India vs England T20 WC Highlights: ಆಂಗ್ಲರನ್ನು ಮಣಿಸಿ ಫೈನಲ್ಗೇರಿದ ಟೀಂ ಇಂಡಿಯಾ
India vs England, T20 world Cup 2024 Highlights Updates: 2024 ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 68 ರನ್‌ಗಳ ಜಯ ಸಾಧಿಸಿದೆ.
2024 ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 68 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 171 ರನ್ ಕಲೆಹಾಕಿತು. ಆದರೆ ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ ವಿಶ್ವಕಪ್‌ನ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಇದೀಗ ಈ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿದೆ.
LIVE NEWS & UPDATES
-
IND vs ENG Live Score: ಭಾರತಕ್ಕೆ 68 ರನ್ ಗೆಲುವು
ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು 68 ರನ್‌ಗಳಿಂದ ಸೋಲಿಸಿದ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ. ಆರ್ಚರ್ ಅವರನ್ನು ಔಟ್ ಮಾಡುವ ಮೂಲಕ ಬುಮ್ರಾ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು. ಇಂಗ್ಲೆಂಡ್ ತಂಡ 103 ರನ್‌ಗಳಿಗೆ ಆಲೌಟ್ ಆಯಿತು.
-
IND vs ENG Live Score: ಲಿವಿಂಗ್‌ಸ್ಟನ್ ಕೂಡ ಔಟ್
15ನೇ ಓವರ್‌ನಲ್ಲಿ ಇಂಗ್ಲೆಂಡ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಕೊನೆಯ ಭರವಸೆಯಾಗಿದ್ದ ಲಿವಿಂಗ್‌ಸ್ಟನ್ ಕೂಡ ಕುಲ್ದೀಪ್ ಯಾದವ್ರಿಂದ ರನ್ ಔಟ್ ಆದರು. ಇಂಗ್ಲೆಂಡ್‌ನ 8 ವಿಕೆಟ್‌ಗಳು ಪತನಗೊಂಡಿವೆ. ಟೀಂ ಇಂಡಿಯಾ ಗೆಲುವಿಗೆ ಕೇವಲ 2 ವಿಕೆಟ್‌ಗಳ ಅಂತರದಲ್ಲಿದೆ.
-
IND vs ENG Live Score: ಕುಲ್ದೀಪ್‌ಗೆ ಮತ್ತೊಂದು ವಿಕೆಟ್
ಕುಲ್ದೀಪ್ ಯಾದವ್ಗೆ 3ನೇ ವಿಕೆಟ್ ಸಿಕ್ಕಿದ್ದು, ಆಲ್ರೌಂಡರ್ ಜೋರ್ಡಾನ್ ಕೇವಲ 1 ರನ್ ಗಳಿಸಿ ಔಟಾದರು.
IND vs ENG Live Score: ಜಡೇಜಾ ಅದ್ಭುತ ಓವರ್
ರವೀಂದ್ರ ಜಡೇಜಾ ತಮ್ಮ ಎರಡನೇ ಓವರ್‌ನಲ್ಲಿ ಕೇವಲ 3 ರನ್ ನೀಡಿದರು. ಇಂಗ್ಲೆಂಡ್ ಸ್ಕೋರ್ 12 ಓವರ್‌ಗಳಲ್ಲಿ 71 ರನ್ ಮಾತ್ರ. ಫೈನಲ್‌ಗೆ ಟೀಂ ಇಂಡಿಯಾ ಸ್ವಲ್ಪ ದೂರದಲ್ಲಿದೆ.
IND vs ENG Live Score: ಬ್ರೂಕ್ ಔಟ್
ಇಂಗ್ಲೆಂಡ್‌ಗೆ ಕುಲ್ದೀಪ್ ಆರನೇ ಶಾಕ್ ನೀಡಿದ್ದಾರೆ. 11ನೇ ಓವರ್ನ ನಾಲ್ಕನೇ ಎಸೆತದಲ್ಲಿ ಬ್ರೂಕ್ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿ ಕ್ಲೀನ್ ಬೌಲ್ಡ್ ಆದರು. ಟೀಂ ಇಂಡಿಯಾ ಗೆಲುವಿಗೆ ನಾಲ್ಕು ವಿಕೆಟ್‌ಗಳ ಅಂತರದಲ್ಲಿದೆ.
