ಏಕದಿನ ವಿಶ್ವಕಪ್ 2023ರ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಮೊದಲು ಬೌಲಿಂಗ್ ಮಾಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಜೋ ರೂಟ್ (77) ಅವರ ಅರ್ಧಶತಕದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 282 ರನ್ ಕಲೆಹಾಕಿತು. 283 ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ಪರ ಡೆವೊನ್ ಕಾನ್ವೆ (152) ಹಾಗೂ ರಚಿನ್ ರವೀಂದ್ರ (123) ಅಜೇಯ ಶತಕ ಸಿಡಿಸಿ ಮಿಂಚಿದರು. ಅಷ್ಟೇ ಅಲ್ಲದೆ 36.2 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸುವ ಮೂಲಕ ನ್ಯೂಝಿಲೆಂಡ್ ತಂಡಕ್ಕೆ 9 ವಿಕೆಟ್ಗಳ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ವಿರುದ್ಧ 2019 ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡನ್ನು ನ್ಯೂಝಿಲೆಂಡ್ ತೀರಿಸಿಕೊಂಡಿದೆ.
ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯೀನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್.
ಇದನ್ನೂ ಓದಿ: ICC World Cup 2023 Schedule: ಏಕದಿನ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮ್ಯಾಟ್ ಹೆನ್ರಿ, ಮಿಚೆಲ್ ಸ್ಯಾಂಟ್ನರ್, ಜೇಮ್ಸ್ ನೀಶಮ್, ಟ್ರೆಂಟ್ ಬೌಲ್ಟ್.
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್ ಮತ್ತು ಕ್ರಿಸ್ ವೋಕ್ಸ್.
ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ನ್ಯೂಝಿಲೆಂಡ್.
36.2 ಓವರ್ಗಳಲ್ಲಿ 283 ರನ್ಗಳ ಟಾರ್ಗೆಟ್ ಅನ್ನು ಚೇಸ್ ಮಾಡಿದ ಕಿವೀಸ್ ಪಡೆ.
ನ್ಯೂಝಿಲೆಂಡ್ ಪರ ಅಜೇಯ ಶತಕ ಸಿಡಿಸಿದ ಡೆವೊನ್ ಕಾನ್ವೆ (152) ಹಾಗೂ ರಚಿನ್ ರವೀಂದ್ರ (123)
ನ್ಯೂಝಿಲೆಂಡ್ ತಂಡಕ್ಕೆ 9 ವಿಕೆಟ್ಗಳ ಭರ್ಜರಿ ಜಯ
ಸ್ಯಾಮ್ ಕರನ್ ಎಸೆದ 35ನೇ ಓವರ್ನಲ್ಲಿ 20 ರನ್ ಚಚ್ಚಿದ ಡೆವೊನ್ ಕಾನ್ವೆ.
ಮೊದಲ ಎಸೆತದಲ್ಲಿ ಸಿಕ್ಸ್, ಎರಡನೇ ಎಸೆತದಲ್ಲಿ ಫೋರ್.
3ನೇ,4ನೇ ಮತ್ತು 5ನೇ ಎಸೆತಗಳಲ್ಲಿ ಎರಡೆರಡು ರನ್.
ಕೊನೆಯ ಎಸೆತದಲ್ಲಿ ಫೋರ್.
34 ಓವರ್ಗಳ ಮುಕ್ತಾಯದ ವೇಳೆಗೆ 1 ವಿಕೆಟ್ ನಷ್ಟಕ್ಕೆ 245 ರನ್ ಕಲೆಹಾಕಿದ ನ್ಯೂಝಿಲೆಂಡ್.
ನ್ಯೂಝಿಲೆಂಡ್ ಪರ ಶತಕ ಸಿಡಿಸಿ ಅಬ್ಬರಿಸಿದ ರಚಿನ್ ರವೀಂದ್ರ (117) ಹಾಗೂ ಡೆವೊನ್ ಕಾನ್ವೆ (120)
ಕಿವೀಸ್ ಗೆಲುವಿಗೆ ಕೇವಲ 38 ರನ್ಗಳ ಅವಶ್ಯಕತೆ.
ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಚಿನ್ ರವೀಂದ್ರ 82 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.
