IPL 2022 Rcb Captain: RCB ತಂಡದ 7ನೇ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್

| Updated By: ಝಾಹಿರ್ ಯೂಸುಫ್

Updated on: Mar 12, 2022 | 5:30 PM

Faf du plessis Rcb Captain: ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡವನ್ನು ಫಾಫ್​ ಡುಪ್ಲೆಸಿಸ್ ಮುನ್ನಡೆಸಲಿದ್ದಾರೆ. ಇದರೊಂದಿಗೆ ಆರ್​ಸಿಬಿ ತಂಡವನ್ನು ಮುನ್ನಡೆಸಿದ 7ನೇ ಕ್ಯಾಪ್ಟನ್ ಎನಿಸಿಕೊಳ್ಳಲಿದ್ದಾರೆ.

IPL 2022 Rcb Captain: RCB ತಂಡದ 7ನೇ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್
Faf du plessis
Follow us on

ಐಪಿಎಲ್​ ಸೀಸನ್ 15 ಗೆ (IPL 2022 )ಡೇಟ್ ಫಿಕ್ಸ್​ ಆಗಿದೆ. ಅದರಂತೆ ಮಾರ್ಚ್​ 26 ರಿಂದ ಟೂರ್ನಿಗೆ ಚಾಲನೆ ದೊರೆಯಲಿದೆ. ಹೊಸ ಸೀಸನ್​ ಅನ್ನು ಆರ್​ಸಿಬಿ ಹೊಸ ನಾಯಕನೊಂದಿಗೆ ಆರಂಭಿಸುತ್ತಿರುವುದು ವಿಶೇಷ. ಹೌದು, ಆರ್​ಸಿಬಿ (IPL 2022 Rcb Captain) ತಂಡದ ಹೊಸ ನಾಯಕನಾಗಿ ಫಾಫ್ ಡುಪ್ಲೆಸಿಸ್ (Faf du plessis) ಆಯ್ಕೆಯಾಗಿದ್ದಾರೆ. ಇದರೊಂದಿಗೆ ಆರ್​ಸಿಬಿ ತಂಡವನ್ನು ಮುನ್ನಡೆಸಲಿರುವ 7ನೇ ನಾಯಕ ಎನಿಸಿಕೊಳ್ಳಲಿದ್ದಾರೆ. ಅಂದರೆ ಕಳೆದ 14 ಸೀಸನ್​ ಐಪಿಎಲ್​ನಲ್ಲಿ ಆರ್​ಸಿಬಿ ತಂಡವನ್ನು ಆರು ನಾಯಕರುಗಳು ಮುನ್ನಡೆಸಿದ್ದಾರೆ. ಅದರಲ್ಲಿ ಮೂವರು ವಿದೇಶಿ ಆಟಗಾರರಿದ್ದರೆ, ಮೂವರು ಭಾರತೀಯ ಆಟಗಾರರು ಎಂಬುದು ವಿಶೇಷ. ಈ ವೇಳೆ ಆರ್​ಸಿಬಿ 3 ಬಾರಿ ಫೈನಲ್ ಪ್ರವೇಶಿಸಿದೆ. ಹಾಗಿದ್ರೆ ಆರ್​ಸಿಬಿ ತಂಡವನ್ನು ಇದುವರೆಗೆ ಮುನ್ನಡೆಸಿದ ನಾಯಕರುಗಳು ಯಾರೆಲ್ಲಾ ನೋಡೋಣ…

1- ರಾಹುಲ್ ದ್ರಾವಿಡ್: ಆರ್​ಸಿಬಿ ತಂಡದ ಮೊದಲ ನಾಯಕ ರಾಹುಲ್ ದ್ರಾವಿಡ್. 2008 ರಲ್ಲಿ ದ್ರಾವಿಡ್ ಆರ್​ಸಿಬಿ ತಂಡವನ್ನು 14 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ಆರ್​ಸಿಬಿ 4 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು.

2- ಕೆವಿನ್ ಪೀಟರ್ಸನ್: ಆರ್​ಸಿಬಿ ತಂಡದ 2ನೇ ನಾಯಕ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್. ಪೀಟರ್ಸನ್ 2009 ರಲ್ಲಿ ಆರ್​ಸಿಬಿ ತಂಡವನ್ನು 6 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ಆರ್​ಸಿಬಿ 2 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು.

