ENG vs RSA ICC World Cup 2023: ಸೌತ್ ಆಫ್ರಿಕಾಗೆ ಭರ್ಜರಿ ಜಯ

| Updated By: ಝಾಹಿರ್ ಯೂಸುಫ್

Updated on: Oct 21, 2023 | 9:19 PM

England vs South Africa, ICC world Cup 2023:ಏಕದಿನ ಕ್ರಿಕೆಟ್​ನಲ್ಲಿ ಉಭಯ ತಂಡಗಳು ಇದುವರೆಗೆ 70 ಬಾರಿ ಮುಖಾಂಉಖಿಯಾಗಿವೆ ಈ ವೇಳೆ ಇಂಗ್ಲೆಂಡ್ ತಂಡವು 30 ಬಾರಿ ಜಯ ಸಾಧಿಸಿದರೆ, ಸೌತ್ ಆಫ್ರಿಕಾ ತಂಡ 34 ಬಾರಿ ಗೆಲುವು ಕಂಡಿದೆ. ಇನ್ನು 5 ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ, ಒಂದು ಮ್ಯಾಚ್ ಟೈನಲ್ಲಿ ಅಂತ್ಯ ಕಂಡಿತ್ತು. 

ENG vs RSA ICC World Cup 2023: ಸೌತ್ ಆಫ್ರಿಕಾಗೆ ಭರ್ಜರಿ ಜಯ
England vs South Africa

ಏಕದಿನ ವಿಶ್ವಕಪ್​ನ 20ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ  ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 399 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ 170 ರನ್​ಗಳಿಗೆ ಆಲೌಟ್ ಆಗಿ 229 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಏಕದಿನ ಕ್ರಿಕೆಟ್​ನಲ್ಲಿ ಉಭಯ ತಂಡಗಳು ಇದುವರೆಗೆ 70 ಬಾರಿ ಮುಖಾಂಉಖಿಯಾಗಿವೆ ಈ ವೇಳೆ ಇಂಗ್ಲೆಂಡ್ ತಂಡವು 30 ಬಾರಿ ಜಯ ಸಾಧಿಸಿದರೆ, ಸೌತ್ ಆಫ್ರಿಕಾ ತಂಡ 34 ಬಾರಿ ಗೆಲುವು ಕಂಡಿದೆ. ಇನ್ನು 5 ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ, ಒಂದು ಮ್ಯಾಚ್ ಟೈನಲ್ಲಿ ಅಂತ್ಯ ಕಂಡಿತ್ತು.

ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಡೇವಿಡ್ ವಿಲ್ಲಿ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ರೀಸ್ ಟೋಪ್ಲಿ.

ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ.

ಸೌತ್ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ಝಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್, ತಬ್ರೇಝ್ ಶಂಸಿ, ಕಗಿಸೊ ರಬಾಡ, ಆಂಡಿಲೆ ಫೆಹ್ಲುಕ್ವಾಯೊ ಮತ್ತು ಲಿಝಾಡ್ ವಿಲಿಯಮ್ಸ್.

ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್ ಮತ್ತು ಕ್ರಿಸ್ ವೋಕ್ಸ್.

 

LIVE Cricket Score & Updates

The liveblog has ended.
  • 21 Oct 2023 08:35 PM (IST)

    ENG vs RSA ICC World Cup 2023 Live Score: ಸೌತ್ ಆಫ್ರಿಕಾಗೆ ಭರ್ಜರಿ ಜಯ

    ಕೇಶವ್ ಮಹಾರಾಜ್ ಎಸೆದ 22ನೇ ಓವರ್​ನ ಕೊನೆಯ ಎಸೆತದಲ್ಲಿ ಕ್ಲೀನ್ ಬೌಲ್ಡ್​ ಆದ ಗಸ್ ಅಟ್ಕಿನ್ಸನ್.

    ಗಾಯದ ಕಾರಣ ಬ್ಯಾಟಿಂಗ್​ಗೆ ಇಳಿಯದ ರೀಸ್ ಟೋಪ್ಲಿ.

    170 ರನ್​ಗಳಿಗೆ ಇಂಗ್ಲೆಂಡ್ ತಂಡದ ಇನಿಂಗ್ಸ್ ಅಂತ್ಯ.

    ಸೌತ್ ಆಫ್ರಿಕಾ– 399/7 (50)

    ಇಂಗ್ಲೆಂಡ್– 170 (22)

    ಸೌತ್ ಆಫ್ರಿಕಾ ತಂಡಕ್ಕೆ 229 ರನ್​ಗಳ ಭರ್ಜರಿ ಜಯ.

     

  • 21 Oct 2023 08:29 PM (IST)

    ENG vs RSA ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಫೋರ್

    ಕಗಿಸೊ ರಬಾಡ ಎಸೆದ 21ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 4 ಫೋರ್​ಗಳನ್ನು ಬಾರಿಸಿದ ಗಸ್ ಅಟ್ಕಿನ್ಸನ್.

    ಈ ಫೋರ್​ಗಳೊಂದಿಗೆ 150 ರ ಗಡಿದಾಟಿದ ಇಂಗ್ಲೆಂಡ್ ತಂಡದ ಸ್ಕೋರ್.

    ಕ್ರೀಸ್​ನಲ್ಲಿ ಮಾರ್ಕ್​ ವುಡ್ ಹಾಗೂ ಗಸ್ ಅಟ್ಕಿನ್ಸನ್ ಬ್ಯಾಟಿಂಗ್.