ಏಕದಿನ ವಿಶ್ವಕಪ್ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ವಿಶೇಷ ಸಾಧಕರ ಪಟ್ಟಿಗೆ ರಚಿನ್ ಹೆಸರು ಸೇರ್ಪಡೆ.
27 ಓವರ್ಗಳ ಮುಕ್ತಾಯದ ವೇಳೆಗೆ 200 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಡೆವೊನ್ ಕಾನ್ವೆ (106) ಹಾಗೂ ರಚಿನ್ ರವೀಂದ್ರ (94) ಬ್ಯಾಟಿಂಗ್.
ನ್ಯೂಝಿಲೆಂಡ್ ತಂಡಕ್ಕೆ 23 ಓವರ್ಗಳಲ್ಲಿ ಕೇವಲ 79 ರನ್ಗಳ ಅವಶ್ಯಕತೆ
83 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ ಶತಕ ಪೂರೈಸಿದ ಡೆವೊನ್ ಕಾನ್ವೆ
ಇದು ಈ ಬಾರಿಯ ಏಕದಿನ ವಿಶ್ವಕಪ್ನ ಮೊದಲ ಸೆಂಚುರಿ.
ಕ್ರೀಸ್ನಲ್ಲಿ ಕಾನ್ವೆ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
ಮಾರ್ಕ್ ವುಡ್ ಎಸೆದ 25ನೇ ಓವರ್ನ 4ನೇ ಎಸೆತವನ್ನು ಲೆಗ್ ಸೈಡ್ನತ್ತ ಬಾರಿಸಿದ ಕಾನ್ವೆ…ಫೋರ್.
25 ಓವರ್ಗಳ ಮುಕ್ತಾಯದ ವೇಳೆಗೆ 187 ರನ್ ಕಲೆಹಾಕಿದ ನ್ಯೂಝಿಲೆಂಡ್.
78 ಎಸೆತಗಳಲ್ಲಿ 98 ರನ್ ಬಾರಿಸಿದ ಡೆವೊನ್ ಕಾನ್ವೆ.
71 ಎಸೆತಗಳಲ್ಲಿ 87 ರನ್ ಸಿಡಿಸಿರುವ ರಚಿನ್ ರವೀಂದ್ರ.
ಕ್ರಿಸ್ ವೋಕ್ಸ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಚಿನ್ ರವೀಂದ್ರ.
ನ್ಯೂಝಿಲೆಂಡ್ ಪರ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಭರ್ಜರಿ ಬ್ಯಾಟಿಂಗ್.
ಆರಂಭಿಕ ಆಟಗಾರ ವಿಲ್ ಯಂಗ್ (0) ಔಟ್
ಆದಿಲ್ ರಶೀದ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಡೆವೊನ್ ಕಾನ್ವೆ.
ಈ ಸಿಕ್ಸ್ನೊಂದಿಗೆ 150 ರನ್ ಪೂರ್ಣಗೊಳಿಸಿದ ನ್ಯೂಝಿಲೆಂಡ್.
20 ಓವರ್ಗಳ ಮುಕ್ತಾಯದ ವೇಳೆಗೆ 154 ರನ್ ಕಲೆಹಾಕಿದ ಕಿವೀಸ್ ಪಡೆ.
ಕ್ರೀಸ್ನಲ್ಲಿ ರಚಿನ್ ರವೀಂದ್ರ (71) ಹಾಗೂ ಡೆವೊನ್ ಕಾನ್ವೆ (82 ಬ್ಯಾಟಿಂಗ್.
ನ್ಯೂಝಿಲೆಂಡ್ ಪರ ರಚಿನ್ ರವೀಂದ್ರ ಹಾಗೂ ಡೆವೊನ್ ಕಾನ್ವೆ ಉತ್ತಮ ಬ್ಯಾಟಿಂಗ್.
2ನೇ ವಿಕೆಟ್ಗೆ 135 ರನ್ಗಳ ಜೊತೆಯಾಟವಾಡಿದ ರಚಿನ್-ಕಾನ್ವೆ.
ವಿಕೆಟ್ಗಾಗಿ ಇಂಗ್ಲೆಂಡ್ ಬೌಲರ್ಗಳ ಪರದಾಟ.
