ವಿಶ್ವಕಪ್​ನಲ್ಲಿ ಕ್ರಿಕೆಟ್ ಲೋಕದ ಅತ್ಯಂತ ನತದೃಷ್ಟ ಆಟಗಾರ ರೋಹಿತ್ ಶರ್ಮಾ..!

Rohit Sharma, ICC World Cup: ರೋಹಿತ್ ಶರ್ಮಾ ವಿಷಯ ಬಂದಾಗಲೆಲ್ಲಾ, ಅವರು ಸೀಮಿತ ಓವರ್​ಗಳ ಕ್ರಿಕೆಟ್‌ನ ಯಶಸ್ವಿ ಬ್ಯಾಟ್ಸ್‌ಮನ್ ಮತ್ತು ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ ಎಂಬ ಮಾತು ಇಡೀ ಕ್ರಿಕೆಟ್​ ಜಗತ್ತಿನಿಂದಲೇ ಕೇಳಿಬರುವ ಮಾತಾಗಿದೆ. ಆದಾಗ್ಯೂ, ವಿಶ್ವಕಪ್ ವಿಷಯದಲ್ಲಿ ಮಾತ್ರ ರೋಹಿತ್ ಅವರಷ್ಟು ದುರದೃಷ್ಟಕರ ಆಟಗಾರ ಜಗತ್ತಿನಲ್ಲಿ ಇನ್ನೊಬ್ಬನಿರಲಾರ ಎಂಬ ಮಾತು ಕೂಡ ಅಷ್ಟೇ ಸತ್ಯ.

ವಿಶ್ವಕಪ್​ನಲ್ಲಿ ಕ್ರಿಕೆಟ್ ಲೋಕದ ಅತ್ಯಂತ ನತದೃಷ್ಟ ಆಟಗಾರ ರೋಹಿತ್ ಶರ್ಮಾ..!
ರೋಹಿತ್ ಶರ್ಮಾ
Follow us
|

Updated on:Nov 20, 2023 | 10:39 AM

ರೋಹಿತ್ ಶರ್ಮಾ (Rohit Sharma) ವಿಷಯ ಬಂದಾಗಲೆಲ್ಲಾ, ಅವರು ಸೀಮಿತ ಓವರ್​ಗಳ ಕ್ರಿಕೆಟ್‌ನ ಯಶಸ್ವಿ ಬ್ಯಾಟ್ಸ್‌ಮನ್ ಮತ್ತು ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ ಎಂಬ ಮಾತು ಇಡೀ ಕ್ರಿಕೆಟ್​ ಜಗತ್ತಿನಿಂದಲೇ ಕೇಳಿಬರುವ ಮಾತಾಗಿದೆ. ಆದಾಗ್ಯೂ, ವಿಶ್ವಕಪ್ (ICC World Cup) ವಿಷಯದಲ್ಲಿ ಮಾತ್ರ ರೋಹಿತ್ ಅವರಷ್ಟು ದುರದೃಷ್ಟಕರ ಆಟಗಾರ ಜಗತ್ತಿನಲ್ಲಿ ಇನ್ನೊಬ್ಬನಿರಲಾರ ಎಂಬ ಮಾತು ಕೂಡ ಅಷ್ಟೇ ಸತ್ಯ. ನಿನ್ನೆ ನಡೆದ ವಿಶ್ವಕಪ್ ಫೈನಲ್ ಪಂದ್ಯವೇ ಇದಕ್ಕೆ ಸಾಕ್ಷಿಯಾಗಿದೆ. ನವೆಂಬರ್ 19ರ ಭಾನುವಾರದಂದು ನಡೆದ ವಿಶ್ವಕಪ್ ಫೈನಲ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ಆಸ್ಟ್ರೇಲಿಯಾದ (India Vs Australia) ಎದುರು ಸೋಲಿಗೆ ಶರಣಾಯಿತು. ಇದರೊಂದಿಗೆ ವಿಶ್ವಕಪ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಎಂತಹ ದುರದೃಷ್ಟಕರ ಆಟಗಾರ ಎನ್ನುವುದಕ್ಕೆ ಈ ಪಂದ್ಯವೂ ಸಾಕ್ಷಿಯಾಯಿತು. ಹಾಗಿದ್ದರೆ ರೋಹಿತ್​ರನ್ನು ಏಕೆ ವಿಶ್ವಕಪ್ ವಿಷಯದಲ್ಲಿ ಕ್ರಿಕೆಟ್ ಲೋಕದ ಅತ್ಯಂತ ನತದೃಷ್ಟ ಆಟಗಾರ ಎನ್ನಲಾಗುತ್ತದೆ? ಇದರ ಹಿಂದಿನ ಕಾರಣಗಳೇನು ಎಂಬುದನ್ನು ನೋಡುವುದಾದರೆ..

