Women’s Asia Cup 2022: ಭಾರತದ ದಾಳಿಗೆ ತತ್ತರಿಸಿದ ಲಂಕಾ; 7ನೇ ಬಾರಿಗೆ ಏಷ್ಯಾಕಪ್ ಗೆದ್ದ ಹರ್ಮನ್ ಪಡೆ..!
Women’s Asia Cup 2022: ಬಾಂಗ್ಲಾದೇಶದಲ್ಲಿ ನಡೆದ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ ಲಂಕಾ ತಂಡವನ್ನು ಮಣಿಸುವುದರೊಂದಿಗೆ ಟೀಂ ಇಂಡಿಯಾ 7ನೇ ಬಾರಿಗೆ ಮಹಿಳಾ ಏಷ್ಯಾಕಪ್ ಎತ್ತಿಹಿಡಿದಿದೆ.
ಬಾಂಗ್ಲಾದೇಶದಲ್ಲಿ ನಡೆದ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ (Women’s Asia Cup 2022) ಲಂಕಾ ತಂಡವನ್ನು ಮಣಿಸುವುದರೊಂದಿಗೆ ಟೀಂ ಇಂಡಿಯಾ (Team India) 7ನೇ ಬಾರಿಗೆ ಮಹಿಳಾ ಏಷ್ಯಾಕಪ್ ಎತ್ತಿಹಿಡಿದಿದೆ. 2004 ರಿಂದ ಆರಂಭವಾದ ಈ ಟೂರ್ನಿಯಲ್ಲಿ ಸತತ 6 ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿದ್ದ ಭಾರತ ಕಳೆದ ಆವೃತ್ತಿಯಲ್ಲಿ ಮಾತ್ರ ಬಾಂಗ್ಲಾ ಎದುರು ಫೈನಲ್‌ನಲ್ಲಿ ಮುಗ್ಗರಿಸಿತ್ತು. ಆದರೆ ಈ ಬಾರಿ ಮತ್ತೆ ಏಷ್ಯನ್ ಗದ್ದುಗೆ ಏರುವಲ್ಲಿ ಭಾರತ ವನಿತಾ ಬಳಗ ಯಶಸ್ವಿಯಾಗಿದೆ. ಶ್ರೀಲಂಕಾ ನೀಡಿದ 65 ರನ್ಗಳ ಗುರಿಯನ್ನು ಹರ್ಮನ್ ಪಡೆ 2 ವಿಕೆಟ್ ಕಳೆದುಕೊಂಡು 8.3 ಓವರ್‌ಗಳಲ್ಲಿ ಗುರಿ ತಲುಪಿತು.
ಈ ಮೊದಲು ಭಾರತ ತಂಡ ಥಾಯ್ಲೆಂಡ್ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು. ಅಲ್ಲದೆ ಶ್ರೀಲಂಕಾ ತಂಡ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ್ದರಿಂದ ಫೈನಲ್‌ನಲ್ಲಿ ಭಾರತಕ್ಕೆ ಸ್ವಲ್ಪ ಪೈಪೋಟಿ ನೀಡಬಹುದು ಎಂದು ಭಾವಿಸಲಾಗಿತ್ತು. ಹೀಗಾಗಿ ಈ ಪಂದ್ಯದ ಮೇಲೆ ಸಾಕಷ್ಟು ಕುತೂಹಲ ಹುಟ್ಟಿತ್ತು. ಆದರೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಚಾಮರಿ ಅಟಾಪಟು ಹಾಗೂ ಅನುಷ್ಕಾ ಸಂಜೀವನಿ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. 6 ರನ್ ಗಳಿಸಿದ್ದ ಅಟಾಪಟು 3ನೇ ಓವರ್ನಲ್ಲೇ ರೇಣುಕಾ ಸಿಂಗ್ ಬೌಲಿಂಗ್ನಲ್ಲಿ ರನೌಟ್ ಬಲೆಗೆ ಬಿದ್ದರು.
