10 ಸಾವಿರಕ್ಕೂ ಹೆಚ್ಚು ರನ್, 1697 ವಿಕೆಟ್ .. ಈ ಲೆಜೆಂಡರಿ ಕ್ರಿಕೆಟಿಗನ ಬಗ್ಗೆ ಯಾರಿಗಾದರೂ ಗೊತ್ತಾ!

ಪೀಟರ್ ಸ್ಮಿತ್ ಪ್ರಥಮ ದರ್ಜೆ ಪಂದ್ಯಗಳ ಪ್ರದರ್ಶನ ಗಮನಿಸಿದಾಗ, ಅಂಕಿಅಂಶಗಳು ಅದ್ಭುತವಾಗಿವೆ. ಅವರು 465 ಪಂದ್ಯಗಳಲ್ಲಿ 17.95 ಸರಾಸರಿಯಲ್ಲಿ 10142 ರನ್ ಗಳಿಸಿದ್ದಾರೆ.

10 ಸಾವಿರಕ್ಕೂ ಹೆಚ್ಚು ರನ್, 1697 ವಿಕೆಟ್ .. ಈ ಲೆಜೆಂಡರಿ ಕ್ರಿಕೆಟಿಗನ ಬಗ್ಗೆ ಯಾರಿಗಾದರೂ ಗೊತ್ತಾ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on:Aug 05, 2021 | 8:50 PM

10 ಸಾವಿರಕ್ಕೂ ಹೆಚ್ಚು ರನ್, 1697 ವಿಕೆಟ್ .. ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ತಮ್ಮದೇ ಆದ ಮನ್ನಣೆಯನ್ನು ಗಳಿಸಿದರು. ಅನೇಕ ಅದ್ಭುತ ದಾಖಲೆಗಳನ್ನು ಲೂಟಿ ಮಾಡಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಇಂಗ್ಲೆಂಡ್ ಕ್ರಿಕೆಟಿಗ ಪೀಟರ್ ಸ್ಮಿತ್. ಈ ದಿಗ್ಗಜ ಕ್ರಿಕೆಟಿಗ ದಾಖಲಿಸಿದ ದಾಖಲೆಗಳನ್ನು ಮತ್ತೊಮ್ಮೆ ಸ್ಮರಿಸೋಣ. ವಾಸ್ತವವಾಗಿ, ಪೀಟರ್ ಸ್ಮಿತ್ ಇಂಗ್ಲೆಂಡ್ ಪರ ಕೇವಲ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಹೆಸರು ಮಾಡಿದರು.

1933 ರಲ್ಲಿ ಯಾರೋ ಒಬ್ಬರು ನೀನು ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದೀಯಾ ಎಂದು ಪೀಟರ್ ಸ್ಮಿತ್‌ಗೆ ತಪ್ಪು ಮಾಹಿತಿ ನೀಡಿದ್ದರು. ಆದರೆ ಅದು ಸುಳ್ಳಾಗಿತ್ತು. ಆದಾಗ್ಯೂ, ಸಂದೇಶ ಸ್ವೀಕರಿಸಿದ 13 ವರ್ಷಗಳ ನಂತರ ಪೀಟರ್ ಸ್ಮಿತ್ ಇಂಗ್ಲೆಂಡ್‌ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅವರು ನಾಲ್ಕು ಟೆಸ್ಟ್ ಆಡಿ ಕೇವಲ ಮೂರು ವಿಕೆಟ್ ಪಡೆದರು.

10 ಸಾವಿರಕ್ಕೂ ಹೆಚ್ಚು ರನ್, 1697 ವಿಕೆಟ್ ಪೀಟರ್ ಸ್ಮಿತ್ ಪ್ರಥಮ ದರ್ಜೆ ಪಂದ್ಯಗಳ ಪ್ರದರ್ಶನ ಗಮನಿಸಿದಾಗ, ಅಂಕಿಅಂಶಗಳು ಅದ್ಭುತವಾಗಿವೆ. ಅವರು 465 ಪಂದ್ಯಗಳಲ್ಲಿ 17.95 ಸರಾಸರಿಯಲ್ಲಿ 10142 ರನ್ ಗಳಿಸಿದ್ದಾರೆ. ಇದರಲ್ಲಿ ಎಂಟು ಶತಕಗಳು ಮತ್ತು 32 ಅರ್ಧ ಶತಕಗಳು ಸೇರಿವೆ. ಗರಿಷ್ಠ ಸ್ಕೋರ್ 163 ರನ್. ಬೌಲಿಂಗ್ ವಿಷಯಕ್ಕೆ ಬಂದರೆ .. ಅವರು 1697 ವಿಕೆಟ್ ಪಡೆದಿದ್ದಾರೆ. ಜೊತೆಗೆ 122 ಬಾರಿ ಐದು ಅಥವಾ ಅದಕ್ಕೂ ಹೆಚ್ಚಿನ ವಿಕೆಟ್ ಪಡೆದಿದ್ದಾರೆ.

Published On - 8:49 pm, Thu, 5 August 21

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!