ಮೊದಲ ವಿಶ್ವಕಪ್

2007 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರೋಹಿತ್ ಶರ್ಮಾ 2011 ರ ಏಕದಿನ ವಿಶ್ವಕಪ್ ಆಡಲು ಸಿದ್ಧರಾಗಿದ್ದರು. ಅವರನ್ನು ಸಂಭಾವ್ಯ ಆಟಗಾರರ ಪಟ್ಟಿಯಲ್ಲಿಯೂ ಸೇರಿಸಲಾಗಿತ್ತು. ಆದರೆ ಮುಖ್ಯ ಆಯ್ಕೆಗಾರ ಕ್ರಿಸ್ ಶ್ರೀಕಾಂತ್ ಮತ್ತು ನಾಯಕ ಎಂಎಸ್ ಧೋನಿ, ರೋಹಿತ್ ಅವರ ಸ್ಥಾನಕ್ಕೆ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರನ್ನು ಆಯ್ಕೆ ಮಾಡಿದರು. ಈ ರೀತಿಯಾಗಿ, ರೋಹಿತ್ ತಮ್ಮ ಮೊದಲ ವಿಶ್ವಕಪ್ ಆಡುವ ಅವಕಾಶವನ್ನು ತಪ್ಪಿಸಿಕೊಂಡರು. ಆದರೆ ರೋಹಿತ್​ ನಂತರ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಕ್ಕಿತು. ಈ ಮೂಲಕ ರೋಹಿತ್ ಶರ್ಮಾ ಮೊದಲ ವಿಶ್ವಕಪ್​ನಿಂದ ವಂಚಿತರಾದರು.

‘ಕೋಚ್ ಆಗಿ ಅವರನ್ನು ಹೀಗೆ ನೋಡಲಾಗುತ್ತಿಲ್ಲ’; ಸೋಲಿನ ನಂತರ ದ್ರಾವಿಡ್ ಹೇಳಿದ್ದೇನು?

ಎರಡನೇ ವಿಶ್ವಕಪ್

ರೋಹಿತ್ ಶರ್ಮಾ ತಮ್ಮ ಮೊದಲ ವಿಶ್ವಕಪ್ ಆಡಲು ಬರೋಬ್ಬರಿ 8 ವರ್ಷಗಳು ಬೇಕಾಯಿತು. 2015 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ರೋಹಿತ್​ಗೆ ಚೊಚ್ಚಲ ವಿಶ್ವಕಪ್ ಆಡುವ ಅವಕಾಶ ಸಿಕ್ಕಿತು. ಆದರೆ ಸೆಮಿ-ಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲುವುದರೊಂದಿಗೆ ತಂಡದ ವಿಶ್ವಕಪ್ ಪ್ರಯಾಣ ಅಂತ್ಯಗೊಂಡಿತ್ತು. ಈ ಪಂದ್ಯದಲ್ಲಿ ಆರಂಭಿಕರಾಗಿ ರೋಹಿತ್ ಉತ್ತಮ ಆರಂಭ ನೀಡಿದರಾದರೂ, ಮಧ್ಯಮ ಕ್ರಮಾಂಕವು ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ತಂಡವು ಸೆಮಿ ಫೈನಲ್​ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತು. ಆ ಟೂರ್ನಿಯಲ್ಲಿ ರೋಹಿತ್ ಶರ್ಮಾ ಒಂದು ಶತಕ ಹಾಗೂ ಎರಡು ಅರ್ಧ ಶತಕ ಸೇರಿದಂತೆ ಒಟ್ಟು 330 ರನ್ ಗಳಿಸಿದ್ದರು.

