- Kannada News Photo gallery Cricket photos Rai Benjamin, son of former West Indies fast bowler Winston Benjamin
ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಕ್ರಿಕೆಟಿಗನ ಪುತ್ರ..!
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ 400 ಮೀ ಹರ್ಡಲ್ಸ್ ರೇಸ್ನಲ್ಲಿ ಅಮೆರಿಕದ ರಾಯ್ ಬೆಂಜಮಿನ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಹಾಗೆಯೇ 4x400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅಮೆರಿಕ ತಂಡದ ಭಾಗವಾಗಿದ್ದಾರೆ. ಈ ಮೂಲಕ ಪ್ಯಾರಿಸ್ ಅಂಗಳದಲ್ಲಿ ಎರಡು ಚಿನ್ನದ ಪದಕ ಗೆದ್ದಿರುವ ಬೆಂಜಮಿನ್ ಮಾಜಿ ಕ್ರಿಕೆಟಿಗ ಸುಪುತ್ರ ಎಂಬುದು ವಿಶೇಷ.
Updated on: Aug 12, 2024 | 2:33 PM

ಅಪ್ಪನ ಹಾದಿಯಲ್ಲೇ ಮಕ್ಕಳು ಸಾಗುವುದು ಸಾಮಾನ್ಯ. ಅದರಲ್ಲೂ ತಂದೆಯ ವೃತ್ತಿಜೀವನವನ್ನೇ ಮುಂದುವರೆಸಿದ ಮಕ್ಕಳ ಹಲವು ಉದಾಹರಣೆ ನಮ್ಮ ಕಣ್ಮುಂದೆ ಇದೆ. ಆದರೆ ರಾಯ್ ಬೆಂಜಮಿನ್ ವಿಷಯದಲ್ಲಿ ಆಗಿಲ್ಲ. ಬದಲಾಗಿ ಇಲ್ಲಿ ಅಪ್ಪ ಕ್ರಿಕೆಟರ್ ಆದರೆ, ಮಗ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತ.

ಹೌದು, ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ 400 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಅಮೆರಿಕದ ರಾಯ್ ಬೆಂಜಮಿನ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಒಲಿಂಪಿಕ್ಸ್ನಲ್ಲಿ ಬಂಗಾರದ ಪದಕಕ್ಕೆ ಕೊರೊಳೊಡ್ಡಿರುವ ರಾಯ್ ಮಾಜಿ ಕ್ರಿಕೆಟಿಗ ವಿನ್‌ಸ್ಟನ್ ಬೆಂಜಮಿನ್ ಅವರ ಮಗ ಎಂಬುದು ವಿಶೇಷ.

ವೆಸ್ಟ್ ಇಂಡೀಸ್ ಮಾಜಿ ವೇಗದ ಬೌಲರ್ ವಿನ್‌ಸ್ಟನ್ ಬೆಂಜಮಿನ್ ಅವರ ಮಗ ರಾಯ್ ಬೆಂಜಮಿನ್. ವಿನ್‌ಸ್ಟನ್ ಅವರು 1986 ಮತ್ತು 1995 ರ ನಡುವೆ ವಿಂಡೀಸ್ ಪರ 21 ಟೆಸ್ಟ್ ಮತ್ತು 85 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 161 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ತಂದೆ ಕ್ರಿಕೆಟ್ನಲ್ಲಿ ಹೆಸರು ಮಾಡಿದ್ದರೂ ರಾಯ್ ಅವರನ್ನು ಸೆಳೆದಿದ್ದು ಅಥ್ಲೆಟಿಕ್ಸ್. ಅಮೆರಿಕದಲ್ಲಿ ಜನಿಸಿದ್ದರಿಂದ ಅಲ್ಲಿನ ಪೌರತ್ವ ಹೊಂದಿದ್ದ ರಾಯ್ ಬೆಂಜಮಿನ್ ತಂದೆಯ ಹಾದಿಯನ್ನು ತುಳಿಯದೇ ಹೊಸ ಸಾಧನೆಗಾಗಿ ಹಾತೊರೆಯುತ್ತಿದ್ದರು. ಇದಕ್ಕಾಗಿ ಕಠಿಣ ಅಭ್ಯಾಸದಲ್ಲೂ ತೊಡಗಿಸಿಕೊಂಡಿದ್ದರು.

ಅದರಂತೆ ಟೋಕಿಯೋ ಒಲಿಂಪಿಕ್ಸ್ ಮೂಲಕ ಯುಎಸ್ಎ ಪರ ಕಣಕ್ಕಿಳಿದಿದ್ದ ರಾಯ್ ಬೆಂಜಮಿನ್ ಪುರುಷರ 400 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಆದರೆ ಈ ಬಾರಿ ಸಕಲ ರೀತಿಯಲ್ಲೂ ಸಿದ್ಧರಾಗಿ ಆಗಮಿಸಿದ್ದ ರಾಯ್ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಕ್ರಿಕೆಟಿಗನ ಮಗ ಎನಿಸಿಕೊಂಡಿದ್ದಾರೆ.