IND vs ENG Live Score: 5ನೇ ವಿಕೆಟ್
ಗಯಾನಾದಲ್ಲಿ ಭಾರತೀಯ ಸ್ಪಿನ್ನರ್‌ಗಳು ವಿಧ್ವಂಸಕರಾಗಿದ್ದಾರೆ. ಕುಲ್ದೀಪ್ ಬೌಲಿಂಗ್ನಲ್ಲಿ ಸ್ಯಾಮ್ ಕರ್ರನ್ ಎಲ್ಬಿ ಬಲೆಗೆ ಬಿದ್ದರು. ಇದರೊಂದಿಗೆ ಇಂಗ್ಲೆಂಡ್‌ನ ಐದನೇ ವಿಕೆಟ್ ಕಳೆದುಕೊಂಡಿದೆ. ಭರ್ಜರಿ ಗೆಲುವಿನ ಹಾದಿಯಲ್ಲಿ ಟೀಂ ಇಂಡಿಯಾ.
IND vs ENG Live Score: ಅಲಿ ಔಟ್
8ನೇ ಓವರ್‌ನಲ್ಲಿ ಭಾರತ 4ನೇ ವಿಕೆಟ್ ಕಬಳಿಸಿದೆ. ಮೊಯಿನ್ ಅಲಿ ಅಕ್ಷರ್ ಪಟೇಲ್ ಎಸೆತದಲ್ಲಿ ಸ್ಟಂಪ್ ಔಟ್ ಆದರು. ಪಂತ್ ಅತ್ಯುತ್ತಮ ವಿಕೆಟ್ ಕೀಪಿಂಗ್ ತೋರಿದರು. ಮೊಯಿನ್ ಅಲಿ ಕೇವಲ 8 ರನ್ ಗಳಿಸಲಷ್ಟೇ ಶಕ್ತರಾದರು.
IND vs ENG Live Score: ಭಾರತಕ್ಕೆ ಪವರ್‌ಪ್ಲೇ
ಪವರ್‌ಪ್ಲೇಯಲ್ಲಿ ಇಂಗ್ಲೆಂಡ್ ತಂಡ ಸಂಪೂರ್ಣ ವಿಫಲವಾಗಿದೆ. ಭಾರತ 3 ವಿಕೆಟ್ ಪಡೆದಿದ್ದರೆ, ಇಂಗ್ಲೆಂಡ್ ಕೇವಲ 39 ರನ್ ಗಳಿಸಿದೆ. ಬಟ್ಲರ್, ಸಾಲ್ಟ್ ಮತ್ತು ಬೈರ್‌ಸ್ಟೋ ಪೆವಿಲಿಯನ್‌ಗೆ ಮರಳಿದ್ದಾರೆ.
IND vs ENG Live Score: ಬೈರ್‌ಸ್ಟೋವ್ ಔಟ್
ಅಕ್ಷರ್ ಪಟೇಲ್ ಮತ್ತೆ ತಮ್ಮ ಎರಡನೇ ಓವರ್‌ನಲ್ಲಿ ಜಾನಿ ಬೈರ್‌ಸ್ಟೋ ಅವರನ್ನು ಬೌಲ್ಡ್ ಮಾಡಿದರು. ಬೈರ್‌ಸ್ಟೋ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಪವರ್‌ಪ್ಲೇಯಲ್ಲಿ ಇಂಗ್ಲೆಂಡ್ ಮೂರು ವಿಕೆಟ್ ಕಳೆದುಕೊಂಡಿದೆ. ಟೀಂ ಇಂಡಿಯಾ ಫೈನಲ್‌ಗೆ ಹೆಜ್ಜೆ ಹಾಕುತ್ತಿದೆ.
IND vs ENG Live Score: 2 ವಿಕೆಟ್ ಪತನ
ಇಂಗ್ಲೆಂಡ್ ಐದು ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡಿದೆ. ಸ್ಕೋರ್ ಕೇವಲ 35 ರನ್. ಜಾನಿ ಬೈರ್‌ಸ್ಟೋ ಮತ್ತು ಮೊಯಿನ್ ಅಲಿ ಕ್ರೀಸ್‌ನಲ್ಲಿದ್ದಾರೆ. ಇಂಗ್ಲೆಂಡ್ ಮೇಲೆ ಒತ್ತಡ ನಿರ್ಮಾಣ.
