VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!

Clash On Cricket Pitch: ಕ್ರಿಕೆಟ್ ಪಂದ್ಯದ ವೇಳೆ ಇಬ್ಬರು ಆಟಗಾರರು ಕೈ ಕೈ ಮಿಲಾಯಿಸಿದ ಅಹಿತಕರ ಘಟನೆ ಯುಎಇ ನಲ್ಲಿ ನಡೆದ ಕ್ಲಬ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದೆ. ಇದೀಗ ಈ ಹೊಡೆದಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಟಗಾರರ ಈ ನಡೆಗೆ ಕ್ರಿಕೆಟ್​ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Follow us
|

Updated on: Sep 28, 2024 | 1:28 PM

ಕ್ರಿಕೆಟ್ ಪಂದ್ಯದ ನಡುವೆ ವಾಕ್ಸಮರ ನಡೆಯುವುದು ನೀವು ನೋಡಿರುತ್ತೀರಿ… ಇನ್ನೂ ಕೆಲ ಬಾರಿ ವಾಗ್ವಾದ ತಾರಕ್ಕೇರಿ ಹೊಡೆದಾಟದ ಹಂತಕ್ಕೂ ಹೋಗಿರುವುದನ್ನು ನೀವು ವೀಕ್ಷಿಸುತ್ತೀರಿ… ಆದರೆ ಇಲ್ಲೊಂದು ಲೀಗ್​ನಲ್ಲಿ ಆಟಗಾರರು ಪಿಚ್​ನಲ್ಲೇ ಹೊಡೆದಾಡಿಕೊಂಡಿದ್ದಾರೆ. ಯುಎಇ ನಲ್ಲಿ ನಡೆದ ಕ್ಲಬ್ ಕ್ರಿಕೆಟ್ ಪಂದ್ಯಾವಳಿ ಇಂತಹದೊಂದು ಅಹಿತಕರ ಘಟನೆಗೆ ಸಾಕ್ಷಿಯಾಗಿದೆ. ಅಜ್ಮಾನ್​ನಲ್ಲಿ ನಡೆಯುತ್ತಿರುವ ಎಸಿಸಿ ವೀಕ್​ಡೇಸ್ ಬ್ಯಾಷ್ ಪಂದ್ಯಾವಳಿಯಲ್ಲಿ ಏರೋವಿಸಾ ಕ್ರಿಕೆಟ್ ಕ್ಲಬ್ ಮತ್ತು ರಬ್ಡಾನ್ ಕ್ರಿಕೆಟ್ ಕ್ಲಬ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ 13ನೇ ಓವರ್​ನಲ್ಲಿ ರಬ್ಡಾನ್ ಬ್ಯಾಟರ್ ಕಾಶಿಫ್ ಮುಹಮ್ಮದ್ ಅವರನ್ನು ಔಟ್ ಮಾಡಿದ ಮತ್ತು ಏರೋವಿಸಾ ಬೌಲರ್ ನಾಸಿರ್ ಅಲಿ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದಾರೆ.

ಅಷ್ಟೇ ಅಲ್ಲದೆ ಬ್ಯಾಟರ್​ ಪೆವಿಲಿಯನ್​ನತ್ತ ಸಾಗುವ ವೇಳೆ ನಾಲಿಗೆ ಹರಿಬಿಟ್ಟಿದ್ದಾರೆ. ಇದರಿಂದ ಕುಪಿತರಾದ ಕಾಶಿಫ್ ಮುಹಮ್ಮದ್, ನಾಸಿರ್ ಅಲಿ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಅಷ್ಟೇ… ವಾಕ್ಸಮರ ಶುರುವಾಗುತ್ತಿದ್ದಂತೆ ಇಬ್ಬರು ಹೊಡೆದಾಟವನ್ನೂ ಸಹ ಆರಂಭಿಸಿದ್ದಾರೆ. ಪಿಚ್​ನಲ್ಲಿ ಹೊರಳಾಡಿ ಹೊಡೆದಾಟಿಕೊಳ್ಳುತ್ತಿದ್ದ ಕಾಶಿಫ್ ಹಾಗೂ ನಾಸಿರ್​ನನ್ನು ಸಹ ಆಟಗಾರರು ಹಾಗೂ ಅಂಪೈರ್​ಗಳು ಬೇರ್ಪಡಿಸಲು ಪ್ರಯತ್ನಿಸುವುದು ವಿಡಿಯೋದಲ್ಲಿ ಕಾಣಬಹುದು. ಇದೀಗ ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್​ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರೀಡಾಸ್ಪೂರ್ತಿಯೇ ಇಲ್ಲದೆ ಮೈದಾನದಲ್ಲಿ ಕೈ ಕೈ ಮಿಲಾಯಿಸಿದ ಇಬ್ಬರಿಗೂ ನೆಟ್ಟಿಗರು ಪ್ರತಿಕ್ರಿಯೆಯ ಮೂಲಕ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್