    ENG 153/8 (21)

     


  • 21 Oct 2023 08:24 PM (IST)

    ENG vs RSA ICC World Cup 2023 Live Score: 20 ಓವರ್​ಗಳ ಮುಕ್ತಾಯ

    20 ಓವರ್​ಗಳ ಮುಕ್ತಾಯದ ವೇಳೆಗೆ 135 ರನ್ ಕಲೆಹಾಕಿದ ಇಂಗ್ಲೆಂಡ್ ತಂಡ.

    8 ವಿಕೆಟ್​ ಕಬಳಿಸಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಸೌತ್ ಆಫ್ರಿಕಾ.

    ಕ್ರೀಸ್​ನಲ್ಲಿ ಮಾರ್ಕ್​ ವುಡ್ ಹಾಗೂ ಗಸ್ ಅಟ್ಕಿನ್ಸನ್ ಬ್ಯಾಟಿಂಗ್.

    ENG 135/8 (20)

     

  • 21 Oct 2023 08:16 PM (IST)

    ENG vs RSA ICC World Cup 2023 Live Score: ಮಾರ್ಕ್​ ವುಡ್ ಸಿಕ್ಸ್ ಮಾರ್ಕ್​

    ಮಾರ್ಕೊ ಯಾನ್ಸೆನ್ ಎಸೆದ 18ನೇ ಓವರ್​ನಲ್ಲಿ ಡೀಪ್ ಮಿಡ್ ವಿಕೆಟ್​​ನತ್ತ 2 ಭರ್ಜರಿ ಸಿಕ್ಸ್​ ಸಿಡಿಸಿದ ಮಾರ್ಕ್​ ವುಡ್.

    ಕ್ರೀಸ್​ನಲ್ಲಿ ಮಾರ್ಕ್​ ವುಡ್ ಹಾಗೂ ಗಸ್ ಅಟ್ಕಿನ್ಸನ್ ಬ್ಯಾಟಿಂಗ್.

    ENG 118/8 (18)

     

  • 21 Oct 2023 08:10 PM (IST)

    ENG vs RSA ICC World Cup 2023 Live Score: ಇಂಗ್ಲೆಂಡ್​ 8ನೇ ವಿಕೆಟ್ ಪತನ

    ಲುಂಗಿ ಎನ್​ಗಿಡಿ ಎಸೆದ 17ನೇ ಓವರ್​ನ 2ನೇ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡೇವಿಡ್ ವಿಲ್ಲಿ.

    ಮರು ಎಸೆತದಲ್ಲೇ ಕಗಿಸೊ ರಬಾಡ ಹಿಡಿದ ಅತ್ಯಾದ್ಭುತ ಡೈವಿಂಗ್ ಕ್ಯಾಚ್​ಗೆ ಡೇವಿಡ್ ವಿಲ್ಲಿ (12) ಔಟ್.

    ಕ್ರೀಸ್​ನಲ್ಲಿ ಮಾರ್ಕ್​ ವುಡ್ ಹಾಗೂ ಗಸ್ ಅಟ್ಕಿನ್ಸನ್ ಬ್ಯಾಟಿಂಗ್.

    ENG 101/8 (17)

     

  • 21 Oct 2023 08:04 PM (IST)

    ENG vs RSA ICC World Cup 2023 Live Score: ಇಂಗ್ಲೆಂಡ್​ 7ನೇ ವಿಕೆಟ್ ಪತನ

    ಜೆರಾಲ್ಡ್ ಕೊಯಟ್ಝಿ ಎಸೆದ 16ನೇ ಓವರ್​ನ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಆದಿಲ್ ರಶೀದ್.

    14 ಎಸೆತಗಳಲ್ಲಿ 10 ರನ್​ಗಳಿಸಿ ಔಟಾದ ಆದಿಲ್ ರಶೀದ್. ಗೆಲುವಿನತ್ತ ಸೌತ್ ಆಫ್ರಿಕಾ ತಂಡ.

    ಕ್ರೀಸ್​ನಲ್ಲಿ ಡೇವಿಡ್ ವಿಲ್ಲಿ ಹಾಗೂ ಗಸ್ ಅಟ್ಕಿನ್ಸನ್ ಬ್ಯಾಟಿಂಗ್.

    ENG 94/7 (16)

      

  • 21 Oct 2023 07:58 PM (IST)

    ENG vs RSA ICC World Cup 2023 Live Score: 15 ಓವರ್​ಗಳು ಮುಕ್ತಾಯ

    15 ಓವರ್​ಗಳ ಮುಕ್ತಾಯದ ವೇಳೆಗೆ 84 ರನ್ ಕಲೆಹಾಕಿದ ಇಂಗ್ಲೆಂಡ್ ತಂಡ.

    6 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸೌತ್ ಆಫ್ರಿಕಾ.

    ಕ್ರೀಸ್​ನಲ್ಲಿ ಡೇವಿಡ್ ವಿಲ್ಲಿ ಹಾಗೂ ಆದಿಲ್ ರಶೀದ್ ಬ್ಯಾಟಿಂಗ್.

    ENG 84/6 (15)

      

  • 21 Oct 2023 07:43 PM (IST)

    ENG vs RSA ICC World Cup 2023 Live Score: ಇಂಗ್ಲೆಂಡ್ ತಂಡ​ 6 ವಿಕೆಟ್ ಪತನ

    ಜೆರಾಲ್ಡ್ ಕೊಯಟ್ಝಿ ಎಸೆದ 12ನೇ ಓವರ್​ನ ಮೊದಲ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಜೋಸ್ ಬಟ್ಲರ್.