17 ಓವರ್ಗಳ ಮುಕ್ತಾಯದ ವೇಳೆಗೆ 138 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ರಚಿನ್ ರವೀಂದ್ರ (67) ಹಾಗೂ ಡೆವೊನ್ ಕಾನ್ವೆ (70) ಬ್ಯಾಟಿಂಗ್.
ಪ್ರತಿ ಓವರ್ಗೆ 8+ ಸರಾಸರಿಯಲ್ಲಿ ರನ್ ಕಲೆಹಾಕಿರುವ ನ್ಯೂಝಿಲೆಂಡ್ ಬ್ಯಾಟರ್ಗಳು.
ಮೊಯೀನ್ ಅಲಿ ಎಸೆದ 12ನೇ ಓವರ್ನ 5ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರಚಿನ್ ರವೀಂದ್ರ.
ಈ ಭರ್ಜರಿ ಸಿಕ್ಸ್ನೊಂದಿಗೆ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಚಿನ್.
ಕ್ರೀಸ್ನಲ್ಲಿ ಕಾನ್ವೆ ಹಾಗೂ ರಚಿನ್ ಬ್ಯಾಟಿಂಗ್.
10 ಓವರ್ಗಳ ಮುಕ್ತಾಯದ ವೇಳೆಗೆ 81 ರನ್ ಕಲೆಹಾಕಿದ ನ್ಯೂಝಿಲೆಂಡ್
ಕ್ರೀಸ್ನಲ್ಲಿ ರಚಿನ್ ರವೀಂದ್ರ (47) ಹಾಗೂ ಡೆವೊನ್ ಕಾನ್ವೆ (33) ಬ್ಯಾಟಿಂಗ್.
ಮೊದಲ 10 ಓವರ್ಗಳಲ್ಲಿ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಇಂಗ್ಲೆಂಡ್ ಬೌಲರ್ಗಳು.
ವಿಲ್ ಯಂಗ್ (0) ಔಟ್.
ಮಾರ್ಕ್ ವುಡ್ ಎಸೆದ 7ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಚಿನ್ ರವೀಂದ್ರ.
ಈ ಸಿಕ್ಸ್ನೊಂದಿಗೆ ಅರ್ಧಶತಕ ಪೂರೈಸಿದ ನ್ಯೂಝಿಲೆಂಡ್.
ತನ್ನ ಮೊದಲ ಓವರ್ನಲ್ಲೇ 17 ರನ್ ನೀಡಿದ ಮಾರ್ಕ್ ವುಡ್.
ಕ್ರೀಸ್ನಲ್ಲಿ ರಚಿನ್ ರವೀಂದ್ರ ಹಾಗೂ ಡೆವೊನ್ ಕಾನ್ವೆ ಭರ್ಜರಿ ಬ್ಯಾಟಿಂಗ್
ಕ್ರಿಸ್ ವೋಕ್ಸ್ ಎಸೆದ 5ನೇ ಓವರ್ನ 4ನೇ ಹಾಗೂ 6ನೇ ಎಸೆತಗಳಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ರಚಿನ್ ರವೀಂದ್ರ.
ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಯುವ ದಾಂಡಿಗ,
ಕ್ರೀಸ್ನಲ್ಲಿ ಕಾನ್ವೆ ಹಾಗೂ ರವೀಂದ್ರ ಬ್ಯಾಟಿಂಗ್.
ಕ್ರಿಸ್ ವೋಕ್ಸ್ ಎಸೆದ 3ನೇ ಓವರ್ನ 4ನೇ ಹಾಗೂ 5ನೇ ಎಸೆತಗಳಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ರಚಿನ್ ರವೀಂದ್ರ.
ಕ್ರೀಸ್ನಲ್ಲಿ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್.
ಸ್ಯಾಮ್ ಕರನ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ವಿಲ್ ಯಂಗ್ (0). ಜೋಸ್ ಬಟ್ಲರ್ ಉತ್ತಮ ಡೈವಿಂಗ್ ಕ್ಯಾಚ್. ಇಂಗ್ಲೆಂಡ್ ತಂಡಕ್ಕೆ ಮೊದಲ ಯಶಸ್ಸು.