ಮೂರನೇ ವಿಶ್ವಕಪ್

2019 ರಲ್ಲಿ ರೋಹಿತ್​ಗೆ ಎರಡನೇ ಬಾರಿಗೆ ವಿಶ್ವಕಪ್ ಆಡುವ ಅವಕಾಶ ಸಿಕ್ಕಿತು. ಈ ಆವೃತ್ತಿಯಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಒಂದು ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಬಾರಿಸಿದರು. ಇದರೊಂದಿಗೆ ತಂಡವನ್ನು ಸೆಮಿಫೈನಲ್‌ಗೆ ನಂಬರ್ ಒನ್ ಆಗಿ ಕೊಂಡೊಯ್ದರು. ಆದಾಗ್ಯೂ, ಐದು ಶತಕಗಳನ್ನು ಗಳಿಸಿದ ರೋಹಿತ್, ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಬೇಗನೆ ಔಟಾದರು. ಅವರ ವಿಕೆಟ್ ಪತನದ ಬಳಿಕ ಇಡೀ ತಂಡ ಒತ್ತಡಕ್ಕೆ ಸಿಲುಕಿತು. ಮತ್ತು ಆ ಸೆಮಿಫೈನಲ್ ಪಂದ್ಯದಲ್ಲೂ ಭಾರತ ಸೋತಿತು.

ನಾಲ್ಕನೇ ವಿಶ್ವಕಪ್

ಈ ಬಾರಿ ರೋಹಿತ್ ಶರ್ಮಾ ಅವರೇ ತಂಡದ ನಾಯಕರಾಗಿದ್ದು, ತಂಡಕ್ಕಾಗಿ ಸರ್ವಸ್ವನ್ನು ಧಾರೆ ಎರೆದಿದ್ದರು. ಇಡೀ ಟೂರ್ನಿಯಲ್ಲಿ ರೋಹಿತ್ ತಮ್ಮ ಅರ್ಧಶತಕಗಳ ಬಗ್ಗೆಯಾಗಲೀ, ತಮ್ಮ ಶತಕದ ಬಗ್ಗೆಯಾಗಲೀ ಹೆಚ್ಚು ಚಿಂತಿಸಲಿಲ್ಲ. ಕೇವಲ ತಂಡಕ್ಕಾಗಿ ಆಡಿದ ರೋಹಿತ್ ಪ್ರತಿ ಬಾರಿಯೂ ತಂಡಕ್ಕೆ ವೇಗದ ಆರಂಭವನ್ನು ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇಲ್ಲಿಯೂ ವಿಶ್ವಕಪ್ ಎತ್ತುವ ಅವಕಾಶವನ್ನು ಕಳೆದುಕೊಂಡರು. ಈ ಟೂರ್ನಿಯಲ್ಲಿ 597 ರನ್ ಕಲೆಹಾಕಿದ ರೋಹಿತ್, ಟ್ರೋಫಿ ಗೆಲ್ಲಲು ವಿಫಲರಾದರು. ಪಂದ್ಯದ ಬಳಿಕ ಮಾತನಾಡಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಕೂಡ ರೋಹಿತ್ ಶರ್ಮಾ ದುರದೃಷ್ಟಕರ ಆಟಗಾರ ಎಂಬುದನ್ನು ಬಹಿರಂಗವಾಗಿಯೇ ಹೇಳಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:34 am, Mon, 20 November 23

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್