    7 ಎಸೆತಗಳಲ್ಲಿ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಇಂಗ್ಲೆಂಡ್ ತಂಡದ ನಾಯಕ.

    ಮೂರನೇ ಎಸೆತದಲ್ಲಿ ಹ್ಯಾರಿ ಬ್ರೂಕ್ (17) ಎಲ್​ಬಿಡಬ್ಲ್ಯೂ…ಔಟ್.

    ಕ್ರೀಸ್​ನಲ್ಲಿ ಡೇವಿಡ್ ವಿಲ್ಲಿ ಹಾಗೂ ಆದಿಲ್ ರಶೀದ್ ಬ್ಯಾಟಿಂಗ್.

    ENG 70/6 (12)

      

  • 21 Oct 2023 07:32 PM (IST)

    ENG vs RSA ICC World Cup 2023 Live Score: 10 ಓವರ್​ಗಳು ಮುಕ್ತಾಯ

    ಜೆರಾಲ್ಡ್ ಕೊಯಟ್ಝಿ ಎಸೆದ 10ನೇ ಓವರ್​ನ 3ನೇ ಎಸೆತದಲ್ಲಿ ಬ್ಯಾಕ್​ವರ್ಡ್​ ಪಾಯಿಂಟ್​ನತ್ತ ಫೋರ್ ಬಾರಿಸಿದ ಜೋಸ್ ಬಟ್ಲರ್.

    4ನೇ ಎಸೆತದಲ್ಲಿ ಲಾಂಗ್ ಆಫ್​ನತ್ತ ಮತ್ತೊಂದು ಪೋರ್.

    ಕೊನೆಯ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಜೋಸ್ ಬಟ್ಲರ್.

    ENG 67/4 (10)

      

  • 21 Oct 2023 07:26 PM (IST)

    ENG vs RSA ICC World Cup 2023 Live Score: ಇಂಗ್ಲೆಂಡ್ 4ನೇ ವಿಕೆಟ್ ಪತನ

    ಕಗಿಸೊ ರಬಾಡ 9ನೇ ಓವರ್​ನ ಮೊದಲ ಎಸೆತದಲ್ಲೇ ಬೌಲರ್​ಗೆ ಕ್ಯಾಚ್ ನೀಡಿದ ಎಡಗೈ ದಾಂಡಿಗ ಬೆನ್ ಸ್ಟೋಕ್ಸ್​.

    5ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಹ್ಯಾರಿ ಬ್ರೂಕ್.

    ಕ್ರೀಸ್​ನಲ್ಲಿ ಜೋಸ್ ಬಟ್ಲರ್ ಹಾಗೂ ಹ್ಯಾರಿ ಬ್ರೂಕ್ ಬ್ಯಾಟಿಂಗ್.

    ENG 50/4 (9)

      

      

  • 21 Oct 2023 07:12 PM (IST)

    ENG vs RSA ICC World Cup 2023 Live Score: ಮಾರ್ಕೊ ಮ್ಯಾಜಿಕ್; 3ನೇ ವಿಕೆಟ್ ಪತನ

    ಮಾರ್ಕೊ ಯಾನ್ಸೆನ್ ಎಸೆದ 6ನೇ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಡೇವಿಡ್ ಮಲಾನ್.

    11 ಎಸೆತಗಳಲ್ಲಿ ಕೇವಲ 6 ರನ್​ಗಳಿಸಿ ವಿಕೆಟ್ ಒಪ್ಪಿಸಿದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ.

    ಕ್ರೀಸ್​ನಲ್ಲಿ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಬ್ಯಾಟಿಂಗ್

    ENG 29/3 (6)

      

  • 21 Oct 2023 07:06 PM (IST)

    ENG vs RSA ICC World Cup 2023 Live Score: 5 ಓವರ್​ಗಳು ಮುಕ್ತಾಯ

    5 ಓವರ್​ಗಳ ಮುಕ್ತಾಯದ ವೇಳೆಗೆ ಕೇವಲ 24 ರನ್ ಕಲೆಹಾಕಿದ ಇಂಗ್ಲೆಂಡ್.

    2 ವಿಕೆಟ್ ಕಬಳಿಸಿ ಆರಂಭಿಕ ಯಶಸ್ಸು ಪಡೆದಿರುವ ಸೌತ್ ಆಫ್ರಿಕಾ ತಂಡ.

    ಕ್ರೀಸ್​ನಲ್ಲಿ ಬೆನ್ ಸ್ಟೋಕ್ಸ್​ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 24/2 (5)

      

  • 21 Oct 2023 07:00 PM (IST)

    ENG vs RSA ICC World Cup 2023 Live Score: ಇಂಗ್ಲೆಂಡ್ ತಂಡದ 2ನೇ ವಿಕೆಟ್ ಪತನ

    ಮಾರ್ಕೊ ಯಾನ್ಸೆನ್ ಎಸೆದ 4ನೇ ಓವರ್​ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್​ನಲ್ಲಿ ಸುಲಭ ಕ್ಯಾಚ್ ನೀಡಿದ ಜೋ ರೂಟ್.

    ಸೌತ್ ಆಫ್ರಿಕಾ ತಂಡಕ್ಕೆ ಆರಂಭಿಕ ಯಶಸ್ಸು.

    ಜಾನಿ ಬೈರ್​ಸ್ಟೋವ್ (10) ಹಾಗೂ ಜೋ ರೂಟ್ (2) ಔಟ್.