ಈ ವಿಕೆಟ್ ಬಳಿಕ ಬಂದ ಮಿಕ್ಕ ಬ್ಯಾಟರ್ಗಳು ಸಹ ಭಾರತದ ದಾಳಿ ಮುಂದೆ ಮಂಕಾಗಿಬಿಟ್ಟರು. ಭಾರತದ ದಾಳಿ ಹೇಗಿತ್ತು ಎಂದರೆ, ಲಂಕಾ ತಂಡದ ಇಬ್ಬರು ಬ್ಯಾಟರ್ಗಳನ್ನು ಬಿಟ್ಟು ಮಿಕ್ಕವರ್ಯಾರಿಗು ಎರಡಂಕ್ಕಿ ಮೊತ್ತ ದಾಟಲು ಸಾಧ್ಯವಾಗಲಿಲ್ಲ. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಇನೋಕಾ ರಣವೀರ 18 ರನ್ಗಳಿಸಿ ತಂಡದ ಪರ ಅತ್ಯಧಿಕ ರನ್ ಗಳಿಸಿದ ಆಟಾಗರ್ತಿ ಎನಿಸಿಕೊಂಡರು. ಇವರ ಬಳಿಕ ಓಷದಿ ರಣಸಿಂಗೆ ತಂಡಕ್ಕೆ 13 ರನ್ಗಳ ಕೊಡುಗೆ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿದವರೆ ಉಳಿದವರಿಲ್ಲರೂ ಒಂದಂಕ್ಕಿಗೆ ಸುಸ್ತಾಗಿ ಪೆವಿಲಿಯನ್ ಸೇರಿಕೊಂಡರು. ಹಂತಿಮವಾಗಿ ಶ್ರೀಲಂಕಾ ತಂಡ ಸಂಪೂರ್ಣ 20 ಓವರ್ಗಳನ್ನು ಆಡಿ ಭಾರತಕ್ಕೆ 65 ರನ್ಗಳ ಟಾರ್ಗೆಟ್ ನೀಡಿತು.
ಟೀಂ ಇಂಡಿಯಾ ಪರ ವೇಗಿ ರೇಣುಕಾ ಸಿಂಗ್ ಠಾಕೂರ್ ಅವರಲ್ಲದೆ, ದೀಪ್ತಿ ಶರ್ಮಾ, ಸ್ನೇಹ ರಾಣಾ ಮತ್ತು ರಾಜೇಶ್ವರಿ ಗಾಯಕ್ವಾಡ್ ಶ್ರೀಲಂಕಾವನ್ನು 65 ರನ್‌ಗಳಿಗೆ ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರೇಣುಕಾ ಗರಿಷ್ಠ 3 ವಿಕೆಟ್ ಪಡೆದರೆ, ರಾಜೇಶ್ವರಿ ಮತ್ತು ರಾಣಾ ತಲಾ 2 ವಿಕೆಟ್ ಪಡೆದರು.
????. ?. ???! ? ?
Clinical performance from #TeamIndia as they beat Sri Lanka to win the #AsiaCup2022 title! ? ? #INDvSL
Scorecard ▶️ https://t.co/r5q0NTVLQC
? Courtesy: Asian Cricket Council pic.twitter.com/C61b4s1Hc2
— BCCI Women (@BCCIWomen) October 15, 2022
ಸಿಕ್ಸರ್‌ನೊಂದಿಗೆ ಇನ್ನಿಂಗ್ಸ್ ಮುಗಿಸಿದ ಸ್ಮೃತಿ ಮಂಧಾನ
66 ರನ್ಗಳ ಟಾರ್ಗೆಟ್ ಪಡೆದ ಭಾರತ 8.1 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಈ ಗುರಿ ಸಾಧಿಸಿತು. ಭಾರತದ ಪರ ಸ್ಮೃತಿ ಮಂಧಾನ ಭರ್ಜರಿ ಅರ್ಧಶತಕ ಬಾರಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 25 ಎಸೆತಗಳನ್ನು ಎದುರಿಸಿದ ಸ್ಮೃತಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 51 ರನ್ ಚಚ್ಚಿದರು. ವಿಶೇಷವೆಂದರೆ ಸ್ಮೃತಿ ಮಂಧಾನ ಅವರ ಅರ್ಧಶತಕಕ್ಕೆ 5 ರನ್ ಅಗತ್ಯವಿತ್ತು ಮತ್ತು ತಂಡದ ಗೆಲುವಿಗೆ 1 ರನ್ ಅಗತ್ಯವಿತ್ತು. ಆ ವೇಳೆ ಸಿಕ್ಸರ್‌ನೊಂದಿಗೆ ಇನ್ನಿಂಗ್ಸ್ ಮುಗಿಸುವ ಮೂಲಕ ಮಂಧಾನ ಈ ಎರಡೂ ಕೆಲಸಗಳನ್ನು ಮಾಡಿ ಮುಗಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:13 pm, Sat, 15 October 22