ಭಾರತದ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ ಇನ್ನೂ ಹೇಳಿಕೊಳ್ಳುವಂತಹ ಆಟ ಆಡಿಲ್ಲ. ತಂಡವನ್ನು ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 183 ರನ್ ಗಳಿಗೆ ಇಳಿಸಲಾಯಿತು. ಉತ್ತರವಾಗಿ, ಭಾರತ ತಂಡ ಪ್ರಬಲ ಆರಂಭ ಮಾಡಿದೆ. ಮೈದಾನದಲ್ಲಿ ಇಂತಹ ಸನ್ನಿವೇಶದ ಮಧ್ಯೆ, ಇಂಗ್ಲೆಂಡಿಗೆ ಇನ್ನಷ್ಟು ಕೆಟ್ಟ ಸುದ್ದಿಗಳು ಬಂದಿವೆ. ತಂಡದ ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್ ಗಾಯದಿಂದಾಗಿ ಈ ವರ್ಷ ಪೂರ್ತಿ ಮೈದಾನದಿಂದ ಹೊರಗುಳಿಯಲ್ಲಿದ್ದಾರೆ. ಆರ್ಚರ್ ತಮ್ಮ ಬಲ ಮೊಣಕೈ ಗಾಯದಿಂದ ನರಳುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ಕಳೆದ ಕೆಲವು ತಿಂಗಳುಗಳಿಂದ ಮೈದಾನಕ್ಕಿಳಿದಿಲ್ಲ. ಈ ಕಾರಣದಿಂದಾಗಿ, ಅವರು ಭಾರತದ ವಿರುದ್ಧದ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದು ಮಾತ್ರವಲ್ಲ, ಐಸಿಸಿ ಟಿ 20 ವಿಶ್ವಕಪ್ ಮತ್ತು ಆಶಸ್ ಸರಣಿಯಿಂದಲೂ ಅವರನ್ನು ಹೊರಗಿಡಲಾಗಿದೆ.