    ENG 23/2 (4)

      

  • 21 Oct 2023 06:54 PM (IST)

    ENG vs RSA ICC World Cup 2023 Live Score: ಇಂಗ್ಲೆಂಡ್ ತಂಡದ ಮೊದಲ ವಿಕೆಟ್ ಪತನ

    ಲುಂಗಿ ಎನ್​ಗಿಡಿ ಎಸೆದ ಮೂರನೇ ಓವರ್​ನ ಮೂರನೇ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಜಾನಿ ಬೈರ್​ಸ್ಟೋವ್.

    12 ಎಸೆತಗಳಲ್ಲಿ ಕೇವಲ 10 ರನ್ ಬಾರಿಸಿ ಔಟಾದ ಬೈರ್​ಸ್ಟೋವ್.

    ಕ್ರೀಸ್​ನಲ್ಲಿ ಜೋ ರೂಟ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್

    ENG 20/1 (3)

      

  • 21 Oct 2023 06:47 PM (IST)

    ENG vs RSA ICC World Cup 2023 Live Score: ಇಂಗ್ಲೆಂಡ್ ಉತ್ತಮ ಆರಂಭ

    ಮಾರ್ಕೊ ಯಾನ್ಸೆನ್ ಎಸೆದ 2ನೇ ಓವರ್​ನ 4ನೇ ಎಸೆತದಲ್ಲಿ ಫೈನ್ ಲೆಗ್​ ಬೌಂಡರಿಯತ್ತ ಫೋರ್ ಬಾರಿಸಿದ ಡೇವಿಡ್ ಮಲಾನ್.

    ಕ್ರೀಸ್​ನಲ್ಲಿ ಜಾನಿ ಬೈರ್​ಸ್ಟೋವ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 14/0 (2)

    ಇಂಗ್ಲೆಂಡ್ ತಂಡಕ್ಕೆ 400 ರನ್​ಗಳ ಗುರಿ.

      

  • 21 Oct 2023 06:41 PM (IST)

    ENG vs RSA ICC World Cup 2023 Live Score: ಇಂಗ್ಲೆಂಡ್ ಇನಿಂಗ್ಸ್​ ಆರಂಭ

    ಲುಂಗಿ ಎನ್​ಗಿಡಿ ಎಸೆದ ಮೊದಲ ಓವರ್​ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಜಾನಿ ಬೈರ್​ಸ್ಟೋವ್.

    ಕ್ರೀಸ್​ನಲ್ಲಿ ಜಾನಿ ಬೈರ್​ಸ್ಟೋವ್ ಹಾಗೂ ಡೇವಿಡ್ ಮಲಾನ್ ಬ್ಯಾಟಿಂಗ್.

    ENG 7/0 (1)

      

  • 21 Oct 2023 06:07 PM (IST)

    ENG vs RSA ICC World Cup 2023 Live Score: ಸೌತ್ ಆಫ್ರಿಕಾ ಇನಿಂಗ್ಸ್ ಅಂತ್ಯ

    ಗಸ್ ಅಟ್ಕಿನ್ಸನ್ ಎಸೆದ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಹೆನ್ರಿಕ್ ಕ್ಲಾಸೆನ್ ಕ್ಲೀನ್ ಬೌಲ್ಡ್​.

    5ನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಜೆರಾಲ್ಡ್ ಕೊಯಟ್ಝಿ.

    50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 399 ರನ್ ಕಲೆಹಾಕಿದ ಸೌತ್ ಆಫ್ರಿಕಾ.

    ಸೌತ್ ಆಫ್ರಿಕಾ– 399/7 (50)

     ಇಂಗ್ಲೆಂಡ್ ತಂಡಕ್ಕೆ 400 ರನ್​ಗಳ ಕಠಿಣ ಗುರಿ ನೀಡಿದ ಸೌತ್ ಆಫ್ರಿಕಾ.

  • 21 Oct 2023 06:00 PM (IST)

    ENG vs RSA ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್

    ರೀಸ್ ಟೋಪ್ಲಿ ಎಸೆದ 49ನೇ ಓವರ್​ನ 3ನೇ ಮತ್ತು 4ನೇ ಎಸೆತಗಳಲ್ಲಿ ಸಿಕ್ಸ್ ಸಿಡಿಸಿದ ಮಾರ್ಕೊ ಯಾನ್ಸೆನ್.

    ಅಂತಿಮ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸ್ ಬಾರಿಸಿದ ಯಾನ್ಸೆನ್.

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್.

    RSA 394/5 (49)

     

     

  • 21 Oct 2023 05:51 PM (IST)

    ENG vs RSA ICC World Cup 2023 Live Score: ಭರ್ಜರಿ ಶತಕ ಸಿಡಿಸಿದ ಕ್ಲಾಸೆನ್

    ಮಾರ್ಕ್​ ವುಡ್ ಎಸೆತದಲ್ಲಿ ಆಫ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ಹೆನ್ರಿಕ್ ಕ್ಲಾಸೆನ್.

    ಈ ಫೋರ್​ನೊಂದಿಗೆ ಕೇವಲ 61 ಎಸೆತಗಳಲ್ಲಿ ಶತಕ ಪೂರೈಸಿದ ಸೌತ್ ಆಫ್ರಿಕಾ ತಂಡದ ಸ್ಟಾರ್ ಬ್ಯಾಟರ್.

