T20 World Cup 2022: ತ್ರಿಕೋನ ಸರಣಿಯಲ್ಲಿ ಫ್ಲಾಪ್; ಟಿ20 ವಿಶ್ವಕಪ್‌ ತಂಡದಿಂದ ಇಬ್ಬರು ಆಟಗಾರರಿಗೆ ಗೇಟ್​ಪಾಸ್..!

T20 World Cup 2022: ಸೈಫುದ್ದೀನ್ ಮತ್ತು ಶಬ್ಬೀರ್ ಇಬ್ಬರನ್ನು ಕೈಬಿಟ್ಟಿರುವ ಆಯ್ಕೆ ಮಂಡಳಿ, ಈ ನಿರ್ಧಾರಕ್ಕೆ ಈ ಇಬ್ಬರ ಕಳಪೆ ಫಾರ್ಮ್ ಮತ್ತು ಫಿಟ್‌ನೆಸ್ಸೆ ಕಾರಣ ಎಂಬ ವಿವರಣೆ ನೀಡಿದ್ದಾರೆ.

T20 World Cup 2022: ತ್ರಿಕೋನ ಸರಣಿಯಲ್ಲಿ ಫ್ಲಾಪ್; ಟಿ20 ವಿಶ್ವಕಪ್‌ ತಂಡದಿಂದ ಇಬ್ಬರು ಆಟಗಾರರಿಗೆ ಗೇಟ್​ಪಾಸ್..!
T20 ವಿಶ್ವಕಪ್ 2022 ಪ್ರಾರಂಭವಾಗುವ ಮೊದಲು ಬಾಂಗ್ಲಾದೇಶ ತನ್ನ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಿದೆ. ಶಬ್ಬೀರ್ ರೆಹಮಾನ್- ಮೊಹಮ್ಮದ್ ಸೈಫುದ್ದೀನ್ ಅವರನ್ನು ತಂಡದಿಂದ ಕೈಬಿಟ್ಟಿದ್ದು, ಅವರ ಸ್ಥಾನಕ್ಕೆ ಸೌಮ್ಯ ಸರ್ಕಾರ್ ಹಾಗೂ ಶೋರಿಫುಲ್ ಇಸ್ಲಾಂ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ.
Follow us
TV9 Web
| Updated By: ಪೃಥ್ವಿಶಂಕರ

Updated on:Oct 15, 2022 | 11:50 AM

ನ್ಯೂಜಿಲೆಂಡ್‌ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ (tri-series) ಬಾಂಗ್ಲಾದೇಶದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಟಿ20 ವಿಶ್ವಕಪ್‌ಗೆ ಮುನ್ನ ತಂಡಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ತನ್ನ ಟಿ20 ವಿಶ್ವಕಪ್ (T20 World Cup)​ ತಂಡದಲ್ಲಿ ಬದಲಾವಣೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮುಂದಾಗಿದೆ. ಅಕ್ಟೋಬರ್ 15 ರ ಒಳಗೆ ಎಲ್ಲಾ ಮಂಡಳಿಗಳು ತಮ್ಮ ತಮ್ಮ ತಂಡಗಳ ಆಟಗಾರರ ಅಂತಿಮ ಪಟ್ಟಿಯನ್ನು ಐಸಿಸಿಗೆ (ICC) ಸಲ್ಲಿಸಬೇಕಿದೆ. ಆದರೆ ಅದಕ್ಕೂ ಮೊದಲು ಬಾಂಗ್ಲಾದೇಶ ತನ್ನ 15 ಸದಸ್ಯರ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಇದರ ಪ್ರಯುಕ್ತ ಈ ಮುಂಚೆ ಪ್ರಕಟಿಸಿದ್ದ ತಂಡದಲ್ಲಿ ಇಬ್ಬರು ಆಟಗಾರರನ್ನು ಕೈಬಿಟ್ಟಿದ್ದು, ಅವರ ಸ್ಥಾನಕ್ಕೆ ಸೌಮ್ಯ ಸರ್ಕಾರ್ ಮತ್ತು ಶೋರಿಫುಲ್ ಇಸ್ಲಾಂ ಅವರನ್ನು ಆಯ್ಕೆ ಮಾಡಿದೆ.

