Fact Check: ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಒಣಗಿಸಲು ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ ಬಳಕೆ?; ವೈರಲ್ ಫೋಟೊ ಐಪಿಎಲ್​​ನದ್ದು ಅಲ್ಲ

|

Updated on: May 31, 2023 | 7:55 PM

ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆ ಫೋಟೋಗಳು CSK vs GT ಪಂದ್ಯ ವೇಳೆ ಪಿಚ್ ಒಣಗಿಸುತ್ತಿರುವುದಲ್ಲ. ಈ ಫೋಟೊಗಳು 2020 ರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಗುವಾಹಟಿಯಲ್ಲಿ ನಡೆದ ಪಂದ್ಯದ ವೇಳೆಯದ್ದು.

Fact Check: ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಒಣಗಿಸಲು ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ ಬಳಕೆ?; ವೈರಲ್ ಫೋಟೊ ಐಪಿಎಲ್​​ನದ್ದು ಅಲ್ಲ
ಪಿಚ್ ಒಣಗಿಸುತ್ತಿರುವ ವೈರಲ್ ಫೋಟೊ
Follow us on

ಸೋಮವಾರ ಅಹಮದಾಬಾದ್​​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಐಪಿಎಲ್  (IPL 2023) ಫೈನಲ್ ಪಂದ್ಯ ನಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vs GT) ನಡುವಿವ ಫೈನಲ್ ಪಂದ್ಯ ಮಳೆಯಿಂದಾಗಿ ಭಾನುವಾರ ರದ್ದಾಗಿದ್ದು, ಸೋಮವಾರ ನಡೆದಿತ್ತು. ಆದಿನವೂ ಮಳೆ ಬಂದಿದ್ದರಿಂದ ಪಂದ್ಯ ವಿಳಂಬವಾಗಿತ್ತು. ಈ ನಡುವೆ ಪಿಚ್ ಒಣಗಿಸಲು ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಯನ್ನು ಬಳಸಲಾಗುತ್ತಿದೆ ಎಂದು ಹೇಳುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ವೈರಲ್ ಚಿತ್ರಗಳು ಮೊನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದ ನಡುವೆ ಪಿಚ್ ಒಣಗಿಸುತ್ತಿರುವ ಫೋಟೊ ಅಲ್ಲ. ಜನವರಿ 5, 2020 ರಂದು ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಪಂದ್ಯದ ವೇಳೆ ಪಿಚ್ ಒಣಗಿಸುತ್ತಿರುವ ಫೋಟೊ ಎಂದು ಫ್ಯಾಕ್ಟ್ ಚೆಕ್ (Fact Check) ಮಾಡಿದ ಬೂಮ್ ವರದಿ ಮಾಡಿದೆ.

ಮೇ 29 ರಂದು ನಡೆದ ಸಿಎಸ್‌ಕೆ ಮತ್ತು ಜಿಟಿ ನಡುವಿನ ಪಂದ್ಯವು ಎರಡನೇ ಇನಿಂಗ್ಸ್‌ನಲ್ಲಿ ಹಠಾತ್ ಮಳೆಯಿಂದಾಗಿ ಆಟಕ್ಕೆ ಅಡ್ಡಿಯಾಯಿತು. ಮಳೆ ಕಡಿಮೆಯಾದ ನಂತರ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೈದಾನದ ಸಿಬ್ಬಂದಿ ಪಿಚ್ ಒಣಗಿಸಲು ಸ್ಪಂಜುಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಇದೆಲ್ಲದರ ನಡುವೆಯೇ ಪಿಚ್‌ನಲ್ಲಿ ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆ ಬಳಸುತ್ತಿರುವ ಹಳೆಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.


ಬಿಸಿಸಿಐಗೆ ಸಾಕಷ್ಟು ನಿಧಿ ಇದೆ ಆದರೆ ಇದು ಇಲ್ಲಿ ಸರಿಯಾದ ಸಲಕರಣೆಗಳು ಇಲ್ಲದೇ ಇರುವುದು ನಾಚಿಕೆಗೇಡು ಬಿಸಿಸಿಐಗೆ ಐಪಿಎಲ್‌ನ ಮೌಲ್ಯ ಏನು ಎಂದು ತಿಳಿದಿಲ್ಲ ಎಂದು SportsT24_ ಎಂಬ ಪೇಜ್ ಟ್ವೀಟ್ ಮಾಡಿದೆ.

ಫ್ಯಾಕ್ಟ್ ಚೆಕ್

ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆ ಫೋಟೋಗಳು CSK vs GT ಪಂದ್ಯ ವೇಳೆ ಪಿಚ್ ಒಣಗಿಸುತ್ತಿರುವುದಲ್ಲ. ಈ ಫೋಟೊಗಳು 2020 ರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಗುವಾಹಟಿಯಲ್ಲಿ ನಡೆದ ಪಂದ್ಯದ ವೇಳೆಯದ್ದು  ಎಂದು BOOM ಕಂಡುಹಿಡಿದಿದೆ.

ಹೇರ್ ಡ್ರೈಯರ್‌ ಚಿತ್ರದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಜನವರಿ 2020 ರಲ್ಲಿ ಪ್ರಕಟವಾದ ಹಲವಾರು ವರದಿಗಳು ಸಿಕ್ಕಿದೆ.  ಜನವರಿ 5 ರಿಂದ ಇಂಡಿಯನ್ ಎಕ್ಸ್‌ಪ್ರೆಸ್‌ನ ಒಂದು ವರದಿಯು ಶ್ರೀಲಂಕಾ ವಿರುದ್ಧ T20 ಮೊದಲು ಗುವಾಹಟಿ ಪಿಚ್ ಅನ್ನು ಒಣಗಿಸಲು ಹೇರ್ ಡ್ರೈಯರ್, ಸ್ಟೀಮ್ ಐರನ್ ಬಳಸಲಾಗಿದೆ ಎಂದಿದೆ.

ಇದನ್ನೂ ಓದಿ: Fact Check: ಪೊಲೀಸ್ ವ್ಯಾನ್​​ನಲ್ಲಿ ನಗುತ್ತಿರುವ ಫೋಗಟ್ ಸಹೋದರಿಯರು; ವೈರಲ್ ಆಗಿದ್ದು ಎಡಿಟ್ ಮಾಡಿದ ಫೋಟೊ

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಿಚ್ ಅನ್ನು ಒಣಗಿಸಲು ಹೇರ್ ಡ್ರೈಯರ್ ಮತ್ತು ಎಲೆಕ್ಟ್ರಿಕ್ ಇಸ್ತ್ರಿ ಪೆಟ್ಟಿಗೆಗಳನ್ನು ಹೇಗೆ ಬಳಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ, ಭಾರತ ಮತ್ತು ಶ್ರೀಲಂಕಾ ನಡುವಿನ T20 ಪಂದ್ಯವನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು. ಜನವರಿ 6 ರಂದು ಪ್ರಕಟವಾದ ದಿ ಕ್ವಿಂಟ್‌ನಲ್ಲಿ, ಔಟ್ ಲುಕ್ ನಲ್ಲಿ ಇದೇ  ವರದಿ ಪ್ರಕಟವಾಗಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:53 pm, Wed, 31 May 23