    RSA 348/5 (47)

     

  • 21 Oct 2023 05:41 PM (IST)

    ENG vs RSA ICC World Cup 2023 Live Score: ಸ್ಟ್ರೈಟ್ ಹಿಟ್ ಸಿಕ್ಸ್

    ಡೇವಿಡ್ ವಿಲ್ಲಿ ಎಸೆದ 46ನೇ ಓವರ್​ನ 4ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಮಾರ್ಕೊ ಯಾನ್ಸೆನ್.

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.

    RSA 333/5 (46)

      

  • 21 Oct 2023 05:36 PM (IST)

    ENG vs RSA ICC World Cup 2023 Live Score: 45 ಓವರ್​ಗಳು ಮುಕ್ತಾಯ

    ಮಾರ್ಕ್​ ವುಡ್ ಎಸೆದ 45ನೇ ಓವರ್​ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಫೋರ್ ಬಾರಿಸಿದ ಹೆನ್ರಿಕ್ ಕ್ಲಾಸೆನ್.

    45 ಓವರ್​ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 315 ರನ್​ಗಳು

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.

    RSA 315/5 (45)

      

  • 21 Oct 2023 05:26 PM (IST)

    ENG vs RSA ICC World Cup 2023 Live Score: ತ್ರಿಶತಕ ಪೂರೈಸಿದ ಸೌತ್ ಆಫ್ರಿಕಾ

    ರೀಸ್ ಟೋಪ್ಲಿ ಎಸೆದ 44ನೇ ಓವರ್​ನ 3ನೇ ಮತ್ತು 4ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಕ್ಲಾಸೆನ್.

    ಈ ಫೋರ್​ಗಳೊಂದಿಗೆ 300ರ ಗಡಿದಾಟಿದ ಸೌತ್ ಆಫ್ರಿಕಾ ತಂಡದ ಸ್ಕೋರ್.

    5ನೇ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಹೆನ್ರಿಕ್ ಕ್ಲಾಸೆನ್.

    RSA 306/5 (44)

      

  • 21 Oct 2023 05:22 PM (IST)

    ENG vs RSA ICC World Cup 2023 Live Score: ಬೃಹತ್ ಮೊತ್ತದತ್ತ ಸೌತ್ ಆಫ್ರಿಕಾ ತಂಡ

    ಆದಿಲ್ ರಶೀದ್ ಎಸೆದ 43ನೇ ಓವರ್​ನ ಮೊದಲ ಎಸೆತದಲ್ಲೇ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹೆನ್ರಿಕ್ ಕ್ಲಾಸೆನ್.

    ಬೃಹತ್ ಮೊತ್ತದತ್ತ ಸೌತ್ ಆಫ್ರಿಕಾ ತಂಡ.

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.

    RSA 287/5 (43)

      

  • 21 Oct 2023 05:10 PM (IST)

    ENG vs RSA ICC World Cup 2023 Live Score: 40 ಓವರ್​ಗಳು ಮುಕ್ತಾಯ

    40 ಓವರ್​ಗಳ ಮುಕ್ತಾಯದ ವೇಳೆಗೆ 256 ರನ್ ಕಲೆಹಾಕಿದ ಸೌತ್ ಆಫ್ರಿಕಾ.

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.

    ಕೊನೆಯ 10 ಓವರ್​ಗಳಲ್ಲಿ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಸೌತ್ ಆಫ್ರಿಕಾ.

    RSA 256/5 (40)

    ಕ್ವಿಂಟನ್ ಡಿಕಾಕ್, ರೀಝ ಹೆಂಡ್ರಿಕ್ಸ್, ರಾಸ್ಸಿ ವಂಡರ್ ಡಸ್ಸೆನ್, ಡೇವಿಡ್ ಮಿಲ್ಲರ್ ಹಾಗೂ ಐಡೆನ್ ಮಾರ್ಕ್ರಾಮ್ ಔಟ್.

     

      

  • 21 Oct 2023 05:04 PM (IST)

    ENG vs RSA ICC World Cup 2023 Live Score: 250 ರನ್ ಪೂರೈಸಿದ ಸೌತ್ ಆಫ್ರಿಕಾ

    38.2 ಓವರ್​ಗಳಲ್ಲಿ 250 ರನ್ ಪೂರೈಸಿದ ಸೌತ್ ಆಫ್ರಿಕಾ ತಂಡ.

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.

    ಬೃಹತ್ ಮೊತ್ತದತ್ತ ಮುನ್ನಡೆಯುತ್ತಿರುವ ಸೌತ್ ಆಫ್ರಿಕಾ ತಂಡ.

    RSA 254/5 (39)

      

      

  • 21 Oct 2023 04:57 PM (IST)

    ENG vs RSA ICC World Cup 2023 Live Score: ಸೌತ್ ಆಫ್ರಿಕಾ ತಂಡದ 5ನೇ ವಿಕೆಟ್ ಪತನ

    ರೀಸ್ ಟೋಪ್ಲಿ ಎಸೆದ 37ನೇ ಓವರ್​ನ 3ನೇ ಎಸೆತದಲ್ಲಿ ಬೆನ್ ಸ್ಟೋಕ್ಸ್​ಗೆ ಕ್ಯಾಚ್ ನೀಡಿದ ಡೇವಿಡ್ ಮಿಲ್ಲರ್.

    6 ಎಸೆತಗಳಲ್ಲಿ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಡೇಂಜರಸ್ ಬ್ಯಾಟ್ಸ್​ಮನ್ ಮಿಲ್ಲರ್.