IND vs ENG Live Score: ಬಟ್ಲರ್ ಔಟ್
ಅಕ್ಷರ್ ಪಟೇಲ್ ಭಾರತಕ್ಕೆ ಮೊದಲ ಯಶಸ್ಸನ್ನು ನೀಡಿದರು. ಈ ಬೌಲರ್ ಮೂರನೇ ಓವರ್‌ನಲ್ಲಿ ದಾಳಿಗೆ ಬಂದು ಮೊದಲ ಎಸೆತದಲ್ಲಿ ಬಟ್ಲರ್ ವಿಕೆಟ್ ಪಡೆದರು. ಬಟ್ಲರ್ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸಿದರು ಆದರೆ ಚೆಂಡು ಅವರ ಬ್ಯಾಟ್‌ಗೆ ಬಡಿದು ಪಂತ್ ಕೈ ಸೇರಿತು. ಬಟ್ಲರ್ 23 ರನ್ ಗಳಿಸಿ ಔಟಾದರು.
IND vs ENG Live Score: ಅರ್ಷದೀಪ್ ದುಬಾರಿ ಓವರ್
ಮೂರನೇ ಓವರ್‌ನಲ್ಲಿ ಇಂಗ್ಲೆಂಡ್ ಆಕ್ರಮಣಕಾರಿ ನಿಲುವು ತಾಳಿತು. ಅರ್ಷದೀಪ್ ಸಿಂಗ್ ಅವರ ಓವರ್‌ನಲ್ಲಿ ಜೋಸ್ ಬಟ್ಲರ್ 3 ಬೌಂಡರಿಗಳನ್ನು ಬಾರಿಸಿದರು. ಮೂರನೇ ಓವರ್‌ನಲ್ಲಿ 13 ರನ್‌ಗಳು ಬಂದವು.
IND vs ENG Live Score: ಇಂಗ್ಲೆಂಡ್ ಇನ್ನಿಂಗ್ಸ್ ಆರಂಭ
ಇಂಗ್ಲೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಕ್ರೀಸ್‌ನಲ್ಲಿದ್ದಾರೆ. ಅರ್ಷದೀಪ್ ಮೊದಲ ಓವರ್ ಬೌಲ್ ಮಾಡಿದರು. ಒಂದು ಓವರ್ ಮುಗಿದಾಗ ಇಂಗ್ಲೆಂಡ್ ಸ್ಕೋರ್ ಯಾವುದೇ ವಿಕೆಟ್ ನಷ್ಟವಿಲ್ಲದೆ ಐದು ರನ್ ಆಗಿದೆ.
IND vs ENG Live Score: 172 ರನ್‌ಗಳ ಗುರಿ
ಭಾರತ ಇಂಗ್ಲೆಂಡ್‌ಗೆ 172 ರನ್‌ಗಳ ಗುರಿ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ ಗರಿಷ್ಠ 57 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 47 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಇಂಗ್ಲೆಂಡ್ ಪರ ಕ್ರಿಸ್ ಜೋರ್ಡಾನ್ ಗರಿಷ್ಠ ಮೂರು ವಿಕೆಟ್ ಪಡೆದರು.
IND vs ENG Live Score: ಬ್ಯಾಕ್ ಟು ಬ್ಯಾಕ್ ವಿಕೆಟ್
ಭಾರತ ಸತತ ಎರಡು ವಿಕೆಟ್ ಕಳೆದುಕೊಂಡಿದೆ. ಸತತ ಎರಡು ಸಿಕ್ಸರ್ ಬಾರಿಸಿದ್ದ ಪಾಂಡ್ಯ ಮೂರನೇ ಸಿಕ್ಸರ್ ಬಾರಿಸುವ ಯತ್ನದಲ್ಲಿ ಔಟಾದರೆ, ನಂತರ ಬಂದ ಶಿವಂ ದುಬೆ ಮೊದಲ ಎಸೆತದಲ್ಲೇ ಔಟಾದರು.
IND vs ENG Live Score: ಸೂರ್ಯ ಔಟ್
16ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್ ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡಿದರು. 36 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 47 ರನ್ ಗಳಿಸಿ ಸೂರ್ಯ ಅರ್ಧಶತಕ ವಂಚಿತರಾದರು. 16 ಓವರ್‌ಗಳ ನಂತರ ಭಾರತದ ಸ್ಕೋರ್ ನಾಲ್ಕು ವಿಕೆಟ್‌ಗೆ 126 ರನ್ ಆಗಿದೆ. ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದಾರೆ.
