T20 World Cup 2022: ಟಿ20 ವಿಶ್ವಕಪ್ ಆರಂಭಕ್ಕೆ ಇನ್ನೊಂದೇ ದಿನ ಬಾಕಿ; ಮಿನಿ ಸಮರದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

| Updated By: ಪೃಥ್ವಿಶಂಕರ

Updated on: Oct 15, 2022 | 1:04 PM

T20 World Cup 2022: ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯಲ್ಲಿರುವ ಈ ಟೂರ್ನಿಯಲ್ಲಿ 16 ತಂಡಗಳು 45 ಪಂದ್ಯಗಳನ್ನು ಆಡಲಿವೆ. ಎ ಮತ್ತು ಬಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್ 12 ಗೆ ಅರ್ಹತೆ ಪಡೆಯುತ್ತವೆ.

T20 World Cup 2022: ಟಿ20 ವಿಶ್ವಕಪ್ ಆರಂಭಕ್ಕೆ ಇನ್ನೊಂದೇ ದಿನ ಬಾಕಿ; ಮಿನಿ ಸಮರದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
T20 World Cup 2022
Follow us on

ಟಿ20 ವಿಶ್ವಕಪ್‌ಗೆ (T20 World Cup) ಕೇವಲ ಒಂದು ದಿನ ಮಾತ್ರ ಉಳಿದಿದೆ. ಕಪ್ ಗೆಲ್ಲುವ ಗುರಿಯೊಂದಿಗೆ ಹಲವು ದೇಶಗಳು ಈ ಮಿನಿ ಸಮರದಲ್ಲಿ ಪೈಪೋಟಿ ನಡೆಸಲಿವೆ. ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ಮಿನಿ ವಿಶ್ವ ಸಮರ ಅಭಿಮಾನಿಗಳಿಗೆ ರಸದೌತಣವನ್ನೇ ನೀಡಲಿದೆ. ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯಲ್ಲಿರುವ ಈ ಟೂರ್ನಿಯಲ್ಲಿ 16 ತಂಡಗಳು 45 ಪಂದ್ಯಗಳನ್ನು ಆಡಲಿವೆ. ಮೊದಲು ಅರ್ಹತಾ ಸುತ್ತಿನಲ್ಲಿ ಪಂದ್ಯಗಳನ್ನಾಡುವ ಎ ಮತ್ತು ಬಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್ 12 ಗೆ ಅರ್ಹತೆ ಪಡೆಯುತ್ತವೆ.

ಬಹುಮಾನದ ಮೊತ್ತ ಎಷ್ಟು?

ಈಗಾಗಲೇ ಐಸಿಸಿ ಕೂಡ ಪಂದ್ಯಾವಳಿಯ ವಿಜೇತ ತಂಡಕ್ಕೆ ಸಿಗುವ ಬಹುಮಾನದ ಮೊತ್ತವನ್ನು ಸಹ ಘೋಷಿಸಿದ್ದು, ಚಾಂಪಿಯನ್ ತಂಡಕ್ಕೆ 1.6 ಮಿಲಿಯನ್ ಯುಎಸ್ ಡಾಲರ್ ನಗದು ಬಹುಮಾನ ನೀಡಲಾಗುತ್ತದೆ. ರನ್ನರ್ ಅಪ್ ತಂಡಕ್ಕೆ 8 ಲಕ್ಷ ಡಾಲರ್ ಸಿಗಲಿದೆ. ಅಲ್ಲದೆ ಸೆಮಿಫೈನಲ್ ಆಡುವ ತಂಡಗಳಿಗೆ 4 ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಐಸಿಸಿ ಪ್ರಕಟಣೆ ಹೊರಡಿಸಿದೆ.

ಈ ಭಾರಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾದ ಏಳು ನಗರಗಳಲ್ಲಿ ನಡೆಯಲಿದೆ. ಈ ವರ್ಷ ಟೂರ್ನಿ ಮೂರು ಹಂತಗಳಲ್ಲಿ ನಡೆಯಲಿದ್ದು, ಪಂದ್ಯಾವಳಿಯು ಅರ್ಹತಾ ಪಂದ್ಯಗಳೊಂದಿಗೆ ಆರಂಭವಾಗಲಿದೆ. ಅದರಲ್ಲಿ ನಾಲ್ಕು ತಂಡಗಳು ಅಂದರೆ ಎರಡು ಗುಂಪುಗಳಲ್ಲಿ ಅಗ್ರ ಸ್ಥಾನ ಪಡೆದ ಎರಡು ತಂಡಗಳು ಸೂಪರ್ 12 ಗೆ ಅರ್ಹತೆ ಪಡೆಯುತ್ತವೆ.