ವರದಿಯ ಪ್ರಕಾರ, ಮೊದಲು ತಂಡದಲ್ಲಿದ್ದ ಶಬೀರ್ ರೆಹಮಾನ್ ಮತ್ತು ಮೊಹಮ್ಮದ್ ಸೈಫುದ್ದೀನ್ ತ್ರಿಕೋನ ಸರಣಿಯಲ್ಲಿ ತೀರಕ ಕಳಪೆ ಪ್ರದರ್ಶನ ನೀಡಿದ್ದರು. ಇದನ್ನು ಮನಗಂಡ ಬಾಂಗ್ಲಾದೇಶ ತಂಡದ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ. ಹೀಗಾಗಿ ಶಬ್ಬೀರ್ ಮತ್ತು ಸೈಫುದ್ದೀನ್ ಅವರನ್ನು ಕೈಬಿಟ್ಟು ಸೌಮ್ಯ ಮತ್ತು ಶೋರಿಫುಲ್ ಅವರನ್ನು ಬಾಂಗ್ಲಾದೇಶ ತಂಡಕ್ಕೆ ಸೇರಿಸಿಕೊಂಡಿದೆ.

ಕೊನೆಯ ಕ್ಷಣದಲ್ಲಿ ತಂಡದಲ್ಲಿ 2 ಬದಲಾವಣೆ

ಅಕ್ಟೋಬರ್ 14 ರಂದು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತಮ್ಮ 15 ಸದಸ್ಯರ ಅಂತಿಮ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ ಎಂದು ಹೇಳಿಕೆಯನ್ನು ನೀಡಿದೆ. ಅಲ್ಲದೆ ತನ್ನ ಹೇಳಿಕೆಯಲ್ಲಿ, ತಂಡದ ಅಂತಿಮ ಪಟ್ಟಿಯಲ್ಲಿ 2 ಬದಲಾವಣೆಗಳನ್ನು ಸಹ ಮಾಡಲಾಗಿದೆ ಎಂದು ತಿಳಿಸಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ಹೇಳಿಕೆಯಲ್ಲಿ, ಈ ಮುಂಚೆ ಎಡಗೈ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್ ಮತ್ತು ಎಡಗೈ ವೇಗದ ಬೌಲರ್ ಶೋರಿಫುಲ್ ಇಸ್ಲಾಂ ಅವರನ್ನು ವಿಶ್ವಕಪ್ ತಂಡದಲ್ಲಿ ಸ್ಟ್ಯಾಂಡ್‌ಬೈ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಈಗ ಈ ಇಬ್ಬರನ್ನು ಮುಖ್ಯ ತಂಡದಲ್ಲಿ ಸ್ಥಾನ ಪಡೆದಿದ್ದ ಬ್ಯಾಟ್ಸ್‌ಮನ್ ಶಬ್ಬೀರ್ ರೆಹಮಾನ್ ಮತ್ತು ಆಲ್ ರೌಂಡರ್ ಸೈಫುದ್ದೀನ್ ಅವರ ಬದಲಿಗೆ ತಂಡದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಶಬ್ಬೀರ್- ಸೈಫುದ್ದೀನ್ ಕಳಪೆ ಫಾರ್ಮ್​

ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಬಳಿಕ ನ್ಯೂಜಿಲೆಂಡ್​ನಲ್ಲಿ ತ್ರಿಕೋನ ಸರಣಿ ಮುಗಿಸಿದ ಶಬ್ಬೀರ್ ಮತ್ತು ಸೈಫುದ್ದೀನ್, ಟಿ20 ವಿಶ್ವಕಪ್ ತಂಡದೊಂದಿಗೆ ಮೀಸಲು ಆಟಗಾರರಾಗಿ ಆಸ್ಟ್ರೇಲಿಯಾಕ್ಕೆ ಹೋಗದೆ, ಸೀದಾ ತವರಿಗೆ ಮರಳಿದ್ದಾರೆ. ಸೈಫುದ್ದೀನ್ ಮತ್ತು ಶಬ್ಬೀರ್ ಇಬ್ಬರನ್ನು ಕೈಬಿಟ್ಟಿರುವ ಆಯ್ಕೆ ಮಂಡಳಿ, ಈ ನಿರ್ಧಾರಕ್ಕೆ ಈ ಇಬ್ಬರ ಕಳಪೆ ಫಾರ್ಮ್ ಮತ್ತು ಫಿಟ್‌ನೆಸ್ಸೆ ಕಾರಣ ಎಂಬ ವಿವರಣೆ ನೀಡಿದ್ದಾರೆ.

Published On - 11:46 am, Sat, 15 October 22

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