ ಅಂತರದಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿತು. ಶ್ರೀಲಂಕಾ 4 ಪಂದ್ಯಗಳಲ್ಲಿ 3 ಅಂಕಗಳೊಂದಿಗೆ ಈ ಟೂರ್ನಿಯ ಗುಂಪು ಹಂತದಿಂದ ಹೊರಬಿದ್ದಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:02 pm, Thu, 27 June 24