IND vs ENG Live Score: ರೋಹಿತ್ ಔಟ್
ಆದಿಲ್ ರಶೀದ್ ರೋಹಿತ್ ಶರ್ಮಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. 39 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 57 ರನ್ ಗಳಿಸಿ ರೋಹಿತ್ ಔಟಾದರು. ಸೂರ್ಯಕುಮಾರ್ ಜತೆ 73 ರನ್‌ಗಳ ಜತೆಯಾಟವಾಡಿದರು. ಸದ್ಯ ಹಾರ್ದಿಕ್ ಪಾಂಡ್ಯ ಸೂರ್ಯ ಬೆಂಬಲಕ್ಕೆ ಬಂದಿದ್ದಾರೆ.
IND vs ENG Live Score: ರೋಹಿತ್ ಅರ್ಧಶತಕ
ಸ್ಯಾಮ್ ಕರನ್ ಬೌಲ್ ಮಾಡಿದ 13ನೇ ಓವರ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ರೋಹಿತ್ ಶರ್ಮಾ ತಮ್ಮ ಅರ್ಧಶತಕ ಪೂರೈಸಿದರು. ಇದರೊಂದಿಗೆ ಭಾರತವು ಶತಕದ ಗಡಿ ದಾಟಿದೆ.
IND vs ENG Live Score: 11 ಓವರ್ ಪೂರ್ಣ
ರೋಹಿತ್ ಶರ್ಮಾ 48 ರನ್ ಗಳಿಸಿ ಕ್ರೀಸ್‌ನಲ್ಲಿ ಆಡುತ್ತಿದ್ದಾರೆ. ರೋಹಿತ್ ಅರ್ಧಶತಕಕ್ಕೆ 2 ರನ್‌ಗಳ ಅಂತರದಲ್ಲಿದ್ದಾರೆ. 11 ಓವರ್‌ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ.
IND vs ENG Live Score: ಮತ್ತೆ ಪಂದ್ಯ ಆರಂಭ
ಮತ್ತೆ ಪಂದ್ಯ ಆರಂಭವಾಗಿದೆ. ಭಾರತ ಎಂಟು ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 65 ರನ್ ಗಳಿಸಿ ಆಟ ಆರಂಭಿಸಿತು. ಸೂರ್ಯಕುಮಾರ್ ಮತ್ತು ರೋಹಿತ್ ಕ್ರೀಸ್‌ನಲ್ಲಿದ್ದಾರೆ. ಮಳೆಯ ಅಡಚಣೆಯ ನಂತರ ಲಿಯಾಮ್ ಲಿವಿಂಗ್ಸ್ಟೋನ್ ಒಂಬತ್ತನೇ ಓವರ್ ಬೌಲ್ ಮಾಡಿದರು. ಈ ಓವರ್‌ನಲ್ಲಿ ನಾಲ್ಕು ರನ್‌ಗಳು ಬಂದವು. ಒಂಬತ್ತು ಓವರ್‌ಗಳ ನಂತರ ಭಾರತದ ಸ್ಕೋರ್ ಎರಡು ವಿಕೆಟ್‌ಗೆ 69 ರನ್ ಆಗಿದೆ. ರೋಹಿತ್ 39 ರನ್ ಮತ್ತು ಸೂರ್ಯ 15 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
IND vs ENG Live Score: 11:10 ಕ್ಕೆ ಪಂದ್ಯ ಆರಂಭ
ಪಂದ್ಯ ರಾತ್ರಿ 11:10ಕ್ಕೆ ಪುನರಾರಂಭವಾಗಲಿದೆ. ಮಳೆಯಿಂದಾಗಿ ಸುಮಾರು ಒಂದು ಗಂಟೆ ಆಟಕ್ಕೆ ಅಡ್ಡಿಯಾಯಿತು. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಳ್ಳುವ ವೇಳೆಗೆ ಭಾರತ ಎಂಟು ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 65 ರನ್ ಗಳಿಸಿತ್ತು. ಸದ್ಯ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅಜೇಯರಾಗಿ ಕ್ರೀಸ್‌ನಲ್ಲಿದ್ದಾರೆ.