    37 ಓವರ್​ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 5 ವಿಕೆಟ್ ನಷ್ಟಕ್ಕೆ 245 ರನ್​ಗಳು.

    RSA 245/5 (37)

      

  • 21 Oct 2023 04:50 PM (IST)

    ENG vs RSA ICC World Cup 2023 Live Score: ವೆಲ್ಕಂ ಬೌಂಡರಿ

    ಡೇವಿಡ್ ವಿಲ್ಲಿ ಎಸೆದ 36ನೇ ಓವರ್​ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದ ಹೆನ್ರಿಕ್ ಕ್ಲಾಸೆನ್.

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್.

    36 ಓವರ್​ಗಳ ಮುಕ್ತಾಯದ ವೇಳೆಗೆ 239 ರನ್ ಕಲೆಹಾಕಿದ ಸೌತ್ ಆಫ್ರಿಕಾ.

    RSA 239/4 (36)

      

  • 21 Oct 2023 04:44 PM (IST)

    ENG vs RSA ICC World Cup 2023 Live Score: 35 ಓವರ್​​ಗಳು ಮುಕ್ತಾಯ

    ರೀಸ್ ಟೋಪ್ಲಿ ಎಸೆದ 35ನೇ ಓವರ್​ನ ಕೊನೆಯ ಎಸೆತದಲ್ಲಿ ಜಾನಿ ಬೈರ್​ಸ್ಟೋವ್​ಗೆ ಕ್ಯಾಚ್ ನೀಡಿದ ಐಡೆನ್ ಮಾರ್ಕ್ರಾಮ್.

    44 ಎಸೆತಗಳಲ್ಲಿ 42 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಐಡೆನ್ ಮಾರ್ಕ್ರಾಮ್.

    35 ಓವರ್​ಗಳ ಮುಕ್ತಾಯದ ವೇಳೆಗೆ 233 ರನ್ ಕಲೆಹಾಕಿದ ಸೌತ್ ಆಫ್ರಿಕಾ.

    RSA 233/4 (35)

     

  • 21 Oct 2023 04:28 PM (IST)

    ENG vs RSA ICC World Cup 2023 Live Score: ದ್ವಿಶತಕ ಪೂರೈಸಿದ ಸೌತ್ ಆಫ್ರಿಕಾ

    32 ಓವರ್​ಗಳಲ್ಲಿ ದ್ವಿಶತಕ ಪೂರೈಸಿದ ಸೌತ್ ಆಫ್ರಿಕಾ ತಂಡ.

    6.5 ರ ಸರಾಸರಿಯಲ್ಲಿ ರನ್ ಪೇರಿಸುತ್ತಿರುವ ಹರಿಣರು.

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್.

    RSA 208/3 (32)

    ಕ್ವಿಂಟನ್ ಡಿಕಾಕ್, ರೀಝ ಹೆಂಡಿಕ್ಸ್ ಹಾಗೂ ರಾಸ್ಸಿ ವಂಡರ್ ಡಸ್ಸೆನ್ ಔಟ್.

     

  • 21 Oct 2023 04:16 PM (IST)

    ENG vs RSA Live Score: ಸೌತ್ ಆಫ್ರಿಕಾ ಭರ್ಜರಿ ಬ್ಯಾಟಿಂಗ್

    30 ಓವರ್​ಗಳ ಮುಕ್ತಾಯದ ವೇಳೆಗೆ 192 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.

    3 ವಿಕೆಟ್​ಗಳನ್ನು ಕಬಳಿಸಿದ ಇಂಗ್ಲೆಂಡ್ ಬೌಲರ್​ಗಳು.

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್.

    RSA 192/3 (30)

     

  • 21 Oct 2023 03:59 PM (IST)

    ENG vs RSA Live Score: ಸೌತ್ ಆಫ್ರಿಕಾ ತಂಡದ 3ನೇ ವಿಕೆಟ್ ಪತನ

    ಆದಿಲ್ ರಶೀದ್ ಎಸೆದ 26ನೇ ಓವರ್​ನ 2ನೇ ಎಸೆತದಲ್ಲಿ ರೀಝ ಹೆಂಡ್ರಿಕ್ಸ್ ಕ್ಲೀನ್ ಬೌಲ್ಡ್​.

    75 ಎಸೆತಗಳಲ್ಲಿ 85 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹೆಂಡ್ರಿಕ್ಸ್.

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್.

    RSA 165/3 (26)

      

  • 21 Oct 2023 03:41 PM (IST)

    ENG vs RSA ICC World Cup 2023 Live Score:ಸೌತ್ ಆಫ್ರಿಕಾ 2ನೇ ವಿಕೆಟ್ ಪತನ

    ಆದಿಲ್ ರಶೀದ್ ಎಸೆದ 20ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಕ್ಯಾಚ್ ನೀಡಿದ ಔಟಾದ ರಾಸ್ಸಿ ವಂಡರ್ ಡಸ್ಸೆನ್ (60).

    20 ಓವರ್​​ಗಳ ಮುಕ್ತಾಯದ ವೇಳೆಗೆ 126 ರನ್ ಕಲೆಹಾಕಿದ ಸೌತ್ ಆಫ್ರಿಕಾ.

    ಕ್ರೀಸ್​ನಲ್ಲಿ ರೀಝ ಹೆಂಡ್ರಿಕ್ಸ್ ಹಾಗೂ ಐಡೆನ್ ಮಾರ್ಕ್ರಾಮ್ ಬ್ಯಾಟಿಂಗ್.