ಕ್ರೀಸ್ನಲ್ಲಿ ರಚಿನ್ ರವೀಂದ್ರ ಹಾಗೂ ಡೆವೊನ್ ಕಾನ್ವೆ ಬ್ಯಾಟಿಂಗ್.
ಮೊದಲ ಓವರ್ನಲ್ಲೇ 10 ರನ್ ಕಲೆಹಾಕಿದ ನ್ಯೂಝಿಲೆಂಡ್.
ಕ್ರೀಸ್ ವೊಕ್ಸ್ ಮೊದಲ ಓವರ್ನಲ್ಲಿ 2 ಬೌಂಡರಿ ಬಾರಿಸಿದ ಡೆವೊನ್ ಕಾನ್ವೆ.
ಕ್ರೀಸ್ನಲ್ಲಿ ವಿಲ್ ಯಂಗ್ ಹಾಗೂ ಡೆವೊನ್ ಕಾನ್ವೆ ಬ್ಯಾಟಿಂಗ್.
ಕ್ರಿಸ್ ವೋಕ್ಸ್ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಫೋರ್ ಬಾರಿಸಿದ ಎಡಗೈ ದಾಂಡಿಗ ಡೆವೊನ್ ಕಾನ್ವೆ.
ಕ್ರೀಸ್ನಲ್ಲಿ ಕಾನ್ವೆ ಹಾಗೂ ವಿಲ್ ಯಂಗ್ ಬ್ಯಾಟಿಂಗ್.
50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 282 ರನ್ ಕಲೆಹಾಕಿದ ಇಂಗ್ಲೆಂಡ್.
ಇಂಗ್ಲೆಂಡ್ ಪರ ಜೋ ರೂಟ್ (77) ಗರಿಷ್ಠ ಸ್ಕೋರರ್.
ನ್ಯೂಝಿಲೆಂಡ್ ಪರ 3 ವಿಕೆಟ್ ಕಬಳಿಸಿದ ಮ್ಯಾಟ್ ಹೆನ್ರಿ
ಮಿಚೆಲ್ ಸ್ಯಾಂಟ್ನರ್ ಹಾಗೂ ಗ್ಲೆನ್ ಫಿಲಿಪ್ಸ್ಗೆ ತಲಾ 2 ವಿಕೆಟ್.
ಮ್ಯಾಚ್ ಹೆನ್ರಿ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಸ್ಯಾಮ್ ಕರನ್
19 ಎಸೆತಗಳಲ್ಲಿ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕರನ್.
ಕ್ರೀಸ್ನಲ್ಲಿ ಆದಿಲ್ ರಶೀದ್ ಹಾಗೂ ಮಾರ್ಕ್ ವುಡ್ ಬ್ಯಾಟಿಂಗ್
ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಕ್ರಿಸ್ ವೋಕ್ಸ್ (11)
10 ಓವರ್ಗಳಲ್ಲಿ 37 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ ಮಿಚೆಲ್ ಸ್ಯಾಂಟ್ನರ್.
45 ಓವರ್ಗಳ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ಸ್ಕೋರ್ 8 ವಿಕೆಟ್ ನಷ್ಟಕ್ಕೆ 250 ರನ್.
ಕ್ರೀಸ್ನಲ್ಲಿ ಸ್ಯಾಮ್ ಕರನ್ ಹಾಗೂ ಆದಿಲ್ ರಶೀದ್ ಬ್ಯಾಟಿಂಗ್.
ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದ ಕುಸಿತಕ್ಕೊಳಗಾದ ಇಂಗ್ಲೆಂಡ್.
43 ಓವರ್ಗಳಲ್ಲಿ 239 ರನ್ ನೀಡಿದ ನ್ಯೂಝಿಲೆಂಡ್.
ಕ್ರೀಸ್ನಲ್ಲಿ ಸ್ಯಾಮ್ ಕರನ್ ಹಾಗೂ ಕ್ರಿಸ್ ವೋಕ್ಸ್ ಬ್ಯಾಟಿಂಗ್.