IND vs ENG Live Score: ಪವರ್ ಪ್ಲೇ ಅಂತ್ಯ
6 ಓವರ್‌ಗಳಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 55 ರನ್ ಗಳಿಸಿದೆ. ಸದ್ಯ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಕ್ರೀಸ್‌ನಲ್ಲಿದ್ದಾರೆ. ರೋಹಿತ್ 35 ರನ್ ಮತ್ತು ಸೂರ್ಯಕುಮಾರ್ 5 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
IND vs ENG Live Score: ಪಂತ್ ಔಟ್
ಆರನೇ ಓವರ್‌ನಲ್ಲಿ ಭಾರತ ಎರಡನೇ ವಿಕೆಟ್ ಕಳೆದುಕೊಂಡಿದೆ. ಸ್ಯಾಮ್ ಕರನ್ ರಿಷಬ್ ಪಂತ್ ಅವರ ವಿಕೆಟ್ ಪಡೆದರು. ಪಂತ್ ನಾಲ್ಕು ರನ್ ಬಾರಿಸಿ ಔಟಾದರು. ಸದ್ಯ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಕ್ರೀಸ್‌ನಲ್ಲಿದ್ದಾರೆ. ಟೀಂ ಇಂಡಿಯಾ ಸ್ಕೋರ್ ಎರಡು ವಿಕೆಟ್‌ಗೆ 46 ರನ್ ಆಗಿದೆ. ರೋಹಿತ್ 26 ರನ್ ಮತ್ತು ಸೂರ್ಯಕುಮಾರ್ 5 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
IND vs ENG Live Score: ಐದು ಓವರ್ ಮುಕ್ತಾಯ
ಐದು ಓವರ್‌ಗಳ ಆಟ ಮುಗಿದಿದೆ. ಭಾರತ ಒಂದು ವಿಕೆಟ್ ಕಳೆದುಕೊಂಡು 40 ರನ್ ಗಳಿಸಿದೆ. ಸದ್ಯ ರೋಹಿತ್ ಶರ್ಮಾ 17 ಎಸೆತಗಳಲ್ಲಿ 25 ರನ್ ಹಾಗೂ ರಿಷಬ್ ಪಂತ್ 4 ಎಸೆತಗಳಲ್ಲಿ 4 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
IND vs ENG Live Score: ಕೊಹ್ಲಿ ಮತ್ತೆ ವಿಫಲ, ಭಾರತ 19/1
ಮೂರನೇ ಓವರ್‌ನಲ್ಲಿ ಭಾರತ ಮೊದಲ ವಿಕೆಟ್ ಕಳೆದುಕೊಂಡಿದೆ. ರೀಸ್ ಟೋಪ್ಲಿ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಇಡೀ ಟೂರ್ನಿಯಲ್ಲಿ ವಿರಾಟ್ ದಾಖಲೆ ತೀರಾ ಕಳಪೆ ಪ್ರದರ್ಶನ ನೀಡಿದ್ದಾರೆ. ವಿರಾಟ್ ಒಂಬತ್ತು ಎಸೆತಗಳಲ್ಲಿ ಒಂಬತ್ತು ರನ್ ಗಳಿಸಿ ಔಟಾದರು. ಸದ್ಯ ನಾಯಕ ರೋಹಿತ್ ಶರ್ಮಾ ಅವರನ್ನು ಬೆಂಬಲಿಸಲು ರಿಷಬ್ ಪಂತ್ ಬಂದಿದ್ದಾರೆ.
IND vs ENG Live Score: ಪಂದ್ಯ ಪ್ರಾರಂಭ
ಸೆಮಿಫೈನಲ್ ಪಂದ್ಯ ಆರಂಭವಾಗಿದೆ. ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ. ಇಂಗ್ಲೆಂಡ್ ಪರ ರೀಸ್ ಟೋಪ್ಲಿ ಮೊದಲ ಓವರ್ ಬೌಲ್ ಮಾಡಿದರು. ಮೊದಲ ಓವರ್‌ನಲ್ಲಿ ಆರು ರನ್‌ಗಳು ಬಂದವು.
IND vs ENG Live Score: ಇಂಗ್ಲೆಂಡ್ ತಂಡ
ಫಿಲ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ.
IND vs ENG Live Score: ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್.
IND vs ENG Live Score: ಟಾಸ್ ಗೆದ್ದ ಇಂಗ್ಲೆಂಡ್
ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.
