WTC Final 2023: ಐಪಿಎಲ್ ಫೈನಲ್ ಮುಗಿಸಿ ಲಂಡನ್‌ಗೆ ಹಾರಿದ ಟೀಂ ಇಂಡಿಯಾದ ಕೊನೆಯ ಬ್ಯಾಚ್
WTC Final 2023: ಇದೀಗ ಕೊನೆಯ ಬ್ಯಾಚ್ ಲಂಡನ್‌ಗೆ ತಲುಪುವುದರೊಂದಿಗೆ ಡಬ್ಲ್ಯುಟಿಸಿ ಫೈನಲ್‌ಗಾಗಿ ಟೀಂ ಇಂಡಿಯಾದ ಸಂಪೂರ್ಣ ತಂಡ ಲಂಡನ್‌ಗೆ ತೆರಳಿದ್ದಂತ್ತಾಗಿದೆ.
ಮುಂದಿನ ವಾರ ನಡೆಯಲ್ಲಿರುವ, ಅಂದರೆ ಜೂನ್ 7 ರಿಂದ 11ರವರೆಗೆ ನಡೆಯಲ್ಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ಗಾಗಿ (ICC World Test Championship) ಟೀಂ ಇಂಡಿಯಾದ ಕೊನೆಯ ಬ್ಯಾಚ್ ಇಂಗ್ಲೆಂಡ್‌ಗೆ ಆಗಮಿಸಿದೆ. ಆಸೀಸ್ ವಿರುದ್ಧ ಫೈನಲ್ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾ (Team India) ಸತತ ಎರಡನೇ ಬಾರಿಗೆ ಡಬ್ಲ್ಯುಟಿಸಿಯಲ್ಲಿ ಫೈನಲ್ ತಲುಪಿದೆ. ಡಬ್ಲ್ಯುಟಿಸಿ ಫೈನಲ್‌ಗೆ ತಯಾರಿ ನಡೆಸಲು ಟೀಂ ಇಂಡಿಯಾದ ಕೆಲವು ಆಟಗಾರರು ಈಗಾಗಲೇ ಲಂಡನ್‌ಗೆ ತಲುಪಿದ್ದರು. ಮೊದಲ ಬ್ಯಾಚ್‌ನಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid), ಸಹಾಯಕ ಸಿಬ್ಬಂದಿ ಮತ್ತು ಟೀಂ ಇಂಡಿಯಾದ ಕೆಲವು ಆಟಗಾರರು ಇಂಗ್ಲೆಂಡ್‌ಗೆ ಆಗಮಿಸಿದ್ದರು. ಆ ನಂತರ ಎರಡನೇ ಬ್ಯಾಚ್‌ನಲ್ಲಿ ಟೀಂ ಇಂಡಿಯಾದ ನಾಯಕ ಸೇರಿದಂತೆ ಇತರ ಆಟಗಾರರು ಕೂಡ ಇಂಗ್ಲೆಂಡ್ ತಲುಪಿದ್ದರು. ಇದೀಗ ಐಪಿಎಲ್ ಫೈನಲ್ನಲ್ಲಿ ಆಡಿದ ಕೆಲವು ಆಟಗಾರರ ಕೊನೆಯ ಬ್ಯಾಚ್ ಲಂಡನ್‌ಗೆ ತೆರಳಿದೆ.
ಕೊನೆಯ ಬ್ಯಾಚ್‌ನಲ್ಲಿ ಯಾರ್ಯಾರಿದ್ದಾರೆ?
ಇನ್ನು ಲಂಡನ್ ತಲುಪಿದ ಕೊನೆಯ ಬ್ಯಾಚ್‌ನಲ್ಲಿ ಅಜಿಂಕ್ಯ ರಹಾನೆ, ಕೆಎಸ್ ಭರತ್, ಶುಭ್ಮನ್ ಗಿಲ್, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಸೇರಿದ್ದಾರೆ. ಈ ಎಲ್ಲ ಆಟಗಾರರು ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡದ ಪರ ಆಡಿದವರಾಗಿದ್ದಾರೆ. ಇದರಲ್ಲಿ ಐದನೇ ಬಾರಿಗೆ ಟ್ರೋಫಿ ಎತ್ತಿಹಿಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ ಆಡಿದ್ದರೆ, ಫೈನಲ್ನಲ್ಲಿ ಸೋತ ಗುಜರಾತ್ ಟೈಟಾನ್ಸ್ ಪರ ಶುಭ್ಮನ್ ಗಿಲ್, ಮೊಹಮ್ಮದ್ ಶಮಿ ಮತ್ತು ಕೆಎಸ್ ಭರತ್ ಆಡಿದ್ದರು.
IPL 2023: ಈ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ ದುಬಾರಿ ವಿದೇಶಿ ಆಟಗಾರರಿವರು
ನೆಟ್ಸ್ನಲ್ಲಿ ಬೆವರು ಹರಿಸಿದ ಟೀಂ ಇಂಡಿಯಾ
ಇದೀಗ ಕೊನೆಯ ಬ್ಯಾಚ್ ಲಂಡನ್‌ಗೆ ತಲುಪುವುದರೊಂದಿಗೆ ಡಬ್ಲ್ಯುಟಿಸಿ ಫೈನಲ್‌ಗಾಗಿ ಟೀಂ ಇಂಡಿಯಾದ ಸಂಪೂರ್ಣ ತಂಡ ಲಂಡನ್‌ಗೆ ತೆರಳಿದ್ದಂತ್ತಾಗಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಈಗ ಇಡೀ ತಂಡದೊಂದಿಗೆ ತರಬೇತಿ ಆರಂಭಿಸಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಅಕ್ಷರ್ ಪಟೇಲ್ ತಮ್ಮ ಮೊದಲ ತರಬೇತಿ ಸೆಷನ್ ಮುಗಿಸಿದರು. ಕೊಹ್ಲಿ ಮತ್ತು ರೋಹಿತ್ ಬ್ಯಾಟಿಂಗ್ ಅಭ್ಯಾಸ ನಡೆಸಿದರೆ, ಅಕ್ಷರ್, ಶಾರ್ದೂಲ್ ಮತ್ತು ಸಿರಾಜ್ ಬೌಲಿಂಗ್ ಅಭ್ಯಾಸ ಮಾಡಿದರು.
ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೊಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.
ಮೀಸಲು ಆಟಗಾರರು: ಮಿಚ್ ಮಾರ್ಷ್, ಮ್ಯಾಟ್ ರೆನ್ಶಾ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರವಿಚಂದ್ರನ್ ಅಶ್ವಿನ್, ಕೆಎಸ್ ಭರತ್, ಶುಭ್ಮನ್ ಗಿಲ್, ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಚೇತೇಶ್ವರ ಪೂಜಾರ, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಜಯದೇವ್ ಉನಾದ್ಕಟ್, ಉಮೇಶ್ ಯಾದವ್.
ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