ಡೇವಿಡ್ ಮಲಾನ್
ಜಾನಿ ಬೈರ್‌ಸ್ಟೋವ್
ಮೊಯೀನ್ ಅಲಿ
ಹ್ಯಾರಿ ಬ್ರೂಕ್
ಜೋಸ್ ಬಟ್ಲರ್
ಲಿಯಾಮ್ ಲಿವಿಂಗ್‌ಸ್ಟೋನ್
ಜೋ ರೂಟ್..ಔಟ್
ಗ್ಲೆನ್ ಫಿಲಿಪ್ಸ್ ಎಸೆತದಲ್ಲಿ ಜೋ ರೂಟ್ ಕ್ಲೀನ್ ಬೌಲ್ಡ್.
86 ಎಸೆತಗಳಲ್ಲಿ 77 ರನ್ ಬಾರಿಸಿ ನಿರ್ಗಮಿಸಿದ ರೂಟ್.
ಕ್ರೀಸ್ನಲ್ಲಿ ಸ್ಯಾಮ್ ಕರನ್ ಹಾಗೂ ಕ್ರಿಸ್ ವೋಕ್ಸ್ ಬ್ಯಾಟಿಂಗ್.
ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್
22 ಎಸೆತಗಳಲ್ಲಿ 20 ರನ್ಗಳಿಸಿ ಔಟಾದ ಲಿವಿಂಗ್‌ಸ್ಟೋನ್.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಸ್ಯಾಮ್ ಕರನ್ ಬ್ಯಾಟಿಂಗ್
ರಚಿನ್ ರವೀಂದ್ರ ಎಸೆದ 35ನೇ ಓವರ್ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಲಿವಿಂಗ್‌ಸ್ಟೋನ್.
ಈ ಫೋರ್ನೊಂದಿಗೆ 200 ರನ್ ಪೂರೈಸಿದ ಇಂಗ್ಲೆಂಡ್.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟಿಂಗ್.
ಮ್ಯಾಟ್ ಹೆನ್ರಿ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಜೋಸ್ ಬಟ್ಲರ್.
42 ಎಸೆತಗಳಲ್ಲಿ 43 ರನ್ ಬಾರಿಸಿ ಹೊರನಡೆದ ಇಂಗ್ಲೆಂಡ್ ತಂಡದ ನಾಯಕ.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟಿಂಗ್.
ಮ್ಯಾಟ್ ಹೆನ್ರಿ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ಜೋಸ್ ಬಟ್ಲರ್…ಫೋರ್
ಇಂಗ್ಲೆಂಡ್ ತಂಡದ ಉತ್ತಮ ಬ್ಯಾಟಿಂಗ್.
ಕ್ರೀಸ್ನಲ್ಲಿ ಜೋ ರೂಟ್ (53) ಹಾಗೂ ಜೋಸ್ ಬಟ್ಲರ್ (40) ಬ್ಯಾಟಿಂಗ್.
57 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಜೋ ರೂಟ್.
ಇದು ಈ ಬಾರಿಯ ವಿಶ್ವಕಪ್ನ ಮೊದಲ ಹಾಫ್ ಸೆಂಚುರಿ.
30 ಓವರ್ಗಳ ಮುಕ್ತಾಯದ ವೇಳೆಗೆ 166 ರನ್ ಕಲೆಹಾಕಿದ ಇಂಗ್ಲೆಂಡ್
ಕ್ರೀಸ್ನಲ್ಲಿ ಜೋಸ್ ಬಟ್ಲರ್ (30) ಹಾಗೂ ಜೋ ರೂಟ್ (50) ಬ್ಯಾಟಿಂಗ್.
ರಚಿನ್ ರವೀಂದ್ರ ಎಸೆದ 27ನೇ ಓವರ್ನ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್.
27 ಓವರ್ಗಳ ಮುಕ್ತಾಯದ ವೇಳೆಗೆ 150 ರನ್ ಕಲೆಹಾಕಿದ ಇಂಗ್ಲೆಂಡ್.
ಕ್ರೀಸ್ನಲ್ಲಿ ಜೋಸ್ ಬಟ್ಲರ್ ಹಾಗೂ ಜೋ ರೂಟ್ ಬ್ಯಾಟಿಂಗ್.
ರಚಿನ್ ರವೀಂದ್ರ ಎಸೆದ 25ನೇ ಓವರ್ನ 3ನೇ ಎಸೆತದಲ್ಲಿ ಆಕರ್ಷಕ ಸ್ವೀಪ್ ಶಾಟ್ ಫೋರ್ ಬಾರಿಸಿದ ಜೋ ರೂಟ್.