IND vs ENG Live Score: 9 ಗಂಟೆಗೆ ಮುಂದೂಡಿಕೆ
ರಾತ್ರಿ 8.30ಕ್ಕೆ ಅಂಪೈರ್‌ಗಳು ಮೈದಾನ ಪರಿಶೀಲನೆ ನಡೆಸಲಿದ್ದಾರೆ ಎಂಬ ಮಾಹಿತಿ ಈ ಹಿಂದೆಯೇ ಬಂದಿತ್ತು. ಇದೀಗ ಈ ಮಾಹಿತಿ ಹೊರಬಿದ್ದಿದ್ದು, ರಾತ್ರಿ ಒಂಬತ್ತರ ವೇಳೆಗೆ ಅಂಪೈರ್‌ಗಳು ಮೈದಾನವನ್ನು ಪರಿಶೀಲಿಸಲಿದ್ದಾರೆ. ಇದಾದ ಬಳಿಕ ಟಾಸ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
IND vs ENG Live Score: ಟಾಸ್ ಮುಂದೂಡಲಾಗಿದೆ
ಗಯಾನಾದಲ್ಲಿ ಮಳೆ ನಿಂತಿದೆ ಆದರೆ ಟಾಸ್ ಅನ್ನು ಸದ್ಯಕ್ಕೆ ಮುಂದೂಡಲಾಗಿದೆ. ಸ್ವಲ್ಪ ಸಮಯದ ನಂತರ ಮೈದಾನವನ್ನು ಪರಿಶೀಲಿಸಿದ ನಂತರ ಅಂಪೈರ್ ತಮ್ಮ ನಿರ್ಧಾರವನ್ನು ನೀಡುತ್ತಾರೆ.
IND vs ENG Live Score: ಮಳೆ ಮತ್ತೆ ಪ್ರಾರಂಭ
ಗಯಾನದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಈ ಬಾರಿ ಜೋರು ಮಳೆಯಾಗುವ ಲಕ್ಷಣ ಕಾಣುತ್ತಿದೆ. ಮೈದಾನದಲ್ಲಿ ಮತ್ತೆ ಕವರ್‌ಗಳನ್ನು ಅಳವಡಿಸಲಾಗಿದೆ.
IND vs ENG Live Score: ಸದ್ಯದ ಸ್ಥಿತಿ
I started with bad news , but here's some good news now
Sun is out and covers are being removed
How QUICK was that 😉😉😉#T20WorldCup #CricketTwitter #INDvENG pic.twitter.com/VHHevu9NKN
— DK (@DineshKarthik) June 27, 2024
IND vs ENG Live Score: ಕವರ್ಸ್ ತೆಗೆಯಲಾಗಿದೆ
ಗಯಾನಾದಲ್ಲಿ ಮಳೆ ಸಂಪೂರ್ಣವಾಗಿ ನಿಂತು ಬಿಸಿಲು ಕೂಡ ಬಂದಿದೆ. ಅಲ್ಲದೆ, ಹೊದಿಕೆಗಳನ್ನು ಸಹ ಮೈದಾನದಿಂದ ತೆಗೆದುಹಾಕಲಾಗಿದೆ. ಅಂದರೆ, ನಿಗದಿತ ಸಮಯಕ್ಕೆ ಪಂದ್ಯ ಪ್ರಾರಂಭವಾಗುವ ಭರವಸೆ ನಿರಂತರವಾಗಿ ಹೆಚ್ಚುತ್ತಿದೆ.
IND vs ENG Live Score: ಮೈದಾನದ ತುಂಬ ನೀರು
Not so good at the moment 😞
Rained heavily when we were on our way and it's drizzling now
But good news is , the. Sun is peeping out #IndvsEng #T20WorldCup #CricketTwitter pic.twitter.com/KMA50Y10ml
— DK (@DineshKarthik) June 27, 2024
IND vs ENG Live Score: ಮತ್ತೆ ಮಳೆ ಪ್ರಾರಂಭ
ಗಯಾನಾದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಪಂದ್ಯ ನಡೆಯುವ ಬಗ್ಗೆ ಆತಂಕ ಎದುರಾಗಿದೆ.
#WATCH | Rain lashes Guyana ahead of semi-final clash between India and England in T20 World Cup 2024 pic.twitter.com/roIl3RZcgZ
— ANI (@ANI) June 27, 2024
IND vs ENG Live Score: ಮೋಡ ಕವಿದ ವಾತಾವರಣ
ಗಯಾನಾದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಪಂದ್ಯ ಮತ್ತೊಮ್ಮೆ ಅಪಾಯದಲ್ಲಿದೆ. ಕಳೆದ 24 ಗಂಟೆಗಳಿಂದ ಮಳೆ ಸುರಿಯುತ್ತಿದ್ದು, ಮುಂಜಾನೆ ಶುಭ್ರ ಆಕಾಶವಿತ್ತು. ಇದೀಗ ಪಂದ್ಯಕ್ಕೆ 3 ಗಂಟೆ ಮುನ್ನ ಆಕಾಶದಲ್ಲಿ ಮತ್ತೊಮ್ಮೆ ಮೋಡ ಕವಿದಿದೆ.
Published On - Jun 27,2024 6:06 PM