    RSA 126/2 (20)

      

  • 21 Oct 2023 03:15 PM (IST)

    ENG vs RSA ICC World Cup 2023 Live Score: 15 ಓವರ್​ಗಳ ಮುಕ್ತಾಯ

    ಜೋ ರೂಟ್ ಎಸೆದ 15ನೇ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ರಾಸ್ಸಿ ವಂಡರ್ ಡಸ್ಸೆನ್.

    15 ಓವರ್​ಗಳ ಮುಕ್ತಾಯದ ವೇಳೆಗೆ 91 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.

    ಮೊದಲ ಓವರ್​ನಲ್ಲಿ ಕ್ವಿಂಟನ್ ಡಿಕಾಕ್ (4) ವಿಕೆಟ್ ಪಡೆಯಲು ಮಾತ್ರ ಯಶಸ್ವಿಯಾಗಿರುವ ಇಂಗ್ಲೆಂಡ್.

    ಕ್ರೀಸ್​ನಲ್ಲಿ ರೀಝ ಹೆಂಡ್ರಿಕ್ಸ್ (42) ಹಾಗೂ ರಾಸ್ಸಿ ವಂಡರ್ ಡಸ್ಸೆನ್ (43) ಬ್ಯಾಟಿಂಗ್.

    ಸೌತ್ ಆಫ್ರಿಕಾ- 91/1 (15)

      

  • 21 Oct 2023 03:02 PM (IST)

    ENG vs RSA ICC World Cup 2023 Live Score: ರೀಝ ರಾಕೆಟ್ ಶಾಟ್

    ಮಾರ್ಕ್​ ವುಡ್​ ಎಸೆದ 12ನೇ ಓವರ್​ನ 4ನೇ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ರಾಕೆಟ್ ಶಾ ಫೋರ್ ಬಾರಿಸಿದ ರೀಝ ಹೆಂಡ್ರಿಕ್ಸ್​.

    ಕ್ರೀಸ್​ನಲ್ಲಿ ರೀಝ ಹೆಂಡ್ರಿಕ್ಸ್ ಹಾಗೂ ರಾಸ್ಸಿ ವಂಡರ್ ಡಸ್ಸೆನ್ ಬ್ಯಾಟಿಂಗ್.

    RSA 70/1 (12)

      

     

  • 21 Oct 2023 02:52 PM (IST)

    ENG vs RSA ICC World Cup 2023 Live Score: 10 ಓವರ್​ಗಳು ಮುಕ್ತಾಯ

    ಡೇವಿಡ್ ವಿಲ್ಲಿ ಎಸೆದ 10ನೇ ಓವರ್​ನ 2ನೇ ಎಸೆತದಲ್ಲಿ ಲೆಗ್ ಸೈಡ್​ನತ್ತ ಫೋರ್ ಬಾರಿಸಿದ ರೀಝ ಹೆಂಡ್ರಿಕ್ಸ್.

    ಈ ಫೋರ್​ನೊಂದಿಗೆ ಅರ್ಧಶತಕ ಪೂರೈಸಿದ ಸೌತ್ ಆಫ್ರಿಕಾ ತಂಡ.

    ಮೂರನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಮತ್ತೊಂದು ಬೌಂಡರಿ ಬಾರಿಸಿದ ಹೆಂಡ್ರಿಕ್ಸ್​.

    10 ಓವರ್​ಗಳ ಮುಕ್ತಾಯದ ವೇಳೆಗೆ 59 ರನ್ ಕಲೆಹಾಕಿದ ಸೌತ್ ಆಫ್ರಿಕಾ

    RSA 59/1 (10)

      

  • 21 Oct 2023 02:47 PM (IST)

    ENG vs RSA ICC World Cup 2023 Live Score: ಉತ್ತಮ ಜೊತೆಯಾಟ

    2ನೇ ವಿಕೆಟ್​ಗೆ ರೀಝ ಹೆಂಡ್ರಿಕ್ಸ್ ಹಾಗೂ ರಾಸ್ಸಿ ವಂಡರ್​ ಡಸ್ಸನೆ ನಡುವೆ 45 ರನ್​ಗಳ ಜೊತೆಯಾಟ.

    9 ಓವರ್​ಗಳ ಮುಕ್ತಾಯದ ವೇಳೆ 49 ರನ್​ಗಳನ್ನು ಕಲೆಹಾಕಿದ ಸೌತ್ ಆಫ್ರಿಕಾ.

    ಕ್ರೀಸ್​ನಲ್ಲಿ ರೀಝ ಹೆಂಡ್ರಿಕ್ಸ್ ಹಾಗೂ ರಾಸ್ಸಿ ವಂಡರ್ ಡಸ್ಸೆನ್ ಬ್ಯಾಟಿಂಗ್.

    RSA 49/1 (9)

      

  • 21 Oct 2023 02:37 PM (IST)

    ENG vs RSA ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ರೀಸ್ ಟೋಪ್ಲಿ ಎಸೆದ 8ನೇ ಓವರ್​ನ 4ನೇ ಮತ್ತು 5ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಸ್ಸಿ ವಂಡರ್ ಡಸ್ಸೆನ್.

    ಕ್ರೀಸ್​ನಲ್ಲಿ ರೀಝ ಹೆಂಡ್ರಿಕ್ಸ್ ಹಾಗೂ ರಾಸ್ಸಿ ವಂಡರ್ ಡಸ್ಸೆನ್ ಬ್ಯಾಟಿಂಗ್.

    7 ಓವರ್​ಗಳಲ್ಲಿ 29 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.

