AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಕ್ರಿಕೆಟಿಗನ ಪುತ್ರ..!

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನ ಪುರುಷರ 400 ಮೀ ಹರ್ಡಲ್ಸ್ ರೇಸ್​ನಲ್ಲಿ ಅಮೆರಿಕದ ರಾಯ್ ಬೆಂಜಮಿನ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಹಾಗೆಯೇ 4x400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅಮೆರಿಕ ತಂಡದ ಭಾಗವಾಗಿದ್ದಾರೆ. ಈ ಮೂಲಕ ಪ್ಯಾರಿಸ್ ಅಂಗಳದಲ್ಲಿ ಎರಡು ಚಿನ್ನದ ಪದಕ ಗೆದ್ದಿರುವ ಬೆಂಜಮಿನ್ ಮಾಜಿ ಕ್ರಿಕೆಟಿಗ ಸುಪುತ್ರ ಎಂಬುದು ವಿಶೇಷ.

ಝಾಹಿರ್ ಯೂಸುಫ್
|

Updated on: Aug 12, 2024 | 2:33 PM

Share
ಅಪ್ಪನ ಹಾದಿಯಲ್ಲೇ ಮಕ್ಕಳು ಸಾಗುವುದು ಸಾಮಾನ್ಯ. ಅದರಲ್ಲೂ ತಂದೆಯ ವೃತ್ತಿಜೀವನವನ್ನೇ ಮುಂದುವರೆಸಿದ ಮಕ್ಕಳ ಹಲವು ಉದಾಹರಣೆ ನಮ್ಮ ಕಣ್ಮುಂದೆ ಇದೆ. ಆದರೆ ರಾಯ್ ಬೆಂಜಮಿನ್ ವಿಷಯದಲ್ಲಿ ಆಗಿಲ್ಲ. ಬದಲಾಗಿ ಇಲ್ಲಿ ಅಪ್ಪ ಕ್ರಿಕೆಟರ್ ಆದರೆ, ಮಗ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ವಿಜೇತ.

1 / 5
ಹೌದು, ಪ್ಯಾರಿಸ್ ಒಲಿಂಪಿಕ್ಸ್​ನ ಪುರುಷರ 400 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಅಮೆರಿಕದ ರಾಯ್ ಬೆಂಜಮಿನ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಒಲಿಂಪಿಕ್ಸ್​ನಲ್ಲಿ ಬಂಗಾರದ ಪದಕಕ್ಕೆ ಕೊರೊಳೊಡ್ಡಿರುವ ರಾಯ್ ಮಾಜಿ ಕ್ರಿಕೆಟಿಗ ವಿನ್​ಸ್ಟನ್ ಬೆಂಜಮಿನ್ ಅವರ ಮಗ ಎಂಬುದು ವಿಶೇಷ.

2 / 5
ವೆಸ್ಟ್ ಇಂಡೀಸ್ ಮಾಜಿ ವೇಗದ ಬೌಲರ್ ವಿನ್‌ಸ್ಟನ್ ಬೆಂಜಮಿನ್ ಅವರ ಮಗ ರಾಯ್ ಬೆಂಜಮಿನ್. ವಿನ್‌ಸ್ಟನ್ ಅವರು 1986 ಮತ್ತು 1995 ರ ನಡುವೆ ವಿಂಡೀಸ್ ಪರ 21 ಟೆಸ್ಟ್ ಮತ್ತು 85 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 161 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

3 / 5
ತಂದೆ ಕ್ರಿಕೆಟ್​ನಲ್ಲಿ ಹೆಸರು ಮಾಡಿದ್ದರೂ ರಾಯ್ ಅವರನ್ನು ಸೆಳೆದಿದ್ದು ಅಥ್ಲೆಟಿಕ್ಸ್. ಅಮೆರಿಕದಲ್ಲಿ ಜನಿಸಿದ್ದರಿಂದ ಅಲ್ಲಿನ ಪೌರತ್ವ ಹೊಂದಿದ್ದ ರಾಯ್ ಬೆಂಜಮಿನ್ ತಂದೆಯ ಹಾದಿಯನ್ನು ತುಳಿಯದೇ ಹೊಸ ಸಾಧನೆಗಾಗಿ ಹಾತೊರೆಯುತ್ತಿದ್ದರು. ಇದಕ್ಕಾಗಿ ಕಠಿಣ ಅಭ್ಯಾಸದಲ್ಲೂ ತೊಡಗಿಸಿಕೊಂಡಿದ್ದರು.

4 / 5
ಅದರಂತೆ ಟೋಕಿಯೋ ಒಲಿಂಪಿಕ್ಸ್ ಮೂಲಕ ಯುಎಸ್​ಎ ಪರ ಕಣಕ್ಕಿಳಿದಿದ್ದ ರಾಯ್ ಬೆಂಜಮಿನ್ ಪುರುಷರ 400 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಆದರೆ ಈ ಬಾರಿ ಸಕಲ ರೀತಿಯಲ್ಲೂ ಸಿದ್ಧರಾಗಿ ಆಗಮಿಸಿದ್ದ ರಾಯ್ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಕ್ರಿಕೆಟಿಗನ ಮಗ ಎನಿಸಿಕೊಂಡಿದ್ದಾರೆ.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