ಒಂದೇ ತಂಡವಾಗಿ ಕಣಕ್ಕಿಳಿಯಲಿದೆ ಇಂಗ್ಲೆಂಡ್-ಸ್ಕಾಟ್ಲೆಂಡ್

|

Updated on: Aug 13, 2024 | 10:10 AM

ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲಿ 6 ತಂಡಗಳಿಗೆ ಅವಕಾಶ ನೀಡಲು ಐಸಿಸಿ ಚಿಂತಿಸಿದೆ. ಆದರೆ 2028ರ ವೇಳೆಗೆ ಈ ತಂಡಗಳ ಸಂಖ್ಯೆಯು ಹೆಚ್ಚಾದರೂ ಅಚ್ಚರಿಪಡಬೇಕಿಲ್ಲ. ಹಾಗೆಯೇ ಒಲಿಂಪಿಕ್ಸ್​ನಲ್ಲಿ ಟಿ20 ಮಾದರಿಯ ಕ್ರಿಕೆಟ್ ಆಯೋಜಿಸುವಂತೆಯೂ ಐಸಿಸಿ ಸಲಹೆ ನೀಡಿದೆ. ಅದರಂತೆ ಲಾಸ್ ಏಂಜಲೀಸ್ 2028ರ ಕ್ರೀಡಾಕೂಟದಲ್ಲಿ ಟಿ20 ಕ್ರಿಕೆಟ್​ ಅನ್ನು ಎದುರು ನೋಡಬಹುದು.

ಒಂದೇ ತಂಡವಾಗಿ ಕಣಕ್ಕಿಳಿಯಲಿದೆ ಇಂಗ್ಲೆಂಡ್-ಸ್ಕಾಟ್ಲೆಂಡ್
England
Follow us on

ಲಾಸ್ ಏಂಜಲೀಸ್ ಒಲಿಂಪಿಕ್ಸ್​ಗೆ ಕ್ರಿಕೆಟ್ ಸೇರ್ಪಡೆಯಾಗಿರುವುದು ಗೊತ್ತೇ ಇದೆ. 2028 ರಲ್ಲಿ ನಡೆಯಲಿರುವ ಈ ವಿಶ್ವ ಕ್ರೀಡಾಕೂಟದಲ್ಲಿ 6 ಕ್ರಿಕೆಟ್ ತಂಡಗಳು ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಆದರೆ ಈ ಆರು ತಂಡಗಳಲ್ಲಿ ಇಂಗ್ಲೆಂಡ್-ಸ್ಕಾಟ್ಲೆಂಡ್ ಒಂದೇ ತಂಡವಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಇಂಗ್ಲೆಂಡ್-ಸ್ಕಾಟ್ಲೆಂಡ್ ದೇಶಗಳು ಒಲಿಂಪಿಕ್ಸ್​ನಲ್ಲಿ ಗ್ರೇಟ್ ಬ್ರಿಟನ್ ಹೆಸರಿನಲ್ಲಿ ಕಣಕ್ಕಿಳಿಯುತ್ತವೆ. ಇದೀಗ ಕ್ರಿಕೆಟ್ ಸೇರ್ಪಡೆಯಿಂದಾಗಿ ಉಭಯ ದೇಶಗಳು ಒಂದೇ ತಂಡವಾಗಿ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಲಾಸ್ ಏಂಜಲೀಸ್ ಒಲಿಂಪಿಕ್ಸ್​ಗೆ ಇಂಗ್ಲೆಂಡ್ ಕ್ರಿಕೆಟ್ ತಂಡವು ಅರ್ಹತೆ ಪಡೆದುಕೊಂಡರೆ, ಗ್ರೇಟ್ ಬ್ರಿಟನ್ ಹೆಸರಿನಲ್ಲಿ ಆಡುವುದನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಖಚಿತಪಡಿಸಿದೆ. ಹೀಗಾಗಿ ಸ್ಕಾಟ್ಲೆಂಡ್ ಆಟಗಾರರು ಕೂಡ ಇಂಗ್ಲೆಂಡ್ ತಂಡದೊಡನೆ ಕೈ ಜೋಡಿಸುವುದನ್ನು ಎದುರು ನೋಡಬಹುದು.

