ಕ್ಯಾಪ್ಟನ್ಸ್ ಡೇ ಈವೆಂಟ್ ವೇಳೆ ನಿದ್ದೆಗೆ ಜಾರಿದ ಬವುಮಾ! ಆಫ್ರಿಕಾ ನಾಯಕನ ಮೇಲೆ ಮೀಮ್ಸ್​ಗಳ ಸುರಿಮಳೆ

ICC World Cup 2023: ಸ್ವಾಭಾವಿಕವಾಗಿ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಆಝಂ ಅವರಿಗೆ ವಿಶೇಷ ಗಮನ ನೀಡಲಾಯಿತು. ಇದೇ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ತೆಂಬಾ ಬವುಮಾ ಅವರು ನಿದ್ರೆಗೆ ಜಾರಿರುವ ಫೋಟೋ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.

ಕ್ಯಾಪ್ಟನ್ಸ್ ಡೇ ಈವೆಂಟ್ ವೇಳೆ ನಿದ್ದೆಗೆ ಜಾರಿದ ಬವುಮಾ! ಆಫ್ರಿಕಾ ನಾಯಕನ ಮೇಲೆ ಮೀಮ್ಸ್​ಗಳ ಸುರಿಮಳೆ
ತೆಂಬಾ ಬವುಮಾ
Follow us
ಪೃಥ್ವಿಶಂಕರ
|

Updated on:Oct 05, 2023 | 11:39 AM

ಏಕದಿನ ವಿಶ್ವಕಪ್ (ICC World Cup 2023) ಪ್ರಾರಂಭವಾಗುವ ಮೊದಲು, ಐಸಿಸಿ ಮತ್ತು ಬಿಸಿಸಿಐ (ICC and BCCI) ನಿನ್ನೆ ಅಹಮದಾಬಾದ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಎಲ್ಲಾ 10 ವಿಶ್ವಕಪ್ ತಂಡಗಳ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ಬಾರಿ ವಿಶ್ವಕಪ್‌ಗೂ ಮುನ್ನ ಐಸಿಸಿಯಿಂದ ಕ್ಯಾಪ್ಟನ್ಸ್ ಮೀಟ್ (Captain’s day event) ಆಯೋಜಿಸಲಾಗುತ್ತದೆ. ಹೀಗಾಗಿ ಈ ಬಾರಿಯೂ ಭಾರತದ ದಿಗ್ಗಜ ರವಿಶಾಸ್ತ್ರಿ ಮತ್ತು ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ ಅವರಿಗೆ ಈ ಬಾರಿಯ ನಾಯಕರ ಸಭೆ ನಡೆಸುವ ಜವಬ್ದಾರಿವಹಿಸಲಾಗಿತ್ತು. ಸ್ವಾಭಾವಿಕವಾಗಿ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಆಝಂ ಅವರಿಗೆ ವಿಶೇಷ ಗಮನ ನೀಡಲಾಯಿತು. ಇದೇ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ತೆಂಬಾ ಬವುಮಾ (Temba Bavuma) ಅವರು ನಿದ್ರೆಗೆ ಜಾರಿರುವ ಫೋಟೋ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.

ತಾನು ಕ್ಯಾಪ್ಟನ್ಸ್ ಮೀಟ್ ವೇಳೆ ನಿದ್ರೆಗೆ ಜಾರಿಲ್ಲ

ಆದರೆ ನಾಯಕರ ಕೂಟದ ವೇಳೆ ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ನಿಜವಾಗಿಯೂ ನಿದ್ದೆಗೆ ಜಾರಿದರಾ? ಅಥವಾ ಕ್ಯಾಮರಾ ಕಣ್ಣು ಬವುಮಾ ಮೇಲೆ ಬೀಳುವ ವೇಳೆ ಅವರು ತಲೆ ಬಾಗಿಸಿದ್ರಾ ಎಂಬ ಅನುಮಾನ ಶುರುವಾಗಿದೆ. ಏಕೆಂದರೆ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಬವುಮಾ, ತಾನು ಕ್ಯಾಪ್ಟನ್ಸ್ ಮೀಟ್ ವೇಳೆ ನಿದ್ರೆಗೆ ಜಾರಿಲ್ಲ ಎಂದಿರುವ ಬವುಮಾ ಕ್ಯಾಮರಾದ ಆ್ಯಂಗಲ್ ಮೇಲೆ ಆರೋಪ ಹೊರಿಸಿದ್ದಾರೆ. ಆದರೆ ಬವುಮಾ ಸ್ಪಷ್ಟನೆ ನೀಡುವ ವೇಳೆಗೆ ಅವರ ಫೋಟೋ ಸಾಕಷ್ಟು ವೈರಲ್ ಆಗಿದ್ದು, ಬವುಮಾ ಅವರ ಮೇಲೆ ಮೀಮ್ಸ್​ಗಳ ಸುರಿಮಳೆಯಾಗಿದೆ.​

ಅ. 7 ರಂದು ಮೊದಲ ಪಂದ್ಯ

ಇನ್ನು ವಿಶ್ವಕಪ್ ವಿಚಾರಕ್ಕೆ ಬರುವುದಾದರೆ.. ಅಕ್ಟೋಬರ್ 7 ರಂದು ದಕ್ಷಿಣ ಆಫ್ರಿಕಾ ತನ್ನ ಮೊದಲ ಏಕದಿನ ವಿಶ್ವಕಪ್ ಪಂದ್ಯವನ್ನಾಡಲಿದೆ. ಇದಕ್ಕೂ ಮುನ್ನ ತಂಡದೊಂದಿಗೆ ಭಾರತಕ್ಕೆ ಬಂದಿದ್ದ ಬವುಮಾ, ಕೌಟುಂಬಿಕ ಕಾರಣಕ್ಕೆ ಅಭ್ಯಾಸ ಪಂದ್ಯ ಆಡದೆ ತವರಿಗೆ ಮರಳಿದ್ದರು. ಆದರೆ ವಿಶ್ವಕಪ್ ಆರಂಭಕ್ಕೂ ಮುನ್ನ ತಂಡ ಸೇರಿಕೊಂಡಿರುವ ಬವುಮಾ ನಿನ್ನೆ ನಡೆದ ಕ್ಯಾಪ್ಟನ್ ಸಭೆಯಲ್ಲಿ ಹಾಜರಿದ್ದರು. ಹಾಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಬವುಮಾ ಅವರ ಮಲಗಿರುವ ಫೋಟೋಕ್ಕೆ ಹಲವರು ‘ಪ್ರವಾಸದ ಆಯಾಸದಿಂದ ನಿದ್ದೆಗೆ ಜಾರಿದ್ದಾರೆ’ ಎಂದು ಕಮೆಂಟ್ ಮಾಡಿದ್ದಾರೆ.

Published On - 11:37 am, Thu, 5 October 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್