Fact Check: ವಿಶ್ವಕಪ್ ಪ್ರೆಸೆಂಟೇಷನ್ ಸಮಾರಂಭದಲ್ಲಿ ಪ್ಯಾಟ್ ಕಮಿನ್ಸ್‌ ಕೈಕುಲುಕದೇ ಹೋದರೆ ಮೋದಿ?

|

Updated on: Nov 20, 2023 | 7:31 PM

CWC 2023: ಕೈಯಲ್ಲಿ ವಿಶ್ವಕಪ್ ಹಿಡಿದು ಕಮಿನ್ಸ್ ನಗುತ್ತಿರುವಾಗ ಮೋದಿ ಇನ್ನೊಂದು ಬದಿಗೆ ಹೋಗುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಪ್ರಧಾನಿ ಟ್ರೋಫಿ ಹಸ್ತಾಂತರಿಸಿದ ನಂತರ ಕಮಿನ್ಸ್ ನೋಡುತ್ತಿದ್ದರೂ ಅವರ ಕೈಕುಲುಕದೇ ಹೊರಟು ಹೋಗಿದ್ದಾರೆ ಎಂದು ತೋರಿಸುವ ವಿಡಿಯೊ ವೈರಲ್ ಆಗಿದೆ. ಈ ವೈರಲ್​​​ನ ಸತ್ಯಾಸತ್ಯತೆ ಇಲ್ಲಿದೆ

Fact Check: ವಿಶ್ವಕಪ್ ಪ್ರೆಸೆಂಟೇಷನ್ ಸಮಾರಂಭದಲ್ಲಿ ಪ್ಯಾಟ್ ಕಮಿನ್ಸ್‌ ಕೈಕುಲುಕದೇ ಹೋದರೆ ಮೋದಿ?
ನರೇಂದ್ರ ಮೋದಿ
Follow us on

ದೆಹಲಿ ನವೆಂಬರ್ 20 : ಆತಿಥೇಯ ಭಾರತ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿದ ಬಳಿಕ ಆಸ್ಟ್ರೇಲಿಯಾದ (Australia) ನಾಯಕ ಪ್ಯಾಟ್ ಕಮಿನ್ಸ್‌ಗೆ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು (ODI World Cup 2023 )ಹಸ್ತಾಂತರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಕೈಕುಲಕದೇ ವೇದಿಕೆಯಿಂದ ಹಿಂತಿರುಗುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮೋದಿ ವೇದಿಕೆಯಿಂದ ಹಿಂತಿರುಗುವಾಗ ಕೈಯಲ್ಲಿ ವಿಶ್ವಕಪ್ ಹಿಡಿದು ನಗುತ್ತಿರುವಾಗ ಮೋದಿ ಇನ್ನೊಂದು ಬದಿಗೆ ಹೋಗುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಇಲ್ಲಿದೆ ವೈರಲ್ ವಿಡಿಯೊ

ಟ್ರಾವಿಸ್ ಹೆಡ್ ಅವರ ಅದ್ಭುತ ಶತಕದಿಂದ ಆಸ್ಟ್ರೇಲಿಯಾವು ಭಾರತವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಆರನೇ ಐಸಿಸಿ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 1980, 1990, 2000, 2010 ಮತ್ತು 2020 ರ ದಶಕಗಳಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರನ್ನು ಭೇಟಿಯಾಗಿ ನೈತಿಕ ಸ್ಥೈರ್ಯ ತುಂಬಿದ ಪ್ರಧಾನಿ ಮೋದಿ

ಫ್ಯಾಕ್ಟ್ ಚೆಕ್

ವೈರಲ್ ಆಗಿರುವ ವಿಡಿಯೊ ಎಡಿಟ್ ಮಾಡಿದ ವಿಡಿಯೊ ಎಂದು ಇಂಡಿಯಾ ಡಾಟ್ ಕಾಮ್ ವರದಿ ಪ್ರಕಟಿಸಿದೆ.


ಭಾರತೀಯ ಜನತಾ ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಅಭಿನವ್ ಪ್ರಕಾಶ್ ಅವರು ವಿಡಿಯೊವೊಂದನ್ನು ಹಂಚಿಕೊಂಡಿದ್ದು ಇದರಲ್ಲಿ ಟ್ರೋಫಿ ಹಸ್ತಾಂತರಿಸಿದ ಮೋದಿ ಕಮಿನ್ಸ್ ಕೈ ಕುಲುಕುತ್ತಿರುವುದು ಕಾಣುತ್ತದೆ. ಆದರೆ ವೈರಲ್ ವಿಡಿಯೊದಲ್ಲಿ ಕೈಕುಲುಕುವ ಭಾಗವನ್ನು ಮಾತ್ರ ಕಟ್ ಮಾಡಿ ಹರಿಬಿಡಲಾಗಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Mon, 20 November 23