25 ಓವರ್ಗಳ ಮುಕ್ತಾಯದ ವೇಳೆಗೆ 135 ರನ್ ಕಲೆಹಾಕಿದ ಇಂಗ್ಲೆಂಡ್.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್
ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್, ಹ್ಯಾರಿ ಬ್ರೂಕ್ ಹಾಗೂ ಮೊಯೀನ್ ಅಲಿ ಔಟ್.
ಗ್ಲೆನ್ ಫಿಲಿಪ್ಸ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಮೊಯೀನ್ ಅಲಿ.
17 ಎಸೆತಗಳಲ್ಲಿ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಇಂಗ್ಲೆಂಡ್ ಆಲ್ರೌಂಡರ್.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್.
ಜೇಮ್ಸ್ ನೀಶಮ್ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಜೋ ರೂಟ್.
ಈ ಫೋರ್ನೊಂದಿಗೆ ಶತಕ ಪೂರೈಸಿದ ಇಂಗ್ಲೆಂಡ್.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಮೊಯೀನ್ ಅಲಿ ಬ್ಯಾಟಿಂಗ್.
ರಚಿನ್ ರವೀಂದ್ರ ಎಸೆದ 17ನೇ ಓವರ್ನ 3ನೇ ಮತ್ತು 4ನೇ ಎಸೆತದಲ್ಲಿ ಫೋರ್ ಬಾರಿಸಿದ ಹ್ಯಾರಿ ಬ್ರೂಕ್.
5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್.
6ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್…ಹ್ಯಾರಿ ಬ್ರೂಕ್ (25) ಔಟ್.
ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಕ್ಯಾಚ್ ನೀಡಿದ ಜಾನಿ ಬೈರ್‌ಸ್ಟೋವ್.
35 ಎಸೆತಗಳಲ್ಲಿ 33 ರನ್ಗಳಿಸಿ ನಿರ್ಗಮಿಸಿದ ಬೈರ್‌ಸ್ಟೋವ್.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್.
10 ಓವರ್ಗಳು ಮುಕ್ತಾಯ – 51 ರನ್ ಕಲೆಹಾಕಿದ ಇಂಗ್ಲೆಂಡ್
ಕ್ರೀಸ್ನಲ್ಲಿ ಜಾನಿ ಬೈರ್ ಸ್ಟೋವ್ ಹಾಗೂ ಜೋ ರೂಟ್ ಬ್ಯಾಟಿಂಗ್.
ಡೇವಿಡ್ ಮಲಾನ್ (14) ಔಟ್.
ಶಿವಮೊಗ್ಗ: ರಾಗಿಗುಡ್ಡ ಗಲಾಟೆಯಲ್ಲಿ ಹಿಂದುಗಳ ಮನೆ ಮೇಲೆ ಟಾರ್ಗೆಟ್ ಮಾಡಲಾಗಿದೆ. ಮನೆ ಮತ್ತು ವಾಹನ ಜಖಂ ಮಾಡಿದ್ದಾರೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಟಿವಿ9 ಗೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಿದ್ದರಾಮಯ್ಯ ಸರ್ಕಾರ ಮುಸ್ಲಿಂರ ಓಲೈಕೆಗೆ ರಾಜಕಾರಣ ಮಾಡುತ್ತಿದೆ. ಜನರು ಇನ್ನೂ ಕೂಡಾ ಅಲ್ಲಿ ಭಯದಲ್ಲಿದ್ದಾರೆ. ರಾಗಿಗುಡ್ಡ ಜನರು ಘಟನೆ ಕುರಿತು ಸತ್ಯ ಶೋಧನೆ ತಂಡಕ್ಕೆ ಸಮಗ್ರ ಮಾಹಿತಿ ನೀಡಿದ್ದಾರೆ. ಇಂತಹ ಘಟನೆಯಿಂದ ಬಿಜೆಪಿ ಯಾವುದೇ ರಾಜಕೀಯ ಪಡೆಯುದಿಲ್ಲ. ಕಾಂಗ್ರೆಸ್ ವಿನಾಕಾರಣ ಪ್ರಕರಣದ ದಿಕ್ಕು ಕಾಂಗ್ರೆಸ್ ತಪ್ಪಿಸುತ್ತದೆ ಎಂದರು.