ಇದು ಕೇವಲ ಪುರುಷರ ಕ್ರಿಕೆಟ್‌ ತಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಕ್ರಮವು ಮಹಿಳಾ ಕ್ರಿಕೆಟ್ ತಂಡಕ್ಕೂ ಅನ್ವಯಿಸುತ್ತದೆ. ಇಸಿಬಿ ಮತ್ತು ಕ್ರಿಕೆಟ್ ಸ್ಕಾಟ್ಲೆಂಡ್‌  ಸಂಸ್ಥೆಗಳು ಈ ವಿಷಯದ ಬಗ್ಗೆ ತಮ್ಮ ಪ್ರಾಥಮಿಕ ಮಾತುಕತೆಗಳನ್ನು ಪ್ರಾರಂಭಿಸಿವೆ. ಆಟಗಾರರು ಮಾತ್ರವಲ್ಲದೆ, ಸಹಾಯಕ ಸಿಬ್ಬಂದಿಯ ಆಯ್ಕೆ ಕೂಡ ಇಲ್ಲಿ ಮುಖ್ಯವಾಗುತ್ತದೆ.

ECB ಮತ್ತು CS ಚರ್ಚೆ:

“ಲಾಸ್ ಏಂಜಲೀಸ್ ಒಲಿಂಪಿಕ್ಸ್​ ನಾಲ್ಕು ವರ್ಷಗಳಷ್ಟು ದೂರದಲ್ಲಿದೆ. ಇದು ಆರಂಭಿಕ ಹಂತವಷ್ಟೇ. ಆದರೆ ನಾವು ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಕ್ರಿಕೆಟ್ ಸ್ಕಾಟ್ಲೆಂಡ್‌ನೊಂದಿಗೆ ಮಾತನಾಡುತ್ತಿದ್ದೇವೆ” ಎಂದು ಇಸಿಬಿ ವಕ್ತಾರರು ಇಎಸ್‌ಪಿಎನ್‌ಕ್ರಿಕ್‌ಇನ್‌ಫೋಗೆ ತಿಳಿಸಿದ್ದಾರೆ.

2026 ಮತ್ತು 2030 ರಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಐಸಿಸಿ ಟಿ20 ವಿಶ್ವಕಪ್ ಅನ್ನು ಆತಿಥ್ಯ ವಹಿಸಲಿರುವ ಇಂಗ್ಲಿಷ್ ಕ್ರಿಕೆಟ್‌ಗೆ ಇದು ಒಳ್ಳೆಯ ಸುದ್ದಿ. ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಎರಡೂ ಒಟ್ಟಿಗೆ ಕಣಕ್ಕಿಳಿಯುವುದರಿಂದ ಗ್ರೇಟ್ ಬ್ರಿಟನ್ ನಡುವಣ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಇಸಿಬಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: Kagiso Rabada: ಜಾಕ್ಸ್​ ಕಾಲಿಸ್ ದಾಖಲೆ ಮುರಿದ ಕಗಿಸೊ ರಬಾಡ

ಅದರಂತೆ ಅಮೆರಿಕದಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್​ನಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳು ಗ್ರೇಟ್ ಬ್ರಿಟನ್ ಹೆಸರಿನಲ್ಲಿ ಜೊತೆಯಾಗಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಟಿ20 ವಿಶ್ವಕಪ್​ಗೆ ಆತಿಥ್ಯ:

2030 ಟಿ20 ವಿಶ್ವಕಪ್​ಗೆ ಇಂಗ್ಲೆಂಡ್ ಹಾಗೂ ಐರ್ಲೆಂಡ್ ದೇಶಗಳು ಆತಿಥ್ಯವಹಿಸಲಿದೆ. 2026ರ ಆತಿಥ್ಯದ ಹಕ್ಕು ಭಾರತ ಮತ್ತು ಶ್ರೀಲಂಕಾ ದೇಶಗಳ ಪಾಲಾಗಿದ್ದು, ಹಾಗೆಯೇ 2028ರ ಟಿ20 ವಿಶ್ವಕಪ್ ನ್ಯೂಝಿಲೆಂಡ್-ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಇನ್ನು 2026ರ ಮಹಿಳಾ ಮತ್ತು 2030ರ ಪುರುಷರ ಟಿ20 ವಿಶ್ವಕಪ್ ಆತಿಥ್ಯದ ಹಕ್ಕುಗಳನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತನ್ನದಾಗಿಸಿಕೊಂಡಿದೆ.