    RSA 29/1 (7)

     

  • 21 Oct 2023 02:34 PM (IST)

    ENG vs RSA ICC World Cup 2023 Live Score: ಇಂಗ್ಲೆಂಡ್ ಉತ್ತಮ ಬೌಲಿಂಗ್

    5 ಓವರ್​ಗಳ ಮುಕ್ತಾಯದ ವೇಳೆಗೆ ಕೇವಲ 16 ರನ್ ಕಲೆಹಾಕಿದ ಸೌತ್ ಆಫ್ರಿಕಾ ಬ್ಯಾಟರ್​ಗಳು.

    ಇಂಗ್ಲೆಂಡ್ ತಂಡದಿಂದ ಉತ್ತಮ ಬೌಲಿಂಗ್.

    RSA 16/1 (5).

    ಕ್ರೀಸ್​ನಲ್ಲಿ ರೀಝ ಹೆಂಡ್ರಿಕ್ಸ್ ಹಾಗೂ ರಾಸ್ಸಿ ವಂಡರ್ ಡಸ್ಸೆನ್ ಬ್ಯಾಟಿಂಗ್.

     

  • 21 Oct 2023 02:10 PM (IST)

    Karnataka News Live: ಡಿಸಿಎಂ‌ ಅನ್ನುವುದಕ್ಕಿಂತ ಆಪರೇಷನ್ ಮಂತ್ರಿ ಅನ್ನುವುದು ಸೂಕ್ತ; ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಸಂಬಂಧಿಸಿದಂತೆ ನಮ್ಮ ಪಕ್ಷದ ಮೇಲೆ ಪೂರ್ಣಿಮಾ ಯಾವುದೇ ಅಸಮಾಧಾನ ಹೇಳಿಲ್ಲ. ಹೋಗುವವರಿಗೆ ಬರುವವರಿಗೆ ಸ್ವಾತಂತ್ರ್ಯವಿದೆ. ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮೇಲೆ ಏನೋ ಒತ್ತಡವಿದೆ. ಒತ್ತಡದಿಂದಾಗಿಯೇ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಡಿ.ಕೆ.ಶಿವಕುಮಾರ್​ಗೆ ಕೊಟ್ಟಿರುವ ಹುದ್ದೆ ನಿಭಾಯಿಸಲು ಆಗುತ್ತಿಲ್ಲ. ಅಪರೇಷನ್​ಗಾಗಿ ಜೆಡಿಎಸ್​, ಬಿಜೆಪಿಯವರ ಮನೆಗೆ ಅವರೇ ಹೋಗುತ್ತಾರೆ. ಡಿಸಿಎಂ‌ ಅನ್ನೋದಕ್ಕಿಂತ ಅಪರೇಷನ್ ಮಂತ್ರಿ ಅನ್ನೋದು ಸೂಕ್ತ. ಕಾಂಗ್ರೆಸ್​ನಲ್ಲಿ ಕೊತ ಕೊತ ಕುದಿಯುತ್ತಿದೆ ಎಂದು ಎಂಎಲ್​ಸಿ ಛಲವಾದಿ ನಾರಾಯಣಸ್ವಾಮಿ ಹೇಳಿದರು.

  • 21 Oct 2023 02:07 PM (IST)

    ENG vs RSA ICC World Cup 2023 Live Score: ಇಂಗ್ಲೆಂಡ್ ಶುಭಾರಂಭ

    ರೀಸ್ ಟೋಪ್ಲಿ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಕ್ವಿಂಟನ್ ಡಿಕಾಕ್.

    2ನೇ ಎಸೆತದಲ್ಲಿ ವಿಕೆಟ್ ಕೀಪರ್​  ಜೋಸ್ ಬಟ್ಲರ್​ಗೆ ಕ್ಯಾಚ್ ನೀಡಿದ ಕ್ವಿಂಟನ್ ಡಿಕಾಕ್ (4).

    ಮೊದಲ ಓವರ್​ನಲ್ಲಿ ಕೇವಲ 5 ರನ್ ನೀಡಿ 1 ವಿಕೆಟ್ ಕಬಳಿಸಿದ ಎಡಗೈ ವೇಗಿ ರೀಸ್ ಟೋಪ್ಲಿ.

    ಕ್ರೀಸ್​ನಲ್ಲಿ ರೀಝ ಹೆಂಡ್ರಿಕ್ಸ್​ ಹಾಗೂ ರಾಸ್ಸಿ ವಂಡರ್ ಡಸ್ಸೆನ್ ಬ್ಯಾಟಿಂಗ್.

    RSA 5/1 (1)

      

     

     

  • 21 Oct 2023 01:43 PM (IST)

    ENG vs RSA ICC World Cup 2023 Live Score: ಸೌತ್ ಆಫ್ರಿಕಾ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ

  • 21 Oct 2023 01:43 PM (IST)

    ENG vs RSA ICC World Cup 2023 Live Score: ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಇಂಗ್ಲೆಂಡ್ (ಪ್ಲೇಯಿಂಗ್ XI): ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಡೇವಿಡ್ ವಿಲ್ಲಿ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ರೀಸ್ ಟೋಪ್ಲಿ.

  • 21 Oct 2023 01:39 PM (IST)

    ENG vs RSA ICC World Cup 2023 Live Score: ಟಾಸ್ ಗೆದ್ದ ಇಂಗ್ಲೆಂಡ್

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

Published On - 1:38 pm, Sat, 21 October 23

Follow us on