ಮ್ಯಾಟ್ ಹೆನ್ರಿ ಎಸೆದ 8ನೇ ಓವರ್ನ 4ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಡೇವಿಡ್ ಮಲಾನ್.
24 ಎಸೆತಗಳಲ್ಲಿ 14 ರನ್ಗಳಿಸಿ ವಿಕೆಟ್ ಒಪ್ಪಿಸಿದ ಮಲಾನ್.
ಕ್ರೀಸ್ನಲ್ಲಿ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್.
7 ಓವರ್ಗಳ ಮುಕ್ತಾಯದ ವೇಳೆಗೆ 39 ರನ್ ಕಲೆಹಾಕಿದ ಇಂಗ್ಲೆಂಡ್.
ತನ್ನ ಮೊದಲ ಓವರ್ನಲ್ಲಿ ಕೇವಲ 4 ರನ್ ನೀಡಿದ ಮಿಚೆಲ್ ಸ್ಯಾಂಟ್ನರ್.
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್.
ಮ್ಯಾಟ್ ಹೆನ್ರಿಯ 4ನೇ ಓವರ್ನ 3ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಡೇವಿಡ್ ಮಲಾನ್.
ಇಂಗ್ಲೆಂಡ್ ತಂಡದ ಉತ್ತಮ ಆರಂಭ.
ಕ್ರೀಸ್ನಲ್ಲಿ ಜಾನಿ ಬೈರ್‌ಸ್ಟೋವ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.
ಮೂರು ಓವರ್ಗಳ ಮುಕ್ತಾಯದ ವೇಳೆಗೆ 16 ರನ್ ಕಲೆಹಾಕಿದ ಇಂಗ್ಲೆಂಡ್
ಕ್ರೀಸ್ನಲ್ಲಿ ಡೇವಿಡ್ ಮಲಾನ್ ಹಾಗೂ ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್.
ಟ್ರೆಂಟ್ ಬೌಲ್ಟ್ ಎಸೆದ ಮೊದಲ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಸಿಡಿಸಿದ ಜಾನಿ ಬೈರ್‌ಸ್ಟೋವ್
5ನೇ ಎಸೆತದಲ್ಲಿ ಬೈರ್‌ಸ್ಟೋವ್ ಬ್ಯಾಟ್ನಿಂದ ಸ್ಟ್ರೈಟ್ ಹಿಟ್ ಬೌಂಡರಿ…ಫೋರ್.
ಮೊದಲ ಓವರ್ನಲ್ಲೇ 12 ರನ್ ಕಲೆಹಾಕಿದ ಇಂಗ್ಲೆಂಡ್.
ಕ್ರೀಸ್ನಲ್ಲಿ ಬೈರ್‌ಸ್ಟೋವ್ ಹಾಗೂ ಮಲಾನ್ ಬ್ಯಾಟಿಂಗ್
ಇಂಗ್ಲೆಂಡ್ ಆರಂಭಿಕರು- ಜಾನಿ ಬೈರ್‌ಸ್ಟೋವ್ (ಬಲಗೈ ಬ್ಯಾಟರ್), ಡೇವಿಡ್ ಮಲಾನ್ (ಎಡಗೈ ಬ್ಯಾಟರ್)
ಮೊದಲ ಓವರ್- ಟ್ರೆಂಟ್ ಬೌಲ್ಟ್
ಇಂಗ್ಲೆಂಡ್ ಬ್ಯಾಟಿಂಗ್ ಲೈನಪ್- ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯೀನ್ ಅಲಿ, ಸ್ಯಾಮ್ ಕರನ್.
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮ್ಯಾಟ್ ಹೆನ್ರಿ, ಮಿಚೆಲ್ ಸ್ಯಾಂಟ್ನರ್, ಜೇಮ್ಸ್ ನೀಶಮ್, ಟ್ರೆಂಟ್ ಬೌಲ್ಟ್.
ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯೀನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ನ್ಯೂಝಿಲೆಂಡ್ ತಂಡದ ಹಂಗಾಮಿ ನಾಯಕ ಟಾಮ್ ಲಾಥಮ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - 1:33 pm, Thu, 5 October 23