AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಹೀನ್ ಅಫ್ರಿದಿ ಅನ್​ ಫಿಟ್​: ಪಾಕ್ ತಂಡಕ್ಕೆ ಹೊಸ ಚಿಂತೆ ಶುರು..!

ಏಷ್ಯಾಕಪ್​ನಲ್ಲಿ ಭಾರತದ ವಿರುದ್ಧದ ಪಂದ್ಯದ ವೇಳೆ ಶಾಹೀನ್ ಅಫ್ರಿದಿ ಗಾಯಗೊಂಡಿದ್ದರು. ಇದೇ ಕಾರಣದಿಂದಾಗಿ ಅವರು ಮೈದಾನದಿಂದ ಕೆಲ ಕಾಲ ಹೊರಗುಳಿದಿದ್ದರು. ಆದರೆ ಏಕದಿನ ವಿಶ್ವಕಪ್ ತಂಡದ ಆಯ್ಕೆ ವೇಳೆ ಅವರು ಸಂಪೂರ್ಣ ಫಿಟ್ ಆಗಿದ್ದೀನಿ ಎಂದು ತಿಳಿಸಿದ್ದರು.

ಶಾಹೀನ್ ಅಫ್ರಿದಿ ಅನ್​ ಫಿಟ್​: ಪಾಕ್ ತಂಡಕ್ಕೆ ಹೊಸ ಚಿಂತೆ ಶುರು..!
Shaheen Afridi
TV9 Web
| Updated By: ಝಾಹಿರ್ ಯೂಸುಫ್|

Updated on: Oct 05, 2023 | 6:30 PM

Share

ಬಹುನಿರೀಕ್ಷಿತ ಏಕದಿನ ವಿಶ್ವಕಪ್​ನಲ್ಲಿ ಭರ್ಜರಿ ಶುಭಾರಂಭ ಮಾಡುವ ಇರಾದೆಯಲ್ಲಿದ್ದ ಪಾಕಿಸ್ತಾನ್ ತಂಡಕ್ಕೆ ಹೊಸ ಚಿಂತೆಯೊಂದು ಶುರುವಾಗಿದೆ. ತಂಡದ ಪ್ರಮುಖ ವೇಗಿ ಶಾಹೀನ್ ಅಫ್ರಿದಿ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ. ಈ ವಿಷಯವನ್ನು ಬಹಿರಂಗಪಡಿಸಿದ್ದು ಮತ್ಯಾರೂ ಅಲ್ಲ, ಪಾಕ್​ನ ಖ್ಯಾತ ಕ್ರೀಡಾ ವರದಿಗಾರ್ತಿ ಝೈನಬ್ ಅಬ್ಬಾಸ್.

ಏಕದಿನ ವಿಶ್ವಕಪ್​ ಕುರಿತಾದ ಸಂವಾದದಲ್ಲಿ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಜೊತೆ ಮಾತನಾಡುವಾಗ ಝೈನಬ್ ಅಬ್ಬಾಸ್ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಶಾಹೀನ್ ಅಫ್ರಿದಿ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅವರು ಎಡಗೈ ಬೆರಳು ಊದಿಕೊಂಡಿದೆ ಎಂದು ತಿಳಿಸಿದ್ದಾರೆ.

ಶಾಹೀನ್ ಅಫ್ರಿದಿ ಎಡಗೈ ವೇಗಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಇದೀಗ ಅದೇ ಕೈನ ಬೆರಳುಗಳು ಊದಿಕೊಂಡಿದೆ. ಹೀಗಾಗಿ ಸರಿಯಾಗಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಝೈನಬ್ ಅಬ್ಬಾಸ್ ಹೇಳಿದ್ದಾರೆ.

ಗಾಯ ಮರೆಮಾಚಿದ ಅಫ್ರಿದಿ?

ಏಷ್ಯಾಕಪ್​ನಲ್ಲಿ ಭಾರತದ ವಿರುದ್ಧದ ಪಂದ್ಯದ ವೇಳೆ ಶಾಹೀನ್ ಅಫ್ರಿದಿ ಗಾಯಗೊಂಡಿದ್ದರು. ಇದೇ ಕಾರಣದಿಂದಾಗಿ ಅವರು ಮೈದಾನದಿಂದ ಕೆಲ ಕಾಲ ಹೊರಗುಳಿದಿದ್ದರು. ಆದರೆ ಏಕದಿನ ವಿಶ್ವಕಪ್ ತಂಡದ ಆಯ್ಕೆ ವೇಳೆ ಅವರು ಸಂಪೂರ್ಣ ಫಿಟ್ ಆಗಿದ್ದೀನಿ ಎಂದು ತಿಳಿಸಿದ್ದರು. ಆದರೀಗ ಗಾಯದ ವಿಚಾರ ಬಹಿರಂಗವಾಗುತ್ತಿದ್ದಂತೆ, ವಿಶ್ವಕಪ್​ನಲ್ಲಿ ಅವರು 100 ಪ್ರತಿಶತವನ್ನು ನೀಡಲು ಸಮರ್ಥರಾಗಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ನಸೀಮ್ ಶಾ ಔಟ್:

ಏಕದಿನ ವಿಶ್ವಕಪ್​ ಆರಂಭಕ್ಕೂ ಮುನ್ನ ಗಾಯಗೊಂಡಿದ್ದರಿಂದ ಯುವ ವೇಗಿ ನಸೀಮ್ ಶಾ ಹೊರಬಿದ್ದಿದ್ದರು. ಇದು ಪಾಕ್ ತಂಡಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಲಿದೆ ಎಂದು ಝೈನಬ್ ಅಬ್ಬಾಸ್ ಅಭಿಪ್ರಾಯಪಟ್ಟಿದ್ದಾರೆ.

ಇದೀಗ ಶಾಹೀನ್ ಅವರ ಬೆರಳಿಗೆ ಗಾಯವಾಗಿರುವುದು ಪಾಕ್ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇತ್ತ ಈಗಾಗಲೇ ನಸೀಮ್ ಶಾ ಹೊರಗುಳಿದಿರುವ ಕಾರಣ ಶಾಹೀನ್ ಅಫ್ರಿದಿ ಆಡಲೇಬೇಕಾಗುತ್ತದೆ. ಇದರ ಹೊರತಾಗಿ ಪಾಕ್ ತಂಡದ ಬಳಿ ಯಾವುದೇ ಆಯ್ಕೆಯಿಲ್ಲ.

ಹೀಗಾಗಿ ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡವು ಶಾಹೀನ್ ಅಫ್ರಿದಿ ಅವರನ್ನು ಹೇಗೆ ಬಳಸಿಕೊಳ್ಳಲಿದೆ ಕಾದು ನೋಡಬೇಕಿದೆ ಎಂದು ಝೈನಬ್ ಅಬ್ಬಾಸ್ ತಿಳಿಸಿದ್ದಾರೆ.

ಇದನ್ನೂ ಓದಿ: ICC World Cup 2023 Schedule: ಏಕದಿನ ವಿಶ್ವಕಪ್​ನ​ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಝ್ವಾನ್, ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಸಲ್ಮಾನ್ ಅಲಿ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಝ್, ಉಸಾಮಾ ಮಿರ್, ಶಾಹೀನ್ ಶಾ ಆಫ್ರಿದಿ, ಹಸನ್ ಅಲಿ, ಹಾರಿಸ್ ರೌಫ್, ಮೊಹಮ್ಮದ್ ವಾಸಿಂ.