3- ಅನಿಲ್ ಕುಂಬ್ಳೆ: 2009 ರಲ್ಲಿ ಕೆವಿನ್ ಪೀಟರ್ಸನ್ ಅರ್ಧದಲ್ಲೇ ಟೂರ್ನಿ ತೊರೆದಿದ್ದರು. ಹೀಗಾಗಿ ಅನಿಲ್ ಕುಂಬ್ಳೆ ಉಳಿದ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆರ್​ಸಿಬಿ ಡೆಕ್ಕನ್ ಚಾರ್ಜರ್ಸ್​ ವಿರುದ್ದ ಸೋತು ಪ್ರಶಸ್ತಿಯನ್ನು ತಪ್ಪಿಸಿಕೊಂಡಿತು. ಅಷ್ಟೇ ಅಲ್ಲದೆ 2010ರಲ್ಲೂ ನಾಯಕರಾಗಿ ಮುಂದುವರೆದ ಕುಂಬ್ಳೆ 35 ಪಂದ್ಯಗಳಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದರು. ಕುಂಬ್ಳೆ ನಾಯಕತ್ವದಲ್ಲಿ ಆರ್​ಸಿಬಿ 19 ಪಂದ್ಯಗಳಲ್ಲಿ ಜಯ ಸಾಧಿಸಿತ್ತು.

4- ಡೇನಿಯಲ್ ವೆಟ್ಟೋರಿ: ಆರ್​ಸಿಬಿ ತಂಡದ ನಾಲ್ಕನೇ ನಾಯಕ ಡೇನಿಯಲ್ ವೆಟ್ಟೋರಿ. 2011 ರಲ್ಲಿ ವೆಟ್ಟೋರಿ ನಾಯಕತ್ವದಲ್ಲಿ ಆರ್​ಸಿಬಿ 2ನೇ ಬಾರಿ ಫೈನಲ್ ಪ್ರವೇಶಿಸಿತ್ತು. ಆದರೆ ಸಿಎಸ್​ಕೆ ವಿರುದ್ದ ಸೋಲುವ ಮೂಲಕ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಇನ್ನು 2012 ರ ಸೀಸನ್​ನಲ್ಲೂ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದ ವೆಟ್ಟೋರಿ ಒಟ್ಟು 28 ಪಂದ್ಯಗಳಲ್ಲಿ ನಾಯಕರಾಗಿದ್ದರು.

5- ಶೇನ್ ವಾಟ್ಸನ್​: 2017 ರಲ್ಲಿ ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ಶೇನ್ ವಾಟ್ಸನ್ ಆರ್​ಸಿಬಿ ತಂಡವನ್ನು 3 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ಆರ್​ಸಿಬಿ 1 ಪಂದ್ಯವನ್ನು ಮಾತ್ರ ಗೆದ್ದುಕೊಂಡಿತ್ತು.

6- ವಿರಾಟ್ ಕೊಹ್ಲಿ: ಕಿಂಗ್ ಕೊಹ್ಲಿ 2013 ರಿಂದ 2021 ರವರೆಗೆ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದರು. 2016 ರಲ್ಲಿ ಫೈನಲ್​ ಪ್ರವೇಶಿಸಿದ್ದ ಆರ್​ಸಿಬಿ ಎಸ್​ಆರ್​ಹೆಚ್ ವಿರುದ್ದ ಸೋಲುವ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿತು. 140 ಪಂದ್ಯಗಳಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ 66 ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಇದೀಗ ಆರ್​ಸಿಬಿ ತಂಡವು ನೂತನ ನಾಯಕನ ಘೋಷಣೆ ಮಾಡುವ ಇರಾದೆಯಲ್ಲಿದೆ. ಅದರಂತೆ ಹೊಸ ನಾಯಕನೊಂದಿಗೆ ಆರ್​ಸಿಬಿ ಚೊಚ್ಚಲ ಟ್ರೋಫಿ ಗೆಲ್ಲಲಿದೆಯಾ ಕಾದು ನೋಡಬೇಕಿದೆ.

7- ಫಾಫ್ ಡುಪ್ಲೆಸಿಸ್: ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡವನ್ನು ಫಾಫ್​ ಡುಪ್ಲೆಸಿಸ್ ಮುನ್ನಡೆಸಲಿದ್ದಾರೆ. ಇದರೊಂದಿಗೆ ಆರ್​ಸಿಬಿ ತಂಡವನ್ನು ಮುನ್ನಡೆಸಿದ 7ನೇ ಕ್ಯಾಪ್ಟನ್ ಎನಿಸಿಕೊಳ್ಳಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್​ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್ ಪ್ರಭುದೇಸ್, ಚಮಾ ಮಿಲಿಂದ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಲವ್​ನೀತ್ ಸಿಸೋಡಿಯಾ, ಡೇವಿಡ್ ವಿಲ್ಲಿ.

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್