Fact Check: ಶುಭ್​ಮನ್ ಗಿಲ್ ಕೆಟ್ಟ ಬ್ಯಾಟ್ಸ್​ಮನ್ ಎಂದು ಸರ್ಫರಾಜ್ ಖಾನ್ ಹೇಳಿದ್ದು ನಿಜವೇ?: ವಿಡಿಯೋ ಹಿಂದಿನ ಸತ್ಯ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 28, 2024 | 3:25 PM

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಯೋದಲ್ಲಿ ಭಾರತೀಯ ಕ್ರಿಕೆಟಿಗ ಸರ್ಫರಾಜ್ ಖಾನ್ ತನ್ನ ಸಹ ಆಟಗಾರ ಶುಭ್​ಮನ್ ಗಿಲ್ ಅವರನ್ನು ಕೆಟ್ಟ ಆಟಗಾರ ಎಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೈರಲ್ ಸುದ್ದಿಯ ನಿಜಾಂಶ ಇಲ್ಲಿದೆ ಓದಿ.

Fact Check: ಶುಭ್​ಮನ್ ಗಿಲ್ ಕೆಟ್ಟ ಬ್ಯಾಟ್ಸ್​ಮನ್ ಎಂದು ಸರ್ಫರಾಜ್ ಖಾನ್ ಹೇಳಿದ್ದು ನಿಜವೇ?: ವಿಡಿಯೋ ಹಿಂದಿನ ಸತ್ಯ ಇಲ್ಲಿದೆ
ಸರ್ಫರಾಜ್ ಖಾನ್ ಹೇಳಿಕೆ
Follow us on

ಟೀಮ್ ಇಂಡಿಯಾದ ಯುವ ಸ್ಟಾರ್ ಆಟಗಾರ ಸರ್ಫರಾಜ್ ಖಾನ್ ಅವರ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಸರ್ಫರಾಜ್ ಅವರು ಕ್ರಿಕೆಟ್ ಮೈದಾನದಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಮಾತನಾಡುವ ವೇಳೆ ಖಾನ್ ಅವರು ಶುಭ್​ಮನ್ ಗಿಲ್ ಅವರನ್ನು ಟೀಕಿಸಿದ್ದು, ಕೆಟ್ಟ ಬ್ಯಾಟ್ಸ್‌ಮನ್ ಎಂದು ಕರೆದು ಅಪಹಾಸ್ಯ ಮಾಡಿದ್ದಾರೆ. ಈ ಕುರಿತು ಅನೇಕ ಪೋಸ್ಟ್​ಗಳು ಯೂಟ್ಯೂಬ್ ಮತ್ತು ಎಕ್ಸ್​ನಲ್ಲಿ ಹರಿದಾಡುತ್ತಿದೆ.

ಸ್ಪೋರ್ಟ್ಸ್ ವಿಥ್ ನವೀನ್ ಎಂಬ ಎಕ್ಸ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು “ಸರ್ಫರಾಜ್ ಖಾನ್ ಅವರು ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ ಬಗ್ಗೆ ಮಾತನಾಡಿರುವುದು” ಎಂಬ ಶೀರ್ಷಿಕೆ ನೀಡಿದ್ದಾರೆ.

ಯೂಟ್ಯೂಬ್​ನಲ್ಲಿ ಕೂಡ ಇದೇ ಹೇಳಿಕೆಯೊಂದಿಗೆ ವಿಡಿಯೋ ವೈರಲ್ ಆಗುತ್ತಿದೆ.

Fact Check:

ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ನಡೆಸಿದ್ದೇವೆ. ಆಗ 22 ಜನವರಿ 2023 ರಂದು ಅಪ್‌ಲೋಡ್ ಕ್ರೀಡಾ ಪತ್ರಕರ್ತ ವಿಮಲ್ ಕುಮಾರ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ. 7.47 ನಿಮಿಷಗಳ ಈ ವಿಡಿಯೋದಲ್ಲಿ, ಪತ್ರಕರ್ತ ಸರ್ಫರಾಜ್ ಅವರ ಕಠಿಣ ಪರಿಶ್ರಮ ಮತ್ತು ಅವರ ಅನುಭವದ ಬಗ್ಗೆ ಕೇಳುತ್ತಾರೆ, ಹಾಗೆಯೆ ಸರ್ಫರಾಜ್ ಅವರ ವೃತ್ತಿಜೀವನದ ಬಗ್ಗೆ, ರಣಜಿ ಟ್ರೋಫಿ, ಐಪಿಎಲ್ ಮತ್ತು ದೇಶವನ್ನು ಪ್ರತಿನಿಧಿಸುವ ಬಗ್ಗೆ ಮಾತನಾಡಲಾಗಿದೆ. ಇದರಲ್ಲಿ ಎಲ್ಲಿಯೂ ಅವರು ಗಿಲ್ ಬಗ್ಗೆ ಯಾವುದೇ ಟೀಕೆಗಳನ್ನು ಮಾಡಿಲ್ಲ. ಅಲ್ಲದೆ, ವೈರಲ್ ವೀಡಿಯೊದಲ್ಲಿನ ಧ್ವನಿಯು ಸರ್ಫರಾಜ್ ಖಾನ್ ಅವರ ಧ್ವನಿಗಿಂತ ಭಿನ್ನವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ತನಿಖೆಯನ್ನು ಮುಂದುವರಿಸಿ, ನಾವು ವೈರಲ್ ವಿಡಿಯೋದಲ್ಲಿ ಬಳಸಲಾದ ಆಡಿಯೋವನ್ನು ಪರಿಶೀಲಿಸಿದ್ದೇವೆ. ಅಗ ‘ರಿಯಾಕ್ಷನ್ Yo21’ ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ನಾವು ಮೂಲ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಆ ವೀಡಿಯೊದಲ್ಲಿ, ಯೂಟ್ಯೂಬರ್ ಸಾರ್ವಜನಿಕರಲ್ಲಿ ‘ಟೀಮ್ ಇಂಡಿಯಾದ ಅಂಡರ್ರೇಟೆಡ್ ಯುವ ಆಟಗಾರ ಯಾರು?’ ಎಂಬ ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಒಬ್ಬ ಹುಡುಗ ಶುಭ್​ಮನ್ ಗಿಲ್ ಅವರನ್ನು ಉಲ್ಲೇಖಿಸಿ ಮಾತನಾಡುತ್ತಾರೆ. ಇದೇ ಆಡಿಯೋವನ್ನು ಸದ್ಯ ವೈರಲ್ ಆಗುತ್ತಿರುವ ವಿಡಿಯೋಕ್ಕೆ ಎಡಿಟ್ ಮಾಡಿ ಅಪ್ಲೋಡ್ ಮಾಡಲಾಗಿದೆ.


ಅಲ್ಲದೆ ನಾವು ಗೂಗಲ್​ನಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ ಸರ್ಫರಾಜ್ ಖಾನ್ ಅವರು ಗಿಲ್ ಅನ್ನು ಕೆಟ್ಟ ಬ್ಯಾಟ್ಸ್‌ಮನ್ ಎಂದು ಕರೆದಿರುವ ಬಗ್ಗೆ ಯಾವುದಾದರು ಸುದ್ದಿ ಪ್ರಕಟವಾಗಿದೆಯೆ ಎಂದು ಪರಿಶೀಲಿಸಿದ್ದೇವೆ. ಆದರೆ, ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿ ಕಂಡುಬಂದಿಲ್ಲ.

ಇದನ್ನೂ ಓದಿ: ರಾಂಪುರದ ರೈಲ್ವೆ ಹಳಿ ಮೇಲೆ ಕಂಬ ಇಟ್ಟಿದ್ದು ನಿಜಕ್ಕೂ ಮುಸ್ಲಿಮರಲ್ಲ: ನಿಜಾಂಶ ಇಲ್ಲಿದೆ ನೋಡಿ

ಹೀಗಾಗಿ ಸರ್ಫರಾಜ್ ಖಾನ್ ಶುಭ್​ಮನ್ ಗಿಲ್ ಅವರನ್ನು ಕೆಟ್ಟ ಬ್ಯಾಟರ್ ಎಂದು ಹೇಳುವ ವಿಡಿಯೋ ಸುಳ್ಳು ಎಂದು ಟಿವಿ9 ಕನ್ನಡ ತನಿಖೆಯಿಂದ ತಿಳಿದುಬಂದಿದೆ. ಇಲ್ಲಿ ಸರ್ಫರಾಜ್ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ವಿಡಿಯೋವನ್ನು ಎಡಿಟ್ ಮಾಡಿ ಬೇರೆಯದೇ ಆಡಿಯೋವನ್ನು ಸೇರಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