ಅರ್ಹತಾ ಪಂದ್ಯಗಳನ್ನಾಡಲಿರುವ ತಂಡಗಳು

ಗುಂಪು A: ನಮೀಬಿಯಾ, ನೆದರ್ಲ್ಯಾಂಡ್ಸ್, ಶ್ರೀಲಂಕಾ, ಯುನೈಟೆಡ್ ಅರಬ್ ಎಮಿರೇಟ್ಸ್,

ಗುಂಪು B: ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್, ಜಿಂಬಾಬ್ವೆ

ಈ ಎರಡು ಗುಂಪುಗಳಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳು ಸೂಪರ್ 12 ಗೆ ಅರ್ಹತೆ ಪಡೆಯುತ್ತವೆ. ಈ ಹಂತದಲ್ಲಿ, ಎರಡು ಗುಂಪುಗಳ ತಂಡಗಳು ರೌಂಡ್ ರಾಬಿನ್ ( ಪ್ರತಿ ತಂಡವು ಇತರ ತಂಡಗಳೆದುರು ತಲಾ ಒಂದೊಂದು ಪಂದ್ಯವನ್ನಾಡುತ್ತವೆ) ಆಡುತ್ತವೆ. ಆ ಬಳಿಕ ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುತ್ತವೆ.

ಸೂಪರ್ 12ನಲ್ಲಿ ಸ್ಥಾನ ಪಡೆದಿರುವ ತಂಡಗಳು

ಗುಂಪು 1: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಗ್ರೂಪ್ ಎ ವಿನ್ನರ್, ಗ್ರೂಪ್ ಬಿ ರನ್ನರ್ ಅಪ್,

ಗ್ರೂಪ್ 2 ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಗ್ರೂಪ್ ಬಿ ವಿನ್ನರ್, ಗ್ರೂಪ್ ಎ ರನ್ನರ್ ಅಪ್.

ಅಂತಿಮ ಪಂದ್ಯಾವಳಿ ನವೆಂಬರ್ 13 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ನಾಕೌಟ್ ಹಂತಗಳಲ್ಲಿ ಸೆಮಿ-ಫೈನಲ್ ಮತ್ತು ಫೈನಲ್‌ ಪಂದ್ಯಕ್ಕೆ ಮೀಸಲು ದಿನಗಳನ್ನು ನಿಗದಿಪಡಿಸಲಾಗಿದೆ (ಒಂದು ವೇಳೆ ಈ ಪಂದ್ಯಗಳು ನಡೆಯುವ ದಿನ ಹವಾಮಾನ ವೈಪರಿತ್ಯದಿಂದಾಗಿ ಪಂದ್ಯ ನಡೆಯದೆ ಹೋದರೆ, ಈ ಪಂದ್ಯಗಳನ್ನು ನಡೆಸಲು ಬೇರಿ ದಿನವನ್ನು ನಿಗದಿಪಡಿಸಿಲಾಗಿರುತ್ತದೆ). ಇನ್ನುಳಿದಂತೆ ಬೇರೆ ಯಾವುದೇ ಪಂದ್ಯಗಳಿಗೆ ಮೀಸಲು ದಿನಗಳನ್ನು ನಿಗದಿ ಪಡಿಸಿಲ್ಲ.

ಭಾರತದ ವೇಳಾಪಟ್ಟಿ

ಭಾರತ vs ಆಸ್ಟ್ರೇಲಿಯಾ – 17 ಅಕ್ಟೋಬರ್,(ಅಭ್ಯಾಸ ಪಂದ್ಯ)

ಭಾರತ vs ನ್ಯೂಜಿಲೆಂಡ್ – 19 ಅಕ್ಟೋಬರ್,(ಅಭ್ಯಾಸ ಪಂದ್ಯ)

ಭಾರತ vs ಪಾಕಿಸ್ತಾನ – 23 ಅಕ್ಟೋಬರ್,

ಭಾರತ vs ರನ್ನರ್ ಅಪ್ (ಗುಂಪು A) – 27 ಅಕ್ಟೋಬರ್,

ಭಾರತ vs ದಕ್ಷಿಣ ಆಫ್ರಿಕಾ – 30 ಅಕ್ಟೋಬರ್,

ಭಾರತ vs ಬಾಂಗ್ಲಾದೇಶ – 2 ನವೆಂಬರ್,

ಭಾರತ vs ಬಿ ಗುಂಪಿನ ವಿಜೇತ ತಂಡ – ನವೆಂಬರ್ 6

ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Sat, 15 October 22